Lakshana Serial: ಶಾಕುಂತಲಾ ದೇವಿಗೆ ಸತ್ಯ ಹೇಳಲು ಮನೆಗೆ ಬಂದ ಮೌರ್ಯ!

By ಶೃತಿ ಹರೀಶ್ ಗೌಡ

ನಕ್ಷತ್ರ ಭೂಪತಿಯನ್ನು ಆಟವಾಡಿಸುತ್ತಾ ಇದ್ದಾಳೆ ಕ್ಷೇತ್ರಗಳನ್ನು ಹುಡುಕಿಕೊಂಡು ಭೂಪತಿ ಅಡುಗೆ ಮನೆ ಸೇರಿದಂತೆ ನಕ್ಷತ್ರ ಎಲ್ಲೆಲ್ಲಿ ಓಡಾಡುತ್ತಾಳೆ ಅಲ್ಲೆಲ್ಲ ಓಡಾಡುತ್ತಿದ್ದಾನೆ. ನಕ್ಷತ್ರ ಪ್ಲೀಸ್ ಬೇಗ ಪಾಸ್ವರ್ಡ್ ಹೇಳು, ನನಗೆ ತುಂಬಾ ಕೆಲಸ ಇದೆ ಎಂದು ಕೇಳುತ್ತಿದ್ದಾನೆ. ಆದರೆ ನಕ್ಷತ್ರ ಭೂಪತಿಯನ್ನು ಆಟವಾಡಿಸುತ್ತಿದ್ದಾಳೆ. ಭೂಪತಿ ಹಿಂದೆ ಬರುತ್ತಿರುವುದನ್ನು ನೋಡಿದ ನಕ್ಷತ್ರಗೆ ತುಂಬಾ ಖುಷಿಯಾಗಿದೆ.

ಶಾಕುಂತಲಾ ದೇವಿಗೆ ನಕ್ಷತ್ರ ಕಾಫಿ ತೆಗೆದುಕೊಂಡು ಹೋಗಿದ್ದಾಳೆ ಕಾಫಿ ಕುಡಿಯುವವರೆಗೂ ನಾನು ಇಲ್ಲೇ ಇರುತ್ತೇನೆ ಎಂದು ನಕ್ಷತ್ರ ಹೇಳಿದ್ದಾಳೆ ಆಗ ಭೂಪತಿ ತಲೆ ಚೆಚ್ಚಿಕೊಂಡು ಅಲ್ಲೇ ಅವಿತುಕೊಂಡಿದ್ದಾನೆ. ಲಕ್ಷ್ಮಣ ಏನು ಭೂಪತಿ ಬಂದಿದ್ದು ಎಂದು ಶಾಕುಂತಲ ದೇವಿಯ ಗಮನವನ್ನು ಸೆಳೆದಿದ್ದಾರೆ ಇನ್ನು ಅಲ್ಲಿಗೆ ಬಂದ ಭೂಪತಿ ಅಮ್ಮಗೆ ಗುಡ್ ಮಾರ್ನಿಂಗ್ ಹೇಳಲು ಬಂದೆ ಎಂದು ಹೇಳಿದ್ದಾನೆ. ನಕ್ಷತ್ರ ಈ ಕಡೆ ಹೊರಟಿದ್ದಾಳೆ ಅವಳ ಹಿಂದೆಯೇ ಭೂಪತಿ ಸಹ ಹೋಗುತ್ತಿದ್ದಾನೆ.

