Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Lakshana Serial: ಅಮ್ಮನ ಆಶೀರ್ವಾದ ಪಡೆಯಲು ಮೌರ್ಯನ ಹರಸಾಹಸ
ನಕ್ಷತ್ರ, ಭೂಪತಿಗೆ ಕುಡಿಯಲು ಹಾಲು ತಂದಿದ್ದಾಳೆ ಆಗ ಭೂಪತಿ ಮೊಬೈಲ್‌ನಲ್ಲಿ ಆಲರಾಮ್‌ನಂತೆ ಸೌಂಡ್ ಆಗಿದೆ ನಂತರ ಅದನ್ನು ತಗೆದು ಭೂಪತಿ ಕೈಗೆ ನಕ್ಷತ್ರ ಇಡುತ್ತಾಳೆ. ನಕ್ಷತ್ರ ಯಾಕೆ ಇಷ್ಟು ಹೊತ್ತಿನಲ್ಲಿ ಅಲಾರಂ ಇಟ್ಟುಕೊಂಡಿದ್ದೇನೆ ಎಂದು ಭೂಪತಿಯನ್ನು ಕೇಳುತ್ತಾಳೆ. ಇದಕ್ಕೆ ನಾನು ಭೂಪತಿ ಅದು ಅಲಾರಾಂ ಅಲ್ಲ ರಿಮೈಂಡರ್ ಎಂದು ಹೇಳುತ್ತಾನೆ.
ನಾವು ಯಾವುದನ್ನು ನೆನೆಸಿಕೊಳ್ಳಬಾರದು ಎಂದು ಅಂದುಕೊಳ್ಳುತ್ತೇವೆಯೋ, ಅದು ನೆನೆಸಿಕೊಳ್ಳುವಂತೆ ಆಗುತ್ತದೆ ಎಂದು ತಿಳಿಸುತ್ತಾನೆ. ಆಗ ನಕ್ಷತ್ರ ಏನಾಯ್ತು ಎಂದು ಕೇಳಿದ್ದಾಳೆ ಇದಕ್ಕೆ ಭೂಪತಿ ನಾಳೆ ಮೌರ್ಯನ ಹುಟ್ಟುಹಬ್ಬವಿದೆ ಅದರ ರಿಮೈಂಡರ್ ಇದು ಎಂದು ಹೇಳಿದ್ದಾನೆ.
ಈ ಕಡೆ ಮೌರ್ಯ ತನ್ನ ಫ್ಯಾಮಿಲಿ ಫೋಟೋವನ್ನು ನೋಡಿಕೊಂಡು ಬೇಜಾರ್ ಮಾಡಿಕೊಳ್ಳುತ್ತಿದ್ದಾನೆ. ಅಮ್ಮ ಎಲ್ಲ ಸರಿಯಾಗಿ ಇದ್ದರೆ ನಾನು ಕೂಡ ನಿಮ್ಮಲ್ಲಿ ಒಬ್ಬನಾಗಿ ಬದುಕಬಹುದಿತ್ತು. ನನ್ನ ಕೈಯಾರೆ ನಾನೇ ತಪ್ಪು ಮಾಡಿ ಅನಾಥನಾಗಿ ಬದುಕುತ್ತಿದ್ದೇನೆ ಎಂದು ಹೇಳುತ್ತಾನೆ. ಆ ಸಮಯಕ್ಕೆ ಸರಿಯಾಗಿ ನಕ್ಷತ್ರ ಫೋನ್ ಮಾಡಿ ಬರ್ತ್ ಡೇ ವಿಶ್ ಮಾಡಿ ಮನೆಗೆ ಬರುವಂತೆ ಕರೆಯುತ್ತಾಳೆ. ದೇವಸ್ಥಾನಕ್ಕೆ ಹೋಗಿ ಬರುವಂತೆ ನಕ್ಷತ್ರ ಹೇಳುತ್ತಾಳೆ ಆಗ ಮೌರ್ಯ ನನ್ನ ತಾಯಿ ನನ್ನ ದೇವಸ್ಥಾನ ತಾಯಿಯಿಂದಲೇ ದೂರವಾಗಿದ್ದೇನೆ ಎಂದು ಹೇಳುತ್ತಾನೆ.

