Lakshana: ಭೂಪತಿಗೆ ಪ್ರೀತಿಯ ಪಾಠ ಹೇಳಿಕೊಟ್ಟ ಮೌರ್ಯ
ಭೂಪತಿ ಮತ್ತು ನಕ್ಷತ್ರ ಇಬ್ಬರನ್ನು ಒಂದು ಮಾಡಲು ಮೌರ್ಯ ಬೇಕಾದಷ್ಟು ಪ್ರಯತ್ನಗಳನ್ನು ಮಾಡಿ ಸೋತಿದ್ದಾನೆ. ನನಗೆ ನಕ್ಷತ್ರ ಮೇಲೆ ಇರುವುದು ಸ್ನೇಹ ಅಷ್ಟೇ ಎಂದು ಭೂಪತಿ ಪದೇ ಪದೇ ಹೇಳುತ್ತಿರುವುದಕ್ಕೆ ಮೌರ್ಯ ಅಣ್ಣನಿಗೆ ಹೇಗಾದರೂ ಮಾಡಿ ಪ್ರೀತಿಯ ಪಾಠ ಕಲಿಸಬೇಕು ಎಂದುಕೊಂಡಿದ್ದಾನೆ.
ಭೂಪತಿ ಮನೆಗೆ ತನ್ನ ಸ್ನೇಹಿತೆ ಪ್ರಣಿತಾಳನ್ನು ಕಳಿಸಿ ಒಂದು ಪ್ಲ್ಯಾನ್ ಮಾಡಿದ್ದಾನೆ. ಈಗ ಮನೆಗೆ ಬಂದಿರುವ ಪ್ರಣಿತ ಬಾಗಿಲನ್ನು ತಟ್ಟಿದ್ದಾಳೆ ನಕ್ಷತ್ರ ಡೋರ್ ಓಪನ್ ಮಾಡಿ ಯಾರು ಎಂದು ಕೇಳಿದ್ದಾಳೆ. ತಾನು ಯಾರು ಎಂಬ ಸತ್ಯವನ್ನು ಹೇಳದೆ ಸೀದಾ ಭೂಪತಿಯನ್ನು ಹುಡುಕಿ ಹೊರಟಿದ್ದಾಳೆ. ಭೂಪತಿಯ ಬಳಿ ಬಂದು ನನಗೆ ಅನ್ಯಾಯವಾಗಿದೆ ಎಂದು ಹೇಳಿದ್ದಾಳೆ.
ಯಾರಿಂದ , ನೀವು ಯಾರು ಎಂದು ಕೇಳುತ್ತಿದ್ದರೂ ಸಹ ಭೂಪತಿಗೂ ಸಹ ಪ್ರಣಿತಾ ಉತ್ತರ ನೀಡುತ್ತಿಲ್ಲ ನನ್ನ ಜೊತೆ ಬನ್ನಿ ಎಂದು ದುಂಬಾಲು ಬಿದ್ದಿದ್ದಾಳೆ. ಇನ್ನು ಬರುತ್ತೇನೆ ಎಂದು ಒಪ್ಪಿದ ಭೂಪತಿಗೆ ನಕ್ಷತ್ರ 108 ಪ್ರಶ್ನೆ ಕೇಳಿದ್ದಾಳೆ. ಇವಳು ಯಾರು ನೀನು ಯಾಕೆ ಜೊತೆಯಲ್ಲಿ ಹೋಗಬೇಕು ಎಂದು ಹೇಳಿದ್ದಾಳೆ ಇದಕ್ಕೆ ಭೂಪತಿ ನನಗೂ ಸಹ ಈಕೆ ಯಾರು ಎಂದು ಗೊತ್ತಿಲ್ಲ ನಮ್ಮ ಮನೆಯವರಿಂದ ಅನ್ಯಾಯವಾಗಿದೆ ಎಂದಷ್ಟೇ ನಕ್ಷತ್ರ ಬಳಿ ಹೇಳಿದ್ದಾನೆ.

ವರ್ಕೌಟ್ ಆಗುತ್ತಾ ಮೌರ್ಯನ ಪ್ಲ್ಯಾನ್
ಪ್ರಣೀತಾ ಯಾರೆಂದು ಮೊದಲೇ ಗೊತ್ತಿರುವ ಹಿನ್ನೆಲೆಯಲ್ಲಿ ಮಯೂರಿ ಸಹ ನಕ್ಷತ್ರ ಹಾಗೂ ಭೂಪತಿ ಇರುವ ಜಾಗಕ್ಕೆ ಬಂದಿದ್ದಾಳೆ. ಭೂಪತಿ ಮತ್ತು ನಕ್ಷತ್ರ ಹೇಳುವುದನ್ನು ಕೇಳಿಸಿಕೊಂಡು ಹೋಗು ಭೂಪತಿ ಅವಳಿಗೆ ಏನು ಅನ್ಯಾಯವಾಗಿದೆ ಅದನ್ನು ಸರಿಪಡಿಸಿ ಬಾ ಎಂದು ಮಯೂರಿ ತಿಳಿಸಿದ್ದಾಳೆ. ಮನೆಯಿಂದ ಪ್ರಣೀತಾ ಜೊತೆಗೆ ಕಾರಿನಲ್ಲಿ ಭೂಪತಿ ಹೊರಟಿದ್ದಾನೆ.

