Lakshana: ನಕ್ಷತ್ರ ಟೆನ್ಶನ್ ನೋಡಿ ಭಾರ್ಗವಿಗೆ ಖುಷಿ: ನಕ್ಷತ್ರಗೆ ಅನುಮಾನ ಬಂತಾ?

By ಶೃತಿ ಹರೀಶ್ ಗೌಡ

ಮನೆಯ ಬಾಗಿಲನ್ನು ತೆಗೆದಿರುವ ನಕ್ಷತ್ರ, ಭಾರ್ಗವಿಯನ್ನು ನೋಡಿ ಒಮ್ಮೆ ಶಾಕ್ ಆಗಿದ್ದಾಳೆ. ಯಾಕೆಂದರೆ ಅವಳು ಡೆವಿಲ್‌ ಚಿಂತೆಯಲ್ಲಿ ಮುಳುಗಿ ಹೋಗಿದ್ದಳು. ಭಾರ್ಗವಿಯೇ ನಕ್ಷತ್ರಳನ್ನು ಎಚ್ಚರಗೊಳಿಸುವ ಕೆಲಸ ಮಾಡಿದ್ದಾಳೆ. ನಕ್ಷತ್ರ.. ನಕ್ಷತ್ರ ಎಂದು ಕರೆದ ನಂತರ ನಕ್ಷತ್ರ ಭಾರ್ಗವಿಯನ್ನ ಮನೆಯೊಳಗೆ ಕರೆದುಕೊಂಡಿದ್ದಾಳೆ.

ಇನ್ನು ಸೀರೆ ಹಾಗೂ ಕುಂಕುಮ ಹಿಡಿದುಕೊಂಡು ಮನೆಗೆ ಭಾರ್ಗವಿ ಬಂದಿದ್ದು ನಕ್ಷತ್ರ ಯಾವ ರೀತಿ ಒದ್ದಾಡುತ್ತಿದ್ದಾಳೆ ಎಂದು ನೋಡುತ್ತಿದ್ದಾಳೆ. ಇದೇ ವೇಳೆ ನಕ್ಷತ್ರಳನ್ನು ಪರೀಕ್ಷೆ ಮಾಡಬೇಕು ಎಂದು ಯಾಕೆ ತುಂಬಾ ಟೆನ್ಶನ್‌ನಲ್ಲಿ ಇದ್ದೀಯ ಏನಾಯಿತು ಎಂದು ನಕ್ಷತ್ರ ಬಳಿ ಭಾರ್ಗವಿ ಕೇಳಿದ್ದಾಳೆ. ಇದಕ್ಕೆ ನಕ್ಷತ್ರ ಏನು ಆಗಿಲ್ಲ ಅತ್ತೆ ಎಂದು ಸುಮ್ಮನೆ ಆಗಿದ್ದಾಳೆ.

ನಂತರ ಭಾರ್ಗವಿ ನಿಮ್ಮ ಅಪ್ಪ ಅಮ್ಮ ನಿನ್ನ ಹಾಗೂ ಭೂಪತಿ ಹೆಸರಲ್ಲಿ ಪೂಜೆಯನ್ನ ಮಾಡಿಸಿದರು ತಗೋ ಪ್ರಸಾದ ಎಂದು ಕುಂಕುಮವನ್ನು ತೆಗೆದು ನಕ್ಷತ್ರ ಹಣೆಗೆ ಇಟ್ಟಿದ್ದಾಳೆ. ಇದೇ ವೇಳೆ ನಕ್ಷತ್ರ ತಾಳಿಗೆ ಕುಂಕುಮ ಹಚ್ಚಿಕೊಳ್ಳುವಾಗ ಈ ಭಾಗ್ಯ ತುಂಬಾ ದಿನ ಇರೋದಿಲ್ಲ ಎಂದು ಮನಸ್ಸಿನಲ್ಲಿ ಅಂದುಕೊಂಡು ಭಾರ್ಗವಿ ನಗುತ್ತಿದ್ದಾಳೆ.

