For Quick Alerts
  ALLOW NOTIFICATIONS  
  For Daily Alerts

  Lakshana Serial: ಟಾಸ್ಕ್‌ನಲ್ಲಿ ಸೋತಳಾ ನಕ್ಷತ್ರ? ಇನ್ನೊಂದು ಚಾನ್ಸ್ ಸಿಗುತ್ತಾ?

  By ಶೃತಿ ಹರೀಶ್ ಗೌಡ
  |

  ನಕ್ಷತ್ರಗೆ ಆರತಿಯ‌ ಅಮ್ಮ ಫೋನ್ ಮಾಡಿ ಏನು ಮಾಡ್ತಾ ಇದ್ದೀಯ ನಕ್ಷತ್ರ ಎಂದು ಕೇಳಿದಾಗ ನಕ್ಷತ್ರ ‌ಅಳೋದ್ದಕ್ಕೆ ಶುರು ಮಾಡ್ತಾಳೆ. ಅಮ್ಮ ನಾನು ಮಾಡಿದ ಅಡುಗೆ ಎಲ್ಲ ಮಣ್ಣು ಪಾಲಾಗಿದೆ ಇದು ಹೇಗೆ ಆಯ್ತು ಗೊತ್ತಿಲ್ಲ ಅಮ್ಮ ಅಂತಾಳೆ. ಆಗ‌ ಆರತಿ ಸಮಾಧಾನ ಮಾಡೋಕೆ‌ ಪ್ರಯತ್ನ ಮಾಡ್ತಾಳೆ. ಆದರೂ ಸಹ ಆರತಿಗೆ ಮಗಳು ಎಲ್ಲಿ ಸೋತು ಬಿಡುತ್ತಾಳೋ ಎಂಬ ಚಿಂತೆ‌ ಕಾಡುತ್ತದೆ.‌

  ಅಂದು ಚಂದ್ರಶೇಖರ್ ಹಾಗೂ ಶಾಕುಂತಲದೇವಿ ನಡುವೆ ಆದ ಪಂದ್ಯದ ಬಗ್ಗೆ‌ ನಕ್ಷತ್ರಳಿಗೆ ಆರತಿ‌ ಹೇಳುತ್ತಾಳೆ. ನೀನು ಈ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕು ಎಂದು ಹೇಳುತ್ತಾಳೆ.‌ ಏನಮ್ಮಾ ಪಂದ್ಯ ಎಂದು ನಕ್ಷತ್ರ ಕೇಳಿದಾಗ ಚಂದ್ರಶೇಖರ್ ನನ್ನ ಮಗಳೇ ಬೆಸ್ಟ್ ಎಂದು ಹೇಳುತ್ತಾರೆ ಅದಕ್ಕೆ ಒಂದು ಪಂದ್ಯವನ್ನು ಏರ್ಪಡಿಸುತ್ತಾರೆ. ಆಗ ಶಾಕುಂತಲದೇವಿ ‌ಪಂದ್ಯಕ್ಕೆ ಒಪ್ಪಿಗೆ ಇದೆ ಎಂದು ಹೇಳಿ ಈ ಪಂದ್ಯದಲ್ಲಿ ನಕ್ಷತ್ರ ಗೆದ್ದರೆ ಮಾತ್ರ ಈ ಮನೆ ಸೊಸೆ ಎಂದು ನಾನು ಒಪ್ಪಿಕೊಳ್ಳುತ್ತೇನೆ ಇಲ್ಲದಿದ್ದರೆ ಅವಳು ಅಂದೇ ತವರು ಮನೆಗೆ ಹೋಗಬೇಕಾಗುತ್ತದೆ ಎಂದು‌ ಹೇಳಿದ್ದಾರೆ ಎಂದು ನಕ್ಷತ್ರಗೆ ಆರತಿ ಹೇಳುತ್ತಾರೆ.

