Don't Miss!
- News
Namma Metro: ಬೆಂಗಳೂರಿನಲ್ಲೇ ಅತ್ಯಂತ ದೊಡ್ಡ ಬೃಹತ್ ಮೆಟ್ರೋ ನಿಲ್ದಾಣ ಸ್ಥಾಪನೆ, ಎಲ್ಲಿ?, ಹಣ ಎಷ್ಟು?
- Automobiles
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Finance
ಅದಾನಿ ಗ್ರೂಪ್ ಬಿಕ್ಕಟ್ಟಿನ ಮಧ್ಯೆ ಭರವಸೆ ನೀಡಿದ ವಿತ್ತ ಸಚಿವೆ, ಹೇಳಿದ್ದೇನು?
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಲಕ್ಷಣ: ಮನೆ ಸೊಸೆಯಾಗಲು 500 ರುಪಾಯಿ ಟಾಸ್ಕ್! ಗೆಲ್ಲೋದು ಯಾರು?
ಶಕುಂತಲಾ ಮಾತು ಕೇಳಿ ಮನೆಯವರಿಗೆ ಶಾಕ್ ಆಗುತ್ತದೆ ಎಲ್ಲ ನಾನು ಅಂದುಕೊಂಡ ಹಾಗೇ ಆಗಿದ್ದರೆ ಕಂಪನಿಯ ಅಧಿಕಾರ ವಹಿಸಿಕೊಂಡು ಕೆಲಸ ಮಾಡಬೇಕಿತ್ತು. ಯೋಗ್ಯತೆ ಇಲ್ಲದವರೆಲ್ಲ ಈ ಮನೆ ಸೊಸೆಯಾಗಿದ್ದಾರೆ ಎಂದು ಹೀಯಾಳಿಸುತ್ತಾಳೆ. ಮಯೂರಿ, ನಕ್ಷತ್ರ ಜೊತೆಗೆ ಮನೆಯವರೆಲ್ಲರೂ ಶಾಕ್ ಆಗ್ತಾರೆ ಜೊತೆಗೆ ಬೇಜಾರ್ ಮಾಡ್ಕೋತಾರೆ. ಇನ್ನೂ ಭೂಪತಿ ಈ ಮಾತು ಇವಾಗ ಯಾಕೆ ಎಂದು ಹೇಳ್ತಾನೆ.
ಮನೆಗೆ ಬಂದ ಸಿ.ಎಸ್. ಶಕುಂತಲಾ ದೇವಿಗೆ ಬುದ್ದಿ ಹೇಳೋಕೆ ಹೋಗ್ತಾರೆ. ನಕ್ಷತ್ರ ನಿಮಗೆ ತಕ್ಕ ಸೊಸೆಯಲ್ಲ ಅನ್ನೋದು ನಿಮ್ಮ ತಪ್ಪು ಕಲ್ಪನೆ. ಇಂತಹ ಸೊಸೆ ಸಿಗೋಕೆ ಸಾಧ್ಯವೇ ಇಲ್ಲ ಅಂತಾರೆ. ಆರತಿ ಸಿ.ಎಸ್ ಜೊತೆಗೆ ಧ್ವನಿ ಸೇರಿಸುತ್ತಾರೆ. ಅದರಲ್ಲೂ ಈ ಶ್ವೇತಾ ಮುಂದೆ ನನ್ನ ಮಗಳನ್ನು ಈ ರೀತಿ ಅವಮಾನಿಸೋದರಲ್ಲಿ ಗೊತ್ತಾಗುತ್ತಿದೆ. ಇವರಿಬ್ಬರನ್ನೂ ಹೋಲಿಸಿ ತಪ್ಪು ಪರಿಕಲ್ಪನೆ ಹೊಂದಿದ್ದೀರಾ ಅಂತಾರೆ.
Gattimela:
ಯಾರ
ಮಾತೂ
ಕೇಳದೇ
ತವರ
ಮನೆಗೆ
ಬಂದ
ಅಮೂಲ್ಯ
ನನ್ನ ಮಗಳಿಗೂ ಈ ಶ್ವೇತಾಗೂ ಹೋಲಿಕೆನೇ ಇಲ್ಲ ಎಂದು ಆರತಿ ಹೇಳ್ತಾರೆ. ನಂಗೆ ಅದು ಗೊತ್ತಿದೆ ಇಬ್ಬರಲ್ಲಿ ಯಾರು ಸರಿ ತಪ್ಪು ಅಂತಾ ಅಂತಾರೆ. ಹೊತ್ತಲ್ಲದ ಹೊತ್ತಿನಲ್ಲಿ ಯಾಕೆ ಬಂದ್ರು ಕೇಳು ಭೂಪತಿ ಅಂತಾ ಮಗನಿಗೆ ಕೇಳೋಕೆ ಹೇಳ್ತಾರೆ ಶಕುಂತಲಾ ದೇವಿ. ನಂಗೆ ಬೇರೆ ಕೆಲಸ ಇದೆ ನೀನೇ ವಿಚಾರಿಸಿ ಕಳಿಸು ಅಂತಾರೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಲ್ಲ ಎಂದು ಹೇಳ್ತಾರೆ.

