Lakshana Serial: ಅತ್ತೆ ಕೊಟ್ಟ ಟಾಸ್ಕ್‌ನಲ್ಲಿ ಗೆಲ್ಲುತ್ತಾಳ ನಕ್ಷತ್ರ?

By ಶೃತಿ ಹರೀಶ್ ಗೌಡ

ಮನೆಯ ಮಹಡಿಯ ಮೇಲೆ ನಿಂತುಕೊಂಡು ಶಾಕುಂತಲಾದೇವಿ ಯಾರು ಮೊದಲು ಬರ್ತಾರೆ ಎಂದು ನೋಡ್ತಾ ಇರ್ತಾರೆ. ನಕ್ಷತ್ರ ನಡೆದುಕೊಂಡು ಬರೋದ್ದನ್ನು ನೋಡಿ ಶಾಕುಂತಲದೇವಿ ಬೇಜಾರ್ ಮಾಡಿಕೊಳ್ತಾರೆ. ನಂತರ ಶ್ವೇತ ಬೇರೆ ಆಟೋದಲ್ಲಿ ಬಂದು ಮನೆಯ ಮುಂದೆ ಇಳಿದುಕೊಂಡು ಶಾಕುಂತಲದೇವಿ ಮುಂದೆ ಬಂದು ಅತ್ತೆ ಎಲ್ಲ ತಂದಿದ್ದೇನೆ ನೀವು ಇಷ್ಟು ಸಪೋರ್ಟ್ ಮಾಡೋವಾಗ ಮೊದಲು ಬರದೇ ಇರ್ತಿನಾ ಅಂತಾಳೆ.

ಇದಕ್ಕೆ ಶಾಕುಂತಲದೇವಿ ಶ್ವೇತಾ ಬ್ಯಾಗ್ ನೋಡಿ ಖುಷಿಯಾಗ್ತಾಳೆ. ನಕ್ಷತ್ರ ಕೋಪದಲ್ಲಿ ಬಂದು ಶ್ವೇತಾ ಮೋಸ ಮಾಡ್ತಾ ಇದ್ದೀಯಾ ಎಂದಾಗ ಮಿಲ್ಲಿ ಬಂದು ಶ್ವೇತಾ ಮೋಸ ಮಾಡಿಲ್ಲ ಎಂದು ಹೇಳ್ತಾಳೆ. ಇದಕ್ಕೆ ಶಾಕುಂತಲದೇವಿ ನಕ್ಷತ್ರಾಗೆ ನಿನಗೆ ಗೆಲ್ಲುವ ಯೋಗ್ಯತೆ ಇಲ್ಲ ಬೇರೆಯವರ ಮೇಲೆ ಆಪಾದನೆ ಚೆನ್ನಾಗಿ ಮಾಡ್ತೀಯ ಎಂದು ನಕ್ಷತ್ರಾಗೆ ಬೈತಾರೆ. ಇದರಿಂದ ಶ್ವೇತಾ ಮತ್ತು ಮಿಲ್ಲಿ ಖುಷಿಪಡ್ತಾ ಇರ್ತಾರೆ.

ನಂತರ ಶಕುಂತಲಾ ದೇವಿ ಒಳಗಡೆ ಬನ್ನಿ ಅಡುಗೆ ಮನೆ ಹತ್ರ ಅತ್ತೆ ಕೊಡುವ ಪವರ್ ಏನು ನೋಡ್ತಿನಿ ಬಾ ಎಂದು ಶ್ವೇತಾ ಹೇಳಿದಾಗ ನಕ್ಷತ್ರಾಗೆ ಬೇಜಾರ್ ಆಗುತ್ತದೆ. ಇತ್ತ ಶಕುಂತಲಾ ದೇವಿ ಶ್ವೇತಾಗೆ ಅಡುಗೆ ಮನೆ ಯೂಸ್ ಮಾಡೋ ಪವರ್ ಕೊಡ್ತಾಳೆ. ನಕ್ಷತ್ರಗೇ ನೀನು ಹೇಗಾದರೂ ಅಡುಗೆ ಮಾಡು ಮೊದಲು ಬಂದವರಿಗೆ ಆದ್ಯತೆ ಅಂತಾ ಹೇಳ್ತಾಳೆ.

