Lakshana Serial: ಭೂಪತಿ ಕೊಟ್ಟ ಸಪ್ರೈಸ್ ನೋಡಿ ಶಾಕ್ ಆದ ಶ್ವೇತ!
ಭೂಪತಿ, ಎಫ್ ಎಂ ಸ್ಟೇಷನ್ ಕಡೆ ನಕ್ಷತ್ರ ಹಾಗೂ ಶ್ವೇತಾ ಇಬ್ಬರನ್ನು ಕರೆದುಕೊಂಡು ಹೋಗುತ್ತಿದ್ದಾನೆ ನಕ್ಷತ್ರಾಗೆ ಭೂಪತಿ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾನೆ ಎಂಬ ಕ್ಯೂರಿಯಾಸಿಟಿ ಇದ್ದರೆ ಶ್ವೇತ ನಾನು ಜಗತ್ತನ್ನೇ ಗೆದ್ದುಕೊಂಡು ಬರುತ್ತೇನೆ ಎಂಬ ಭ್ರಮೆಯಲ್ಲಿ ಇದ್ದಾಳೆ. ಈ ಕಡೆ ಮಿಲ್ಲಿ ಫೋನ್ ಮಾಡಿ ಎಂದು ನೀನು ಮನೆಯಿಂದ ಆಚೆ ಹೋಗಬೇಡ ಇಂದು ನಿನ್ನ ಭವಿಷ್ಯ ಕೆಟ್ಟದ್ದಾಗಿದೆ ಎಂದು ಹೇಳಿದರು ಸಹ ಮಿಲ್ಲಿಗೆ ಶ್ವೇತಾ ಬೈದಿದ್ದಾಳೆ.
ಇನ್ನೂ ಎಫ್ಎಂ ಸ್ಟೇಷನ್‌ಗೆ ಕರೆದುಕೊಂಡು ಬರುತ್ತಿರುವುದನ್ನು ನೋಡಿದ ಶ್ವೇತಾಗೆ ತುಂಬಾ ಶಾಕ್ ಆಗಿದೆ ಯಾಕೆ ಭೂಪತಿ ಇಲ್ಲಿಗೆ ಕರೆದುಕೊಂಡು ಬರುತ್ತಿದ್ದಾನೆ ಎಂದು ತನ್ನ ಮನಸ್ಸಿನಲ್ಲೇ ತಾನೇ ಅಂದುಕೊಂಡಿದ್ದಾಳೆ. ಈ ಕಡೆ ಸಂಜು ಮತ್ತು ಆಕೆಯ ಪತ್ನಿ ಸಹ ಎಫ್ ಎಮ್ ಸ್ಟೇಷನ್‌ಗೆ ಬಂದಿದ್ದಾರೆ ಅವರನ್ನು ನೋಡಿದ ಶ್ವೇತಾಗಿ ಇವರ್ಯಾಕೆ ಇಲ್ಲಿಗೆ ಬಂದರು ಎಂಬ ಗೊಂದಲದಲ್ಲಿ ಇದ್ದಾಳೆ. ಆದರೆ ಆಫೀಸ್‌ಗೆ ಬಂದ ನಕ್ಷತ್ರಾಗೆ ಮಾತ್ರ ರಾಜ ಮರ್ಯಾದೆ ಸಿಗುತ್ತಿದೆ.
ಭೂಪತಿ ಆಚೆ ಸಖಿ ಪ್ರೋಗ್ರಾಮನ್ನು ಶುರು ಮಾಡಲಾಗುತ್ತಿದೆ ಎಂದು ಶ್ವೇತಾಗೆ ಹೇಳಿದ್ದಾನೆ ಅದೇ ರೀತಿ ಸಂಜುಗೆ ಕರೆದು ಇವರೇ ಆರ್‌ಜೆ ಸಖಿ ಪ್ರೋಗ್ರಾಮ್ ನಡೆಸುತ್ತಿದ್ದವರು ಎಂದು ಹೇಳಿದ್ದಾನೆ. ಈ ಮಾತನ್ನು ಕೇಳಿದ ಶ್ವೇತ ಮತ್ತು ಮಿಲ್ಲಿಗೆ ಶಾಕ್ ಆಗಿದೆ. ಈ ಕಡೆ ಸಂಜು ಪತ್ನಿ ನಾನು ನಿಮ್ಮ ದೊಡ್ಡ ಫ್ಯಾನ್ ನಲ್ಲಿ ಈ ಪ್ರೋಗ್ರಾಮ್ ಲೈವ್‌ನಲ್ಲಿ ನೋಡುತ್ತೇನೆ ಎಂದು ಅಂದುಕೊಂಡಿರಲಿಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಶ್ವೇತಾಗೆ ಶಾಕ್ ಆಗಿದೆ.

