Lakshana Serial: ನಕ್ಷತ್ರಾಗೆ ಸಪ್ರೈಸ್ ನೀಡಲು ತಯಾರಾದ ಭೂಪತಿ

By ಶೃತಿ ಹರೀಶ್ ಗೌಡ

ಶ್ವೇತಾ ಯಾವುದು ಒಂದು ದೊಡ್ಡ ಪ್ಲಾನ್ ಅನ್ನು ಮನಸ್ಸಿನಲ್ಲಿಯೇ ನಡೆಸುತ್ತಿದ್ದಾಳೆ ಒಂದು ಚೂರು ಇಷ್ಟವಾಗುತ್ತಿಲ್ಲ ಈ ಕಡೆ ಸಂಜು ಆ ಕೇಳಲು ಬಂದಿದ್ದಕ್ಕೆ ನಾನು ಭೂಪತಿ ಬಳಿ ನಿಮ್ಮ ಮೇಲೆ ಕಂಪ್ಲೇಂಟ್ ಮಾಡುತ್ತೇನೆ ಎಂದು ಹೇಳುತ್ತಾಳೆ. ನಂತರ ಯಾವುದೋ ಒಂದು ದೊಡ್ಡ ಪ್ಲಾನ್ ಹಾಕಿಕೊಂಡು ಡೆಸ್ಕ್‌ನಲ್ಲಿ ಕುಳಿತಿದ್ದಾಳೆ.

ನಕ್ಷತ್ರಾಳನ್ನು ಹೊರಗೆ ಕರೆದುಕೊಂಡು ಹೋದ ಭೂಪತಿ ಅವಳ ಜೊತೆ ಕಾಲ ಕಳೆಯುತ್ತಿದ್ದಾನೆ ಈಗ ಭೂಪತಿಗೆ ನಕ್ಷತ್ರ ಮೇಲೆ ಸಾಫ್ಟ್ ಕಾರ್ನರ್ ಬಂದಿದೆ. ನಕ್ಷತ್ರ ಊಟ ಮಾಡುವಾಗ ಅಲ್ಲಿಗೆ ಬಂದ ಮಕ್ಕಳ ಜೊತೆಗೆ ಬೆರೆತಿದ್ದಾಳೆ ಅವರಿಗೂ ಸಹ ಊಟವನ್ನು ಮಾಡಿಸಿ ಕೈ ತೊಳೆಸಿದ್ದಾಳೆ. ಎಲ್ಲವನ್ನು ನೋಡಿದ ಭೂಪತಿಗೆ ನಕ್ಷತ್ರಾಳ ಒಳ್ಳೆಯ ಮನಸ್ಸು ಇಷ್ಟವಾಗತೊಡಗಿದೆ.

ನಕ್ಷತ್ರ ಊಟ ಮಾಡುವ ಸಮಯದಲ್ಲಿ ಭೂಪತಿ ಜೊತೆ ಮಾತಿಗೆ ಇಳಿದಿದ್ದಾಳೆ. ಹೋಲ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಟ್ಟಿಕೊಂಡಿದ್ದ ಕನಸಿನ ಬಗ್ಗೆ ಭೂಪತಿ ಬಳಿ ಹೇಳಿದ್ದಾಳೆ. ಇದೇ ರೀತಿ ಮಾತನಾಡುತ್ತಾ ರೋಡ್ ಸೈಡ್ ಮಾಡುವ ಕ್ಯಾಂಟೀನ್‌ನಲ್ಲಿ ಊಟ ಚೆನ್ನಾಗಿ ಇರುತ್ತದೆ ಎಂದು ನಕ್ಷತ್ರ, ಭೂಪತಿಗೆ ಹೇಳಿದ್ದಾಳೆ. ನೀನು ಈ ರೀತಿ ಹೇಳಿದರೆ ನಮ್ಮಂತ ದೊಡ್ಡ ಹೋಟೆಲ್ ನವರ ಗತಿ ಏನು ಎಂದು ಭೂಪತಿ ನಕ್ಷತ್ರಗೆ ರೇಗಿಸಿದ್ದಾನೆ. ನಿನ್ನ ಹಾಗೆ ಇರುವವರು ನಿಮ್ಮ ಹೋಟೆಲ್‌ಗೆ ಬರುತ್ತಾರೆ ನನ್ನ ರೀತಿ ಇರುವವರು ಫುಟ್‌ಪಾತ್‌ನಲ್ಲಿ ಊಟ ಮಾಡುತ್ತಾರೆ ಎಂದು ನಕ್ಷತ್ರ ಹೇಳಿದ್ದಾಳೆ ಇದಕ್ಕೆ ಭೂಪತಿ ನಕ್ಕಿದ್ದಾನೆ.

