Lakshana serial: ಡೇವಿಲ್ ಹುಡುಕಿ ಹೊರಟ ಶ್ವೇತಾ, ಸಿಗ್ತಾನಾ ವಿಲನ್!?
ಇವರೆಗೆ ನಕ್ಷತ್ರ ಧಾರಾವಾಹಿಯಲ್ಲಿ ಡೇವಿಲ್ ಯಾರೆಂದು ಗೊತ್ತಿಲ್ಲದೆ ಎಲ್ಲರೂ ಟೆನ್ಷನ್ ಆಗಿದ್ದರು. ಆದರೆ ಶ್ವೇತಾ, ಡೆವಿಲ್ ಕಂಡು ಹಿಡಿಯಬೇಕು ಎಂಬ ಸಾಹಸಕ್ಕೆ ಕೈ ಹಾಕಿದ್ದಾಳೆ ಈಗ ಡೆವಿಲ್ ಹುಡುಕಿ ಹೊರಟಿದ್ದಾಳೆ.
ಮಿಲ್ಲಿ, ಡೆವಿಲ್ ಕಡೆಯವಳು ಎಂದು ಗೊತ್ತಾದ ತಕ್ಷಣ ಶ್ವೇತಾಗೆ ತುಂಬಾ ಶಾಕ್ ಆಗಿದೆ ಹೇಗಾದರೂ ಮಾಡಿ ಡೆವಿಲನ್ನು ಕಂಡುಹಿಡಿಯಬೇಕು ಎಂದು ಶ್ವೇತ ಪಣತೊಟ್ಟಿದ್ದಾಳೆ. ನನಗೆ ಮಿಲ್ಲಿ ಯಾಕೆ ಈ ರೀತಿಯಾಗಿ ಸಹಾಯ ಮಾಡುತ್ತಿದ್ದಳು ಎಂದು ಎಲ್ಲವನ್ನು ನೆನೆದುಕೊಂಡು ಶ್ವೇತಾ ಕೋಪ ಮಾಡಿಕೊಂಡಿದ್ದಾಳೆ.
ನಾನು ಗೆದ್ದು ನಕ್ಷತ್ರ ಸೋತರೆ ಚಂದ್ರಶೇಖರ್‌ಗೆ ತುಂಬಾ ಅಳು ಬರುತ್ತಿತ್ತು ಅದಕ್ಕಾಗಿ ಮಿಲ್ಲಿ ನನಗೆ ಸಹಾಯ ಮಾಡುತ್ತಿದ್ದಳು ನನ್ನನ್ನ ಯೂಸ್ ಮಾಡಿಕೊಂಡರು ಎಂದು ಕೋಪ ಮಾಡಿಕೊಂಡಿದ್ದಾಳೆ. ಇಲ್ಲಿ ಯಾಕೆ ಆ ರೀತಿ ಆಡುತ್ತಿದ್ದಳು ಎಂಬುವುದು ಈಗ ನನಗೆ ಚೆನ್ನಾಗಿ ಅರ್ಥ ಆಗಿದೆ ಮೇಲಿಂದ ಆರ್ಡರ್ ಆಗಿದೆ ಎಂದರೆ ಅವಳ ಸಹಾಯದಿಂದ ಮಿಲ್ಲಿ ಈ ರೀತಿ ಆಡುತ್ತಿದ್ದಳು ಎಂಬುದನ್ನು ಶ್ವೇತಾ ನೆನೆಸಿಕೊಂಡಿದ್ದಾಳೆ.
ನಾನು ಇದನ್ನು ಹೀಗೆ ಬಿಡಬಾರದು ಇದನ್ನು ಯೂಸ್ ಮಾಡಿಕೊಂಡು ನಾನು ನನ್ನ ಕೆಲಸವನ್ನು ಭದ್ರ ಮಾಡಿಕೊಳ್ಳಬೇಕು ಎಂದು ಶ್ವೇತಾ ತನ್ನೊಳಗೆ ತಾನೇ ಮಾತನಾಡಿಕೊಳ್ಳುತ್ತಿದ್ದಾಳೆ. ಅಷ್ಟರಲ್ಲಿ ರೂಮಿಗೆ ಮಿಲ್ಲಿ ಬರುವುದನ್ನು ನೋಡಿ ಅವಳ ಫೋನನ್ನು ಅಲ್ಲೇ ಇಟ್ಟು ತನ್ನ ಫೋನ್‌ನಲ್ಲಿ ಮಾತನಾಡುವಂತೆ ನಟಿಸಿದ್ದಾಳೆ.