ಹಳೆಯದನ್ನು ನೆನೆದು ಬೇಜಾರು ಮಾಡಿಕೊಂಡ ಮೌರ್ಯ
ನಕ್ಷತ್ರ ಜೊತೆ ಮಾತನಾಡುತ್ತಾ ಇದ್ದ ಮೌರ್ಯ ಹಳೆಯದನ್ನೆಲ್ಲ ನೆನೆಸಿಕೊಂಡು ಬೇಜಾರು ಮಾಡಿಕೊಂಡಿದ್ದಾನೆ. ಇಷ್ಟರಲ್ಲಿ ನಾನು ವಿದೇಶದಿಂದ ಬರುತ್ತಿದ್ದೆ ಅಮ್ಮ ಎರಡು ವರ್ಷದ ಸೆಲೆಬ್ರೇಶನ್ ಅನ್ನು ಒಟ್ಟಿಗೆ ಮಾಡಿ ಖುಷಿ ಪಡುತ್ತಿದ್ದಳು ಎಂದು ಮೌರ್ಯ ನೆನೆಸಿಕೊಂಡು ನಕ್ಷತ್ರ ಬಳಿ ಹೇಳಿದ್ದಾನೆ. ಹೆತ್ತ ತಾಯಿಯೇ ನನ್ನ ದೂರವಿಟ್ಟಿರುವಾಗ ಹುಟ್ಟಿದ ಹಬ್ಬಕ್ಕೆ ಏನು ಬೆಲೆ ಎಂದು ಹೇಳುತ್ತಾ ಫೋನ್ ಕಟ್ ಮಾಡಿದ್ದಾನೆ.

ಮೌರ್ಯನ ಹುಟ್ಟುಹಬ್ಬದ ಬಗ್ಗೆ ಭೂಪತಿ ಹತ್ತಿರ ಕೇಳಿದ ನಕ್ಷತ್ರ
ಮೌರ್ಯನ ಹುಟ್ಟುಹಬ್ಬವನ್ನು ಮನೆಯಲ್ಲಿ ಯಾವ ರೀತಿ ಆಚರಣೆ ಮಾಡಲಾಗುತ್ತಿತ್ತು ಎಂಬ ಬಗ್ಗೆ ಭೂಪತಿಯ ಬಳಿ ನಕ್ಷತ್ರ ಕೇಳಿದ್ದಾಳೆ. ಆಗ ಭೂಪತಿ ಮೌರ್ಯನ ಹುಟ್ಟುಹಬ್ಬ ಹೇಗೆ ಆಚರಣೆ ಮಾಡಲಾಗುತ್ತಿತ್ತು ಎಂಬುದನ್ನು ತಿಳಿಸಿದ್ದಾನೆ. ಇದರಿಂದ ಖುಷಿಯಾದ ನಕ್ಷತ್ರ ಶಾಕುಂತಲದೇವಿ ಬಳಿ ಬಂದು ನಿಂತಿದ್ದಾಳೆ.
ಶಾಕುಂತಲದೇವಿಯ ಬಳಿ ಬಂದ ನಕ್ಷತ್ರ, ಅತ್ತೆ ರವೆ ಉಂಡೆ ಮಾಡಿ ಎಂದು ಕೇಳಿದ್ದಾಳೆ. ಕೆಲಸದವರ ಬಳಿ ಮಾಡಿಸು ಎಂದ ಶಾಕುಂತಲದೇವಿಗೆ ಭೂಪತಿ ಸಹ ತಿನ್ನಬೇಕು ಎನ್ನುತ್ತಿದ್ದ ಎಂದಿದ್ದಾಳೆ. ಇದಕ್ಕೆ ಶಾಕುಂತಲದೇವಿ ಅಡುಗೆ ಮನೆಗೆ ಬಂದು ರವೆ ಉಂಡೆ ತಯಾರಿಸಿದ್ದಾರೆ.

