Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Lakshana Serial: ಕೊನೆಗೂ ಸೋತು ಗೆದ್ದ ನಕ್ಷತ್ರ, ಮನೆಯಿಂದ ಹೊರ ಹೋಗೋದು ಯಾರು
ನಕ್ಷತ್ರ ಗೆಲುವು ಮನೆಯವರೆಲ್ಲರಿಗೂ ಮುಖ್ಯವಾಗಿತ್ತು. ಆದರೆ ಶ್ವೇತಾ ಮತ್ತು ಮಿಲ್ಲಿ ಮಾಡಿದ ಪ್ಲ್ಯಾನ್ ನಕ್ಷತ್ರ ಸೋತು ಮನೆಯಿಂದ ಹೊರಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮನೆಯಿಂದ ಹೊರಗೆ ನಕ್ಷತ್ರಳನ್ನು ಹಾಕಲಾಗಿತ್ತು. ಆದರೂ ಕೊನೆಗೆ ಗೆಲುವು ನಕ್ಷತ್ರ ಪಾಲಾಗಿದೆ.
ನಕ್ಷತ್ರಳನ್ನು ಮನೆಯಿಂದ ಹೊರಗೆ ಹಾಕಲು ಶಕುಂತಲಾ ದೇವಿ ತುದಿಗಾಲಲ್ಲಿ ನಿಂತಿದ್ದರು. ಇತ್ತ ಮಿಲ್ಲಿ ಹಾಗೂ ಶ್ವೇತ ಮಾಡಿದ ಪ್ಲ್ಯಾನ್ ವರ್ಕ್‌ಔಟ್ ಹಾಕಿ ನಕ್ಷತ್ರಳನ್ನು ಮನೆಯಿಂದ ಹೊರಗೆ ಹಾಕಲಾಗುತ್ತದೆ. ನಕ್ಷತ್ರ ಶಕುಂತಲಾ ದೇವಿಯನ್ನು ಅತ್ತು ಕರೆದು ಗೊಗರೆಯುತ್ತಾಳೆ. ಕಾಲಿಗೆ ಬಿದ್ದರು ಸಹ ಅತ್ತೆಯ ಮನಸು ಕರಗೋದಿಲ್ಲ.
ಅತ್ತೆ ಇದು ನನ್ನ ಗಂಡನ ಮನೆ ನಾನು ಸತ್ತರೂ ಇಲ್ಲಿಯೇ ಇದ್ದರೂ ಇಲ್ಲಿಯೇ ದಯವಿಟ್ಟು ನನ್ನ ಮನೆಯಿಂದ ಹೊರಗೆ ಕಳುಹಿಸಬೇಡಿ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ ಆದರೂ ಸಹ ಶಕುಂತಲಾ ದೇವಿ ಮನಸು ಕರಗದೇ ಸೇಡಿನಿಂದಲೇ ತುಂಬಿರುತ್ತದೆ. ಅದಷ್ಟು ಬೇಗ ನಕ್ಷತ್ರಳನ್ನು ಮನೆಯಿಂದ ಹೊರಗೆ ಹಾಕಲು ಕಾಯುತ್ತಿರುತ್ತಾಳೆ.
ನಕ್ಷತ್ರ ರೂಮ್‌ಗೆ ಕರೆದುಕೊಂಡು ಹೋದ ಶಾಕುಂತಲದೇವಿ ನೀನು ಇನ್ಮುಂದೆ ಈ ಕಡೆ ತಲೆ ಹಾಕಿ ಮಲಗಬಾರದು ನಿನ್ನ ಎಲ್ಲ ವಸ್ತುಗಳನ್ನು ತಗೆದುಕೊಂಡು, ಆ ವಸ್ತು ಇದೆ, ಈ ವಸ್ತು ಇದೆ ಎಂದು ಬರಬೇಡ ಎಂದು ಹೇಳಿ ಕೆಲಸದವಳಿಗೆ ನಕ್ಷತ್ರ ಬಟ್ಟೆ ಪ್ಯಾಕ್ ಮಾಡುವಂತೆ ಹೇಳುತ್ತಾಳೆ. ಆಗಲೂ ಸಹ ನಕ್ಷತ್ರ ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ ಆಗಲೂ ಶಾಕುಂತಲದೇವಿ ತನ್ನ ನಿರ್ಧಾರವನ್ನು ಬದಲಿಸೋದಿಲ್ಲ.

ಅಮ್ಮನನ್ನು ಒಪ್ಪಿಸುವಲ್ಲಿ ಸೋತ ಭೂಪತಿ
ನಕ್ಷತ್ರ ಮನೆಬಿಟ್ಟು ಹೋಗದಂತೆ ಅಮ್ಮನನ್ನು ಒಪ್ಪಿಸುವಲ್ಲಿ ಸೋತು ಹೋಗುತ್ತಾನೆ. ಶಕುಂತಲಾ ದೇವಿ ನಾನು ಈಗಾಗಲೇ ಮೂರು ಜನ ಮಕ್ಕಳನ್ನು ಕಳೆದುಕೊಂಡಿದ್ದೇನೆ ನಿನ್ನನ್ನು ಕಳೆದುಕೊಳ್ಳುವುದೇನು ದೊಡ್ಡದಲ್ಲ ಆಯ್ಕೆ ನಿನಗೆ ಬಿಟ್ಟಿದ್ದು ಎಂದು ಹೇಳಿ ಭೂಪತಿ ಬಾಯಿಯನ್ನು ಮುಚ್ಚಿಸುತ್ತಾಳೆ.

