Lakshana serial: ಮಿಲ್ಲಿಯ ತಾಯಿಯೇ ಡೆವಿಲ್? ಗೊಂದಲದಲ್ಲಿ ಶ್ವೇತಾ

By ಶೃತಿ ಹರೀಶ್ ಗೌಡ

'ಲಕ್ಷಣ' ಧಾರಾವಾಹಿಯಲ್ಲಿ ಮೌಲ್ಯನ ಮನೆಗೆ ನಕ್ಷತ್ರ ಬಂದಿದ್ದಳು, ಮೌರ್ಯನನ್ನು ಕನ್ವಿನ್ಸ್ ಮಾಡಲು ನಕ್ಷತ್ರ ನೋಡುತ್ತಿದ್ದಾಳೆ ಆದರೆ ಮೌರ್ಯ ಮಾತ್ರ ಕನ್ವಿನ್ಸ್ ಆಗುತ್ತಿಲ್ಲ.

ಡೆವಿಲ್ ಅನ್ನು ಹುಡುಕಿ ಹೊರಟಿರುವ ಶ್ವೇತಾಗೆ ಒಂದು ಬಿಗ್ ಶಾಕ್ ಕಾದಿದೆ, ಯಾಕೆಂದರೆ ಈ ಕಡೆ ಮಿಲ್ಲಿ ಹೊರಟ ಕಾರನ್ನು ಬೆನ್ನಟ್ಟಿದ ಶ್ವೇತಾಗೆ ಮಿಲ್ಲಿ ಒಂದು ಮನೆಯ ಬಳಿ ತಲುಪಿರುವುದು ಕಂಡಿದೆ ಅವಳು ಸಹ ಮಿಲ್ಲಿಯ ಚಲನವಲನ ನೋಡುತ್ತಿದ್ದಾಳೆ. ಇನ್ನೇನು ಡೆವಿಲ್ ಬರುತ್ತಾಳೆ ಎಂದು ಕಾಯುತ್ತಿದ್ದಾಳೆ ಡೆವಿಲ್ ಬಂದ ತಕ್ಷಣವೇ ನೋಡಬೇಕು ಯಾರು ಡೆವಿಲ್ ಎಂಬುದನ್ನು ಕಂಡು ಹಿಡಿಯಬೇಕು ಎಂದುಕೊಂಡಿದ್ದಾಳೆ.

ಈ ಕಡೆ ಕಾರಿನಲ್ಲಿ ಡೆವಿಲ್ ಆಗಮನ ಆಗಿದೆ. ಮಿಲ್ಲಿ ಮನೆಯ ಒಳಗೆ ಹೋಗಿದ್ದಾಳೆ, ಡೇವಿಲ್ ಕಾರಿನಿಂದ ಇಳಿಯುವುದನ್ನು ನೋಡಿದ ಶ್ವೇತಾ ಸರಿಯಾಗಿ ಕಂಡಿಲ್ಲ, ತಪ್ಪಿಸಿಕೊಂಡು ಬಿಟ್ಟಳು ಎಂದುಕೊಂಡು ಶ್ವೇತಾ ಮತ್ತೆ ಹುಡುಕಿಕೊಂಡು ಬರುತ್ತಿದ್ದಾಳೆ. ಈ ಕಡೆ ಮಿಲ್ಲಿ ಮತ್ತು ಡೆವಿಲ್ ಮಾತನಾಡುವುದನ್ನು ಕೇಳಿಸಿಕೊಳ್ಳಲು ಎಲ್ಲಾ ಕಡೆ ಶ್ವೇತಾ ಹುಡುಕಿಕೊಂಡು ಬರುತ್ತಿದ್ದಾಳೆ.

ಕೋಣೆಯ ಒಳಗೆ ಮಿಲ್ಲಿ-ಡೆವಿಲ್ ಮಾತುಕತೆ ನಡೆಯುತ್ತಿದೆ, ನೋಡಿದರೆ ಡೆವಿಲ್ ಒಬ್ಬ ಮಹಿಳೆ. ಆ ಡೆವಿಲ್ ಸ್ವತಃ ಮಿಲ್ಲಿಯ ತಾಯಿ! ಇದು ಶ್ವೇತಾಗೆ ಶಾಕ್ ತಂದಿದೆ. ''ಅಮ್ಮ ನಾವು ಸ್ವಲ್ಪದರಲ್ಲೇ ಶ್ವೇತಾ ಕೈಗೆ ಸಿಕ್ಕಿ ಬೀಳುತ್ತಿದ್ದೆವು. ಅವಳ ಕೈಗೆ ನೀನು ಸಿಕ್ಕಿ ಬೀಳುವುದು ನನಗೆ ಸ್ವಲ್ಪವೂ ಇಷ್ಟ ಇಲ್ಲ ಎಂದು ಹೇಳುತ್ತಿದ್ದಾಳೆ. ಇದನ್ನು ಕೇಳಿದ ಶ್ವೇತಾಗೆ ತುಂಬಾನೇ ಶಾಕ್ ಆಗಿದೆ ಹಾಗಾದರೆ ಮಿಲ್ಲಿ, ಡೆವಿಲ್ ಮಗಳ? ಏನು ಅಮ್ಮ ಅಮ್ಮ ಎನ್ನುತ್ತಿದ್ದಾಳೆ ಎಂಬುದನ್ನು ಕೇಳಿದ ಶ್ವೇತಾಗೆ ಒಮ್ಮೆಗೆ ತಲೆ ತಿರುಗಿದಂತಾಗಿದೆ.

