Lakshana Serial: ಶ್ವೇತಾಳನ್ನು ಕೊಲ್ಲಲು ಯತ್ನಿಸಿದ ಮೌರ್ಯ!
ಮೌರ್ಯ ನಕ್ಷತ್ರ ಬಗ್ಗೆ ಹೇಳಲು ಬಂದಾಗ ಶಾಕುಂತಲಾ ದೇವಿ ಚಂದ್ರಶೇಖರ್ ಮನೆಯವರು ಮಾಡಿರುವುದೇ ಸಾಕು ಅವರಿಂದ ನಮ್ಮ ಮನೆಯಲ್ಲಿ ಅನಾಹುತವೇ ನಡೆದುಹೋಗಿದೆ ನೀನೇನು ಅವಳ ಪರವಾಗಿ ವಹಿಸಿಕೊಂಡು ಮಾತನಾಡಬೇಡ ಎಂದು ಮೌರ್ಯನಿಗೆ ಬೈದಿದ್ದಾರೆ. ಇನ್ನು ಸ್ವಲ್ಪ ಹೊತ್ತು ನೀನು ಇಲ್ಲೇ ಇದ್ದರೆ ನಾನು ಸೆಕ್ಯೂರಿಟಿಯನ್ನು ಕರೆಸಿ ನಿನ್ನನ್ನು ಹೊರಗೆ ಹಾಕಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಮೌರ್ಯನ ಪರಿಸ್ಥಿತಿಯನ್ನು ನೋಡಿದ ಮನೆಯವರಿಗೆ ತುಂಬಾ ಬೇಸರವಾಗಿದೆ.
ಸೆಕ್ಯುರಿಟಿಯನ್ನು ಕರೆಸಿದ ಶಾಕುಂತಲಾ ದೇವಿ ಮೌರ್ಯನನ್ನು ಮನೆಯಿಂದ ಹೊರಗೆ ಕಳಿಸು ಎಂದು ಹೇಳಿದ್ದಾರೆ ನಂತರ ಸೆಕ್ಯೂರಿಟಿ ಮನೆಯಿಂದ ಮೌರ್ಯನನ್ನು ಹೊರಗೆ ಕರೆದುಕೊಂಡು ಹೋಗಿದ್ದಾನೆ. ಇದೆ ವೇಳೆ ನಕ್ಷತ್ರ ಒಮ್ಮೆ ನಿಲ್ಲಿ ಎಂದು ಹೇಳಿದ್ದಾಳೆ ಮೌರ್ಯನಿಗೆ ನಕ್ಷತ್ರ ಬುದ್ಧಿ ಹೇಳಿದ್ದಾಳೆ ಸತ್ಯ ತಿಳಿಯುವಾಗ ತಂತಾನೆ ತಿಳಿಯುತ್ತದೆ ನೀವು ಈ ರೀತಿಯಾಗಿ ಮಾಡುವುದು ಸರಿಯಲ್ಲ ಎಂದು ಮೌರ್ಯನಿಗೆ ಹೇಳಿದ್ದಾಳೆ.
ನಾನು ಹೇಳುವ ಸತ್ಯವನ್ನು ನೀವೆಲ್ಲರೂ ಕೇಳಬೇಕು ಎಂದು ಮತ್ತೊಮ್ಮೆ ಮನೆಯೊಳಗೆ ಮೌರ್ಯ ಮನೆಯ ಬಾಗಿಲನ್ನು ಹಾಕಿ ಒಳಗೆ ಬಂದಿದ್ದಾನೆ. ಈ ಕಡೆ ಶಾಕುಂತಲಾ ದೇವಿ ನಿನಗೆ ಎಷ್ಟು ಹೇಳಿದರು ತಿಳಿಯುವುದಿಲ್ವಾ ಎಂದು ಬಯಸುತ್ತಿದ್ದಾರೆ ಶ್ವೇತಾಳನ್ನು ಹಿಡಿದುಕೊಂಡ ಮೌರ್ಯ ಅಲ್ಲೇ ಇದ್ದ ಸ್ಕ್ರೂ ಡ್ರೈವರ್ ತೆಗೆದುಕೊಂಡು ನಿಮಗೆ ಈ ರೀತಿ ಅರ್ಥ ಮಾಡಿಸಬೇಕಾಗಿ ಎಂದು ಕೇಳಿದ್ದಾನೆ. ಶ್ವೇತಾ ಬಿಟ್ಟು ಬಿಡು ನನ್ನ ಎಂದು ಕೇಳಿದಾಗ ನೀನು ನಾಟಕವಾಡಬೇಡ ಎಂದು ಹೇಳಿದ್ದಾನೆ.

