Don't Miss!
- News
ಮತ್ತೆ ಬಿಜೆಪಿಗೆ ಮರಳಲಿದ್ದಾರೆಯೇ ಜನಾರ್ಧನ ರೆಡ್ಡಿ? ಅಪಾಯದ ಮುನ್ಸೂಚನೆ ಪಡೆದ ಬಿಜೆಪಿ ನಾಯಕರಿಂದ ಮನವೊಲಿಕೆಗೆ ಯತ್ನ? ಇದನ್ನು ಓದಿ
- Automobiles
ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿದೆ 2023ರ ಹೋಂಡಾ ಸಿಟಿ ಕಾರು
- Finance
ಉದ್ಯೋಗಿಗಳ ಸಂಬಳ ಕಡಿತಕ್ಕೆ ಕರೆ ನೀಡಿದ ಭಾರತೀಯ ಉದ್ಯಮಿ ಯಾರು? ರೊಚ್ಚಿಗೆದ್ದ ನೆಟ್ಟಿಗರು ಏನೆಂದರು?
- Sports
ಶಾಹಿದ್ ಅಫ್ರಿದಿಗೆ ಕೋಕ್; ಪಾಕಿಸ್ತಾನ ತಂಡದ ಆಯ್ಕೆ ಸಮಿತಿಗೆ ಹೊಸ ಮುಖ್ಯಸ್ಥನನ್ನು ನೇಮಿಸಿದ ಪಿಸಿಬಿ
- Technology
ಭಾರತದಲ್ಲಿ ವಿಶ್ವದ ಮೊದಲ PTZ ಕ್ಯಾಮೆರಾ ಪರಿಚಯಿಸಿದ ಸೋನಿ! ಇದರ ಕಾರ್ಯವೈಖರಿ ಹೇಗಿದೆ?
- Lifestyle
ಜ್ವರ ರಾತ್ರಿ ಹೊತ್ತಿನಲ್ಲಿ ಹೆಚ್ಚಾಗುವುದೇಕೆ? ಜ್ವರ ಕಡಿಮೆಯಾಗಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Lakshana Serial: ಮನೆಗೆ ಬಂದ ಮೌರ್ಯ! ಮುಂದೇನು?
ಮೌರ್ಯ ಶಾಕುಂತಲ ದೇವಿಯ ರೂಮಿನ ಕಬೋರ್ಡ್ ನಲ್ಲಿ ಅಡಗಿಕೊಂಡು ಹೇಗೋ ತಾಯಿಯ ಆಶೀರ್ವಾದವನ್ನು ಪಡೆದುಕೊಂಡಿದ್ದಾನೆ. ನಂತರ ಶಾಕುಂತಲಾ ದೇವಿ ರೂಮಿನಿಂದ ಹೊರಗಡೆ ಹೋಗಿದ್ದಾರೆ ಈ ವೇಳೆ ನಕ್ಷತ್ರ ಮೌರ್ಯನನ್ನು ಹೊರಗೆ ಬರಲು ತಿಳಿಸಿದ್ದಾಳೆ. ಇದೇ ವೇಳೆ ಮೌರ್ಯ ನಕ್ಷತ್ರಾಳಿಗೆ ತುಂಬಾ ಖುಷಿಯಾಯಿತು ಅತ್ತಿಗೆ ನಾನಿನ್ನು ಹೊರಡುತ್ತೇನೆ ಎಂದು ತಿಳಿಸಿದ್ದಾನೆ.
ಈ ವೇಳೆ ನಕ್ಷತ್ರ ಶಾಕುಂತಲ ದೇವಿ ಮಾಡಿರುವ ರವೆ ಉಂಡೆ ತಿನ್ನದೇ ಹಾಗೆ ಹೊರಡುತ್ತೀಯ ಎಂದು ಕೇಳಿದ್ದಾಳೆ. ಅಮ್ಮ ರವೆ ಉಂಡೆ ಮಾಡಿದ್ದಾರಾ ಎಂದು ಮೌರ್ಯ ಆಶ್ಚರ್ಯಪಡುತ್ತಾನೆ. ಈ ವೇಳೆ ನಕ್ಷತ್ರ ಹೌದು ಗೆಸ್ಟ್ ರೂಮ್‌ಗೆ ಹೋಗಿ ಅಲ್ಲಿಗೆ ಯಾರು ಬರೋದಿಲ್ಲ ಎಂದು ಹೇಳಿದ್ದಾಳೆ. ಆದರೆ ಮೌರ್ಯ ಅಡುಗೆ ಮನೆಗೆ ಬಂದಿದ್ದಾನೆ. ಈ ವೇಳೆ ಭೂಪತಿ ಸಹ ಅಲ್ಲಿಗೆ ಬಂದಿದ್ದನ್ನು ನೋಡಿ ತಲೆಮರೆಸಿಕೊಂಡಿದ್ದಾನೆ.