ನಕ್ಷತ್ರ ಪರ ನಿಂತ ಭೂಪತಿ

ನಕ್ಷತ್ರ ಪರ ನಿಂತ ಭೂಪತಿ

ಇತ್ತ ನಕ್ಷತ್ರ ಪರ ನಿಂತ ಭೂಪತಿ ಅವಳು ಹೇಗೆ ಅಡುಗೆ ಮಾಡ್ತಾಳೆ ಎಂದಾಗ ಮುನ್ನನನ್ನು ಕರೆದು ಸೀಮೆಎಣ್ಣೆ ಸ್ಟೌವ್ ತರೋದ್ದಕ್ಕೆ ಹೇಳ್ತಾರೆ. ಮುನ್ನ ಸೀಮೆಎಣ್ಣೆ ಸ್ಟೌವ್ ತಂದು ನಕ್ಷತ್ರ ಕೈಗೆ ಕೊಡ್ತಾನೆ. ಆಗಲೂ ಸಹ ಭೂಪತಿ ಅಮ್ಮ ಎಂದಾಗ ಶಾಕುಂತಲಾ ದೇವಿ ಇದಕ್ಕೂ ನಿನಗೂ ಏನು ಸಂಬಂಧವಿಲ್ಲ ಎಂದು ರೇಗ್ತಾರೆ. ಇದರಿಂದ ಮುಖ್ಯವಾಗಿ ಸಾಧಿಸೋದು ಒಂದು ಇದೆ ಎಂದು ಹೇಳ್ತಾಳೆ. ನಕ್ಷತ್ರ ಸಹ ಇದು ನಾನು ಲೇಟಾಗಿ ಬಂದಿದ್ದಕ್ಕೆ ಶಿಕ್ಷೆ ಎಂದು ಅಡುಗೆ ಮಾಡೋಕೆ ಹೋಗ್ತಾಳೆ.

ನಕ್ಷತ್ರಗೆ ಕ್ಷಣ ಕ್ಷಣಕ್ಕೂ ಅಗ್ನಿಪರೀಕ್ಷೆ

ನಕ್ಷತ್ರಗೆ ಕ್ಷಣ ಕ್ಷಣಕ್ಕೂ ಅಗ್ನಿಪರೀಕ್ಷೆ

ನಕ್ಷತ್ರಾಗೆ ಕ್ಷಣಕ್ಷಣಕ್ಕೂ ಅಗ್ನಿಪರೀಕ್ಷೆ ಎದುರಾಗುತ್ತಿದೆ. ಸ್ಟೌವ್‌ನಲ್ಲಿ ಸೀಮೆಎಣ್ಣೆ ಇರೋದಿಲ್ಲ. ಇದಕ್ಕೆ ಮುನ್ನ ಸೀಮೆಎಣ್ಣೆ ತಂದು ಇದಕ್ಕೆ ಹಣಕೊಟ್ಟು ತಗೆದುಕೊಳ್ಳೋಕೆ ಶಾಕುಂತಲದೇವಿ ಮೇಡಂ ಹೇಳಿದ್ದಾರೆ ಅಂತಾನೆ. ಅನಂತರ ನಕ್ಷತ್ರ ಸೌದೆ ಹೊಲೆಯಲ್ಲಿ ಅಡುಗೆ ಮಾಡೋಕೆ ಹೋಗ್ತಾಳೆ. ಇತ್ತ ಶ್ವೇತ ಹತ್ರ ಬಂದ ಮಿಲ್ಲಿ ಶ್ವೇತಾಗೆ ಬೈತ್ತಾ ಇರ್ತಾಳೆ‌ ಇದೇ ರೀತಿನಾ ಅಡುಗೆ ಮಾಡೋದು ಎಂದು ಬೈದಾಗ ಕೋಪ ಮಾಡಿಕೊಂಡು ಹೋಗು ಅಂತಾಳೆ. ನಂತರ ಮಿಲ್ಲಿ ಇದಕ್ಕೆ ಒಂದು ವ್ಯವಸ್ಥೆ ಮಾಡ್ತಿನಿ ನೀನು ಅಡುಗೆ ಮಾಡೋತರ ನಟಿಸು ಅಂತಾಳೆ.