ಶಕುಂತಲಾ ದೇವಿಯ ಬಳಿ ಸಿಎಸ್ ಮಾತು
ಸಿ.ಎಸ್, ಶಕುಂತಲ ದೇವಿ ನಿಮ್ಮ ಹತ್ತಿರವೇ ಮಾತನಾಡಬೇಕು ಎಂದು ಶಕುಂತಲದೇವಿ ಹಿಂದೆನೇ ಹೋಗ್ತಾರೆ. ಆಗ ನಕ್ಷತ್ರ ಅವರಮ್ಮನ ಬಳಿ ಯಾಕೆ ನೀವು ಇಷ್ಟೊತ್ತಲ್ಲಿ ಬಂದಿದ್ದು ಎಂದು ಕೇಳ್ತಾಳೆ. ಅಪ್ಪ ಶಕುಂತಲದೇವಿ ಜೊತೆಗೆ ಮಾತಾಡಬೇಕು ಅಂತಾ ಬಂದಿದ್ದಾರೆ ಎಂದು ಆರತಿ ಸಹ ಅಲ್ಲಿಂದ ಹೋಗ್ತಾರೆ. ಎಲ್ಲರಿಗೂ ಆಶ್ಚರ್ಯ ಆಗುತ್ತದೆ ಅಂತಹ ವಿಷಯ ಏನಿದೆ ಅಂತಾ. ಇತ್ತ ಸಿ.ಎಸ್ ಹಾಗೂ ಆರತಿ ಶಕುಂತಲಾ ದೇವಿ ಮೂವರು ಮಾತು ಮುಗಿಸಿ ಬಂದು ಮನೆಯವರ ಬಳಿ ಬಂದು ಮಾತಾಡೋಕೆ ಶುರು ಮಾಡ್ತಾರೆ. ಶಕುಂತಲಾ ದೇವಿ ಬಂದು ನಕ್ಷತ್ರ ಹಾಗೂ ಶ್ವೇತಾಳ ಮಧ್ಯೆ ಒಂದು ಟಾಸ್ಕ್ ಕೊಡ್ತೇನೆ ಎಂದು ಹೇಳ್ತಾರೆ. ಭೂಪತಿ ಕೋಪದಿಂದ ಇದೇನು ಪ್ಲೇ ಗ್ರೌಂಡ್ ಆಯ್ತ ಎಂದು ಹೇಳಿದರು ಶಕುಂತಲಾ ದೇವಿ ಸುಮ್ಮನೆ ಇರು ಅಂತಾರೆ.

ಸಿ.ಎಸ್ ಕೊಟ್ರು ಐನೂರು ರುಪಾಯಿ ಟಾಸ್ಕ್
ಇತ್ತ ಸಿ.ಎಸ್, ನನ್ನ ಮಗಳೇ ಬೆಸ್ಟ್ ಎಂದು ಹೇಳುತ್ತಾ ನಾನು ಶ್ವೇತಾ ಹಾಗೂ ನಕ್ಷತ್ರಗೇ ಐನೂರು ಕೊಡ್ತಾ ಇದ್ದೇನೆ ಇದರಲ್ಲಿ ಈ ಇಬ್ಬರೂ ಸಹ ಮನೆಯನ್ನು ನಡೆಸಬೇಕು. ಯಾರಿಂದ ಸಹ ಎಕ್‌ಸ್ಟ್ರಾ ದುಡ್ಡು ಪಡಿಬಾರದು ಮನೆಯವರಿಗೆಲ್ಲ ಹೊಟ್ಟೆ ತುಂಬಾ ಊಟ ಹಾಕಬೇಕು ಅಂತಾ ಹೇಳ್ತಾರೆ. ಇಂತಾ ಶ್ವೇತಾ ಇವನಿಗೆ ತಲೆ ಇದ್ಯಾ ಐನೂರುಪಾಯಿ ಕೊಟ್ಟು ಎಲ್ಲರಿಗೂ ಊಟ ಹಾಕೋಕೆ ಆಗುತ್ತಾ ಎಂದು ಗೊಣಗಿಕೊಳ್ತಾಳೆ. ಅನಂತ ಭೂಪತಿ ತನ್ನ ಅಮ್ಮನನ್ನು ಕರೆದುಕೊಂಡು ಹೋಗಿ ಮಾತಾಡೋಕೆ ಶುರು ಮಾಡ್ತಾನೆ. ಅಮ್ಮ ನಿನಗೆ ಏನಾಗಿದೆ ಯಾಕೆ ಬೇಕಿತ್ತು ಈ ರೀತಿಯ ಟಾಸ್ಕ್ ಅಂತಾನೇ ಆದರೆ ನಕ್ಷತ್ರಾನೇ ಬೆಸ್ಟ್ ಅನ್ನೋ ಸಿ.ಎಸ್ ಗೋಸ್ಕರ ಈ ಟಾಸ್ಕ್ ಅಂತಾಳೆ.