ನನ್ನ ತಮ್ಮ ಅನ್ಯಾಯ ಮಾಡಿದ್ನಾ..!?
ಇನ್ನು ಆಕೆ ಹೇಳುತ್ತಿರುವ ಲೊಕೇಶನ್ ಭೂಪತಿ ಕಾರ್ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದಾನೆ. ಇದೇನಿದು ಮೌರ್ಯನ ಮನೆ ಕಡೆ ಹೋಗುವ ರಸ್ತೆಯಂತೆ ಇದೆ ಎಂದು ಆಕೆಯನ್ನ ಭೂಪತಿ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಪ್ರಣೀತಾ ಹೌದು ನಿನ್ನ ತಮ್ಮ ಮೌರ್ಯನೇ ನನಗೆ ಮೋಸ ಮಾಡಿದ್ದಾನೆ ಎಂದು ಹೇಳಿದ್ದಾಳೆ. ಇನ್ನು ಇದನ್ನೆಲ್ಲಾ ಕೇಳುತ್ತಿರುವ ಭೂಪತಿಗೆ ಮೌರ್ಯಾನ ಎಂದು ಒಂದು ಕ್ಷಣ ಶಾಕ್ ಆಗಿದೆ.

ಮೌರ್ಯನಿಗೆ ಪ್ರಣೀತಾ ಸಪೋರ್ಟ್
ಹೇಗಿದ್ದರೂ ಭೂಪತಿ ಮನೆ ಬಿಟ್ಟು ಬರುವುದಿಲ್ಲ ಎಂಬುದನ್ನು ತಿಳಿದುಕೊಂಡ ಮೌರ್ಯ, ಪ್ರಣಿತಾಳ ಸಹಾಯವನ್ನು ತೆಗೆದುಕೊಂಡು ತನ್ನ ಮನೆಗೆ ಅಣ್ಣನನ್ನು ಕರೆಸಿಕೊಂಡಿದ್ದಾನೆ. ನಂತರ ಅಲ್ಲಿಗೆ ಬಂದ ಅಣ್ಣನನ್ನು ನೋಡಿದ ಮೌರ್ಯ ಶಾಕ್ ಆದವನಂತೆ ನಾಟಕವಾಡಿದ್ದಾನೆ. ಇದೇ ವೇಳೆ ಭೂಪತಿ ನೀನು ಈ ಹುಡುಗಿಗೆ ಏನು ಅನ್ಯಾಯ ಮಾಡಿದೆ ಎಂದು ಕೇಳಿದ್ದಾನೆ. ಇವಳು ನನ್ನ ಫ್ರೆಂಡ್ ಅಷ್ಟೇ ನಾನೇನು ಅನ್ಯಾಯ ಮಾಡಿಲ್ಲ ಎಂದು ಮೌರ್ಯ ಹೇಳಿದ್ದಾನೆ. ಇದಕ್ಕೆ ಪ್ರಣಿತಾ ನಾನು ಹುಷಾರಿಲ್ಲದೆ ಇದ್ದಾಗ ಇವನು ನನ್ನ ಕೇರ್ ಮಾಡಿದ್ದಾನೆ, ನನ್ನ ಮೇಲೆ ಲವ್ ಇಲ್ಲದೇ ಈ ರೀತಿ ಮಾಡಿದ್ದಾನಾ ಎಂದು ಕೇಳಿದ್ದಾಳೆ. ಇದಕ್ಕೆ ಮೌರ್ಯ ನೀನು ನನ್ನ ಕ್ಲೋಸ್ ಫ್ರೆಂಡ್ ಅದಕ್ಕಾಗಿ ಕೇರ್ ಮಾಡಿದೆ ಎಂದು ಹೇಳಿದ್ದಾನೆ.

ಭೂಪತಿಗೆ ಶಾಕ್ ಕೊಟ್ಟ ಮೌರ್ಯ
ಮೌರ್ಯ, ಭೂಪತಿಗೆ ಶಾಕ್ ಕೊಟ್ಟಿದ್ದಾನೆ. ನಕ್ಷತ್ರ ಅತ್ತಿಗೆ ಬಗ್ಗೆ ತೋರಿಸುತ್ತಿರುವ ಕಾಳಜಿಯ ಬಗ್ಗೆ ಮೌರ್ಯ ಅಣ್ಣನಿಗೆ ಮನವರಿಕೆಯನ್ನು ಮಾಡಿಕೊಡುತ್ತಿದ್ದಾನೆ. ನಕ್ಷತ್ರ ಮೌನ ವ್ರತ ಮಾಡುವಾಗ , ಅವಳು ತಲೆನೋವು ಎಂದು ಮಲಗಿದಾಗ, ದೇವಸ್ಥಾನದಿಂದ ಮನೆಗೆ ಬರುತ್ತೇನೆ ಎಂದು ಲೇಟಾಗಿ ಬಂದಾಗ ನೀನು ತೋರಿಸಿದ ಕಾಳಜಿ ಪ್ರೀತಿ ಅಲ್ವಾ ನಾವಿಬ್ಬರು ಮಾತನಾಡಿದ್ದು ನೀನು ನಕ್ಷತ್ರ ಅತ್ತಿಗೆಯ ಬಳಿ ನಡೆದುಕೊಂಡ ರೀತಿಯನ್ನು ಎಂದು ಹೇಳಿ ಶಾಕ್ ಅನ್ನು ಕೊಟ್ಟಿದ್ದಾನೆ. ಇನ್ನು ಭೂಪತಿ, ಮೌರ್ಯ ಹೇಳಿದ ಎಲ್ಲಾ ಮಾತನ್ನು ಕೇಳಿ ಚಿಂತೆಗೆ ಒಳಗಾಗಿದ್ದಾನೆ ನಾನು ನಿಜವಾಗಿಯೂ ನಕ್ಷತ್ರ ಲವ್ ಮಾಡುತ್ತಿದ್ದೇನಾ ಎಂಬ ಗೊಂದಲ ಮೂಡಿದೆ.


Click it and Unblock the Notifications











