Don't Miss!
- News
Republic Day: ಗಣರಾಜ್ಯೋತ್ಸವ ಪರೇಡ್ಗೆ ಹಾಜರಾಗುವುದು, ಟಿಕೆಟ್ ಖರೀದಿಸುವುದು ಹೇಗೆ; ವಿವರಗಳು ಇಲ್ಲಿವೆ
- Sports
ಕೆಎಲ್ ರಾಹುಲ್ಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ; ಧೋನಿಯಿಂದಲೂ ದುಬಾರಿ ಉಡುಗೊರೆ!
- Lifestyle
ಆರೋಗ್ಯಕರ ಸ್ತನದ ಲಕ್ಷಣಗಳೇನು? ಸ್ತನಗಳು ಹೇಗಿದ್ದರೆ ನಿರ್ಲಕ್ಷ್ಯ ಮಾಡಲೇಬಾರದು?
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Lakshana Serial: ಆಫೀಸ್‌ಗೆ ಎಂಟ್ರಿ ಕೊಟ್ಟ ಲಕ್ಷಣ:ಶ್ವೇತಾಗೆ ಶಾಕ್
ಆಫೀಸ್‌ಗೆ ಬಂದ ಶ್ವೇತಾ ತನ್ನ ದರ್ಪವನ್ನು ತೋರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಿರಿಕಿರಿಯನ್ನು ಅನುಭವಿಸುತ್ತಿದ್ದಾಳೆ. ಸಪರೇಟ್ ಕ್ಯಾಬಿನ್ ಇಲ್ವ ಎಂದು ಶ್ರೀರಕ್ಷಾಳನ್ನು ಕೇಳಿದ್ದಾಗ ಇಲ್ಲಿ ಸೀನಿಯರ್ಸ್‌ಗೆ ಮಾತ್ರ ಇಲ್ಲಿ ಸಪರೇಟ್ ಕ್ಯಾಬಿನ್ ಇರೋದು, ನೀವು ಓಪನ್ ಡೆಸ್ಕ್‌ನಲ್ಲೇ ಕೆಲಸ ಮಾಡಬೇಕು ಎಂದಾಗ ಶ್ವೇತ ತನ್ನ ಹಿಂದಿನ ಜೀವನವನ್ನು ನೆನೆಸಿಕೊಂಡು ಬೇಸರ ಮಾಡಿಕೊಳ್ಳುತ್ತಾಳೆ.
ಅಷ್ಟರಲ್ಲಿ ಸಂಜು ಬಂದು ಶ್ವೇತಾಳನ್ನು ಮಾತನಾಡಿಸಿ ಒಂದಷ್ಟು ಫೈಲ್‌ಗಳನ್ನು ತಂದು ಇದನ್ನು ನೋಡಿ ಒಂದು ರಿಪೋರ್ಟ್ ಮಾಡಿ ನೀವು ಎಷ್ಟು ಕಲಿತುಕೊಂಡು ಇದ್ದೀರಾ ಎಂಬುದನ್ನು ನೋಡಬೇಕು ಎಂದಾಗ ಶ್ವೇತಾಗೆ ತುಂಬಾ ಕೋಪ ಬರುತ್ತದೆ. ನಾನು ಯಾಕೆ ನಿನಗೆ ರಿಪೋರ್ಟ್ ಮಾಡಬೇಕು ಎಂದಾಗ ಇಲ್ಲಿಗೆ ಬರೋ ಜೂನಿಯರ್ ನಂಗೆ ರಿಪೋರ್ಟ್ ಮಾಡಬೇಕು ಎಂದು ಹೇಳಿ ಅಲ್ಲಿಂದ ಹೋದ ಕೂಡಲೇ ಶ್ವೇತಾ ಅಲ್ಲಿದ್ದ ಫೈಲ್‌ಗಳನ್ನು ಕೆಳಗೆ ಬಿಸಾಕುತ್ತಾಳೆ. ಅಲ್ಲಿದ್ದ ಬೇರೆ ಸ್ಟಾಫ್ ಇವಳು ಫೈಲ್ ಎಸೆಯೋದು ನೋಡಿ ಎನಾಯ್ತು ಇವಳಿಗೆ ಎಂದು ಅಂದುಕೊಳ್ಳುತ್ತಾರೆ.