ರವೆ ಉಂಡೆ ತಿನ್ನಲು ಅಡುಗೆ ಮನೆಗೆ ಬಂದ ಭೂಪತಿ ನಕ್ಷತ್ರಗಳ ಜೊತೆ ಕೋಳಿ ಜಗಳವನ್ನು ಆಡಿದ್ದಾನೆ. ಹೇಗೆ ಎಂದು ನಕ್ಷತ್ರ ಭೂಪತಿಯನ್ನು ರೇಗಿಸಿದ್ದಾಳೆ. ಇದೇ ವೇಳೆ ಭೂಪತಿ ನನಗೆ ರವೆ ಉಂಡೆ ಎಂದರೆ ಇಷ್ಟ ಅದಕ್ಕಾಗಿ ನಾನು ತೆಗೆದುಕೊಂಡು ಹೋಗಲು ಬಂದೆ ಎಂದು ತಿಳಿಸಿದ್ದಾನೆ. ನಕ್ಷತ್ರ ಹಾಗೂ ಭೂಪತಿಯ ಕೋಳಿ ಜಗಳವನ್ನು ನೋಡಿದ ಮೌರ್ಯ ನಾನು ಯಾರನ್ನು ದ್ವೇಷ ಮಾಡುತ್ತಿದ್ದನು ಈಗ ಅವರನ್ನು ಕಂಡರೆ ಗೌರವವಿದೆ ಎಂದು ಹೇಳಿದ್ದಾನೆ. ಅಣ್ಣ ನಿನಗೆ ಅತ್ತಿಗೆಯೇ ಸೂಕ್ತವಾದ ಜೋಡಿ ಎಂದು ಇದೆ ವೇಳೆ ಮನಸ್ಸಿನಲ್ಲಿ ಅಂದುಕೊಂಡಿದ್ದಾನೆ.

ಮೌರ್ಯನನ್ನು ನೋಡಿದ ಶ್ವೇತಾ
ಈ ಕಡೆ ಮೌರ್ಯನನ್ನು ಶ್ವೇತಾ ನೋಡಿದ್ದಾಳೆ ಆದರೆ ಅದು ಮೌರ್ಯನೇ ಇಲ್ಲವೋ ಎಂಬ ಕನ್ಫ್ಯೂಷನ್ ನಲ್ಲಿ ಶ್ವೇತಾ ಇದ್ದಾಳೆ. ನಾನು ಮೌರ್ಯನನ್ನು ಮನೆಯಲ್ಲಿ ನೋಡಿದೆ ಎಂದು ನಕ್ಷತ್ರ ಬಳಿ ಶ್ವೇತಾ ಕೇಳಿದ್ದಾಳೆ. ಅದಕ್ಕೆ ನಕ್ಷತ್ರ ನೀನು ಯಾರನ್ನು ನೋಡಿದ್ದೀಯಾ? ಮೌಲ್ಯ ಯಾಕೆ ಇಲ್ಲಿಗೆ ಬರುತ್ತಾನೆ ಎಂದು ತಿಳಿಸಿ ಹೊರಟು ಹೋಗಿದ್ದಾಳೆ. ಆದರೆ ಶ್ವೇತಾ ಮಾತ್ರ ಕನ್ಫ್ಯೂಷನ್ ಅಲ್ಲಿ ನಾನು ನೋಡಿದ್ದು ಮೌರ್ಯನನ್ನೇ ಅಲ್ಲವೇ ಎಂದುಕೊಂಡು ಸುಮ್ಮನಿದ್ದಾಳೆ.

ಟೆರೆಸ್ ಮೇಲೆ ಬರ್ತಡೇ ಪಾರ್ಟಿಗೆ ತಯಾರಿ
ನಕ್ಷತ್ರ ಮೌಲ್ಯನ ಬರ್ತಡೆ ಮಾಡಲು ಮಯೂರಿಯ ಸಹಾಯವನ್ನು ಕೇಳುತ್ತಿದ್ದಾಳೆ ಮಯೂರಿ ಭಯದಿಂದಲೇ ತನ್ನ ಸಮ್ಮತಿಯನ್ನು ನೀಡಿದ್ದಾಳೆ ನಕ್ಷತ್ರ ಟೆರೇಸ್ ಮೇಲೆ ಬರ್ತಡೇ ಪಾರ್ಟಿಗೆ ತಯಾರಿ ನಡೆಸಿ ಕೇಕ್ ಎಲ್ಲವನ್ನು ತಂದು ಇಟ್ಟಿದ್ದಾಳೆ. ಡೆಕೋರೇಷನ್ ಸಹ ಮುಗಿಸಿದ್ದು ಮೌರ್ಯ ಎಂದು ದೊಡ್ಡ ಅಕ್ಷರದಲ್ಲಿ ಬರೆಸಿದ್ದಾಳೆ. ಇದೆಲ್ಲವನ್ನು ಸಹ ನೋಡಿದ ಮಯೂರಿಗೆ ಮಾತ್ರ ತುಂಬಾ ಭಯವಾಗಿದೆ. ಎಲ್ಲಿ ಅತ್ತೆಯ ಕೆಂಗಣ್ಣಿಗೆ ಗುರಿಯಾಗುತ್ತೇವೆ ಎಂಬ ಭಯ ಶುರುವಾಗಿದೆ.