ಡೆವಿಲ್‌ಗೆ ವಿಷಯ ತಿಳಿಸಲು ಹೊರಟ ಮಿಲ್ಲಿ
ಆದಷ್ಟು ಬೇಗ ಡೆವಿಲ್‌ನ್ನು ಹಿಡಿಯಬೇಕು ನಾನು ಮಾಡಿರುವ ಪ್ಲಾನ್ ಈಗಾಗಲೇ ಎಕ್ಸಿಕ್ಯೂಟಿವ್ ಆಗಿದೆ ಎಂದು ಹೇಳುತ್ತಾ ಇರುತ್ತಾಳೆ. ಇದನ್ನು ಕೇಳಿದ ಮೇಲೆ ಶಾಕ್ ಆಗಿದೆ ಶ್ವೇತಾಗೆ. ಡೆವಿಲ್ ಬಗ್ಗೆ ಕಟ್ಟಿಕೊಂಡು ನಿನಗೇನು ಆಗಬೇಕು ಎಂದು ಮಿಲ್ಲಿಗೆ ಶ್ವೇತಾ ಕೇಳಿದ್ದಾಳೆ. ನಂತರ ಮಾತನಾಡಿದ ಶ್ವೇತಾ ಫಸ್ಟ್ ಆಫ್ ಆಲ್ ಈ ಮನೆಯಲ್ಲಿ ನನ್ನ ವರ್ಚಸ್ಸು ಕಡಿಮೆಯಾಗುತ್ತಿದೆ ನಾನು ಭದ್ರವಾಗಿ ನೆಲೆಯೂರಬೇಕು ಎಂದರೆ ದಯವಿಟ್ಟು ಕೊಡಬೇಕು ಆಗ ನಾನು ಎಲ್ಲರ ಮುಂದೆ ಒಳ್ಳೆಯವಳಾಗುತ್ತೇನೆ ಎಂದು ಶ್ವೇತಾ ಹೇಳಿದ್ದಾಳೆ.

ಶ್ವೇತಾಗೆ ಚಾಲೆಂಜ್ ಮಾಡಿದ ಮಿಲ್ಲಿ
ಭೂಪತಿ ಮತ್ತು ಚಂದ್ರಶೇಖರ್ ಕೈಯಲ್ಲಿ ಡೆವಿಲ್ ಹಿಡಿಯಲು ಆಗಲಿಲ್ಲ ಎಂದು ಮಿಲ್ಲಿ ಶ್ವೇತಾಗೆ ಹೇಳಿದ್ದಾಳೆ. ಅದಕ್ಕೆ ತಿರುಗಿ ಶ್ವೇತ ನಾನು ಭೂಪತಿ ಮತ್ತು ಚಂದ್ರಶೇಖರ್ ತರ ಒಳ್ಳೆಯವಳಲ್ಲ ತುಂಬಾ ಕೆಟ್ಟವಳು ಒಳ್ಳೆಯವರಿಗೆ ಕೆಟ್ಟವರನ್ನು ಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ನಂತರ ಮಾತನಾಡಿದ ಶ್ವೇತಾ ನಾನು ಡೆವಿಲ್ ಫೋನನ್ನು ಟ್ರ್ಯಾಪ್ ಮಾಡಿದ್ದೇನೆ ಅವರು ಒಂದೇ ನಂಬರ್ ಯೂಸ್ ಮಾಡಲ್ಲ ಎಂದು ಮಿಲ್ಲಿ ಹೇಳಿದ್ದಾಳೆ. ಅದಕ್ಕಾಗಿ ಅವರಿಗೆ ಬೇಕಾದವರಿಗೆ ಒಂದೇ ನಂಬರ್ ಯೂಸ್ ಮಾಡುತ್ತಾರೆ ಅದನ್ನು ನಾನು ಟ್ರ್ಯಾಪ್ ಮಾಡಿಸಿದ್ದೇನೆ ಎಂದು ಸುಳ್ಳು ಕಥೆ ಕಟ್ಟಿದ್ದಾಳೆ. ಇದನ್ನು ಕೇಳಿಸಿಕೊಂಡ ಇಲ್ಲಿಗೆ ತುಂಬಾ ಶಾಕ್ ಆಗಿದೆ ಮನೆಯಿಂದ ಬೇಗನೆ ಹೊರಟಿದ್ದಾಳೆ.

