Lakshana serial: ಶ್ವೇತಳಾನ್ನು ನಂಬದ ಆರತಿ-ಚಂದ್ರಶೇಖರ್
ಇವರೆಗೆ ಲಕ್ಷಣ ಧಾರಾವಾಹಿಯಲ್ಲಿ ಶ್ವೇತಾ ಡೆವಿಲ್ ಫಾಲೋ ಮಾಡುತ್ತಿದ್ದರೆ. ನಕ್ಷತ್ರ ಮೌರ್ಯನಿಗೆ ಬುದ್ದಿಹೇಳಿ ನಿನ್ನ ಜೀವನ ಸರಿ ಮಾಡಿಕೋ ಎಂದು ಹೇಳಿದ್ದಾಳೆ. ಆದರೆ ಮೌರ್ಯ ನಕ್ಷತ್ರ ಮಾತನ್ನು ಕೇಳಿಲ್ಲ.
ಶ್ವೇತಾ ಡೆವಿಲ್ ಹೋದ ಕಡೆ ಹೋಗುತ್ತಿದ್ದಾಳೆ ಆಟೋದಲ್ಲಿ ಕಾರನ್ನು ಫಾಲೋ ಮಾಡುವಂತೆ ಹೇಳಿದ್ದಾಳೆ. ಆಟೋ ಡ್ರೈವರ್ ಡೇವಿಲ್ ಕಾರನ್ನು ಫಾಲೋ ಮಾಡುತ್ತಿದ್ದಾನೆ. ಈ ಕಡೆ ಭಾರ್ಗವಿ ತನ್ನ ಮಗಳು ಮಿಲ್ಲಿಗೆ ಫೋನ್ ಮಾಡಿದ್ದಾಳೆ ನೀನು ಸುಮ್ಮನೆ ನನ್ನನ್ನು ಸಿಕ್ಕಿಹಾಕಿಸುತ್ತಿದ್ದೆ ಎಂದು ಬೈಯುತ್ತಿದ್ದಾಳೆ. ನಾಲಾಯಕ್ ನೀನು ನಿನ್ನನ್ನು ಮುಂದಿಟ್ಟುಕೊಂಡು ನನ್ನನ್ನು ಸಿಕ್ಕಿಸಲು ಶ್ವೇತಾ ಪ್ಲಾನ್ ಮಾಡಿದ್ದಾಳೆ ನಾನು ಅಂತಹ ಚಿಲ್ಟಾರಿ ಕೈಗೆ ಸಿಕ್ಕುವುದಿಲ್ಲ ಎಂದು ಮಿಲ್ಲಿಗೆ ಬೈದಿದ್ದಾಳೆ.
ಇನ್ಮುಂದೆ ಯಾದರೂ ನೀನು ಉಷಾರಾಗಿ ಇರು ಸರಿಯಾದ ರೀತಿಯಲ್ಲಿ ನಡೆದುಕೋ ನನ್ನ ಮಗಳಾಗಿ ಹುಟ್ಟಿ ಈ ರೀತಿ ನೀನು ಮಾಡುತ್ತೀಯಾ ಎಂದು ಅಂದುಕೊಂಡಿರಲಿಲ್ಲ ಎಂದು ಮಿಲ್ಲಿಗೆ ಬೈಯುತ್ತಿದ್ದಾಳೆ. ಈ ಕಡೆ ಶ್ವೇತಾ ನೀನು ಎಂತಹದ್ದೇ ಪ್ಲಾನ್ ಮಾಡಿದರು ಇವತ್ತು ನನ್ನ ಕೈಗೆ ಸಿಕ್ಕಿ ಹಾಕಿಕೊಳ್ಳಲೇಬೇಕು ಎಂದುಕೊಂಡು ಡೆವಿಲ್ ಕಾರನ್ನು ಫಾಲೋ ಮಾಡುತ್ತಿದ್ದಾಳೆ.

