Lakshana: ಭೂಪತಿಗೆ ಆಕ್ಸಿಡೆಂಟ್ ಮಾಡಿದ ಡೆವಿಲ್: ಭಯದಿಂದ ನಡುಗಿದ ನಕ್ಷತ್ರ
ಮಯೂರಿ ಹುಷಾರು ತಪ್ಪಿದ್ದರಿಂದ ನಕ್ಷತ್ರ ಬಹಳ ಆತಂಕಕ್ಕೆ ಒಳಗಾಗಿದ್ದಾಳೆ. ಆದರೆ ನಕ್ಷತ್ರಳ ಚಡಪಡಿಕೆಯನ್ನು ನೋಡಿ ಶ್ವೇತಾ ಬಹಳ ಖುಷಿಯಾಗಿ ಇದ್ದಾಳೆ. ಮನೆಗೆ ಬಂದ ಶೌರ್ಯ ಹೆಂಡತಿಯ ಬಳಿ ಬಂದು ಆರೋಗ್ಯವನ್ನು ವಿಚಾರಿಸಿದ್ದಾನೆ. ಇದೇ ವೇಳೆ ಮಯೂರಿ ಹುಷಾರಾಗಿ ಇರುವುದಾಗಿ ತಿಳಿಸಿದ್ದಾಳೆ.
ನಕ್ಷತ್ರ ಇಲ್ಲದಿದ್ದರೆ ನನಗೆ ಏನಾಗುತ್ತಿತ್ತೋ ಏನೋ ಗೊತ್ತಿಲ್ಲ ಎಂದು ಹೇಳಿದ್ದಾಳೆ. ಅಲ್ಲಿಂದ ಹೊರಟ ಶೌರ್ಯ, ನಕ್ಷತ್ರಗೆ ಥ್ಯಾಂಕ್ಸ್ ಹೇಳಿದ್ದಾನೆ. ನಾನು ಮಯೂರಿ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದೇನೆ, ನನ್ನ ಹೆಂಡತಿಯನ್ನು ನೀನು ಚೆನ್ನಾಗಿ ನೋಡಿಕೊಂಡಿದ್ಯಾ ಎಂದು ಧನ್ಯವಾದ ತಿಳಿಸಿದ್ದಾನೆ.
ನಕ್ಷತ್ರ ಶೌರ್ಯಗೆ ಇದಕ್ಕೆಲ್ಲ ಯಾಕೆ ಭಾವ ಥ್ಯಾಂಕ್ಸ್ ನಾನು ಈ ಮನೆಯವಳಾಗಿ ನನ್ನ ಕರ್ತವ್ಯ ಮಾಡಿದ್ದೇನೆ ಎಂದಿದ್ದಾಳೆ. ನೀನು ನನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಂಡೆ ಎಂದು ಹೇಳಿದ್ದು ಕೇಳಿ ಖುಷಿಯಾಯಿತು ಎಂದು ಶೌರ್ಯ ಹೇಳಿದ್ದಾನೆ.

ಡೆವಿಲ್ ವಿಷಯ ಹೇಳಲು ಹರಸಾಹಸ
ನಕ್ಷತ್ರ, ಭೂಪತಿಗೆ ಡೆವಿಲ್ ವಿಷಯ ತಿಳಿಸಲು ಫೋನ್ ಮಾಡಿದ್ದಾಳೆ. ಈ ಕಡೆ ಶ್ವೇತಾಗೆ ಡೇವಿಲ್ ಮೇಸೇಜ್ ಮಾಡಿ ಕುಕ್ಕರ್ ಸಿಡಿಸಲು ಹೇಳಿದ್ದಾಳೆ. ನಕ್ಷತ್ರ, ಭೂಪತಿಗೆ ಫೋನ್ ಮಾಡಿ ಅಕ್ಕನಿಗೆ ಹುಷಾರಿಲ್ಲ ಎಂದು ಹೇಳಿದಾಗ ನಾನು ಬೇಗ ಮನೆಗೆ ಬರ್ತಿನಿ ಎಂದು ಭೂಪತಿ ಹೇಳಿದ್ದಾನೆ. ನಂತರ ನಾನು ಏನೋ ಹೇಳಬೇಕು ಎಂದು ಭೂಪತಿಗೆ ಹೇಳಿದಾಗ ಏನು ಹೇಳು ಅಂದಿದ್ದಾನೆ. ಅಷ್ಟರಲ್ಲಿ ಕುಕ್ಕರ್ ಸಿಡಿದಿದೆ. ಕುಕ್ಕರ್ ಸಿಡಿದ ಶಬ್ದವನ್ನು ಕೇಳಿದ ನಕ್ಷತ್ರ ಫೋನ್ ಕಟ್ ಮಾಡಿ ಕೆಳಗೆ ಬಂದಿದ್ದಾಳೆ. ಕುಕ್ಕರ್ ಸಿಡಿದಿದ್ದನ್ನು ನೋಡಿ ಶಾಕ್‌ಗೆ ಒಳಗಾಗಿದ್ದಾಳೆ.

ಅವಾಂತರ ನೋಡಿ ನಕ್ಷತ್ರ ಕಣ್ಣೀರು
ನಕ್ಷತ್ರ ಕುಕ್ಕರ್ ಹೇಗೆ ಸಿಡಿಯಿತು ಎಂದು ಯೋಜನೆ ಮಾಡುತ್ತಿರುವಾಗ ಡೆವಿಲ್ ಭಾರ್ಗವಿ ಫೋನ್ ಮಾಡಿದ್ದಾಳೆ. ನಾನು ಕೊಟ್ಟ ಶಾಕ್‌ನಿಂದ ನೀನು ಚೇತರಿಸಿಕೊಂಡಿದ್ದೀಯಾ ಮಾತನಾಡಬಹುದಾ ಎಂದು ಕೇಳಿದ್ದಾಳೆ. ಇದಕ್ಕೆ ನಕ್ಷತ್ರ ಏನು ಬೇಕು ನಿನಗೆ ಎಂದು ಕೇಳಿದ್ದಕ್ಕೆ ಮುಂದೆ ನೀನು ಕೇಳುವ ಎಲ್ಲಾ ಪ್ರಶ್ನೆಗಳಿಗೂ ನಾನೇ ಉತ್ತರ ಹೇಳುತ್ತೇನೆ ಎಂದು ಭಾರ್ಗವಿ ಹೇಳಿದ್ದಾಳೆ.