ನಕ್ಷತ್ರಾಗೆ ಸವಾಲು ಹಾಕಿದ ಭೂಪತಿ

ನಕ್ಷತ್ರಾಗೆ ಸವಾಲು ಹಾಕಿದ ಭೂಪತಿ

ತನ್ನನ್ನು ಆಟವಾಡಿಸುತ್ತಿರುವ ನಕ್ಷತ್ರಗೆ ಭೂಪತಿ ಸವಾಲು ಹಾಕಿದ್ದಾನೆ. ಒಂದು ಕಂಪನಿಯ ಸಿಇಓ ನಾನು ನನ್ನನ್ನೇ ಈ ರೀತಿ ಆಟವಾಡಿಸುತ್ತಿಯಾ ನೋಡ್ತಾ ಇರು 5 ನಿಮಿಷದಲ್ಲಿಯೇ ನೀನು ಮಾಡಿಲ್ವಾ ಲಾಕ್ ಅನ್ನು ನಾನು ತೆಗೆಸುತ್ತೇನೆ ಎಂದು ಸವಾಲನ್ನು ಹಾಕಿದ್ದಾನೆ. ಈ ಕಡೆ ನಕ್ಷತ್ರ ಮುಖ ಬಾಡಿ ಹೋಗಿದೆ ನಿಜವಾಗಿಯೂ ಇವನು ಲಾಕ್ ಅನ್ನ ತೆಗೆಸಿದರೆ ನಾನು ಆಟವಾಡಿಸಲು ಆಗುವುದಿಲ್ಲ ಎಂದು ಅಂದುಕೊಂಡು ಅಡುಗೆ ಮನೆಗೆ ಬಂದಿದ್ದಾಳೆ.

ಜ್ಯೂಸ್ ತಂದುಕೊಟ್ಟ ನಕ್ಷತ್ರ

ಜ್ಯೂಸ್ ತಂದುಕೊಟ್ಟ ನಕ್ಷತ್ರ

ನಕ್ಷತ್ರ ಹ್ಯಾಕರ್‌ನನ್ನು ನೋಡಿ ಜ್ಯೂಸ್ ತಂದು ಕೊಟ್ಟಿದ್ದಾಳೆ. ಇದೇ ವೇಳೆ ನಕ್ಷತ್ರ ನಿಮಗೆ ಮದುವೆ ಆಗಿದೆಯಾ ಗಂಡ ಹೆಂಡತಿಯ ಮಧ್ಯೆ ಬಂದರೆ ನಿಮಗೆ ಇಷ್ಟವಾಗುತ್ತಾ ಎಂದು ಹೇಳಿದ್ದಾಳೆ. ಗಂಡ ಹೆಂಡತಿಯ ಮಧ್ಯೆ ಸಾವಿರಾ ಇರುತ್ತೆ ಅದನ್ನೆಲ್ಲ ನಿಮ್ಮ ಬಳಿ ಹೇಳಲು ಆಗುತ್ತದೆ ದಯವಿಟ್ಟು ಲಾಕ್ ಮಾಡಿರುವುದನ್ನು ಅನ್ಲಾಕ್ ಮಾಡಬೇಡಿ ಎಂದು ನಕ್ಷತ್ರ ಕೇಳಿಕೊಂಡಿದ್ದಾಳೆ. ಅದಕ್ಕೆ ಭೂಪತಿಗೆ ನಕ್ಷತ್ರ ನಾನು ಎಂದರೆ ಇಷ್ಟ ಎಂದು ಹೇಳು ಎಂದಿದ್ದಾಳೆ. ಕೊನೆಗೆ ಭೂಪತಿ ನಕ್ಷತ್ರಾಗೆ ನೀನೆಂದರೆ ಇಷ್ಟ ಎಂದು ಹೇಳಿದಾಗ ಆಗಲೂ ಸಹ ಸತಾಯಿಸಿ ಸತಾಯಿಸಿ ನಕ್ಷತ್ರ ಪಾಸ್ವರ್ಡ್ ಅನ್ನು ಹೇಳಿದ್ದಾಳೆ.