ಭಾರ್ಗವಿಯನ್ನು ಎಳೆದುಕೊಂಡು ಹೋದ ಶ್ವೇತ

ಭಾರ್ಗವಿಯನ್ನು ಎಳೆದುಕೊಂಡು ಹೋದ ಶ್ವೇತ

ಭಾರ್ಗವಿ, ನಕ್ಷತ್ರಗೆ ಸೀರೆ ಹಾಗೂ ಕುಂಕುಮ ಕೊಡುವುದನ್ನು ನೋಡಿದ ಶ್ವೇತಾಗೆ ಉರಿದುಕೊಂಡಿದ್ದಾಳೆ. ಯಾಕೆ ಈ ರೀತಿ ಭಾರ್ಗವಿ ಮಾಡುತ್ತಿದ್ದಾಳೆ ಎಂದು ಕೋಪವನ್ನ ಮಾಡಿಕೊಳ್ಳುತ್ತಿದ್ದಾಳೆ. ನಕ್ಷತ್ರ ಹೋಗಿ ಜ್ಯೂಸ್ ತರುತ್ತೇನೆ ಎಂದು ಹೇಳುವುದನ್ನೇ ಕಾದಿದ್ದ ಶ್ವೇತಾ ನಕ್ಷತ್ರ ಅಡುಗೆ ಮನೆಗೆ ಹೋದ ಕೂಡಲೇ ಭಾರ್ಗವಿಯನ್ನು ತನ್ನ ರೂಮಿಗೆ ಎಳೆದುಕೊಂಡು ಹೋಗಿದ್ದಾಳೆ.

ಶ್ವೇತಾಗೆ ವಾರ್ನ್ ಮಾಡಿದ ಭಾರ್ಗವಿ

ಶ್ವೇತಾಗೆ ವಾರ್ನ್ ಮಾಡಿದ ಭಾರ್ಗವಿ

ಶ್ವೇತಾ, ಭಾರ್ಗವಿಗೆ ಏನು ನಿನ್ನ ಹೊಸ ಆಟ ಎಂದು ಕೇಳುತ್ತಿದ್ದಾಳೆ. ಯಾಕೆ ನೀನು ಈ ಮನೆಗೆ ಬಂದೆ ಎಂದು ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ಭಾರ್ಗವಿ ನಾನು ಒಂದು ಪ್ಲಾನ್ ಮಾಡಿದ ಮೇಲೆ ಅದು ಯಾವ ರೀತಿ ವರ್ಕ್ ಆಗುತ್ತಿದೆ ಎಂಬುದನ್ನು ಕಣ್ಣಾರೆ ನೋಡಬೇಕು ಎಂದು ಬಂದೆ ಎಂದು ಶ್ವೇತಾಗೆ ಹೇಳುತ್ತಿದ್ದಾಳೆ. ಓಹೋ ಅದಕ್ಕಾಗಿ ಸೀರೆ ಕುಂಕುಮದ ನೆಪ ಮಾಡಿಕೊಂಡು ನೀನು ಬಂದ್ಯಾ ಎಂದು ಭಾರ್ಗವಿಗೆ ಶ್ವೇತಾ ಕೇಳಿದ್ದಾಳೆ.