ತಲೆ ಸುತ್ತು, ವಾಂತಿ ಬರುವಂತೆ ನಾಟಕವಾಡಿದ ಶ್ವೇತಾ
ಭೂಪತಿ ಹೇಳಿದ ಮಾತನ್ನು ಕೇಳಿದ ಶ್ವೇತಾಗೆ ತಲೆ ಸುತ್ತು ಮತ್ತು ವಾಂತಿ ಬರುವಂತೆ ಆಗಿದೆ. ಇದೇನು ಮಿಲ್ಲಿ ನಾನು ಏನೋ ಅಂದುಕೊಂಡರೆ ಇಲ್ಲಿ ಇನ್ನೇನೋ ಆಗುತ್ತಿದೆ ಎಂದು ಬಾತ್ರೂಮ್‌ನಲ್ಲಿ ಮಿಲ್ಲಿಯ ಜೊತೆ ಮಾತನಾಡುತ್ತಿದ್ದಾಳೆ. ನಾನು ಭೂಪತಿಗೆ ಏನೋ ಮಾಡುತ್ತಾನೆ ಎಂದು ಕರೆದುಕೊಂಡು ಬಂದರೆ ಆರ್‌ಜೆ ಸಖಿಯ ಶೋ ಪ್ರಾರಂಭ ಮಾಡುತ್ತಿದ್ದೇನೆ ಎಂದು ತಲೆ ಕೆಟ್ಟವನಂತೆ ಮಾತನಾಡುತ್ತಿದ್ದಾನೆ ಏನಾದರೂ ಪ್ಲಾನ್ ಮಾಡು ಎಂದು ಕೇಳಿದ್ದಾಳೆ.

ಶ್ವೇತಾ ಅಸಲಿ ಮುಖ ಗೊತ್ತಾಗುತ್ತಾ?
ಈ ಕಡೆ ಶ್ವೇತಾಗೆ ನಾನು ಆರ್ ಜೆ ಸಖಿ ಅಲ್ಲ ಎಂದು ಭೂಪತಿಗೆ ಗೊತ್ತಾದರೆ ಏನಪ್ಪಾ ನನ್ನ ಕಥೆ ಎಂದು ಮನಸ್ಸಿನಲ್ಲಿ ಅಂದುಕೊಂಡು ಇಲ್ಲಿಗೆ ಎಲ್ಲ ಮುಗಿಯಿತು ನಕ್ಷತ್ರಗಳನ್ನು ಶೋ ಮಾಡಿದಂತೆ ನೋಡಿಕೋ ಎಂದು ಮಿಲ್ಲಿಗೆ ಹೇಳಿದ್ದಾಳೆ. ನಂತರ ಭೂಪತಿಗೆ ಇಂದು ತುಂಬಾ ಸುಸ್ತಾಗುತ್ತಿದೆ ತಲೆಸುತ್ತಿದಂತೆ ಆಗುತ್ತಿದೆ ಎಂದು ಹೇಳಿ ಮನೆಗೆ ಹೊರಟಿದ್ದಾಳೆ.

