Lakshana Serial: ಶ್ವೇತಾಗೆ ಶುರುವಾಯ್ತು ನಡುಕ
ಶ್ವೇತಾ ಮಲಗಿರುವುದನ್ನು ನೋಡಿದ ಭೂಪತಿ, ಹೇಗಿದ್ದೀರಾ ಶ್ವೇತಾ ಎಂದು ಕೇಳಿದ್ದಾನೆ. ಅದಕ್ಕೆ ಭೂಪತಿಗೆ ನೀವು ಬರುವುದನ್ನೇ ಕಾಯುತ್ತಿದ್ದೆ ಎಂದು ಶ್ವೇತಾ ಹೇಳಿದ್ದಾಳೆ. ರೆಸ್ಟ್ ಮಾಡಬೇಕಿತ್ತು ನೀವು ಎಂದು ಶ್ವೇತಾಗೆ ಭೂಪತಿ ಹೇಳಿದ್ದಾನೆ ಇದರಿಂದ ಶ್ವೇತಾ ನಿರಾಳವಾಗಿ ರೂಮಿಗೆ ಹೋಗಿದ್ದಾಳೆ. ನಕ್ಷತ್ರಗೆ ಕಷಾಯ ಮಾಡಿಕೊಂಡು ಬರುವಂತೆ ಹೇಳಿದ್ದಾನೆ ಇದನ್ನು ಕೇಳಿದ ನಕ್ಷತ್ರಾಗೆ ಕೋಪ ಬಂದಿದೆ. ಇವನೇನು ಇಷ್ಟು ಸೇವೆಯನ್ನು ಮಾಡುತ್ತಿದ್ದಾನೆ ಎಂದುಕೊಂಡು ಕೋಪ ಮಾಡಿಕೊಂಡಿದ್ದಾಳೆ.
ನಕ್ಷತ್ರ ಅಡುಗೆ ಕೋಣೆಗೆ ಬರುವಾಗ ಭೂಪತಿಗೆ ಬೈದುಕೊಂಡು ಬರುತ್ತಿದ್ದಾಳೆ. ಇವನೇನು ಅವಳ ಸೇವೆಗೆ ನಿಂತಿದ್ದಾನೆ ನನಗೆ ಕಷಾಯ ಮಾಡಲು ಹೇಳುತ್ತಾನೆ ಅವಳ ಬುದ್ದಿ ಗೊತ್ತಿದ್ದರೂ ಸಹ ನಾನು ಕಷಾಯ ಮಾಡಿ ಕೊಡಬೇಕು ಎಂದು ಬೈಯುತ್ತಿದ್ದಾಳೆ. ಅವಳು ಸರಿ ಇಲ್ಲ ಎಂದು ನಾನು ಹೇಳಿದರೆ ನನಗೆ ಬೈಯಲು ಬರುತ್ತಾನೆ ನನ್ನ ಕರ್ಮ ಎಲ್ಲ ಎಂದುಕೊಂಡು ನಕ್ಷತ್ರ ಕಷಾಯ ಮಾಡುತ್ತಿದ್ದಾಳೆ.
ಈ ಕಡೆ ಬಂದ ಭೂಪತಿ ನಕ್ಷತ್ರಗೆ ಕಷಾಯಕ್ಕೆ ಹೆಚ್ಚು ಕಾಳು ಮೆಣಸು ಹಾಕು ಅದನ್ನು ಕುಡಿದ ತಕ್ಷಣ ತಲೆ ಗಿರ್ ಅನ್ನಬೇಕು ಎಂದು ಹೇಳುತ್ತಿದ್ದಾನೆ. ಹಾಕಿ ಹಾಕ್ತೀನಿ ಹೆಚ್ಚಾಗಿ ಹಾಕುತ್ತೇನೆ ಕುಡಿದ ತಕ್ಷಣ ಕಷಾಯವನ್ನು ಹೊಟ್ಟೆ ಉರಿ ಬರಬೇಕು ಎಂದು ನಕ್ಷತ್ರ ಅಂದುಕೊಂಡು ಕಷಾಯವನ್ನು ಮಾಡುತ್ತಿದ್ದಾಳೆ. ಇನ್ನು ಅಲ್ಲಿಗೆ ಬಂದ ಮಯೂರಿಗೆ ಅಕ್ಕ ಭೂಪತಿ ಶ್ವೇತಾಗೆ ಕೊಡಲು ಕಷಾಯ ಮಾಡಲು ಹೇಳಿದ್ದ ಅದಕ್ಕಾಗಿ ಇಷ್ಟು ಘಾಟು ಇದೆ ಇರಿ ನಾನೇ ಕೊಟ್ಟು ಬರುತ್ತೇನೆ ಅವನು ಇಲ್ಲ ಎಂದು ಹೇಳುತ್ತಿದ್ದಾಳೆ.