ಮೌರ್ಯ ಮನೆಗೆ ಹೊರಟ ನಕ್ಷತ್ರ
ಈ ಕಡೆ ಮೌರ್ಯ ಮನೆಗೆ ನಕ್ಷತ್ರ ಹೊರಟು ನಿಂತಿದ್ದಾಳೆ ಲಕ್ಷಣ ಡಬ್ಬಿ ಪ್ಯಾಕ್ ಮಾಡುತ್ತಿದ್ದ ಸ್ಥಳಕ್ಕೆ ಬಂದ ಮಯೂರಿಗೆ ಅಕ್ಕ ನಾನು ಮೌರ್ಯನನ್ನು ನೋಡಲು ಹೋಗುತ್ತಿದ್ದೇನೆ ನನಗೆ ಸಹಾಯ ಮಾಡಿ ಎಂದು ಕೇಳಿದ್ದಾಳೆ ಇಬ್ಬರೂ ಹೊರಡುವಾಗ ಅಲ್ಲಿಗೆ ಶಾಕುಂತಲದೇವಿ ಬಂದಿದ್ದಾರೆ ಎಲ್ಲಿಗೆ ಎಂದು ಕೇಳಿದಾಗ ಮಯೂರಿ ನಕ್ಷತ್ರ ಕಡೆಯವರು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ ಎಂದು ಸುಳ್ಳು ಹೇಳಿದ್ದಾಳೆ. ಮನೆಗೆ ಬಂದ ನಕ್ಷತ್ರಗಳನ್ನು ನೋಡಿದ ಮೌರ್ಯನಿಗೆ ತುಂಬಾ ಖುಷಿಯಾಗಿದೆ. ಊಟ ಮಾಡುವಂತೆ ನಕ್ಷತ್ರ ಮೌರ್ಯನಿಗೆ ಹೇಳಿದ್ದಾಳೆ.

ಮಿಲ್ಲಿಯನ್ನು ಫಾಲೋ ಮಾಡಿದ ಶ್ವೇತಾ
ಮಿಲ್ಲಿ ಹೋದ ಕಡೆ ಶ್ವೇತಾ ಆಟೋದಲ್ಲಿ ಫಾಲೋ ಮಾಡುತ್ತಿದ್ದಾಳೆ ಈ ಕಡೆ ಮಿಲ್ಲಿಗೆ ತುಂಬಾ ಸಂಕಟವಾಗಿದೆ. ನಮ್ಮಮ್ಮನ ಫೋನ್ ಟ್ರ್ಯಾಪ್ ಆಗಿದೆ ನಾವು ಸಿಕ್ಕಿಹಾಕಿಕೊಳ್ಳುವ ಸಮಯ ಬಂದಿದೆ ಎಂದು ಮಿಲ್ಲಿ ಒದ್ದಾಡುತ್ತಿದ್ದಾಳೆ. ಈ ಕಡೆ ಮಿಲ್ಲಿಯ ಒದ್ದಾಟವನ್ನು ನೋಡಿದ ಶ್ವೇತಾಗೆ ತುಂಬಾ ಖುಷಿಯಾಗುತ್ತಿದೆ. ಕ್ಯಾಮೆರಾ ಫೋನ್ ಇಸ್ಕೊಂಡು ಮಿಲ್ಲಿ ತನ್ನ ಮನೆಗೆ ಫೋನ್ ಮಾಡಿ ನಿಮ್ಮ ಫೋನ್ ಟ್ರ್ಯಾಕ್ ಆಗಿದೆ ನಾವು ಬರುವ ಜಾಗಕ್ಕೆ ಬನ್ನಿ ಎಲ್ಲವನ್ನು ಹೇಳುತ್ತೇನೆ ಎಂದು ಕರೆದಿದ್ದಾಳೆ ಮುಂದೇನು ಎಂಬುವುದೇ ಕುತೂಹಲವಾಗಿದೆ.


Click it and Unblock the Notifications