ನೀನು ಬಂದಿದ್ದು ಇಷ್ಟ ಇಲ್ಲ ಎಂದ ಶ್ವೇತಾ

ನೀನು ಬಂದಿದ್ದು ಇಷ್ಟ ಇಲ್ಲ ಎಂದ ಶ್ವೇತಾ

ನಾನು ನೀನು ಹೇಳುವ ಎಲ್ಲಾ ಕೆಲಸವನ್ನ ಮಾಡುತ್ತಿದ್ದೇನೆ ಆದರೂ ಕೂಡ ನೀನು ಈ ಮನೆಗೆ ಬಂದಿದ್ದೀಯಾ ನೀನು ಈ ಮನೆಗೆ ಬಂದಿರುವುದು ನನಗೆ ಸ್ವಲ್ಪವೂ ಇಷ್ಟ ಇಲ್ಲ ಎಂದು ಶ್ವೇತ ಭಾರ್ಗವಿಗೆ ಹೇಳುತ್ತಿದ್ದಾಳೆ. ಇದಕ್ಕೆ ಭಾರ್ಗವಿ ಆಳು ಮಾಡಿದ್ದು ಆಳಿಗೆ ನಾನು ಮಾಡಿದ್ದು ನನಗೆ ಎಂದಿದ್ದಾಳೆ. ನಾನು ನಿನ್ನ ಮನೆ ಹಾಳ ಎಂದು ಶ್ವೇತಾ ಭಾರ್ಗವಿ ಮೇಲೆ ಕೋಪ ಮಾಡಿಕೊಂಡಿದ್ದಾಳೆ. ಯಾವಾಗಲೂ ರಾಜನಾಗಿ ಇರಲು ಸಾಧ್ಯವಿಲ್ಲ ಎಂದು ಭಾರ್ಗವಿ ಶ್ವೇತಾ ಎಚ್ಚರಿಕೆ ಕೊಡಲು ಬಂದಾಗ ನಕ್ಷತ್ರ ಅಲ್ಲಿಗೆ ಬಂದಿದ್ದಾಳೆ.

ನಕ್ಷತ್ರ ನೋಡಿ ಶ್ವೇತಾ- ಭಾರ್ಗವಿಗೆ ಶಾಕ್

ನಕ್ಷತ್ರ ನೋಡಿ ಶ್ವೇತಾ- ಭಾರ್ಗವಿಗೆ ಶಾಕ್

ಜ್ಯೂಸ್ ಹಿಡುಕೊಂಡು ಬಂದ ನಕ್ಷತ್ರ, ಶ್ವೇತಾಗೆ ಭಾರ್ಗವಿ ಎಚ್ಚರಿಕೆ ಕೊಡುವುದನ್ನ ನೋಡಿ ಶಾಕ್ ಆಗಿದೆ. ಆದರೆ ಅಲ್ಲಿ ಏನು ಎಚ್ಚರಿಕೆ ಕೊಡುತ್ತಿದ್ದೀರಾ ಎಂದು ನಕ್ಷತ್ರ ಕೇಳಿದ ಕೂಡಲೇ ಭಾರ್ಗವಿ ಹಾಗೂ ಶ್ವೇತಾಗು ಕೂಡ ಶಾಕ್ ಆಗಿದೆ. ಇದಕ್ಕೆ ಏನು ಹೇಳಬೇಕು ಎಂದು ಭಾರ್ಗವಿ ಚಡಪಡಿಸಿ ಏನೋ ಒಂದನ್ನು ನಕ್ಷತ್ರಾಗೆ ಹೇಳಿದ್ದಾಳೆ.

ಮತ್ತೊಂದು ಪ್ಲಾನ್ ಮಾಡಿದ ಮೌರ್ಯ

ಮತ್ತೊಂದು ಪ್ಲಾನ್ ಮಾಡಿದ ಮೌರ್ಯ

ನಕ್ಷತ್ರ ಹಾಗೂ ಭೂಪತಿಯನ್ನು ಒಂದು ಮಾಡಲು ಮಯೂರಿ ಮೌರ್ಯನಿಗೆ ಮತ್ತೊಮ್ಮೆ ಕರೆ ಮಾಡಿದ್ದಾಳೆ. ಇದಕ್ಕೆ ಮೌರ್ಯ ಈಗ ಅವರಿಬ್ಬರು ಒಟ್ಟಿಗೆ ಇದ್ದಾರೆ, ಆದರೆ ಭೂಪತಿಗೆ ಏನೋ ಒಂದು ತರ ಕಸಿವಿಸಿ ಎಂದು ಹೇಳಿದ್ದಾನೆ. ಈಗ ನಾನು ಹೇಳುವ ಪ್ಲಾನ್‌ನ್ನು ನೀವು ಮಾಡಿ ಆಗ ಭೂಪತಿ, ನಕ್ಷತ್ರಗೆ ಐ ಲವ್ ಯು ಎಂದು ಹೇಳುತ್ತಾನೆ ಎಂದು ಮೌರ್ಯ, ಮಯೂರಿಗೆ ತಿಳಿಸಿದ್ದಾನೆ.

More from Filmibeat

English summary
Colors Kannada serial Lakshana Written Update on March 14th episode. Here is the details about devil bhargavi in nakshtra home
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X