ನಕ್ಷತ್ರ ಕಷ್ಟ ನೋಡಿ ಮಯೂರಿ ಕಣ್ಣೀರು

ನಕ್ಷತ್ರ ಕಷ್ಟ ನೋಡಿ ಮಯೂರಿ ಕಣ್ಣೀರು

ಇತ್ತ ನಕ್ಷತ್ರ ಒಲೆ ಹಚ್ಚಿ ಅಡುಗೆ ಮಾಡೋಕೆ ಶುರು ಮಾಡ್ತಾ ಇರ್ತಾಳೆ ಅಲ್ಲಿಗೆ ಮಯೂರಿ ಹಾಗೂ ಭೂಪತಿ ಬರ್ತಾರೆ ನಕ್ಷತ್ರ ಕಷ್ಟ ಪಡೋದು ನೋಡಿ ಮಯೂರಿ ಕಣ್ಣಿರು ಹಾಕ್ತಾಳೆ. ಪಾಪ ನಕ್ಷತ್ರ ಈ ಚಾಲೆಂಜ್‌ನಲ್ಲಿ ಗೆಲ್ಲಬೇಕು ಅಂತಾಳೆ. ಅವಾಗ ಭೂಪತಿ ನಕ್ಷತ್ರಳ ಫಾಸ್ಟ್ ಲೈಫ್ ಸಹ ನೋಡಿಲ್ಲ. ನಕ್ಷತ್ರ ಗೆದ್ದೆ ಗೆಲ್ಲುತ್ತಾಳೆ ಎಂದು ಭೂಪತಿ ಹೇಳುತ್ತಾನೆ. ನಕ್ಷತ್ರ ಅಡುಗೆ ಮಾಡ್ತಾ ಇರ್ತಾಳೆ, ಮಿಲ್ಲಿ ಶ್ವೇತಾಗಾಗಿ ಹೋಟೆಲ್‌ನಿಂದ ತಿಂಡಿ ತರಿಸಿತ್ತಾಳೆ. ಈ ಕಡೆ ಮಿಲ್ಲಿ ನಕ್ಷತ್ರ ಮಾಡಿದ ತಿಂಡಿಯನ್ನು ಕೆಳಗಡೆ ಹಾಕಿ ಹೋಗ್ತಾಳೆ. ನಕ್ಷತ್ರ ಮಾಡಿದ ಅಡುಗೆ ಮಣ್ಣು ಪಾಲಾಗಿರುತ್ತದೆ. ಮಿಲ್ಲಿ ಎಲ್ಲವನ್ನೂ ಮಣ್ಣು ಪಾಲು ಮಾಡಿ ಬಂದಿರುತ್ತಾಳೆ. ಮಣ್ಣು ಪಾಲಾದ ಅಡುಗೆಯನ್ನು ನೋಡಿ ನಕ್ಷತ್ರ ಕುಸಿದು ಬೀಳ್ತಾಳೆ. ನಕ್ಷತ್ರ ಟಾಸ್ಕ್‌ನಲ್ಲಿ ಸೋಲ್ತಾಳ ಅಥವಾ ಗೆಲ್ಲುತ್ತಾಳ ಕಾದು ನೋಡಬೇಕಿದೆ.

More from Filmibeat

English summary
Colors Kannada serial Lakshana Written Update on January 4th episode. Here is the details about competition between Nakshtra and Shweatha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X