ಸಿಎಸ್ ಮನೆ ಮುಂದೆ ಹೋಗಿ ನಿಂತ ಡೆವಿಲ್ ಕಾರು
ಈ ಕಡೆ ಭಾರ್ಗವಿ ತನ್ನ ಕಾರನ್ನು ಚೇಂಜ್ ಮಾಡಿಕೊಂಡು ಚಂದ್ರಶೇಖರ್ ಕಾರನ್ನು ಬಳಕೆ ಮಾಡಿಕೊಂಡು ಹೋಗುತ್ತಿದ್ದಾಳೆ. ಇದೇ ವೇಳೆ ಆಟೋ ನಿಲ್ಲಿಸಿ ಎಂದು ಹೇಳಿದ ಶ್ವೇತಾ ಮತ್ತೆ ಬೇರೆ ಕಾರನ್ನು ಫಾಲೋ ಮಾಡಿ ಎಂದು ಹೇಳಿದ್ದಾಳೆ. ಇದೇನು ಕಾರು ಚಂದ್ರಶೇಖರ್ ತರಹ ಇದೆ ಡೇವಿಲ್ ಯಾಕೆ ಅವರ ಕಾರನ್ನು ಬಳಸುತ್ತಿದ್ದಾಳೆ ಎಂದು ಶ್ವೇತಾಗೆ ಶಾಕ್ ಆಗಿದೆ . ಚಂದ್ರಶೇಖರ್ ಮನೆಯ ಮುಂದೆಯೇ ಕಾರು ನಿಂತಿದ್ದಕ್ಕೆ ಶ್ವೇತಾಗೆ ತುಂಬಾ ಶಾಕ್ ಆಗಿದೆ.

ಡೆವಿಲ್ ಹಿಡಿಯಲು ಹೋದ ಶ್ವೇತಾ
ಸಿಎಸ್ ಮನೆಯ ಮುಂಭಾಗ ಕಾರು ನಿಂತಿದ್ದು ಭಾರ್ಗವಿ ಮನೆಯೊಳಗೆ ಹೋಗಿದ್ದಾಳೆ ಇದನ್ನು ನೋಡಿದ ಶ್ವೇತಾ ಕೂಡ ಶಾಕ್ ಆಗಿ ಸೆಕ್ಯೂರಿಟಿಯನ್ನು ತಳ್ಳಿಕೊಂಡು ಮನೆ ಒಳಗೆ ಹೋಗಿದ್ದಾಳೆ. ಇನ್ನು ಅಲ್ಲಿಯೇ ಇದ್ದ ಆರತಿ ಯಾಕೆ ಮನೆಯೊಳಗೆ ಬಂದೆ ನಿನ್ನ ನೆರಳು ಕೂಡ ನಮ್ಮ ಮೇಲೆ ಸುಳಿಯಬಾರದು ಎಂದುಕೊಂಡಿದ್ದೇವೆ ನೀನು ಮನೆಗೆ ಬಂದಿದ್ದೀಯ ಮಾನ ಮರ್ಯಾದೆ ಇಲ್ವಾ ಎಂದು ಬೈದಿದ್ದಾಳೆ.