ಶ್ವೇತಾಳನ್ನು ಕೊಲ್ಲಲು ಯತ್ನಿಸಿದ ಮೌರ್ಯ!
ಇನ್ನು ಅಲ್ಲಿಗೆ ಬಂದ ಭೂಪತಿ ಶ್ವೇತಾಳನ್ನು ಬಿಟ್ಟುಬಿಡು ಎಂದು ಮೌರ್ಯನಿಗೆ ಹೇಳಿದ್ದಾನೆ ಆದರೆ ಮೌರ್ಯ ನೀನು ನಾನು ಹೇಳುವ ಸತ್ಯವನ್ನು ತಿಳಿ ಎಂದು ಹೇಳಿದಾಗ ಹಿಂದೆಯಿಂದ ಬಂದ ಭೂಪತಿ, ಮೌರ್ಯ ನನ್ನ ಲಾಕ್ ಮಾಡಿ ಮನೆಯಿಂದ ಹೊರಗೆ ದಬ್ಬಿದ್ದಾನೆ. ನಿಮಗೆ ಸತ್ಯ ತಿಳಿಯುವ ಕಾಲ ಬಂದೇ ಬರುತ್ತದೆ ನಾನು ಅದನ್ನು ಮಾಡುತ್ತೇನೆ ಎಂದು ಮನೆಯಿಂದ ಹೋಗಿದ್ದಾನೆ ಮೌರ್ಯ.

ಶ್ವೇತಾಗೆ ತಿಳಿಯಿತು ಮಿಲ್ಲಿಯ ಸತ್ಯ
ಮಿಲ್ಲಿ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡಲು ಯಾವುದೋ ಒಂದು ಫೈಲ್ ಹಿಡಿದುಕೊಂಡು ಶಾಕುಂತಲ ದೇವಿ ಮನೆಗೆ ಬಂದಿದ್ದಾಳೆ. ನಂತರ ಶ್ವೇತಾ ಭೂಪತಿ ಬಳಿ ಊಟಕ್ಕೆ ಕುಳಿತುಕೊಂಡಾಗ ಭೂಪತಿ ಆಡಿದ ಮಾತನ್ನು ಕೇಳಿದ ಶ್ವೇತಾಗೆ ನಗು ಬಂದಿದೆ ಇಲ್ಲಿ ಏನು ನಡೆದಿದೆ ಎಂದು ಅರ್ಥವಾಗಿದೆ. ನಕ್ಷತ್ರ ಬಳಿ ಬಂದ ಮಿಲ್ಲಿ ಮೇಡಂ ನೀವು ಇಲ್ಲಿ ಒಂದು ಸೈನ್ ಹಾಕಿ ನಾನು ಈಗ ಬರುತ್ತೇನೆ ಎಂದು ಹೇಳಿ ಶ್ವೇತಾ ರೂಂಗೆ ಹೋಗಿದ್ದಾಳೆ. ರೂಂಗೆ ಬಂದ ಮಿಲ್ಲಿ ಶ್ವೇತಾಳನ್ನು ರೇಗಿಸುತ್ತಿದ್ದಾಳೆ ಇದರಿಂದ ಶ್ವೇತಾಳಿಗೆ ತುಂಬಾ ಕೋಪ ಬಂದಿದೆ.