ಮಿಲ್ಲಿಯ ತಾಯಿಯೇ ಡೆವಿಲ್!

ಮಿಲ್ಲಿಯ ತಾಯಿಯೇ ಡೆವಿಲ್!

ಇದೇ ರೀತಿ ಮಾತನಾಡುತ್ತಿರುವ ಮಿಲ್ಲಿ ಅಮ್ಮ ನಾವು ಚಂದ್ರಶೇಖರ್ ಕೈಗೆ ಭೂಪತಿ ಕೈಗೆ ಸಿಗದಂತೆ ಎಷ್ಟು ಚಾಣಾಕ್ಷತೆಯಿಂದ ಎಲ್ಲರಿಗೂ ಮಣ್ಣುಮುಕ್ಕಿಸಿದ್ದೇವೆ ಈ ಶ್ವೇತಾ ಯಾವ ಲೆಕ್ಕ ಅವಳು ನಿನ್ನ ಫೋನನ್ನು ಟ್ರ್ಯಾಪ್ ಮಾಡಿದ್ದಾಳಂತೆ ಎಂದು ಹೇಳಿದ್ದಾಳೆ. ಇನ್ನು ಫೋನ್ ಟ್ರ್ಯಾಪ್ ಮಾಡಿದ್ದ ವಿಷಯ ತಿಳಿದ ಭಾರ್ಗವಿಗೆ ಒಮ್ಮೆಲೇ ಶಾಕ್ ಆಗಿದೆ. ಈ ಕಡೆ ಮಿಲ್ಲಿ ಒಂದೇ ಸಮನೆ ಭಾರ್ಗವಿಯ ಬಳಿ ಮಾತನಾಡುತ್ತಿದ್ದಾಳೆ. ಇದನ್ನೆಲ್ಲಾ ಶ್ವೇತ ಕೇಳಿಸಿಕೊಳ್ಳುತ್ತಿದ್ದಾಳೆ.

ನಕ್ಷತ್ರ- ಶ್ವೇತಾಳನ್ನು ಅದಲು ಬದಲು ಮಾಡಿದ ಸತ್ಯ ಬಯಲು

ನಕ್ಷತ್ರ- ಶ್ವೇತಾಳನ್ನು ಅದಲು ಬದಲು ಮಾಡಿದ ಸತ್ಯ ಬಯಲು

ಮಿಲ್ಲಿ ಮತ್ತು ಭಾರ್ಗವಿ ಮಾತನಾಡುವಾಗ ನಾನು ಸಿಎಸ್‌ಗೆ ಹಲವಾರು ತೊಂದರೆಗಳನ್ನು ಕೊಟ್ಟಿದ್ದೇನೆ ನಕ್ಷತ್ರ ಮತ್ತು ಶ್ವೇತಾ ಇಬ್ಬರನ್ನು ಅದಲು ಬದಲು ಮಾಡಿದಾಗಲೇ ಏನನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾಳೆ. ಇದನ್ನು ಕೇಳಿದ ಶ್ವೇತಾ ಒಮ್ಮೆಲೇ ನಡುಗಿಹೋಗಿದ್ದಾಳೆ. ಇವರು ಯಾಕೆ ಸಿಎಸ್‌ಗೆ ಇಷ್ಟೊಂದು ತೊಂದರೆ ಕೊಡುತ್ತಿದ್ದಾರೆ ಇವರಿಂದ ಅವರಿಗೆ ಏನು ಆಗಿದೆ ಎಂದು ಯೋಚನೆ ಮಾಡುತ್ತಿದ್ದಾಳೆ.

ಶ್ವೇತಾಗೆ ಗತಿ ಕಾಣಿಸುತ್ತೇನೆ ಎಂದ ಡೆವಿಲ್!