ಮನೆಯಿಂದ ನಕ್ಷತ್ರಳನ್ನು ತಳ್ಳಿದ ಶಕುಂತಲಾ ದೇವಿ
ಮನೆಯಿಂದ ನಕ್ಷತ್ರಳನ್ನು ಶಾಕುಂತಲದೇವಿ ತಳ್ಳುತ್ತಾರೆ. ಬಟ್ಟೆಯ ಸಮೇತ ಇನ್ನೂ ಈ ಮನೆಯ ಋಣ ತೀರಿ ಹೋಯಿತು ನನ್ನ ಮಗನ ಹಾಗೂ ನನ್ನ ನೆಮ್ಮದಿ ಹಾಳು ಮಾಡಿದ್ದು ಸಾಕು, ನೀವು ಮಾಡಿದ ಮೋಸಕ್ಕೆ ಇದು ಸರಿಯಾಗಿ ಆಗಿದೆ ಎಂದು ಅಂದು ಬಾಗಿಲನ್ನು ಮುಚ್ಚಿ ಬಿಡುತ್ತಾರೆ ಆಗಲೂ ಸಹ ನಕ್ಷತ್ರ ಅಳುತ್ತಾ ಭೂಪತಿ ಬಾಗಿಲು ತಗಿಯೋ ಎಂದು ಕಣ್ಣೀರು ಹಾಕುತ್ತಾಳೆ.

ನಕ್ಷತ್ರ ಕಾಪಾಡಿದ ಡೆಲಿವರಿ ಬಾಯ್
ಶಾಕುಂತಲದೇವಿ ಮನೆಗೆ ಬೆಳಗ್ಗೆಯಿಂದ ಪುಡ್ ಡೆಲಿವರಿ ಮಾಡುತ್ತಿದ್ದ ಡೆಲಿವರಿ ಬಾಯ್ ಸರಿಯಾದ ಸಮಯಕ್ಕೆ ಬಂದು ನಕ್ಷತ್ರಳನ್ನು ವಾಪಸ್ ಮನೆಗೆ ಹೋಗುವಂತೆ ಮಾಡುತ್ತಾನೆ. ಇತ್ತ ಬಾಗಿಲು ಬಡಿದ ಸಿಎಸ್, ಶಾಕುಂತಲದೇವಿ ಅವರೇ ನಿಮ್ಮ ಬೆನ್ನ ಹಿಂದೆ ನಡೆದ ಮೋಸದ ಬಗ್ಗೆ ಮಾತನಾಡಬೇಕು ಬಾಗಿಲು ತಗೆಯಿರಿ ಎಂದು ಜೋರಾಗಿ ಹೇಳಿದಾಗ, ಶಾಕುಂತಲದೇವಿ ಬಂದು ಬಾಗಿಲು ತಗೆಯುತ್ತಾರೆ. ಏನು ಮೋಸ ನೀವು ಮೋಸ ಮಾಡೋದು ನಾವಲ್ಲ ಎಂದು ಹೇಳಿದಾಗ ಇದೇನು ಎಂದು ಡೆಲಿವರಿ ಬಾಯ್ ಕೈಯಲ್ಲಿದ್ದ ರಾಯತವನ್ನು ತೋರಿಸಿದಾಗ ಎಲ್ಲರಿಗೂ ಶಾಕ್ ಆಗುತ್ತದೆ.

ಮನೆಯಿಂದ ಹೊರ ಹೋಗ್ತಾಳಾ ಶ್ವೇತ?
ಆಗ ಡೆಲಿವರಿ ಬಾಯ್ ಬೆಳಗ್ಗೆಯಿಂದ ಈ ಮನೆಗೆ ಟಿಫನ್, ಮಧ್ಯಾಹ್ನ ಲಂಚ್ ಹಾಗೂ ಸಂಜೆಯ ಡಿನ್ನರ್ ನಾನೇ ತಂದು ಕೊಟ್ಟೆ ರೈಸ್‌ಗೆ ರಾಯತ ಮಿಸ್ ಆಗಿದೆ ಎಂದು ತಂದೆ ಎಂದು ಹೇಳುತ್ತಾನೆ. ಆಗ ಭೂಪತಿ ಕನ್‌ಪ್ಯೂಸ್ ಆಗಿದ್ಯಾ ಎಂದು ಹೇಳಿದಾಗ ಇಲ್ಲ ಸಾರ್ ನಾನೇ ಸ್ವೀಟ್ ಎಲ್ಲ ತಂದು ಕೊಟ್ಟೆ ಎಂದು ಹೇಳಿದಾಗ ಭೂಪತಿ ಹಾಗೂ ಶಕುಂತಲಾ ದೇವಿ ಶ್ವೇತಾ ಹಾಗೂ ಮಿಲ್ಲಿ ಮುಖವನ್ನು ನೋಡುತ್ತಾರೆ. ಆಗ ಶ್ವೇತಾ ಮತ್ತು ಮಿಲ್ಲಿಗೆ ಶಾಕ್ ಆಗುತ್ತದೆ. ಭೂಪತಿ ನಾವು ಬೆಳಗ್ಗೆಯಿಂದ ತಿಂದದ್ದು ಹೋಟೆಲ್ ಊಟನಾ ಎಂದು ಹೇಳಿ ಶ್ವೇತಾ ನೀವು ಈ ರೀತಿ ಮೋಸ ಮಾಡುತ್ತೀರಾ ಎಂದು ಗೊತ್ತಿರಲಿಲ್ಲ ಎಂದು ಹೇಳಿದಾಗ ಶಾಕುಂತಲದೇವಿ ಸಹ ನೋಡುತ್ತಿರುತ್ತಾರೆ. ಈಗ ಶ್ವೇತ ಮನೆಯಿಂದ ಹೊರಗೆ ಹೋಗುತ್ತಾಳ ಕಾದು ನೋಡಬೇಕಿದೆ.