Lakshana: ಮನೆಯವರನ್ನು ಸೇಫ್ ಮಾಡಲು ನಕ್ಷತ್ರ ಸರ್ಕಸ್: ಮತ್ತೊಂದು ಶಾಕ್ ಕೊಟ್ಟ ಡೆವಿಲ್
ನಕ್ಷತ್ರ ಮನೆಯವರನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂದು ಹೆಣಗಾಡುತ್ತಿದ್ದಾಳೆ. ಭೂಪತಿಗೆ ತನ್ನ ಪ್ರೀತಿಯನ್ನು ಹೇಳಿಕೊಳ್ಳಬೇಕು ಎಂಬ ಹಂಬಲ ಶುರುವಾಗಿದೆ. ನಕ್ಷತ್ರ ಬಳಿ ತುಂಬಾ ಕ್ಲೋಸ್ ಆಗಿ ಭೂಪತಿ ಇದ್ದಾನೆ. ಇದನ್ನು ಶ್ವೇತಾ ಕೈಲಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ಕಡೆ ಭಾರ್ಗವಿ ಬೇರೆಯದ್ದೇ ಪ್ಲ್ಯಾನ್ ಮಾಡಿದ್ದಾಳೆ.
ನಕ್ಷತ್ರ ತನ್ನ ಮನಸಿನಲ್ಲಿ ಆಗುತ್ತಿರುವ ತಳಮಳವನ್ನು ಯಾರ ಬಳಿಯು ಹೇಳಿಕೊಳ್ಳಲು ಆಗುತ್ತಿಲ್ಲ. ಅದರಿಂದ ತಾನೇ ಏನಾದ್ರು ಮಾಡಬೇಕು ಎಂದು ಗಟ್ಟಿ ನಿರ್ಧಾರವನ್ನು ಮಾಡಿದ್ದಾಳೆ. ಆದರೆ ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಭೂಪತಿ ಮಾತ್ರ ಯಾಕೆ ಈ ರೀತಿ ಇದ್ದೀಯಾ ಎಂದು ಪ್ರಶ್ನೆ ಮಾಡಿದರು ಸಹ ಏನನ್ನು ನಕ್ಷತ್ರ ಹೇಳುತ್ತಿಲ್ಲ.
ಶ್ವೇತಾ ಮಾತ್ರ ನಕ್ಷತ್ರ ಟೆನ್ಷನ್‌ನಲ್ಲಿ ಇರುವುದನ್ನು ನೋಡಿ ಖುಷಿ ಪಡುತ್ತಿದ್ದಾಳೆ. ಭೂಪತಿಗೆ ಈಗ ಬೈಕ್ ಗುದ್ದಿದೆ ಮುಂದೆ ಲಾರಿದು ಗುದ್ದಲಿದೆ ಎಂದು ಮಾಡಿದ ಮೆಸೇಜ್ ನಕ್ಷತ್ರಳನ್ನು ನಿದ್ರೆಗೆಡಿಸಿದೆ. ನಂತರ ಮಗುವಿನ ಕೈಯಲ್ಲಿದ್ದ ಬೊಂಬೆಯನ್ನು ಹಾಳು ಮಾಡಿ ಕಳಿಸಿದ ಮೆಸೇಜ್ ಎಲ್ಲವನ್ನು ನಕ್ಷತ್ರ ನೆನಪಿಕೊಂಡು ಭಯಪಟ್ಟಿದ್ದಾಳೆ.

ತಮ್ಮನ ಸಹಾಯ ಬೇಡಿದ ಅಣ್ಣ
ನಕ್ಷತ್ರಗೆ ಲವ್ ಪ್ರಪೋಸ್ ಮಾಡಬೇಕು ಎಂದು ಭೂಪತಿ ಅಂದುಕೊಂಡಿದ್ದಾನೆ ಹಲವು ಬಾರಿ ಪ್ರಯತ್ನವನ್ನು ಮಾಡಿ ಸೋತು ಕೊನೆಗೂ ಸಹ ತಮ್ಮ ಮೌರ್ಯನ ಮೊರೆ ಹೋಗಿದ್ದಾನೆ. ಮೌರ್ಯನಿಗೆ ಕರೆ ಮಾಡಿದ ಭೂಪತಿ ನಾನು ಪ್ರೀತಿ ಹೇಳದೇ ಒದ್ದಾಡುತ್ತಿದ್ದೇನೆ. ದಯವಿಟ್ಟು ಏನಾದ್ರು ಸಹಾಯ ಮಾಡು ಎಂದು ಕೇಳಿಕೊಂಡಿದ್ದಾನೆ. ಅದಕ್ಕೆ ಮೌರ್ಯ ಆಯ್ತು ಅಣ್ಣ ನಿನಗೋಸ್ಕರ ಮಾಡುತ್ತೇನೆ ಎಂದು ಹೇಳಿದ್ದಾನೆ. ಮೌರ್ಯ ಮತ್ತು ಭೂಪತಿ ಮಾತನಾಡುತ್ತಾ ಇದ್ದದ್ದನ್ನು ಕೇಳಿಸಿಕೊಂಡ ಮಯೂರಿ ಈ ಅತ್ತಿಗೆಯ ಹೆಲ್ಪ್ ಬೇಡ್ವಾ ಎಂದು ಕೇಳಿದ್ದಾಳೆ.

ಡೆವಿಲ್‌ಗೆ ಬೈದು ಫೋನ್ ಇಟ್ಟ ನಕ್ಷತ್ರ
ಈ ಕಡೆ ಡೆವಿಲ್ ಭಾರ್ಗವಿ ಡೈರೆಕ್ಟ್ ಆಗಿ ಮಾತನಾಡಿ ನೀನು ಭೂಪತಿಗೆ ಡಿವೋರ್ಸ್ ಕೊಡಬೇಕು ಎಂದು ನಕ್ಷತ್ರ ಬಳಿ ಹೇಳಿದ್ದಾಳೆ. ಇದನ್ನೆಲ್ಲಾ ಕೇಳಿಸಿಕೊಂಡ ನಕ್ಷತ್ರ ನಾನು ಯಾಕೆ ಭೂಪತಿ ಬಿಟ್ಟು ಹೋಗಲಿ ಅದು ಸಾಧ್ಯವಿಲ್ಲ ