Lakshana Serial: ಲಕ್ಷಣಗೆ ಮಾತು ಕೊಟ್ಟ ಮೌರ್ಯ!

By ಶೃತಿ ಹರೀಶ್ ಗೌಡ

ಶಾಕುಂತಲದೇವಿ ಬರ್ಡ್ ಡೇ ನಡೆಯೋ ಜಾಗಕ್ಕೆ ಬಂದು ಯಾರು ಇದೆಲ್ಲ ಮಾಡಿದ್ದು ಎಂದು ಕೇಳಿದಾಗ ನಕ್ಷತ್ರ ನಾನೇ ಎಂದು ಹೇಳುತ್ತಾಳೆ. ಇದೇ ವೇಳೆ ನಕ್ಷತ್ರ ಭೂಪತಿಯಿಂದ ನೀನು ಹೇಗೆ ಮೌರ್ಯ ಬರ್ಡ್ ಡೇ ಆಚರಣೆ ಮಾಡುತ್ತಾ ಇದ್ರಿ ಎಂದು ತಿಳಿದುಕೊಂಡೆ ಅತ್ತೆ ಎನ್ನುತ್ತಾಳೆ. ಇಷ್ಟು ದೊಡ್ಡ ಫ್ಯಾಮಿಲಿ ಇದ್ದರು ಅವನು ಅನಾಥವಾಗಿ ಇರಬೇಕಾ ಎನ್ನುತ್ತಾಳೆ ನಕ್ಷತ್ರ.

ಅತ್ತೆ ನಿಮ್ಮ ಪ್ರೀತಿಗೆ ಮೌರ್ಯ ಹಂಬಲಿಸುತ್ತಾ ಇದ್ದಾನೆ ನಿಮ್ಮ ಕೈತುತ್ತಿಗೆ ಕಾಯುತ್ತಿದ್ದಾನೆ ಇವತ್ತು ಅವನ ಬರ್ಡ್ ಡೇ ದಯವಿಟ್ಟು ಅವನನ್ನು ಕ್ಷಮಿಸಿ ಅತ್ತೆ ಎಂದು ಅನ್ನುತ್ತಾಳೆ.‌ ಈ ವೇಳೆ ಶಾಕುಂತಲದೇವಿ ಕಣ್ಣಿನಿಂದ ನೀರು ಬರುತ್ತದೆ. ಕೇಕ್ ಕಟ್ ಮಾಡುವ ಸ್ಥಳಕ್ಕೆ ಬಂದ ಮೌರ್ಯ ಅಮ್ಮ ನೀನು ನಂಗೆ ಕೇಕ್ ಕಟ್ ಮಾಡಿಸುತ್ತಿದ್ದ ರೀತಿ ಎಲ್ಲ ನೆನಪಿಗೆ ಬರುತ್ತದೆ. ನೀನೇ ಕೈಹಿಡಿದುಕೊಂಡು‌ ಕೇಕ್ ಕಟ್ ಮಾಡಿಸ್ತಾ ಇದ್ದೇ ಬಾರಮ್ಮ ಪ್ಲೀಸ್ ಎಂದು ಕರೆಯುತ್ತಾನೆ.

ಮೌರ್ಯ‌ನ ಪಕ್ಕಕ್ಕೆ ಬಂದ ಶಾಕುಂತಲದೇವಿ ಮೌರ್ಯ ಮಾಡಿದ ಪ್ರತಿಯೊಂದನ್ನು ನೆನಪಿಸಿಕೊಂಡು ಬೇಜಾರು ಮಾಡಿಕೊಂಡು ಕೇಕ್‌ ಅನ್ನು ಕೆಳಗೆ ತಳ್ಳುತ್ತಾಳೆ. ನಂತರ ಮೌರ್ಯ ಎಂದು ಬರೆದಿದ್ದನ್ನು ಕಾಲಿನಿಂದ ಒದ್ದು ಒಳಗೆ ಹೋಗುತ್ತಾರೆ. ನಕ್ಷತ್ರ ಅತ್ತೆ ಏನು ಮಾಡಿದ್ರಿ ಅನ್ನೋವಾಗ ನೀನು ಸುಮ್ಮನೆ ಇರು ನಿನ್ನ ಹೆಂಡತಿಗೆ ಬುದ್ದಿ ಹೇಳು ಎಂದು‌ ಭೂಪತಿಗೆ ಹೇಳಿ ಅಲ್ಲಿಂದ ಹೋಗುತ್ತಾಳೆ. ಮೌರ್ಯಗೆ ಅಣ್ಣಂದಿರು ಬೈತಾರೆ ನಕ್ಷತ್ರ ಮೌರ್ಯ ಹಿಂದಿನೇ ಹೋಗುತ್ತಾಳೆ.

