Lakshana: ನಕ್ಷತ್ರಳ ಮೇಲೆ ಭೂಪತಿಗೆ ಹುಟ್ಟಿತು ಪ್ರೀತಿ
ಪ್ರಣೀತಾ ಮತ್ತು ಮೌರ್ಯ ಇಬ್ಬರು ಸೇರಿ ನಾಟಕವನ್ನು ಮಾಡುತ್ತಿದ್ದಾರೆ. ಇಬ್ಬರು ಸಹ ಮಾತನಾಡುತ್ತಿರುವುದನ್ನು ಭೂಪತಿ ಕೇಳಿಸಿಕೊಂಡು ಕುಳಿತಿದ್ದಾನೆ. ಇಬ್ಬರು ಮಾತನಾಡುವುದನ್ನು ಮುಗಿಸಿದ ಮೇಲೆ ತಾನೇ ಮಾತನಾಡುತ್ತಿದ್ದೇನೆ. ಫ್ರೆಂಡ್ ಆಗಿದ್ದರೆ ಈ ರೀತಿ ಮಾಡಲು ಹೇಗೆ ಸಾಧ್ಯ ಎಂದು ಕೇಳುತ್ತಿದ್ದಾನೆ.
ಇದಕ್ಕೆ ಮೌರ್ಯ ಹಾಗಾದರೆ ನೀನು ನಕ್ಷತ್ರ ಅತ್ತಿಗೆ ಮೇಲೆ ತೋರುತ್ತಿರುವ ಕಾಳಜಿ ಸಹ ಪ್ರೀತಿ ತಾನೇ ಎಂದು ಹೇಳುತ್ತಿದ್ದಾನೆ. ಇದಕ್ಕೆ ಭೂಪತಿ ನಂಗೆ ನಕ್ಷತ್ರ ಮೇಲೆ ಪ್ರೀತಿ ಇದ್ಯಾ ಎಂದು ಕೇಳಿದ್ದಾನೆ. ಇದಕ್ಕೆ ಮೌರ್ಯ ಹೌದು ಎಂದು ಹೇಳಿದ್ದಾನೆ. ಪ್ರೀತಿ ಇಲ್ಲದೇ ನೀನು ಅತ್ತಿಗೆ ಮೇಲೆ ಕಾಳಜಿ ತೋರುತ್ತಿದ್ದೀಯಾ ಎಂದು ಕೇಳಿದ್ದಾನೆ.
ಇದೇ ವೇಳೆ ನಕ್ಷತ್ರ ಮನೆಯಲ್ಲಿ ಇಲ್ಲದ ವೇಳೆ ಚಡಪಡಿಸಿದ್ದು, ನಕ್ಷತ್ರ ಮೌನ ವ್ರತ ಮಾಡುವಾಗ ಬೇಸರ ಮಾಡಿಕೊಂಡಿದ್ದು, ತಲೆನೋವು ಎಂದು ಮಲಗಿದಾಗ ಊಟ ಮಾಡಿಸಿ ಎಣ್ಣೆ ಮಸಾಜ್ ಮಾಡಿದ್ದು ಇದೆಲ್ಲವೂ ಬರೀ ಕಾಳಜಿಯಿಂದಾನ ಎಂದು ಕೇಳಿದ್ದಾನೆ. ಇದನೆಲ್ಲಾ ಕೇಳಿದ ಭೂಪತಿ ಎಲ್ಲವನ್ನು ಒಮ್ಮೆ ರಿವೈಂಡ್ ಮಾಡಿಕೊಂಡಿದ್ದಾನೆ.

ಐ ಲವ್ ಯು ಹೇಳುವ ಹಂಬಲ
ನಕ್ಷತ್ರ ಮೇಲೆ ಪ್ರೀತಿ ಇದೆ ಎಂದು ಭೂಪತಿಗೆ ಮೌರ್ಯ ಅರ್ಥವನ್ನು ಮಾಡಿಸಿದ್ದಾನೆ. ಇದೆ ವೇಳೆ ನಕ್ಷತ್ರ ಅತ್ತಿಗೆಗೂ ಸಹ ನಿನ್ನ ಮೇಲೆ ಪ್ರೀತಿ ಇದೆ ಎಂದು ಹೇಳಿದ್ದಾನೆ. ಈ ವೇಳೆ ಭೂಪತಿ ನಾನು ನಕ್ಷತ್ರಳನ್ನು ಪ್ರೀತಿಸುತ್ತಿದ್ದೇನೆ ಖಾಲಿ ಡಬ್ಬಿ ಹತ್ತಿರವಿದ್ದರೂ ಸಹ ನನಗೆ ಪ್ರೀತಿ ಇದೆ ಎಂದು ಅರ್ಥವಾಗಲಿಲ್ಲ ಎಂದು ಭೂಪತಿ, ಮೌರ್ಯನಿಗೆ ಹೇಳಿದ್ದಾನೆ.

