Lakshana: ತನ್ನ ಆಟ ಶುರು ಮಾಡಿದ ಭಾರ್ಗವಿ: ಭೂಪತಿ ಮಾಸ್ಟರ್ ಪ್ಲ್ಯಾನ್ ಏನು?

By ಶೃತಿ ಹರೀಶ್ ಗೌಡ

ಈವರೆಗೆ 'ಲಕ್ಷಣ' ಧಾರಾವಾಹಿಯಲ್ಲಿ ಶ್ವೇತಾ, ಭಾರ್ಗವಿಗೆ ಫೋನ್ ಮಾಡಿ ನಾನು ಮನೆಗೆ ಬರುತ್ತಿದ್ದೇನೆ ಮನೆಯ ಮುಂದೆ ಬಾ ಅಲ್ಲೇ ಮಾತನಾಡಬೇಕು ಎಂದು ಕರೆದಿದ್ದಾಳೆ.

ಮನೆಯ ಮುಂದೆ ಬಂದಿರುವ ಶ್ವೇತಾಳನ್ನು ನೋಡಿದ ಭಾರ್ಗವಿಗೆ ಟೆನ್ಶನ್ ಆಗಿದೆ. ಯಾರಾದರೂ ನೋಡಿದರೆ ಏನು ಗತಿ ಎಂದು ಭಾರ್ಗವಿ ಅಂದುಕೊಂಡಿದ್ದಾಳೆ. ನಾನು ಹೇಳಿದ ಕೆಲಸವನ್ನು ಒಪ್ಪಿಕೊಂಡಿಲ್ಲ, ಅದಕ್ಕೆ ನಾನು ಮನೆಯ ಹತ್ತಿರ ಬಂದಿದ್ದೇನೆ ಎಂದಿದ್ದಾಳೆ. ನಿನಗೆ ತಲೆ ಕೆಟ್ಟಿದ್ಯಾ ಯಾರಾದರೂ ನೋಡಿದರೆ ಏನು ಗತಿ ಎಂದು ಭಾರ್ಗವಿ, ಶ್ವೇತಾ ಬಳಿ ಮಾತನಾಡುತ್ತಿದ್ದಾಳೆ.‌

ಈ ಕಡೆ ಭೂಪತಿ ಹಾಗೂ ಚಂದ್ರಶೇಖರ್ ಇಬ್ಬರೂ ಪೆನ್ ಡ್ರೈವ್ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ನಿಜವಾಗಿಯೂ ಡೆವಿಲ್ ಆ ಪೆನ್ ಡ್ರೈವ್ ಅನ್ನ ಕಳಿಸಿದ್ದಾಳಾ ಅಥವಾ ಯಾರಾದರೂ ಬ್ಲಾಕ್ ಮೇಲ್ ಮಾಡಬೇಕು ಎಂದು ಪೆನ್ ಡ್ರೈವ್ ಕಳಿಸಿದ್ದಾರ ಎಂದು ಮಾತನಾಡುತ್ತಿದ್ದಾರೆ. ನಕ್ಷತ್ರ, ಭಾರ್ಗವಿ ಎಲ್ಲಿ ಹೋದಳು ಎಂದು ಹುಡುಕಿಕೊಂಡು ಬರುತ್ತಿದ್ದಾಳೆ. ನಕ್ಷತ್ರ ಬರುತ್ತಿರುವುದನ್ನು ನೋಡಿದ ಭಾರ್ಗವಿಗೆ ಶಾಕ್ ಆಗಿದೆ.

ನೀನು ಎಲ್ಲಾದರೂ ಹೋಗು ನಕ್ಷತ್ರ ಈ ಕಡೆ ಬರುತ್ತಿದ್ದಾಳೆ ಎಂದು ಶ್ವೇತಾಗೆ ಹೇಳಿದ್ದಾಳೆ. ಶ್ವೇತಾ ಅಲ್ಲೇ ಇದ್ದ ಮರದ ಬಳಿ ಹೋಗುತ್ತಿದ್ದಾಳೆ. ಭಾರ್ಗವಿ ನಕ್ಷತ್ರ ಬರುತ್ತಿರುವುದನ್ನು ನೋಡಿ ಹೋಗು ನಕ್ಷತ್ರ ನೋಡಿದರೆ ಕಷ್ಟವಾಗುತ್ತದೆ ಎಂದು ಅನ್ನುತ್ತಿದ್ದಾಳೆ. ಇದನ್ನು ನಕ್ಷತ್ರ ಕೇಳಿಸಿಕೊಂಡಿದ್ದಾಳೆ. ಶ್ವೇತಾ ನನ್ನ ನೋಡಿದರೆ ಏನ್ ಕಷ್ಟ ಎಂದು ಭಾರ್ಗವಿಗೆ ನಕ್ಷತ್ರ ಕೇಳಿದ್ದಾಳೆ.

 ಶ್ವೇತಾ ಸತ್ಯ ಹೇಳ್ತಾಳೆ ಎಂದು ಭಾರ್ಗವಿ ಭಯ

ಶ್ವೇತಾ ಸತ್ಯ ಹೇಳ್ತಾಳೆ ಎಂದು ಭಾರ್ಗವಿ ಭಯ

ಈ ಕಡೆ ನಕ್ಷತ್ರ, ಶ್ವೇತಾಳನ್ನು ಮನೆಯ ಒಳಗೆ ಕರೆದುಕೊಂಡು ಹೋಗಿದ್ದಾಳೆ. ಇದು ಯಾರಿಗೂ ಸ್ವಲ್ಪವೂ ಇಷ್ಟ ಆಗುತ್ತಿಲ್ಲ. ಅಲ್ಲಿ ಇದ್ದಂತಹ ಆರತಿ ಹಾಗೂ ಚಂದ್ರಶೇಖರ್ ನೋಡಿ ಬೇಸರ ಮಾಡಿಕೊಂಡಿದ್ದಾರೆ. ಇವಳನ್ನು ಏಕೆ ಮನೆಯೊಳಗೆ ಕರೆದುಕೊಂಡು ಬಂದೆ ಎಂದು ಅನ್ನುತ್ತಿರುವಾಗ ಅಲ್ಲಿಗೆ ಬಂದ ಭಾರ್ಗವಿ ನಾನು ಸಹ ಅದನ್ನೇ ಹೇಳಿದೆ, ಆದ್ರು ಸಹ ನಕ್ಷತ್ರ ಹಬ್ಬದ ದಿನ ಎಂದು ಒಳಗೆ ಕರೆದುಕೊಂಡು ಬಂದಿದ್ದಾಳೆ ಎಂದು ಭಾರ್ಗವಿ ಅಣ್ಣನಿಗೆ ಚಾಡಿ ಹೇಳಿದ್ದಾಳೆ.

ಎಲ್ಲರನ್ನೂ ಸಂಭಾಳಿಸಿದ ನಕ್ಷತ್ರ

ಎಲ್ಲರನ್ನೂ ಸಂಭಾಳಿಸಿದ ನಕ್ಷತ್ರ

ಈ ಕಡೆ ಚಂದ್ರಶೇಖರ ಹಾಗೂ ಆರತಿ ಇಬ್ಬರೂ ಶ್ವೇತಾಗೆ ಬೈಯುತ್ತಿದ್ದರೆ ತುಕಾರಾಂಗೆ ಕೋಪ ಬಂದಿದೆ. ಹಬ್ಬಕ್ಕೆ ಕರೆಸಿ ನೀವು ಈ ರೀತಿ ಅವಮಾನ ಮಾಡುವುದು ಸರಿಯಲ್ಲ ಎಂದು ತುಕಾರಾಂ ಬೇಸರ ಮಾಡಿಕೊಂಡು ನಾವು ಇಲ್ಲಿಂದ ಹೊರಟು ಹೋಗುತ್ತೇವೆ ಎಂದಿದ್ದಾರೆ.‌ ನೀವು ಯಾಕೆ ಜಗಳ ಆಡುತ್ತೀರಾ ಎಂದು ನಕ್ಷತ್ರ ಎಲ್ಲರನ್ನು ಸಂಭಾಳಿಸಿದ್ದಾಳೆ. ಆದರೆ ಭಾರ್ಗವಿಗೆ ಮಾತ್ರ ಶ್ವೇತಾ ಎಲ್ಲಿ ಸತ್ಯ ಹೇಳಿಬಿಡುತ್ತಾಳೆ ಎಂದು ಭಯ ಕಾಡುತ್ತಿದೆ.

ತನ್ನ ಆಟ ಶುರು ಮಾಡಿದ ಭಾರ್ಗವಿ

ತನ್ನ ಆಟ ಶುರು ಮಾಡಿದ ಭಾರ್ಗವಿ

ಈ ಕಡೆ ಭೂಪತಿ ಹೈದರಾಬಾದ್‌ಗೆ ಪೆನ್ ಡ್ರೈವ್ ಅನ್ನ ಕಳುಹಿಸಿ ಅಲ್ಲಿ ಯಾವುದಾದರೂ ಸುಳಿವು ಸಿಗುತ್ತದೆ ನೋಡೋಣ್ವ ಎಂದು ಚಂದ್ರಶೇಖರ್ ಬಳಿ ಮಾತನಾಡಿದ್ದಾನೆ. ಇದಕ್ಕೆ ಚಂದ್ರಶೇಖರ್ ತಮ್ಮ ಸಮ್ಮತಿಯನ್ನು ನೀಡಿದ್ದಾರೆ. ಈ ಕಡೆ ಎಲ್ಲರೂ ಮನೆಗೆ ಹೊರಟು ನಿಂತಿದ್ದಾರೆ ನಕ್ಷತ್ರ ಹಾಗೂ ಭೂಪತಿಯ ಅನ್ಯೋನ್ಯತೆಯನ್ನು ಕಂಡ ಭಾರ್ಗವಿಗೆ ಹೊಟ್ಟೆ ಕಿಚ್ಚು ಬಂದಿದೆ. ನಿಮ್ಮಿಬ್ಬರದು ಇದೆ ಕೊನೆಯ ಶಿವರಾತ್ರಿ ಎಂದು ಮನಸ್ಸಿನಲ್ಲಿ ಅಂದುಕೊಂಡು ಹೊಸದಾದ ಆಟವನ್ನು ಶುರು ಮಾಡಿದ್ದಾಳೆ.

More from Filmibeat

English summary
Colors Kannada serial Lakshana Written Update on March 1st episode. Here is the details about bhupati discuss about pendrive.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X