ಮನೆಗೆ ಬಂದ ಮೌರ್ಯ
ಈ ಕಡೆ ಮೌರ್ಯನನ್ನು ನಕ್ಷತ್ರ ಮನೆಗೆ ಕರೆದಿದ್ದಾಳೆ ಇದು ಶಾಕುಂತಲಾ ದೇವಿಗೆ ಇನ್ನು ತಿಳಿದಿಲ್ಲ. ಭೂಪತಿ ನಿಮ್ಮನ್ನು ಕರೆಯುತ್ತಿದ್ದಾನೆ ಎಂದು ಶಾಕುಂತಲಾ ದೇವಿಯ ಬಳಿ ಹೇಳಿ ತನ್ನ ಅತ್ತೆಯನ್ನು ಕಳುಹಿಸಿ ಮೌರ್ಯನನ್ನು ಮನೆ ಒಳಗೆ ಕರೆದುಕೊಂಡು ಬಂದಿದ್ದಾಳೆ. ಮೌರ್ಯ ಅಮ್ಮನ ರೂಮಿನಲ್ಲಿ ಬಚ್ಚಿಟ್ಟುಕೊಂಡು ಕುಳಿತುಕೊಂಡಿದ್ದಾನೆ. ಇನ್ನು ಹಾಲಿಗೆ ಬಂದ ನಕ್ಷತ್ರ ಅತ್ತೆಯನ್ನು ಕರೆದು ನಿಮ್ಮ ರೂಮ್ ಅನ್ನು ತೆಗೆಯಿರಿ ನಾನು ಬಟ್ಟೆ ತೊಳೆಯಲು ತೆಗೆದುಕೊಂಡು ಹೋಗುತ್ತೇನೆ ಎಂದು ಕೇಳಿದ್ದಾಳೆ. ನಕ್ಷತ್ರಳ ವಿಚಿತ್ರ ವರ್ತನೆಯನ್ನು ನೋಡಿದ ಶಾಕುಂತಲಾ ದೇವಿ ಏನು ನಡೆಸುತ್ತಿದ್ದೀಯಾ ಎಂದು ಕೇಳಿದ್ದಾಳೆ. ಏನಿಲ್ಲ ಅತ್ತೆ ಎಂದು ಹೇಳಿ ರೂಮಿನ ಬಳಿ ಕರೆದುಕೊಂಡು ಹೋಗಿದ್ದಾಳೆ.

ಅಮ್ಮನ ಆಶೀರ್ವಾದ ಪಡೆದ ಮೌರ್ಯ
ಇನ್ನು ವಾರ್ಡ್ರೋಬ್ ನಲ್ಲಿ ಬಟ್ಟೆಯನ್ನು ತೆಗೆಯುತ್ತಿದ್ದಾಗ ಅಲ್ಲೇ ಅಡಗಿ ಕುಳಿತಿದ್ದ ಮೌರ್ಯ ಅಮ್ಮನ ಆಶೀರ್ವಾದವನ್ನು ತೆಗೆದುಕೊಂಡಿದ್ದಾನೆ. ಇದರಿಂದ ಈ ನಕ್ಷತ್ರ ತುಂಬಾ ಖುಷಿಯಾಗಿದೆ. ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಲು ನಕ್ಷತ್ರ ತಯಾರಿ ಮಾಡಿಸುತ್ತಿದ್ದಾಳೆ. ಇದರಿಂದಾಗಿ ಶಾಕುಂತಲ ದೇವಿಯ ಕೆಂಗಣ್ಣಿಗೆ ಗುರಿಯಾಗುತ್ತಾಳ ನೋಡಬೇಕಿದೆ.