ತನ್ನ ದೌಲತ್ತು ಬಿಡದ ಶ್ವೇತಾ

ತನ್ನ ದೌಲತ್ತು ಬಿಡದ ಶ್ವೇತಾ

ಭೂಪತಿಯನ್ನು ಹುಡುಕಿಕೊಂಡು ಬಂದಾಗ ಭೂಪತಿ ಕ್ಯಾಬಿನ್‌ನಲ್ಲಿ ಇರದದ್ದನ್ನು ನೋಡಿದ ಶ್ವೇತಾ ಕಸಿವಿಸಿ ಶುರುವಾಗಿದೆ. ಭೂಪತಿಯನ್ನು ಹುಡುಕಿಕೊಂಡು ಬಂದ ಶ್ವೇತಾ ಕಣ್ಣಿಗೆ ನಕ್ಷತ್ರ ಬಿದ್ದಿದ್ದಾಳೆ. ಯಾಕೆ ಇಲ್ಲೇ ಇದ್ದಾಳೆ ಎಂದು ಅಂದುಕೊಂಡ ಶ್ವೇತಾ ನಕ್ಷತ್ರ ತನ್ನ ಬಳಿ ಬರುವುದನ್ನು ನೋಡಿ ಮುಖ ಸಿಂಡರಿಸಿಕೊಂಡಿದ್ದಾಳೆ. ತಗೋ ಊಟ ತಂದಿದ್ದೇನೆ ಎಂದ ನಕ್ಷತ್ರಾಗೆ ಶ್ವೇತಾ ದೌಲತ್ತಿನಿಂದ ಮಾತನಾಡಿದ್ದಾಳೆ. ಆಗ ನಕ್ಷತ್ರ ಈಗಲೂ ನೋಡು ಹೊಟ್ಟೆ ಹಸಿವಿನಿಂದ ಇದ್ದರೂ ಅನ್ನಪೂರ್ಣೇಶ್ವರಿಯ ಮೇಲೆ ಕೋಪವನ್ನು ತೋರಿಸುತ್ತಿದ್ದೀಯ ಇದು ಒಳ್ಳೆಯದಲ್ಲ ಎಂದು ನಕ್ಷತ್ರ, ಶ್ವೇತಾಗಿ ಹೇಳಿದ್ದಾಳೆ. ಅಲ್ಲಿಯೇ ಬರುತ್ತಿದ್ದ ವ್ಯಕ್ತಿಗೆ ಊಟ ಆಯ್ತಾ ಎಂದು ಕೇಳಿ ಶ್ವೇತಾ ತಿನ್ನಬೇಕಿದ್ದ ಊಟವನ್ನು ಬೇರೊಬ್ಬ ವ್ಯಕ್ತಿಗೆ ನಕ್ಷತ್ರ ನೀಡಿದ್ದಾಳೆ ನಂತರ ಆಫೀಸಿನಿಂದ ಹೋಗಿದ್ದಾಳೆ‌.

ಭೂಪತಿ ಬರುವುದನ್ನು ನೋಡಿ‌ ನಾಟಕವಾಡಿದ ಶ್ವೇತ

ಭೂಪತಿ ಬರುವುದನ್ನು ನೋಡಿ‌ ನಾಟಕವಾಡಿದ ಶ್ವೇತ

ಈ ಕಡೆ ಭೂಪತಿ ಬರುತ್ತಿರುವುದನ್ನೇ ನೋಡಿದ ಶ್ವೇತಾ ಅಳುವ ರೀತಿ ನಾಟಕವನ್ನು ಮಾಡಿದ್ದಾಳೆ ಮನಸ್ಸಿನಲ್ಲಿಯೇ ದೊಡ್ಡದೊಂದು ಪ್ಲಾನ್ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಬಂದ ಭೂಪತಿ ಯಾಕೆ ಶ್ವೇತಾ ಅಳುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಕ್ಕೆ ನಾನು ಒಂದು ಎಫ್.ಎಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವಳು ಭೂಪತಿ ನನಗೆ ಹೀಗೆ ಕೆಲಸ ಮಾಡಲು ಇಷ್ಟವಿಲ್ಲ ಎಂದು ತಿಳಿಸಿದ್ದಾಳೆ.