ಮನೆಯವರೆಲ್ಲರನ್ನು ಮೇಲೆ ಬರುವಂತೆ ಚೀಟಿ ಬರೆದ ನಕ್ಷತ್ರ
ಮನೆಯಲ್ಲಿರುವ ಸದಸ್ಯರೆಲ್ಲರೂ ಮೇಲೆ ಬರಬೇಕು ಎಂದು ಅವರ ರೂಮಿನಲ್ಲಿ ಚೀಟಿಯನ್ನ ನಕ್ಷತ್ರ ಬರೆದು ಮಯೂರಿ ಕೈಯಲ್ಲಿ ಇಡುವಂತೆ ಕಳುಹಿಸಿದ್ದಾಳೆ. ಮಯೂರಿ ಎಲ್ಲರ ರೂಮಿನಲ್ಲಿ ಚೀಟಿ ಇಟ್ಟು ಬಂದಿದ್ದಾಳೆ ಭೂಪತಿ ಹಾಗೂ ಶೌರ್ಯ ಚೀಟಿ ಹಿಡಿದುಕೊಂಡು ಮೇಲೆ ಬರುತ್ತಿದ್ದಾರೆ ಈ ಕಡೆ ಶ್ವೇತಾ ಸಹ ಮೇಲೆ ಬರಲು ತಯಾರಿ ನಡೆಸಿದ್ದಾಳೆ.

ನಕ್ಷತ್ರಾಗೆ ಬೈದ ಭೂಪತಿ
ಭೂಪತಿ ಮತ್ತು ಶೌರ್ಯ ಮೇಲೆ ಬಂದು ನಕ್ಷತ್ರ ನೀನು ಏನು ಮಾಡುತ್ತಿದ್ದೀಯಾ ಅಮ್ಮನಿಗೆ ಇದೆಲ್ಲ ಇಷ್ಟ ಆಗಲ್ಲ ಎಂದು ಹೇಳಿದ್ದಾನೆ. ಇದೇ ವೇಳೆ ಭೂಪತಿಗೂ ಸಹ ಶೌರ್ಯ ಬೈದಿದ್ದಾನೆ ಎನೋ ನಿನ್ನ ಹೆಂಡತಿಗೆ ಎಷ್ಟು ಹೇಳಿದರೂ ಸಹ ಗೊತ್ತಾಗಲ್ವ ಎಂದು ಹೇಳಿದ್ದಾನೆ. ಇದಕ್ಕೆ ಭೂಪತಿ ಸಹ ಸಿಟ್ಟಾಗಿ ನಿನಗೆ ಯಾವ ರೀತಿಯಲ್ಲಿ ನಾನು ಬುದ್ದಿ ಹೇಳಲಿ ನಂಗೆ ಸಾಕಾಗಿದೆ ಎಂದು ನಕ್ಷತ್ರಾಳಿಗೆ ಹೇಳಿದ್ದಾನೆ. ಇದಕ್ಕೆ ನಕ್ಷತ್ರ ನಾವಿದ್ದು ಮೌರ್ಯ ಅನಾಥನಾಗಿ ಬರ್ಡ್‌ಡೇ ಆಚರಣೆ ಮಾಡಿಕೊಳ್ಳಬೇಕಾ ಎಂದು ಹೇಳಿದ್ದಕ್ಕೆ ಭೂಪತಿ ಹಾಗೂ ಶೌರ್ಯ ಅಮ್ಮ ಬರುವಷ್ಟರಲ್ಲಿ ಇದೆಲ್ಲವನ್ನೂ ತಗೆಯೋಣ ಎಂದು ಡೆಕೋರೇಷನ್ ಎಲ್ಲವನ್ನು ತಗೆಯಲು ಹೋಗುತ್ತಾರೆ. ಅಷ್ಟರಲ್ಲಿ ಶಾಕುಂತಲದೇವಿ ಮೇಲೆ ಬರುತ್ತಾರೆ. ಮುಂದೇನು ಆಗುತ್ತದೆ ನೋಡಬೇಕಿದೆ.