Lakshana: ಶ್ವೇತಾಗೆ ಕಾಟ ಕೊಡಲು ರೆಡಿಯಾದ ಭೂಪತಿ

By ಶೃತಿ ಹರೀಶ್ ಗೌಡ

ನಕ್ಷತ್ರ, ಆರ್ ಜೆ ಸಖಿಯಾಗಿ ಮಾತನಾಡುತ್ತಿರುವುದನ್ನು ನೋಡಿದ ಭೂಪತಿಗೆ ತುಂಬಾ ಖುಷಿಯಾಗಿದೆ. ಈ ಕಡೆ ಮಿಲ್ಲಿ, ಭಾರ್ಗವಿಗೆ ಫೋನ್ ಮಾಡಿದ್ದಾಳೆ. ಅಮ್ಮ ನಾವು ಮಾಡುತ್ತಿರುವ ಯಾವುದೇ ಪ್ಲಾನ್ ಸಹ ಸಕ್ಸಸ್ ಆಗುತ್ತಿಲ್ಲ ನಕ್ಷತ್ರಾಗೆ ಗೆಲುವಿನ ಮೇಲೆ ಗೆಲುವು ಸಿಗುತ್ತಿದೆ ಎಂದು ಹೇಳುತ್ತಿದ್ದಾಳೆ. ಇರು ಮೊದಲು ಶ್ವೇತಾಗೆ ಫೋನ್ ಮಾಡುತ್ತೇನೆ ಇಲ್ಲಿ ನಡೆದ ವಿಷಯವನ್ನು ಹೇಳುತ್ತೇನೆ ಎಂದು ಅನ್ನುತ್ತಾಳೆ.

ನಾವೇನು ಶ್ವೇತಾಗೆ ಇರುವ ಬಾಡಿಗಾರ್ಡ್ಸ್ ಹಾ? ಯಾವಾಗಲೂ ಕಾಪಾಡಲು ಈ ಬಾರಿ ಅವಳನ್ನು ಅವಳೇ ಕಾಪಾಡಿಕೊಳ್ಳಲಿ ಸುಮ್ಮನೆ ಇರು ಎಂದು ಹೇಳುತ್ತಾಳೆ. ಇದರಿಂದ ಮಿಲ್ಲಿ ಸಹ ಸುಮ್ಮನೆ ಆಗಿದ್ದಾಳೆ. ಈ ಕಡೆ ಭೂಪತಿಗೆ ಶ್ವೇತಾ ನಾನೇ ಆರ್ ಜೆ ಸಖಿ ಎಂದು ನಂಬಿಸಿದ್ದರ ಬಗ್ಗೆ ಯೋಚನೆ ಮಾಡುತ್ತಿದ್ದಾನೆ.

ವಟಾರದಲ್ಲಿ ಇದ್ದಾಗ ನಕ್ಷತ್ರ ಜೊತೆಗೆನಾ ಬಾಂಧವ್ಯವನ್ನು ಭೂಪತಿ ನೆನಸಿಕೊಂಡಿದ್ದಾನೆ.ವಠಾರದಲ್ಲಿ ಮಾಡುತ್ತಿದ್ದ ಹಬ್ಬದ ಬಗ್ಗೆ ಎಲ್ಲ ನೆನಪು ಮಾಡಿಕೊಂಡಿದ್ದಾನೆ. ಆರ್‌ಜೆ ಸಖಿ ಜೊತೆಗೆ ಮಾತನಾಡುವಾಗ ಆಗುತ್ತಿದ್ದ ರೋಮಾಂಚನದ ಬಗ್ಗೆ ನೆನಪು ಮಾಡಿಕೊಳ್ಳಿದ್ದಾನೆ. ಹಬ್ಬದ ದಿನ ನಕ್ಷತ್ರ ಭೂಪತಿ‌ ಜೊತೆಗೆ ಲಕ್ಕಿ ಕಾಲರ್ ಎಂದು ಮಾತನಾಡುತ್ತಾ ಹಬ್ಬದ ಸಾಮಗ್ರಿಗಳನ್ನು ಖರೀದಿ ಮಾಡುತ್ತಿದ್ದನ್ನು‌ ನೆನಪಿಸಿಕೊಂಡಿದ್ದಾನೆ.