ಆಫೀಸ್‌ಗೆ ನಕ್ಷತ್ರ ಭೂಪತಿಗೆ ಊಟವನ್ನು ತಂದಿರುತ್ತಾಳೆ ಆಫೀಸ್ ಒಳಗೆ ಹೋಗುವಾಗ ರಿಸಪ್ಶನಿಸ್ಟ್ ಒಳಗೆ ಹೋಗಲು ತಡೆದಾಗ ನಕ್ಷತ್ರ ಫೋನ್ ಮರೆತು ಬಂದಿರುವುದು ಗೊತ್ತಾಗುತ್ತದೆ. ಅಯ್ಯೋ ಎಂದು ಅಲ್ಲೇ ಕುಳಿತುಕೊಳ್ಳುತ್ತಾಳೆ ಆಗ ಭೂಪತಿ ಬರುತ್ತಿರುತ್ತಾನೆ ಅಷ್ಟರಲ್ಲಿ ನಕ್ಷತ್ರಳನ್ನು ನೋಡಿ ಅಲ್ಲಿ ಬರುತ್ತಾನೆ. ಆಗ ರಿಸಪ್ಶನಿಸ್ಟ್ ಕೇಳಿದಾಗ ಮೈ ವೈಫ್ ಎಂದು ಹೇಳುತ್ತಾನೆ. ಆದ ಸಾರಿ ಮೇಡಂ ಎನ್ನುತ್ತಾಳೆ ಪರವಾಗಿಲ್ಲ ಎಂದು ನಕ್ಷತ್ರ ಒಳಗೆ ಹೋಗುತ್ತಾಳೆ.

ಊಟ ತಂದ ನಕ್ಷತ್ರ
ಇನ್ನು ಆಫೀಸ್‌ನಲ್ಲಿ ನಕ್ಷತ್ರ ನೋಡಿದ ಶ್ವೇತಾಗೆ ಶಾಕ್ ಆಗುತ್ತದೆ ಇವಳು ಬಂದು ನನ್ನ ಎಲ್ಲ ಪ್ಲ್ಯಾನ್ ಹಾಳು ಮಾಡಿದಳು ಎಂದು ಗೊಣಗಿಕೊಂಡು ತಾನು ಕುಳಿತ ಜಾಗಕ್ಕೆ ಬಂದು ಕುಳಿತುಕೊಳ್ಳುತ್ತಾಳೆ. ಇನ್ನೂ ನಕ್ಷತ್ರ ಭೂಪತಿಗೆ ಊಟ ಬಡಿಸಿ ಶ್ವೇತಾಗೆ ಊಟ ತೆಗೆದುಕೊಂಡು ಹೋಗುತ್ತಾಳೆ. ಆದರೆ ನಕ್ಷತ್ರ ತಂದ ಊಟವನ್ನು ಶ್ವೇತ ಕೋಪದಿಂದ ಬಿಸಾಡುತ್ತಾಳೆ. ಶ್ವೇತಾಗೆ ನಕ್ಷತ್ರ ಸರಿಯಾದ ರೀತಿಯಲ್ಲಿ ಬೈದು ಅನ್ನಪೂರ್ಣ ದೇವಿಗೆ ಅವಮಾನ ಮಾಡಿದರೆ ಕ್ಷಮಿಸೋದಿಲ್ಲ ಎಂದು ಹೋಗುತ್ತಾಳೆ.

ಭೂಪತಿ ಬಳಿ ಸುಳ್ಳು ಹೇಳಿದ ಶ್ವೇತ
ಭೂಪತಿ ಹತ್ತಿರ ಬಂದ ನಕ್ಷತ್ರ ಇನ್ನೇನು ಶ್ವೇತಾ ಮಾಡಿದ್ದನ್ನು ಹೇಳಬೇಕು ಅಷ್ಟರಲ್ಲಿ ಅಲ್ಲಿಗೆ ಬಂದ ಶ್ವೇತಾ ನಾನು ಊಟ ಮಾಡಿದೆ ಭೂಪತಿ ತುಂಬಾ ಹಸಿವು ಆಗಿತ್ತಲ್ಲ ಅದಕ್ಕೆ ಬೇಗ ಬೇಗ ತಿಂದೆ ಎಂದು ಹೇಳುತ್ತಾಳೆ. ಆಗ ಭೂಪತಿ ಮನೆ ಊಟ ಅಂದರೆ ಮನೆಯೂಟ ಎನ್ನುತ್ತಾನೆ. ಆಗ ನಕ್ಷತ್ರ ಹಾಗಾದ್ರೆ ದಿನ ನಾನೇ ಊಟವನ್ನು ತರುತ್ತೇನೆ ಎಂದು ಹೇಳಿದಾಗ ಭೂಪತಿ ಬೇಡ ಎಂದು ಹೇಳುತ್ತಾನೆ.