ಮಿಲ್ಲಿ-ಶ್ವೇತಾಗೆ ಜಾಡಿಸಿದ ನಕ್ಷತ್ರ
ನಾನೇನು ನಿನ್ನ ಸೆಕ್ಯೂರಿಟಿ ಗಾರ್ಡ್ ಅಲ್ಲ ಯಾವಾಗಲೂ ನಿನ್ನನ್ನು ಕಾಪಾಡಲು ಎಂದು ಮಿಲ್ಲಿ ಶ್ವೇತಾಗೆ ಹೇಳಿದ್ದಾಳೆ. ಎಲ್ಲದಕ್ಕೂ ನಾನು ನಿನ್ನನ್ನು ಎಷ್ಟು ಬಾರಿ ಕಾಪಾಡಲಿ ಎಂದು ನಿಲ್ಲಿ ಶ್ವೇತಾ ಜೊತೆಗೆ ಜಗಳವನ್ನು ತೆಗೆದಿದ್ದಾಳೆ. ಈ ವೇಳೆ ನಕ್ಷತ್ರ ಮಿಲ್ಲಿ ಎಂದು ಕರೆದಿದ್ದಾಳೆ ಫೋನ್ ಬಿಟ್ಟು ನಕ್ಷತ್ರ ಬಳಿ ಬಂದಿದ್ದಾಳೆ. ನೀನು ಮತ್ತು ಶ್ವೇತ ಏನು ಎಂದು ನನಗೆ ಚೆನ್ನಾಗಿ ಗೊತ್ತಿದೆ ನೀನೇನು ಹೊಸದಾಗಿ ನಾಟಕವನ್ನು ತರಬೇಡ ಎಂದು ಮಿಲ್ಲಿಗೆ ನಕ್ಷತ್ರ ಹೇಳಿದ್ದಾಳೆ ನಿಮ್ಮಿಬ್ಬರ ನಾಟಕ ಏನು ಎಂಬುದನ್ನು ನಾನು ಆಗಲೇ ನೋಡಿದ್ದೇನೆ. ಈ ರೀತಿಯಾಗಿ ಸುಮ್ಮನೆ ಸೈನ್ ಮಾಡಿರುವ ಫೈಲ್ ಅನ್ನು ತರಬೇಡ ಇದಕ್ಕೆ ಅಪ್ಪ ಆಗಲೇ ಸೈನ್ ಮಾಡಿದ್ದಾರೆ ಎಂದು ಮಿಲ್ಲಿಗೆ ಹೇಳಿ ಅಲ್ಲಿಂದ ಹೊರಟಿದ್ದಾಳೆ.

ಡೆವಿಲ್ ಯಾರೆಂಬ ಕುತೂಹಲ ಶ್ವೇತಾಗೆ
ಈ ಕಡೆ ಮಿಲ್ಲಿ ಫೋನ್ ಶ್ವೇತಾ ರೂಮ್‌ನಲ್ಲಿ ರಿಂಗ್ ಆಗಿದೆ ಫೋನ್ ಎತ್ತಿದ ಶ್ವೇತಾ ಮೇಡಂ ನಿಮ್ಮನ್ನು ಡೆವಿಲ್ ಮೇಡಂ ಭೇಟಿಯಾಗಬೇಕಂತೆ ಎಂದು ಹೇಳಿದ್ದಾರೆ. ಆಗ ಶ್ವೇತಾಗೆ ಮಿಲ್ಲಿ ಡೆವಿಲ್ ಕಡೆ ಅವಳ ಎಂದು ಶಾಕ್ ಆಗಿದೆ ಹೇಗಾದರೂ ಮಾಡಿ ಡೇವಿಲ್ ಯಾರೆಂದು ತಿಳಿಯಬೇಕು ಎಂದು ಶ್ವೇತಾ ಅಂದುಕೊಂಡಿದ್ದಾಳೆ.


Click it and Unblock the Notifications