  ಅಲ್ಲಿಗೆ ಬಂದ ಚಂದ್ರಶೇಖರ್ ಮಗಳೇ ನನಗೆ ಬೇರೆ ದಾರಿ ಇಲ್ಲದೇ ನಾನು‌ ಈ ರೀತಿಯ ಪಂದ್ಯವನ್ನು ಏರ್ಪಡಿಸಿದೆ. ಆದರೆ ಶಾಕುಂತಲದೇವಿ ಬೇರೆಯದ್ದೇ ಟಸ್ಕ್ ನೀಡಿದರು ನೀನು ಗೆದ್ದೆ ಗೆಲ್ಲುತ್ತೀಯಾ ಎಂಬ ವಿಶ್ವಾಸ ನನಗಿದೆ ಎಂದು ಸಿಎಸ್ ಹೇಳುತ್ತಾನೆ. ನೀನು ಯಾವುದೇ ಕಾರಣಕ್ಕೂ ಸೋಲಬಾರದು ಮಗಳೇ ನೀನು ಭೂಪತಿ ಜೊತೆಯಲ್ಲಿಯೇ ಇರಬೇಕು ಆತ್ಮವಿಶ್ವಾಸ ಕಳೆದುಕೊಳ್ಳಬೇಡ ಏನಾದ್ರು ಮಾಡು ಎಂದು ಸಿಎಸ್ ಧೈರ್ಯ ತುಂಬುತ್ತಾರೆ.

  ಧೈರ್ಯ ತಂದುಕೊಂಡ ನಕ್ಷತ್ರ

  ಧೈರ್ಯ ತಂದುಕೊಂಡ ನಕ್ಷತ್ರ

  ಇತ್ತ ನಕ್ಷತ್ರ ಧೈರ್ಯ ತಂದು ಕೊಂಡು ಅಪ್ಪ ನಾನು ತವರು ಮನೆಗೆ ಬರೋದಿಲ್ಲ, ಇದೇ ಮನೆಯಲ್ಲಿ ಭೂಪತಿ ಹೆಂಡತಿಯಾಗಿ ಇಲ್ಲೇ ಇರುತ್ತೇನೆ. ಯಾವುದೇ ಕಾರಣಕ್ಕೂ ಸಹ ನಾನು ಈ ಮನೆ ಬಿಟ್ಟು ಬರೋದಿಲ್ಲ ಇದು ನನ್ನ ಮನೆ ಎಂದು ಮನಸಿನಲ್ಲಿ ಅಂದುಕೊಂಡು. ಅಳುತ್ತಾ ಶಕುಂತಲಾ ದೇವಿ ಇರುವ ಜಾಗಕ್ಕೆ ನಕ್ಷತ್ರ ಬರ್ತಾಳೆ ಆಗ ಖಾಲಿ‌ ಬಂದಿದ್ದ ನಕ್ಷತಳನ್ನು ನೋಡಿ ಏನಾಯಿತು ತಿಂಡಿ ಆಗಿಲ್ವ ಅಂತಾ ಕೇಳುತ್ತಾಳೆ. ಅದಕ್ಕೆ ನಕ್ಷತ್ರ ತಿಂಡಿ ರೆಡಿಯಾಗಿ ಕರೆಯೋಕೆ ಬಂದಾಗ ಅಡುಗೆ ಮಣ್ಣು ಪಾಲಾದ ಘಟನೆಯನ್ನು ಹೇಳುತ್ತಾ ಇರುತ್ತಾಳೆ.