ನಕ್ಷತ್ರಾಳೆ ಆರ್‌ಜೆ ಸಖಿ ಎಂಬುದು ಭೂಪತಿಗೆ ಗೊತ್ತಿಲ್ಲ!
ಇನ್ನು ಆರ್ ಜೆ ಸಖಿಯಾಗಿ ನಕ್ಷತ್ರ ಪಾತ್ರವನ್ನು ನಿರ್ವಹಿಸುತ್ತಿದ್ದಳು ಆದರೆ ಅದು ಭೂಪತಿಗೆ ಗೊತ್ತಿರಲಿಲ್ಲ ಇಲ್ಲಿ ನಕ್ಷತ್ರ ಭೂಪತಿಗೆ ಎಲ್ಲಾ ವಿಚಾರ ಗೊತ್ತಾಗಿ ಮತ್ತೊಮ್ಮೆ ಆರ್ಥಿಕ ಪ್ರಾರಂಭ ಮಾಡಿಸುತ್ತಿದ್ದಾನೆ ಎಂದುಕೊಂಡಿದ್ದಾಳೆ. ಇಲ್ಲಿ ಭೂಪತಿಯ ಮುಂದೆ ಬಂದ ನಕ್ಷತ್ರ ಒಂದೇ ಸಮನೆ ಥ್ಯಾಂಕ್ ಯು ಭೂಪತಿ ನೀನು ಇಂತಹ ಸರ್ಪ್ರೈಸ್ ನೀಡುತ್ತೀಯಾ ಎಂದು ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾಳೆ. ಭೂಪತಿ ಮಾತನಾಡಲು ಬಿಡದೆ ಸಹ ತಾನೇ ಒಂದೇ ಉಸಿರಿಗೆ ಮಾತನಾಡಿದ್ದಾಳೆ ಇದರಿಂದ ಭೂಪತಿಗೆ ಗೊಂದಲ ಉಂಟಾಗಿದೆ. ಇದ್ಯಾಕೆ ನಕ್ಷತ್ರ ಈ ರೀತಿ ಮಾತನಾಡುತ್ತಿದ್ದಾಳೆ ತುಂಬಾ ಎಕ್ಸೈಟ್ ಆಗಿದ್ದಾಳೆ ಎಂದು ಭೂಪತಿ ಅಂದುಕೊಂಡು ಸುಮ್ಮನೆ ಆಗಿದ್ದಾನೆ. ಆದರೆ ನಕ್ಷತ್ರಾಳೆ ಆರ್‌ಜೆ ಸಖಿ ಎಂದು ಭೂಪತಿಗೆ ಗೊತ್ತಿಲ್ಲ.

ನಕ್ಷತ್ರಳೇ ಆರ್.ಜೆ ಸಖಿ ಎಂದು ಗೊತ್ತಾಗುವ ಕಾಲ ಬಂದಿದೆ
ಭೂಪತಿಗೆ ನಕ್ಷತ್ರಾಳೆ ಆರ್ ಜೆ ಸಖಿ ಎನ್ನುವುದು ಗೊತ್ತಾಗುವ ಕಾಲ ಸನ್ನಿಹಿತವಾಗಿದೆ. ನಕ್ಷತ್ರ ಈ ಕಡೆ ಸ್ಟುಡಿಯೋ ಒಳಗೆ ಬಂದಿದ್ದಾಳೆ. ಇನ್ನೇನು ಆಚರಿಸಕ್ಕೆ ಪ್ರೋಗ್ರಾಮ್ ಸ್ಟಾರ್ಟ್ ಆಗುತ್ತಿದೆ ಬನ್ನಿ ಸರ್ ಎಂದು ಕರೆಯುವಾಗ ಸಚಿಗೆ ಹುಷಾರಿಲ್ಲ ಹೇಗೆ ಪ್ರೋಗ್ರಾಮ್ ಸ್ಟಾರ್ಟ್ ಆಯಿತು ಎಂಬ ಗೊಂದಲದಲ್ಲಿ ಭೂಪತಿ ಇದ್ದಾನೆ. ಮುಂದೇನು ಎಂಬುವುದೇ ಕುತೂಹಲವಾಗಿದೆ.


Click it and Unblock the Notifications