ಶ್ವೇತಾಗೆ ಗತಿ ಕಾಣಿಸುತ್ತೇನೆ ಎಂದ ಡೆವಿಲ್!

ಪ್ರತಿಯೊಂದನ್ನು ನಾನು ಮಾಡುವಾಗಲು ಎಚ್ಚರಿಕೆ ವಹಿಸಿಕೊಂಡೆ ಮಾಡಿದ್ದೇನೆ. ಈಗ ನಾನು ಆ ಶ್ವೇತಾಳನ್ನು ಸುಮ್ಮನೆ ಬಿಡುತ್ತೇನೆ. ಅವಳಿಗೊಂದು ಗತಿ ಕಾಣಿಸುತ್ತೇನೆ ಎಂದು ಭಾರ್ಗವಿ ಹೇಳುತ್ತಿದ್ದಾಳೆ. ನನಗೇನು ನೀವು ಗತಿ ಕಾಣಿಸುವುದು ನಾನು ಎಲ್ಲವನ್ನು ಕೇಳಿಸಿಕೊಂಡಿದ್ದೇನೆ ಎಂದು ಶ್ವೇತಾ ಅಂದುಕೊಳ್ಳುತ್ತಿದ್ದಾಳೆ ಹೇಗಾದರೂ ಮಾಡಿ ಡೆವಿಲ್ ಯಾರು ಎಂಬುದನ್ನು ಕಂಡುಹಿಡಿಯಬೇಕು ಎಂದು ಶ್ವೇತಾ ಪಣ ತೊಟ್ಟಿದ್ದಾಳೆ.

ನಕ್ಷತ್ರ ಮಾತು ಕೇಳದ ಮೌರ್ಯ

ನಕ್ಷತ್ರ ಮಾತು ಕೇಳದ ಮೌರ್ಯ

ಮೌರ್ಯನಿಗೆ ದಯವಿಟ್ಟು ನೀವು ನನ್ನನ್ನು ವಹಿಸಿಕೊಂಡು ಮನೆಗೆ ಬರಬೇಡಿ ಇದು ಯಾರಿಗೂ ಇಷ್ಟ ಇಲ್ಲ ಹೇಗೋ ತಿಳಿಯುವ ಕಾಲಕ್ಕೆ ಸತ್ಯ ತಿಳಿಯಲಿದೆ ಎಂದು ನಕ್ಷತ್ರ ಮೌರ್ಯನಿಗೆ ಹೇಳುತ್ತಿದ್ದಾಳೆ. ಆದರೆ ಮೌರ್ಯ ಮಾತ್ರ ಅತ್ತಿಗೆ ನಿಮಗೆ ಒಳ್ಳೆಯದೇ ಆಗಬೇಕು ನಾನು ಯಾವುದೇ ಮಾತನ್ನು ಹೇಳುವುದಿಲ್ಲ ಎಂದು ಹೇಳುತ್ತಿದ್ದಾನೆ. ಇನ್ನು ನಕ್ಷತ್ರ ಆಗಿ ಇದರಿಂದ ತುಂಬಾ ಬೇಸರವಾಗಿದೆ ನನ್ನ ಮಾತನ್ನು ಮೌರ್ಯ ಕೇಳುತ್ತಿಲ್ಲ ಇದು ಹೀಗೆ ಮುಂದುವರೆದರೆ ಚೆನ್ನಾಗಿರುವುದಿಲ್ಲ ಎಂದು ನಕ್ಷತ್ರ ಅಂದುಕೊಂಡಿದ್ದಾಳೆ. ಈ ಕಡೆ ಡೆವಿಲ್ ಮಾತನಾಡಿಕೊಂಡು ಮನೆಯಿಂದ ಹೊರಗೆ ಬರುತ್ತಿದ್ದಾಳೆ. ಇನ್ನು ಡೆವಿಲ್‌ನನ್ನು ನೋಡಬೇಕು ಎಂದು ಶ್ವೇತಾ ಹಿಂದೆ ಓಡಿ ಹೋಗುತ್ತಿದ್ದಾಳೆ ಇದನ್ನು ಕಾರಿನ ಮಿರರ್‌ನಲ್ಲಿ ಡೇವಿಲ್ ನೋಡಿ ಸುಮ್ಮನೆ ನಿಂತಿದ್ದಾಳೆ. ಮುಂದೆ ಏನಾಗುತ್ತದೆ ಡೆವಿಲ್ ಸಿಗುತ್ತಾಳ ಎಂಬುವುದೇ ಕುತೂಹಲವಾಗಿದೆ.

More from Filmibeat

English summary
Colors Kannada serial Lakshana Written Update on February 8th episode. Here is the details about shweatha following Devil.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X