ನಕ್ಷತ್ರಗೆ ಎಚ್ಚರಿಕೆ ನೀಡಿದ ಡೆವಿಲ್
ನಾನು ಮಾಡುತ್ತಿರುವ ಬ್ಲಾಕ್ ಮೇಲ್ ವಿಷಯವನ್ನು ಯಾರಿಗೂ ಹೇಳಬೇಡ ಎಂದರೂ ಭೂಪತಿಗೆ ಯಾಕೆ ಹೇಳಲು ಪ್ರಯತ್ನಿಸಿದೆ ಅಲ್ವಾ ಎಂದು ಭಾರ್ಗವಿ ಕೇಳಿದ್ದಾಳೆ. ಅದಕ್ಕೆ ನಕ್ಷತ್ರ ಎನನ್ನು ಮಾತನಾಡಲಿಲ್ಲ. ನೀನು ತಪ್ಪು ಮಾಡಿದ್ದರಿಂದಲೇ ನಿನ್ನ ಮನೆಯಲ್ಲಿ ಕುಕ್ಕರ್ ಸಿಡಿದು ಈ ಅವಾಂತರ ಆಗಿರುವುದು ಎಂದು ಭಾರ್ಗವಿ ತಿಳಿಸಿದ್ದಾಳೆ. ಇದಕ್ಕೆ ನಕ್ಷತ್ರಗೆ ತುಂಬಾ ಗಾಬರಿಯಾಗಿದೆ.

ಶ್ವೇತಾಗೆ ಆಟ
ನಕ್ಷತ್ರಗೆ ಡೆವಿಲ್ ಮಾಡುತ್ತಿರುವ ಪ್ರತಿಯೊಂದು ಕೆಲಸದಿಂದ ಪೀಕಲಾಟವನ್ನು ತಂದಿದೆ. ಇದೆಲ್ಲವನ್ನೂ ನೋಡುತ್ತಿರುವ ಶ್ವೇತಾಗೆ ಖುಷಿಯಾಗುತ್ತಿದೆ. ನಕ್ಷತ್ರ ಬಳಿ ಬಂದ ಶ್ವೇತಾ ಯಾಕೆ ಒಂದು ತರ ಇದ್ದೀಯಾ ನೀನು ಭೂಪತಿ ಜಗಳ ಆಡಿದ್ರಾ ಏನಾಯ್ತು ಹೇಳು ಎಂದು ಕೇಳುತ್ತಿದ್ದಾಳೆ. ಶ್ವೇತಾಗೆ ನಕ್ಷತ್ರ ಬೈದು ಅಲ್ಲಿಂದ ಎದ್ದು ಹೋಗಿದ್ದಾಳೆ. ಡೆವಿಲ್ ಇನ್ನೇನೋ ಮಾಡುತ್ತೇನೆ ಎಂದಿದ್ದಾಳೆ. ಅದೇನು ಎಂದು ನೋಡಬೇಕು ಎಂದು ಖುಷಿಯಾಗಿದ್ದಾಳೆ.

ಭೂಪತಿಗೆ ಆಕ್ಸಿಡೆಂಟ್
ಭೂಪತಿ ಮನೆಗೆ ಬಂದಿದ್ದಾನೆ. ನಕ್ಷತ್ರಗೆ ಒಂದು ಉಡುಗೊರೆಯನ್ನು ತಂದಿದ್ದಾನೆ. ನಕ್ಷತ್ರ ಉಡುಗೊರೆ ನೋಡಿ ಖುಷಿಯಾಗಿದ್ದಾಳೆ. ನಂತರ ಭೂಪತಿಯ ಹಣೆಯನ್ನು ನೋಡಿ ಏನಾಯ್ತು ಎಂದು ಕೇಳಿದ್ದಾಳೆ. ಅದಕ್ಕೆ ಸಣ್ಣ ಆಕ್ಸಿಡೆಂಟ್ ಎಂದು ಹೇಳಿದ್ದಾನೆ. ಈ ಕಡೆ ಭಾರ್ಗವಿ ಮೇಸೇಜ್ ಮಾಡಿ ಭೂಪತಿಗೆ ಆಕ್ಸಿಡೆಂಟ್ ಆಗಿರೋದು ಬೈಕ್‌ನಿಂದ ನಾನು ಹೇಳುವುದನ್ನು ಕೇಳದಿದ್ದರೆ ಲಾರಿಯನ್ನು ಹತ್ತಿಸಿ ಬಿಡುತ್ತೇನೆ ಎಂದು ನಕ್ಷತ್ರಗೆ ಹೇಳಿದ್ದಾಳೆ. ಅಷ್ಟರಲ್ಲಿ ಮನೆಯ ಕಾಲಿಂಗ್ ಬೆಲ್ ಸದ್ದಾಗಿದ್ದು ನಕ್ಷತ್ರ ಬಾಗಿಲು ತೆಗೆದಿದ್ದಾಳೆ ಅಲ್ಲಿ ಭಾರ್ಗವಿ ಬಂದು ನಿಂತಿದ್ದಾಳೆ.


Click it and Unblock the Notifications