  ಇನ್ನೊಂದು ಚಾನ್ಸ್ ಕೊಟ್ಟ ಶಾಕುಂತಲದೇವಿ

  ಇನ್ನೊಂದು ಚಾನ್ಸ್ ಕೊಟ್ಟ ಶಾಕುಂತಲದೇವಿ

  ಭೂಪತಿ ಹಾಗೂ ಮುನ್ನ ಮಾತು ಕೇಳಿದ ಶಾಕುಂತಲದೇವಿ ನಕ್ಷತ್ರಗೆ ಇನ್ನೊಂದು ಚಾನ್ಸ್ ಕೊಟ್ಟಿದ್ದಾಳೆ. ನೋಡು ನಾನು ಶ್ವೇತಾ ಮಾಡಿದ ತಿಂಡಿ ತಿಂದು ಮುಗಿಸೋದರೋಳಗೆ ನೀನು ಅಡುಗೆ ಮಾಡಿರಬೇಕು ಎಂದು ಹೇಳಿ ಕಳಿಸುತ್ತಾಳೆ. ಇದರಿಂದ ಸಂತಸಗೊಂಡ ನಕ್ಷತ್ರ ಅಡುಗೆ ಮಾಡಲು ಹೋಗುತ್ತಾಳೆ. ನಂತರ ಅಡುಗೆ ತಯಾರಿ‌ ಮಾಡಿಕೊಳ್ಳುತ್ತಾ ಇರುತ್ತಾಳೆ. ಇತ್ತ ಭೂಪತಿ, ನಕ್ಷತ್ರ ಬರುವಿಕೆಯನ್ನೇ ಕಾಯುತ್ತಾ ಆ ಕಡೆ ನೋಡುತ್ತಿರುತ್ತಾನೆ.

  ಶಕುಂತಲಾ ತಿಂಡಿ ಮುಗಿದರೂ ಬಾರದ ನಕ್ಷತ್ರ!

  ಶಕುಂತಲಾ ತಿಂಡಿ ಮುಗಿದರೂ ಬಾರದ ನಕ್ಷತ್ರ!

  ಇನ್ನೇನು ಶಾಕುಂತಲದೇವಿ ಮೇಲೆ ಎದ್ದು ನನ್ನದು ತಿಂಡಿ ಮುಗಿಯಿತು ಎಂದು ಮೇಲೆಳುತ್ತಾಳೆ.‌ ಇದನ್ನು ಕಂಡ ಭೂಪತಿ ನಕ್ಷತ್ರ ಬಂದ್ಲಾ ಎಂದು ಆ ಕಡೆಯೇ ನೋಡುತ್ತಿರುತ್ತಾನೆ. ಇನ್ನೂ ಶ್ವೇತಾಳೆ ಗೆಲುವು ಸಾಧಿಸಿದಳು ಎಂದು ಹೇಳೋಕೆ ಯಾವ ಅಡೆತಡೆಯು‌ ಇಲ್ಲ ಎಂದು ಶಾಕುಂತಲದೇವಿ ಮನಸಿನಲ್ಲಿ ಅಂದುಕೊಳ್ಳುವಾಗ ಭೂಪತಿ ನಕ್ಷತ್ರ ಬರೋದ್ದನ್ನೇ ನೋಡ್ತಾ ಇರುತ್ತಾನೆ. ನಕ್ಷತ್ರ ಎನು ತಿಂಡಿ ಮಾಡ್ತಾಳೆ, ಗೆಲುವು ಸಾಧಿಸಿದ್ದು ಯಾರು , ನಕ್ಷತ್ರಾಗೆ ಯಾರಾದ್ರೂ ಸಹಾಯಕ್ಕೆ ಬರ್ತಾರ, ಶಕುಂತಲಾದೇವಿ‌ ನಕ್ಷತ್ರನಾ ಸೊಸೆ ಎಂದು ಒಪ್ಪಿಕೊಳ್ತಾಳ ,ಮಿಲ್ಲಿ ಮಾಡಿದ ಪ್ಲ್ಯಾನ್ ಎಲ್ಲಾ ಉಲ್ಟಾಪಲ್ಟಾ ಆಗುತ್ತಾ ಅನ್ನೋದೆ ಸಸ್ಪೆನ್ ಆಗಿದೆ.

  English summary
  Colors Kannada serial Lakshana Written Update on January 11th episode. Here is the details about who's win the task.
  Thursday, January 12, 2023, 21:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X