ಅತ್ತಿಗೆಗೆ ಮಾತು ಕೊಟ್ಟ ಮೌರ್ಯ

ಅತ್ತಿಗೆಗೆ ಮಾತು ಕೊಟ್ಟ ಮೌರ್ಯ

ನಕ್ಷತ್ರ ಮೌರ್ಯ ಹಿಂದೆ ಹೋಗಿ ನೀವು ಮನೆಯವರ ಹತ್ತಿರ ಬೈಸಿಕೊಳ್ಳೋ ಥರ ಆಯಿತು ಎಂದು ಹೇಳಿದಾಗ ಮೌರ್ಯ ನಂಗೆ ಬೇಜಾರು ಆಗಿಲ್ಲ ಅತ್ತಿಗೆ ಎಲ್ಲದ್ದಕ್ಕಿಂತ ಅಮ್ಮನ ಆಶೀರ್ವಾದ ಸಿಕ್ತು ಎಂದು ಹೇಳುತ್ತಾನೆ. ಮುಂದಿನ ವರ್ಷ ಅಮ್ಮನೇ ನನ್ನ ಬಳಿ ಬಂದು ಕೇಕ್ ಕಟ್ ಮಾಡಿಸೋ ಹಾಗೇ ಬೆಳೆಯುತ್ತೇನೆ ನೋಡ್ತಾ ಇರಿ ಎಂದು ಹೇಳುತ್ತಾನೆ.

ನಕ್ಷತ್ರಾಗೆ ಮಾತು ಕೊಟ್ಟ ಮೌರ್ಯ

ನಕ್ಷತ್ರಾಗೆ ಮಾತು ಕೊಟ್ಟ ಮೌರ್ಯ

ಇದೇ ವೇಳೆ ನಕ್ಷತ್ರಗೆ ಒಂದು ಮಾತನ್ನು ಮೌರ್ಯ ಕೊಡುತ್ತಾನೆ. ಈ ಮನೆಯಲ್ಲಿ ನಿಮಗೆ ಸಿಗಬೇಕಾದ ಗೌರವ , ಸ್ಥಾನವನ್ನು ಕೊಡಿಸುತ್ತೇನೆ. ಈ ಮನೆಯಲ್ಲಿ ಯಾರಿಗೂ ಸಹ ನಿಮ್ಮ ಬೆಲೆ ಸರಿಯಾಗಿ ಅರ್ಥ ಮಾಡಿಕೊಳ್ಳುವ ರೀತಿ ಮಾಡುತ್ತೇನೆ ಎಂದು ಮೌರ್ಯ ಹೇಳುತ್ತಾನೆ. ಐ ಪ್ರಾಮೀಸ್ ಅತ್ತಿಗೆ ಎಂದು ಮೌರ್ಯ ಪ್ರಾಮಿಸ್ ಮಾಡ್ತಾನೆ. ಆಗ ನಕ್ಷತ್ರಗೆ ಬಹಳ ಖುಷಿಯಾಗುತ್ತದೆ.