ಭೂಪತಿಗೆ ಬಂದಿದೆ ಹೊಸ ಯೋಜನೆ

ಭೂಪತಿಗೆ ಬಂದಿದೆ ಹೊಸ ಯೋಜನೆ

ಇದನ್ನು ಕೇಳಿಸಿಕೊಂಡ ಭೂಪತಿಗೆ ತಲೆಯಲ್ಲಿ ಬೇರೆ ಎದ್ದೆ ಪ್ಲಾನ್ ಬಂದಿದೆ. ಸಾರಿ ಶ್ವೇತಾ ನೀವು ಇಲ್ಲಿ ಇದ್ದು ಎಲ್ಲವನ್ನು ಕಲಿತುಕೊಳ್ಳಲಿ ಎಂದು ನಾನು ಟ್ರೈನಿಯಾಗಿ ನಿಮ್ಮನ್ನು ಇಲ್ಲಿ ತಂದು ಕೂರಿಸಿದೆ ಆದರೆ ನಿಮಗೆ ಕೆಲಸ ಮಾಡಲು ಕಿರಿಕಿರಿ ಅನ್ನಿಸುತ್ತಿದ್ದರೆ ಕ್ಷಮಿಸಿ ನಾನು ಬೇರೆ ಕೆಲಸವನ್ನು ನೀಡುತ್ತೇನೆ ಎಂದು ಭೂಪತಿ ಹೇಳಿದ್ದಾನೆ. ಇದರಿಂದಾಗಿ ಶ್ವೇತಾಗೆ ಬಹಳಷ್ಟು ಖುಷಿಯಾಗಿದೆ. ತಾನು ಮಾಡುತ್ತಿರುವ ಪ್ಲ್ಯಾನ್ಸ್ ಸಕ್ಸಸ್ ಆಗುತ್ತಿದೆ ಎಂಬ ಭ್ರಮೆಯಲ್ಲಿ ಶ್ವೇತಾ ಇದ್ದರೆ ಈ ಕಡೆ ಭೂಪತಿ ಬೇರೆ ಎದ್ದೆ ಕೆಲಸವನ್ನು ಶ್ವೇತಾಗೆ ನೀಡಲು ತಯಾರಿದ್ದಾನೆ.

ಮನೆಗೆ ಬಂದ ಭೂಪತಿ ನೀಡುತ್ತಿರುವ ಸರ್ಪ್ರೈಸ್ ಏನು?

ಮನೆಗೆ ಬಂದ ಭೂಪತಿ ನೀಡುತ್ತಿರುವ ಸರ್ಪ್ರೈಸ್ ಏನು?

ಈ ಕಡೆ ಮನೆಗೆ ಬಂದ ಭೂಪತಿ, ಶ್ವೇತಾ ಹಾಗೂ ನಕ್ಷತ್ರಾ ಇಬ್ಬರಿಗೂ ಸಹ ನಾಳೆ ಬೆಳಿಗ್ಗೆ ಬೇಗ ರೆಡಿಯಾಗಿ ನಿಮ್ಮ ಇಬ್ಬರಿಗೂ ಸಹ ಸರ್ಪ್ರೈಸ್ ಕಾದಿದೆ ಎಂದು ಹೇಳಿದ್ದಾನೆ. ಇದರಿಂದ ನಕ್ಷತ್ರ ಏನು ಸರ್ಪ್ರೈಸ್ ಇಂದು ಭೂಪತಿಯ ಬೆಂಬಿಡದೆ ಕೇಳಿದ್ದಾಳೆ. ಆಗ ಭೂಪತಿ ನಾಳೆ ಸರ್ಪ್ರೈಸ್ ಇದೆ ಎಂದು ಹೇಳಿದ್ದಾನೆ ಇದೇ ಜೊತೆಗೆ ಸಂಜು ಮತ್ತು ಆಕೆಯ ಪತ್ನಿಯನ್ನು ಬರಲು ಸಹ ಹೇಳಿದ್ದಾನೆ. ಮುಂದೆ ಆರ್‌ಜೆ‌ ಸಖಿ ಯಾರೆಂದು ಭೂಪತಿಗೆ ಗೊತ್ತಾಗುತ್ತಾ ನೋಡಬೇಕಿದೆ.

More from Filmibeat

English summary
Colors Kannada serial Lakshana Written Update on January 25th episode. Here is the details about Shwetha plays mind games with Bhupati, Bhupati informs her that big surprise.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X