ಸೂಚನೆ ಕೊಡುವ ಶಕುಂತಲಾ ದೇವಿ
ಟಾಸ್ಕ್‌ನಲ್ಲಿ ಯಾರೇ ಗೆದ್ದರೂ ಸೋತರು ನಕ್ಷತ್ರ ನನ್ನ ಹೆಂಡತಿ ಎನ್ನೋದು ಜಗಜ್ಜಾಹಿರು ಎಂದು ಹೇಳ್ತಾನೆ. ನಕ್ಷತ್ರ ಗೆದ್ದರೂ ಸೋತರು ಸಹ ಈ ಮನೆ ಸೊಸೆ, ಆದರೆ ಶ್ವೇತಾ ಯಾವತ್ತಿಗೂ ಗೆಸ್ಟ್ ಅಂತಾನೆ. ಮಗನೇ ಇವಾಗ ಒಂದು ಟ್ವಿಸ್ಟ್ ಕೊಡ್ತೀನಿ ಎಂದು ಕೊಂಡು ವಾಪಸ್ ಹೋಗ್ತಾರೆ. ಆಗ ಭೂಪತಿಗೆ ಏನಪ್ಪ ಟ್ವಿಸ್ಟ್ ಅಂದುಕೊಳ್ತಾನೆ. ಶಕುಂತಲಾ ದೇವಿ, ಸಿ.ಎಸ್ ಕರೆದುಕೊಂಡು ಹೋಗಿ ನೀವು ಕೊಟ್ಟ ಟಾಸ್ಕ್ ಅಷ್ಟೊಂದು ಪವರ್ ಪುಲ್ ಅನಿಸ್ತಾ ಇಲ್ಲ. ನಾನು ಹೇಳಿದ್ದಕ್ಕೆ ಒಪ್ಪಿಗೆ ಇದ್ಯಾ ನಿಮಗೆ ಎಂದು ಕೇಳಿದ್ದಾಗ. ಚಂದ್ರಶೇಖರ್ ಏನು ಹೇಳ್ತಾರೆ ಅನ್ನೋದನ್ನು ಕೇಳಿದಾಗ ನಿಮ್ಮ ಮಗಳನ್ನು ನಾನು ಸೊಸೆ ಅಂತಾ ಒಪ್ಪಿಕೊಳ್ಳೋದ್ದಕ್ಕೆ ಈ ಟಾಸ್ಕ್ ಆಗಲೇಬೇಕು ಎಂದು ಹೇಳ್ತಾರೆ.

ಟಾಸ್ಕ್‌ನಲ್ಲಿ ಗೆಲ್ಲುವವರು ಯಾರು?
ನಂತರ ಈ ಟಾಸ್ಕ್ ರೂಲ್ಸ್‌ನ್ನು ಶಕುಂತಲಾ ದೇವಿ ಹೇಳಿದಾಗ ಸಿ.ಎಸ್.ಗೆ ಶಾಕ್ ಆಗುತ್ತದೆ. ಈ ಟಾಸ್ಕ್‌ನಲ್ಲಿ ನಿಮ್ಮ ಮಗಳು ಸೋತರೆ ನನ್ನ ಸೊಸೆಯಲ್ಲ, ಗೆದ್ದರೆ ಮಾತ್ರ ಈ ಮನೆ ಸೊಸೆ ನೀನು ಆಗ ನಿಮ್ಮ ಮಗಳನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಬೇಕು ನೀವು ಮಾಡಿದ ಮೋಸದ ಮದ್ವೆಯಂತೆ ಇದಲ್ಲ ಅಂತಾ ಹೇಳಿದಾಗ ಕೊನೆಗೆ ಸಿ.ಎಸ್ ಒಪ್ಪಿಕೊಳ್ಳುತ್ತಾನೆ. ಇದು ನನ್ನ ಮಗಳಿಗೆ ದೇವರೆ ಇಟ್ಟಿರುವ ಪರೀಕ್ಷೆ ಅಂದುಕೊಂಡು ನಾನು ಒಪ್ಪಿಕೊಳ್ಳುತ್ತೇನೆ ಎಂದು ಸಿ.ಎಸ್.ಹೇಳ್ತಾರೆ. ಮುಂದೆ ಯಾರು ಗೆಲ್ಲಾರೆ ಕಾದು ನೋಡಬೇಕಿದೆ.