ಸತ್ಯ ಹೇಳಲು ಮನೆಗೆ ಬಂದ ಮೌರ್ಯ

ಸತ್ಯ ಹೇಳಲು ಮನೆಗೆ ಬಂದ ಮೌರ್ಯ

ನಕ್ಷತ್ರ ಮದುವೆಯಲ್ಲಿ ಆದ ಮೋಸವನ್ನು ತಿಳಿಸಲು ಮೌರ್ಯ ಶಾಕುಂತಲಾ ದೇವಿಯ ಮನೆಗೆ ಬಂದಿದ್ದಾನೆ. ಪ್ಲಂಬರ್ ವೇಷದಲ್ಲಿ ಬಂದಿರುವ ಮೌರ್ಯನನ್ನು ಮನೆಯವರು ಗುರುತು ಹಿಡಿದಿದ್ದಾರೆ. ಮನೆಗೆ ಯಾಕೆ ಬಂದೆ ನೀನು ಇಲ್ಲಿಂದ ಹೊರಟು ಹೋಗು ಎಂದು ಮೌಲ್ಯರಿಗೆ ಶಾಕುಂತಲ ದೇವಿ ವಾರ್ನಿಂಗ್ ಮಾಡುತ್ತಿದ್ದಾರೆ. ಲೆಕ್ಕಿಸದ ಮೌರ್ಯ ನಾನು ನಿಮಗೆ ಬಂದು ಸತ್ಯವನ್ನ ಹೇಳಬೇಕು ಅದನ್ನು ಹೇಳೇ ಹೇಳುತ್ತೇನೆ ಎಂದಿದ್ದಾನೆ.

ಬಂದ ಉದ್ದೇಶ ತಿಳಿಸಿದ ಮೌರ್ಯ

ಬಂದ ಉದ್ದೇಶ ತಿಳಿಸಿದ ಮೌರ್ಯ

ಇನ್ನು ಸ್ಥಳಕ್ಕೆ ಬಂದ ಭೂಪತಿ ಮೌರ್ಯಾನನ್ನು ನೋಡಿ ಯಾಕೆ ಬಂದೆ ಎಂದಿದ್ದಾನೆ ಅದಕ್ಕೆ ನೀನು ನಕ್ಷತ್ರ ಅತ್ತಿಗೆಯನ್ನು ತಿಳಿದುಕೊಂಡಿರುವುದು ತಪ್ಪು ಎಂದು ತಿಳಿಸಲು ಬಂದಿದ್ದೇನೆ ನಿಮಗೆಲ್ಲ ಸತ್ಯವನ್ನ ಹೇಳಬೇಕು ಎಂದಿದ್ದಾನೆ. ಇದನ್ನು ಕೇಳಿದ ಶಾಕುಂತಲಾ ದೇವಿ ಭೂಪತಿಗೆ ಇವನನ್ನು ಮೊದಲು ಮನೆಯಿಂದ ಕಳುಹಿಸು ಎಂದು ಹೇಳಿದ್ದಾಳೆ ಆದರೆ ಮೌರ್ಯ ಇಲ್ಲಿ ಇಂದು ನಾನು ಹೇಳುವುದನ್ನು ಮಾತ್ರ ನೀವು ಕೇಳಿಸಿಕೊಳ್ಳಬೇಕು ಎಂದಿದ್ದಾನೆ. ಮೌರ್ಯ ಏನು ಸತ್ಯ ಹೇಳುತ್ತಾನೆ ಎಂಬುದನ್ನು ತಿಳಿದುಕೊಳ್ಳಲು ಎಲ್ಲರೂ ಸುಮ್ಮನಿದ್ದಾರೆ ಮುಂದೆ ಏನಾಗುತ್ತೆ ಎಂಬುದೇ ಕುತೂಹಲಕಾರಿಯಾಗಿದೆ ಮೌರ್ಯ ಸದ್ಯವನ್ನ ಹೇಳುತ್ತಾನ ಅಥವಾ ಮೌರ್ಯನನ್ನು ಮನೆಯಿಂದ ಹೊರಗೆ ಹಾಕಲಾಗುತ್ತದೆ ಎಂಬುವುದೇ ಇಲ್ಲಿ ಕುತೂಹಲವಾಗಿದೆ.

More from Filmibeat

English summary
Colors Kannada serial Lakshana Written Update on February 3rd episode. Here is the details about Mourya try to convince Shakuntaladevi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X