ಆರ್‌.ಜೆ ಸಖಿಯನ್ನು ನೋಡಲು ಬಂದಾಗ ಎಫ್.ಎಂ.ಸ್ಟೇಷನ್‌ನಲ್ಲಿ ನಕ್ಷತ್ರ ಇದ್ದದ್ದು‌ ಆಗ ಶ್ವೇತಾ ಮತ್ತು ಮಿಲ್ಲಿ ಇವರೇ ಆರ್‌.ಜೆ.ಸಖಿ ಎಂದು ಹೇಳಿದ್ದು ಎಲ್ಲಾವನ್ನು ಸಹ ನೆನಪನೆನಪಿಸಿಕೊಂಡು ಕೋಪ‌ ಮಾಡಿಕೊಳ್ಳುತ್ತಿದ್ದಾನೆ. ನಕ್ಷತ್ರ ಆರ್‌.ಜೆ‌ ಸಖಿ ಹೋದರು ಬಾ ಎಂದು ಅಂದಿದ್ದು ಎಲ್ಲವನ್ನು ಸಹ ನೆನಪಿಸಿಕೊಂಡು ಬೇಸರ ಮಾಡಿಕೊಳ್ಳುತ್ತಿದ್ದಾನೆ.

ಮಿಲ್ಲಿ ಮಾಡಿದ ಮೋಸಕ್ಕೆ ಕೋಪ ಮಾಡಿಕೊಂಡ ಭೂಪತಿ

ಮಿಲ್ಲಿ ಮಾಡಿದ ಮೋಸಕ್ಕೆ ಕೋಪ ಮಾಡಿಕೊಂಡ ಭೂಪತಿ

ಶೋ ಮುಗಿಸಿಕೊಂಡು ಬಂದ ನಕ್ಷತ್ರ ಜೊತೆಗೆ ಸ್ಟಾಫ್ ಎಲ್ಲರೂ ಖುಷಿಯಿಂದ ಮಾತನಾಡಿಸುತ್ತಿದ್ದಾರೆ. ಮೇಡಂ ಶೋ ಸಕ್ಕತ್ ಆಗಿ ಬಂತು. ಹಳೆಯ ಚಾರ್ಮ್ ಇನ್ನೂ ಸಹ ಹಾಗೇ ಇದೆ ಎಂಬುದನ್ನು ಹೇಳುತ್ತಿದ್ದಾರೆ. ಇದನ್ನು ಕೇಳಿಸಿಕೊಂಡ ಭೂಪತಿಗೆ ತುಂಬಾ ಖುಷಿಯಾಗಿದೆ. ನಕ್ಷತ್ರ ಬಳಿಗೆ ಬಂದ ಮಿಲ್ಲಿ ವಾವ್ ನಕ್ಷತ್ರ ವಾವ್ ಹಳೆಯ ಚಾರ್ಮ್ ಹಾಗೆಯೇ ಇದೆ ಸ್ಪಲ್ಪ ಸಹ ಬದಲಾಗಿಲ್ಲ ಎಂದು ಹೇಳಿ ಭೂಪತಿ ಸಾರ್ ನಿಮ್ಮ ಹೆಂಡತಿ ತುಂಬಾ ಚನ್ನಾಗಿ ಶೋ ನಡೆಸಿದರು ಎಂದು ಹೇಳುವಾಗ ಮಿಲ್ಲಿ ಮಾಡಿದ ಮೋಸಕ್ಕೆ ಕೋಪ ಮಾಡಿಕೊಂಡು ಭೂಪತಿ ಮಿಲ್ಲಿಯನ್ನು ನೋಡುತ್ತಿದ್ದಾನೆ ಮಿಲ್ಲಿ ಅಲ್ಲಿಂದ ಹೋಗಿದ್ದಾಳೆ.