ಚಂದ್ರಶೇಖರ ಮತ್ತು ಶ್ವೇತಾ ಮಾತುಕತೆ
ಈ ವೇಳೆ ಶ್ವೇತಾ ಈ ಮನೆಗೆ ಡೆವಿಲ್ ಬಂದಳು ನಾನು ಕಣ್ಣಾರೆ ನೋಡಿದ್ದೇನೆ ಅವಳನ್ನೇ ಫಾಲೋ ಮಾಡುತ್ತಿದ್ದೇನೆ ಎಂದು ಹೇಳಿದ್ದಾಳೆ ಆದರೆ ಚಂದ್ರಶೇಖರ ಹಾಗೂ ಆರತಿ ಇಬ್ಬರು ಶ್ವೇತಾ ಮಾತನ್ನು ನಂಬಲು ತಯಾರಿಲ್ಲ. ಇದ್ಯಾವುದೇ ಹೊಸ ನಾಟಕ ತೆಗೆದಿದ್ದೀಯ ಯಾಕೆ ಶಾಕುಂತಲ ದೇವಿಯ ಮನೆಯಲ್ಲಿ ಪಾಕೆಟ್ ಮನಿ ಕೊಡಲಿಲ್ಲ ಎಂದು ಶ್ವೇತಾಗಿ ಆರತಿ ಬೈದಿದ್ದಾರೆ. ಆ ಡೇವಿಲ್ ಮನೆಯಲ್ಲಿ ಇದ್ದಾಳೆ ನಿಮ್ಮಿಬ್ಬರ ಪ್ರಾಣಕ್ಕೆ ಕಂಟಕವಿದೆ ನಿಮ್ಮನ್ನು ಸಾಯಿಸಲಿದ್ದಾಳೆ ಎಂದು ಹೇಳಿದಾಗ ಮೇಲೆ ನಿಂತುಕೊಂಡು ಕೇಳಿಸಿಕೊಳ್ಳುತ್ತಿದ್ದ ಭಾರ್ಗವಿ ಕೆಳಗಿಳಿದು ಬಂದಿದ್ದಾಳೆ. ಇನ್ನು ಅಲ್ಲಿಗೆ ಬಂದ ಭಾರ್ಗವಿ ಅಣ್ಣ ಅತ್ತಿಗೆ ಇವಳ ಮಾತನ್ನು ಏನು ಕೇಳುತ್ತೀರಾ ಕತ್ತಿಡಿದು ಆಚೆ ನೂಕಿ ಎಂದು ಹೇಳಿದ್ದಾರೆ ಇದೇ ವೇಳೆ ಆರತಿ ಶ್ವೇತಾಳನ್ನು ಮನೆಯಿಂದ ಹೊರಗೆ ಹಾಕಿದ್ದಾರೆ. ಇನ್ನು ಸೆಕ್ಯೂರಿಟಿ ಗಾರ್ಡಿಗೆ ಚಂದ್ರಶೇಖರ್ ಇನ್ನೊಮ್ಮೆ ಮನೆಯೊಳಗೆ ಬಿಟ್ಟರೆ ಕೆಲಸ ಕಳೆದುಕೊಳ್ಳಲಿದ್ದೀಯಾ ಎಂದು ಬೈದಿದ್ದಾರೆ.

ನೋಡಿ ಖುಷಿಯಾದ ನಕ್ಷತ್ರ
ಶಾಕುಂತಲ ದೇವಿ ನಕ್ಷತ್ರ ಗೆ ಒಂದು ಗಿಫ್ಟನ್ನ ನೀಡಿದ್ದಾರೆ ನಾನು ಇದನ್ನು ಭೂಪತಿಯ ಹೆಂಡತಿಗೆ ತಂದಿದ್ದೆ ಈಗ ನಿನ್ನನ್ನು ಸೊಸೆಯನ್ನಾಗಿ ಒಪ್ಪಿಕೊಂಡಿದ್ದೇನೆ ಅದಕ್ಕೆ ನಿನಗೆ ಗಿಫ್ಟ್ ನೀಡುತ್ತಿದ್ದೇನೆ ಎಂದು ಹೇಳುವ ಮೂಲಕ ನಕ್ಷತ್ರ ಗೆ ಗಿಫ್ಟ್ ಕೊಟ್ಟಿದ್ದಾರೆ ಗಿಫ್ಟ್ ನೋಡಿದ ನಕ್ಷತ್ರ ತುಂಬಾ ಖುಷಿಯಿಂದ ಇದ್ದಾಳೆ. ಈ ಕಡೆ ಶ್ವೇತಾ ಡೇವಿಲ್ ಹುಡುಕುವುದರಲ್ಲಿ ನಿರತಳಾಗಿದ್ದಾಳೆ ಮುಂದೆ ಡೆವಿಲನ್ನು ಹುಡುಕುತ್ತಾಳ ಎಂಬುದೇ ಕುತೂಹಲವಾಗಿದೆ.


Click it and Unblock the Notifications