ಹೋಟೆಲ್‌ಗೆ ಭೂಪತಿ ಜೊತೆಗೆ ಹೋದ ನಕ್ಷತ್ರ
ಇಡೀ ಆಫೀಸ್ ಅನ್ನು ತೋರಿಸಿ ಎಲ್ಲರಿಗೂ ನನ್ನ ಹೆಂಡತಿ ಎಂದು ಪರಿಚಯ ಮಾಡಿಸುತ್ತಾನೆ ಆಗ ನಕ್ಷತ್ರಗೆ ತುಂಬಾ ಖುಷಿಯಾಗುತ್ತದೆ. ಈ ನಡುವೆ ನಕ್ಷತ್ರ ಊಟ ಮಾಡದೇ ಇರುವುದು ಭೂಪತಿಗೆ ನೆನಪಾಗಿ ನೀನು ಊಟ ಮಾಡಿಲ್ಲ ಎಂದು ಕೇಳುತ್ತಾನೆ. ಆಗ ನಕ್ಷತ್ರ ಊಟ ಮಾಡಿದೆ ಅಂದಾಗ ಇಲ್ಲೇ ಇದ್ದೇ ಯಾವಾಗ ಊಟ ಮಾಡಿದೆ ಎಂದು ಕೇಳಿದಾಗ ನಡಿ ಯಾವುದಾದರೂ ರೆಸ್ಟೋರೆಂಟ್‌ಗೆ ಊಟಕ್ಕೆ ಹೋಗೋಣ ಎನ್ನುತ್ತಾನೆ ಆಗ ನಕ್ಷತ್ರ ರೆಸ್ಟೋರೆಂಟ್ ಬೇಡ ಇಲ್ಲೇ ಚನ್ನಾಗಿ ಇರೋ ಹೋಟೆಲ್ ಇದೆ ಅಲ್ಲಿಗೆ ಹೋಗೋಣ ಎನ್ನುತ್ತಾಳೆ.

ಮುಂದೇನು ಕಾದು ನೋಡಬೇಕಿದೆ
ಅಲ್ಲೇ ಹತ್ತಿರದಲ್ಲಿ ಇದ್ದ ಹೋಟೆಲ್‌ಗೆ ನಕ್ಷತ್ರ ಮತ್ತು ಭೂಪತಿ ಹೋಗಿದ್ದಾರೆ ನಕ್ಷತ್ರ ಒಂದು ಅನ್ನ ಸಾಂಬರ್ ಕೊಡಿ ಎಂದು ಕೇಳಿದ ನಕ್ಷತ್ರ ಭೂಪತಿ ಜೊತೆಗೆ ಮಾತಿಗೆ ಇಳಿದು ಹಳೆಯದ್ದನ್ನು ಎಲ್ಲ ನೆನಪಿಸಿಕೊಂಡಿದ್ದಾಳೆ. ನಂತರ ಹೋಟೆಲ್‌ನ ಮಾಲೀಕರ ಜೊತೆಗೆ ಮಾತಿಗೆ ಇಳಿದು ಹೇಗೆ ವ್ಯಾಪಾರ ಆಗುತ್ತದೆ ಎಂದೆಲ್ಲಾ ಕೇಳುತ್ತಾ ಊಟ ಮಾಡುತ್ತಿದ್ದಾಳೆ. ಇದೆಲ್ಲವನ್ನೂ ನೋಡಿದ ಭೂಪತಿಗೆ ಖುಷಿಯಾಗಿದೆ. ಎಲ್ಲೋ ಕಳೆದು ಹೋದಂತೆ ಭಾಸವಾಗುತ್ತಿದೆ. ಈ ಕಡೆ ಸಂಜು ಶ್ವೇತಾಗೆ ರಿಪೋರ್ಟ್ ಬರೆದು ಆಯಿತಾ ಎಂದು ಕೇಳುತ್ತಿದ್ದಾನೆ.ಇದರಿಂದ ಶ್ವೇತಾಗೆ ಕಿರಿಕಿರಿ ಶುರುವಾಗಿದೆ. ಮುಂದೇನು ಕಾದು ನೋಡಬೇಕಾಗಿದೆ.