ಸರ್ಪ್ರೈಸ್‌ಗೆ ಖುಷಿಯಾದ ನಕ್ಷತ್ರ

ಸರ್ಪ್ರೈಸ್‌ಗೆ ಖುಷಿಯಾದ ನಕ್ಷತ್ರ

ಈ ಕಡೆ ನಕ್ಷತ್ರ ಶೋ ಮುಗಿಸಿಕೊಂಡು ಭೂಪತಿ ಬಳಿ ಬಂದಿದ್ದಾಳೆ ತುಂಬಾ ಥ್ಯಾಂಕ್ಸ್ ಮಿಸ್ತ್ರಿ ನನಗೆ ಬಹಳ ಖುಷಿಯಾಗುತ್ತಿದೆ ನೀನು ಕೊಟ್ಟ ಸರ್ಪ್ರೈಸ್ ನನ್ನ ಜೀವನದಲ್ಲಿ ನಾನು ಎಂದಿಗೂ ಮರೆಯೋದಿಲ್ಲ ಎನ್ನುತ್ತಿದ್ದಾಳೆ. ಇಷ್ಟು ದಿನಕ್ಕಿಂತ ಇವತ್ತು ನೀನು ಕೊಟ್ಟ ಸರ್ಪ್ರೈಸ್ ತುಂಬಾ ಖುಷಿಯಾಗಿದೆ ನೀನು ನನ್ನನ್ನು ನಿಜವಾಗಿ ಹೊಗಳುತ್ತಿದ್ದೀಯ ಎಂದರೆ ಅದೇ ನನಗೆ ದೊಡ್ಡ ಉಡುಗೊರೆ ಎಂದಿದ್ದಾಳೆ.

ನಕ್ಷತ್ರಳನ್ನು ಹೊಗಳಿದ ಭೂಪತಿ

ನಕ್ಷತ್ರಳನ್ನು ಹೊಗಳಿದ ಭೂಪತಿ

ನೀನು ಚೆನ್ನಾಗಿ ಶೋ ನಡೆಸಿದೆ ಅದಕ್ಕೆ ನಾನು ನಿನ್ನನ್ನು ಹೊಗಳಿದೆ ನಕ್ಷತ್ರ ಅದರಲ್ಲಿ ಏನು ತಪ್ಪಿದೆ ಎಂದು ಹೇಳಿದ್ದಾನೆ. ನಾನು ಯಾವಾಗಲೂ ಮಾಡಿದ್ದ ಕೆಲಸವನ್ನು ಈಗ ಮಾಡಿದ್ದೇನೆ ಇದನ್ನು ನಾನು ಮೊದಲೇ ಮಾಡಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ಭೂಪತಿ ಹೇಳಿದ್ದಾನೆ. ಈ ಸಂಜು ಮತ್ತು ಪತ್ನಿ ಭೂಪತಿಗೆ ಕೈಮುಗಿದು ಶೋ ತುಂಬಾ ಚೆನ್ನಾಗಿತ್ತು ಸರ್ ಬಹಳ ಧನ್ಯವಾದಗಳು ಎಂದು ಹೊರಟಿದ್ದಾರೆ.

ಭೂಪತಿ ಮಾತಿಗೆ ಭಯಗೊಂಡ ನಕ್ಷತ್ರ

ಭೂಪತಿ ಮಾತಿಗೆ ಭಯಗೊಂಡ ನಕ್ಷತ್ರ

ನಕ್ಷತ್ರ ಬಳಿಗೆ ಬಂದ ಭೂಪತಿ ನಡಿ ಮನೆಗೆ ಹೋಗೋಣ ಎಂದು ಕೋಪದಿಂದ ಹೇಳಿದ್ದಾನೆ ಇದನ್ನು ನೋಡಿದ ನಕ್ಷತ್ರ ಗೆ ಕೊಂಚ ಭಯವಾಗಿದೆ ಯಾಕೆ ಈ ರೀತಿ ಭೂಪತಿ ಆಡುತ್ತಿದ್ದಾನೆ ಎಂದು ಅಂದುಕೊಂಡಿದ್ದಾಳೆ. ಮನೆಯಲ್ಲಿ ಸಾವಿರಾರು ಪ್ರಶ್ನೆಗಳನ್ನು ಕೇಳಬೇಕಿದೆ ನಡಿ ಎಂದು ಭೂಪತಿ ಹೇಳಿದ್ದಾನೆ ಇದನ್ನು ಕೇಳಿಸಿಕೊಂಡ ನಕ್ಷತ್ರ ಭೂಪತಿ ಜೊತೆ ಮನೆಗೆ ಹೊರಟಿದ್ದಾಳೆ. ಮುಂದೆ ಭೂಪತಿ ಯಾವ ರೀತಿ ಶ್ವೇತಾಗೆ ಪ್ರಶ್ನೆ ಮಾಡಲಿದ್ದಾನೆ ಎಂಬುದನ್ನು ನೋಡಬೇಕಿದೆ.

More from Filmibeat

English summary
colors Kannada serial Lakshana Written Update on January 30th episode. Here is the details about shweatha in trouble.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X