ಶ್ವೇತಾಗೆ ಕಷಾಯ ಕುಡಿಸಿದ ಭೂಪತಿ
ಈ ಕಡೆ ಶ್ವೇತಾ ರೂಮಿನ ಕಡೆ ಕಷಾಯವನ್ನು ಹಿಡಿದುಕೊಂಡು ನಕ್ಷತ್ರ ಬಂದಿದ್ದಾಳೆ ಅಲ್ಲಿ ಇದ್ದ ಭೂಪತಿಯನ್ನು ಕಂಡು ನಕ್ಷತ್ರ ಕೋಪ ಮಾಡಿಕೊಂಡಿದ್ದಾಳೆ. ಇನ್ನು ಕಷಾಯವನ್ನು ಹಿಡಿದುಕೊಂಡ ಭೂಪತಿ ಶ್ವೇತಾಗೆ ಕೊಟ್ಟಿದ್ದಾನೆ. ಶ್ವೇತಾ ಒಂದು ಕಷಾಯವನ್ನು ಕುಡಿದು ಕೆಮ್ಮಲು ಶುರು ಮಾಡಿದ್ದಾಳೆ ಇದನ್ನು ನೋಡಿದ ಭೂಪತಿಗೆ ಒಳಗೊಳಗೆ ಖುಷಿ ಆಗುತ್ತಿದೆ. ಸಾಕು ಭೂಪತಿ ನನಗೆ ಇದನ್ನು ಕುಡಿಯಲು ಆಗುತ್ತಿಲ್ಲ ಎನ್ನುತ್ತಿರುವಾಗ ಭೂಪತಿ ಶ್ವೇತಾಗೆ ಕಷಾಯವನ್ನು ಕುಡಿಸುತ್ತಿದ್ದಾನೆ ಇದನ್ನು ನೋಡಿದ ನಕ್ಷತ್ರ ಕರ್ಮ-ಕರ್ಮ ಎಂದು ತಲೆ ಕೆಡಿಸಿಕೊಂಡು ಅಲ್ಲಿಂದ ಬಂದಿದ್ದಾಳೆ.

ಮಯೂರಿ ಜೊತೆ ನಾನೇ ಆರ್‌ಜೆ ಸಖಿ ಎಂದು ಹೇಳಿದ ನಕ್ಷತ್ರ
ಮಯೂರಿ ಜೊತೆಗೆ ನಕ್ಷತ್ರ ಮಾತನಾಡುತ್ತಿದ್ದಾಳೆ ಅಕ್ಕ ಇವತ್ತು ಭೂಪತಿ ನನ್ನನ್ನು ಸ್ಟೇಷನ್‌ಗೆ ಕರೆದುಕೊಂಡು ಹೋಗಿದ್ದ ನಾನೇ ಆರ್‌ಜೆ ಸಖಿ ಎಂದು ಭೂಪತಿಗೆ ಗೊತ್ತಾಗಿದೆ ಎಂದು ಹೇಳಿದ್ದಾಳೆ. ಮಯೂರಿ ಇಷ್ಟು ದಿನ ಯಾಕೆ ನೀನು ನಾನೇ ಆರ್‌ಜೆ ಸಖಿ ಎಂದು ಭೂಪತಿಗೆ ಹೇಳಿಲ್ಲ ಎಂದು ಹೇಳಿದ್ದಾಳೆ. ನಾನು ಹೇಳಿಕೊಂಡರೆ ಏನು ಚೆನ್ನಾಗಿರುತ್ತೆ ಅಕ್ಕ ಸದ್ಯಕ್ಕೆ ಈಗ ಸತ್ಯ ಗೊತ್ತಾಗಿದೆಯಲ್ಲ ಅಷ್ಟೇ ಸಾಕು ನನಗೆ ಖುಷಿಯಾಗಿದೆ ಎನ್ನುತ್ತಿದ್ದಾಳೆ. ಭೂಪತಿಗೆ ಆರ್‌ಜೆ ಸಖಿ ಎಂದರೆ ಇಷ್ಟ ಇತ್ತು ಶ್ವೇತಾಳೇ ಆರ್‌ಜೆ ಸಖಿ ಎಂದುಕೊಂಡಿದ್ದ ಎಂದು ಮಯೂರಿ ಹೇಳಿದ್ದನ್ನು ಕೇಳಿ ನಕ್ಷತ್ರಾಗೆ ಶಾಕ್ ಆಗಿದೆ.

ಶ್ವೇತಾಳನ್ನು ಮಹಡಿ ಮೇಲೆ ಕರೆದುಕೊಂಡು ಬಂದ ಭೂಪತಿ
ಈ ಕಡೆ ಶ್ವೇತಾಳನ್ನು ಮಹಡಿ ಮೇಲೆ ಭೂಪತಿ ಕರೆದುಕೊಂಡು ಬಂದಿದ್ದಾನೆ ಆದರೆ ಶ್ವೇತಾ ಗೆ ತುಂಬಾ ಭಯವಾಗಿದೆ. ಒಂದು ಹೇಳಿದ ಸಣ್ಣ ಸುಳ್ಳಿಗೆ ಶ್ವೇತಾಗೆ ಜಲಪಾತದ ತುದಿಗೆ ಕರೆದುಕೊಂಡು ಹೋಗಿ ಭೂಪತಿ ಸತ್ಯ ಹೇಳಿಸಲು ಹೇಳಿದ್ದು ನೆನಪಾಗುತ್ತಿದೆ. ಈಗ ಹೇಗಿದ್ದರಾ ಶ್ವೇತಾ ಎಂದು ಹೇಳಿದಾಗ ಚೆನ್ನಾಗಿ ಇದ್ದೇನೆ ಎಂದಾಗ ನನ್ನ ಜೊತೆಗೆ ಆರ್‌ಜೆ ಸಖಿ ಇರುವಾಗ ನಾನು ಯಾಕೆ ಎಫ್‌ಎಂ ಸ್ಟೇಷನ್‌ಗೆ ಹೋಗಬೇಕು ಇಲ್ಲೇ ಕೇಳುತ್ತೇನೆ ಇವಾಗ ನೀವು ಮೊದಲು ಶೋ ಶುರು ಮಾಡಿದಾಗ ಆಡುವ ಐದು ಲೈನ್ ಹೇಳು ಅದು ನಂಗಿಷ್ಟ ಎಂದು ಹೇಳಿದಾಗ ಶ್ವೇತ ಶಾಕ್ ಆಗಿ ನಿಂತಿದ್ದಾಳೆ.


Click it and Unblock the Notifications