ಶ್ವೇತಾಗೆ ವಾರ್ನಿಂಗ್ ಕೊಟ್ಟ ಮೌರ್ಯ

ಶ್ವೇತಾಗೆ ವಾರ್ನಿಂಗ್ ಕೊಟ್ಟ ಮೌರ್ಯ

ಮನೆಯಿಂದ ಹೊರಗೆ ಹೋದ ಮೌರ್ಯ ಶ್ವೇತಾಗೆ ಕಾಲ್ ಮಾಡಿ ನನ್ನ ಅತ್ತಿಗೆ ತಂಟೆಗೆ ಹೋಗಬೇಡ ಎನ್ನುತ್ತಾನೆ. ಆಗ ಶ್ವೇತಾ ಎನು ಅತ್ತಿಗೆ ಅಂತಿದ್ದೀಯಾ ನಾಚಿಕೆ ಆಗಲ್ವ ಎನ್ನುವಾಗ ನಾಚಿಕೇ‌ನಾ‌ ನಂಗೆ ಹೆಮ್ಮೆ ಇದೆ ಎನ್ನುತ್ತಾನೆ. ನನ್ನ ಅತ್ತಿಗೆಗೆ ಯಾರು ಇಲ್ಲ ಎಂದುಕೊಂಡು ಎನಾದ್ರೂ ಮಾಡಲು ಹೋದರೆ ಚನ್ನಾಗಿ ಇರಲ್ಲ ಎಂದು ಮೌರ್ಯ ಹೇಳಿದಾಗ ಶ್ವೇತಾ ಕೋಪ ಮಾಡಿಕೊಳ್ಳುತ್ತಾಳೆ.ನಿನ್ನ ಗುಟ್ಟೆಲ್ಲ ನಂಗೆ ಗೊತ್ತಿದೆ ಅದನ್ನು ಅಮ್ಮನಿಗೋ, ಭೂಪತಿಗೋ ಹೇಳಿದ್ರೆ ಚನ್ನಾಗಿ ಇರಲ್ಲ ಎಂದಾಗ ಶ್ವೇತಾ ಬ್ಲಾಕ್ ಮೇಲ್ ಮಾಡ್ತಾ ಇದ್ದೀಯಾ ಎಂದಾಗ ಇಲ್ಲ ಇರೋದ್ದನ್ನೇ ಹೇಳ್ತಾ ಇದ್ದೀನಿ ಎಂದು ಮೌರ್ಯ ಹೇಳುತ್ತಾನೆ.ಇದಕ್ಕೆ ಶ್ವೇತಾಗೆ ತುಂಬಾ ಶಾಕ್ ಆಗುತ್ತದೆ.

ಭೂಪತಿ ಪ್ರೀತಿ ಗೆಲ್ಲಲು ಶ್ವೇತಾ ಹೊಸ ಪ್ಲ್ಯಾನ್

ಭೂಪತಿ ಪ್ರೀತಿ ಗೆಲ್ಲಲು ಶ್ವೇತಾ ಹೊಸ ಪ್ಲ್ಯಾನ್

ಈಗ ಭೂಪತಿ ಮನಸು ಗೆಲ್ಲಲು ಶ್ವೇತಾ ಹೊಸದೊಂದು ಪ್ಲ್ಯಾನ್ ಮಾಡಿದ್ದಾಳೆ. ಶಾಕುಂತಲದೇವಿ ಆಶೀರ್ವಾದ ಪಡೆದು ಭೂಪತಿ ಜೊತೆಯಲ್ಲೇ ಆಫೀಸ್‌ಗೆ ಹೊರಟಿದ್ದಾಳೆ. ಆಫೀಸ್‌ಗೆ ಹೋಗುವಾಗ ನಕ್ಷತ್ರ ವಿಶ್ ಮಾಡುತ್ತಾಳೆ ಆಗ ಶತ್ರುವಿಗೂ ಒಳ್ಳೆಯದನ್ನು ಮನಸು ಇದೆ ನಿನಗೆ ಎಂದು ಶ್ವೇತ ನಕ್ಷತ್ರಗೆ ಕೊಂಕು ನುಡಿಯುತ್ತಾಳೆ. ಇನ್ನು ಮುಂದೆ ನೋಡ್ತಾ ಇರು ಗೆದ್ದೆ ಎಂದು ಬೀಗುತ್ತಿರುವ ನಿನ್ನ ಕಣ್ಣಲ್ಲಿ ನೀರು ತರಿಸ್ತೇನೆ ಭೂಪತಿಯನ್ನು ನನ್ನವನಾಗಿ ಮಾಡಿ ಕೊಳ್ಳುತ್ತೇನೆ ಎಂದು ನಕ್ಷತ್ರ ಹೊಸ ಪ್ಲ್ಯಾನ್ ಮಾಡುತ್ತಿದ್ದಾಳೆ.

More from Filmibeat

English summary
Colors Kannada serial Lakshana Written Update on January 23th episode. Here is the details about shakuntaladevi mood upset seeing Druva.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X