ಪ್ರಣೀತಾ- ಮೌರ್ಯಗೆ ಥ್ಯಾಂಕ್ಸ್
ಹೌದು ಅಣ್ಣ ನೀವಿಬ್ಬರು ಚೆನ್ನಾಗಿರಿ ಅದೇ ಸಾಕು ನಮಗೆ ಎಂದು ಹೇಳಿದ್ದಾನೆ. ಇದೇ ವೇಳೆ ಭೂಪತಿ ನಾನು ಮನೆಗೆ ಹೋಗಬೇಕು ನಕ್ಷತ್ರ ಬಳಿ ಮಾತನಾಡಬೇಕು ಎಂದು ಅಲ್ಲಿಂದ ಹೊರಟಿದ್ದಾನೆ. ಹೊರಡುವಾಗ ಪ್ರಣೀತಾ ಹಾಗೂ ಮೌರ್ಯನಿಗೆ ಥ್ಯಾಂಕ್ಸ್ ಹೇಳಿ ಬಂದಿದ್ದಾನೆ. ಇದೇ ವೇಳೆ ಮೌರ್ಯ ಪ್ರಣೀತಾಗೆ ಥ್ಯಾಂಕ್ಸ್ ಹೇಳಿದ್ದಾನೆ.

ತಿರುಗೇಟು ಕೊಟ್ಟ ನಕ್ಷತ್ರ
ನಕ್ಷತ್ರ ಮನೆಯವರ ಜೊತೆಗೆ ಸಂತೋಷದಿಂದ ಮಾತನಾಡಿದ್ದಾಳೆ. ಅಲ್ಲಿಗೆ ಬಂದ ಡೇವಿಲ್ ಭಾರ್ಗವಿ ನಾನು ನಕ್ಷತ್ರ ಬಳಿ ಮಾತನಾಡುತ್ತೇನೆ ಎಂದಿದ್ದಾಳೆ. ಈ ವೇಳೆ ಭಾರ್ಗವಿ ನೀನು ಯಾಕೆ ಟೆನ್ಷನ್‌ನಲ್ಲಿದ್ದೆ ಎಂದು ನಕ್ಷತ್ರಾಗೆ ಕೇಳಿದ್ದಾಳೆ. ಅದಕ್ಕೆ ಏನು ಇಲ್ಲ ಎಂದು ನಕ್ಷತ್ರ ಅಂದಿದ್ದಾಳೆ. ಇದರಿಂದ ಭಾರ್ಗವಿಗೆ ತುಂಬಾ ಖುಷಿಯಾಗಿದೆ. ನಕ್ಷತ್ರ ಬಳಿ ಬಂದ ಶ್ವೇತಾ ನಿನ್ನ ನೋಡಿದ್ರೆ ಪಾಪ ಅನಿಸುತ್ತದೆ ನೀನು ಮನೆಯ ಸೊಸೆಯಾಗಿ ಯಾವಾಗಲೂ ಮನೆ ಕೆಲಸದವಳ ತರ ದುಡಿತಾ ಇದ್ದೀಯಾ ಎಂದು ಕಿಂಡಲ್ ಮಾಡಿದ್ದಾಳೆ. ಅದಕ್ಕೆ ನಕ್ಷತ್ರ ತಿರುಗೇಟು ಕೊಟ್ಟಿದ್ದಾಳೆ.

ಮನೆಗೆ ಬರುತ್ತಿರುವ ಭೂಪತಿ
ಭೂಪತಿಗೆ ನಕ್ಷತ್ರಗೆ ಆದಷ್ಟು ಬೇಗ ಐ ಲವ್ ಯೂ ಹೇಳಬೇಕು ಎಂಬುವ ಹಂಬಲ ಹೆಚ್ಚಾಗಿದೆ. ಇದಕ್ಕಾಗಿ ರಸ್ತೆ ಬದಿಯಲ್ಲಿ ಕಾರ್ ಪಾರ್ಕ್ ಮಾಡಿ ಒಂದು ಬೊಕ್ಕೆಯನ್ನು ಸಹ ತಗೆದುಕೊಂಡಿದ್ದಾನೆ. ಕಾರಿನಲ್ಲಿ ಮನೆಗೆ ಬರುತ್ತಿದ್ದಾನೆ. ಈ ಕಡೆ ಮೌರ್ಯಗೆ ಮಯೂರಿ ಫೋನ್ ಮಾಡಿ ಪ್ಲ್ಯಾನ್ ಸಕ್ಸಸ್ ಆಯಿತು ಎಂದು ತಿಳಿದುಕೊಂಡಿದ್ದಾಳೆ. ನಕ್ಷತ್ರಗೆ ಮಯೂರಿ ಈ ದಿನ ಒಳ್ಳೆಯದೇ ಆಗುತ್ತದೆ ಎಂದು ಹೇಳುತ್ತಿದ್ದಾಳೆ. ಭೂಪತಿ ಮನೆಗೆ ಬರುವಾಗಲೇ ಬಾಗಿಲಿನಲ್ಲೇ ನಕ್ಷತ್ರ ಎಂದು ಜೋರಾಗಿ ಕೂಗಿಕೊಳ್ಳುತ್ತಿದ್ದಾನೆ.


Click it and Unblock the Notifications











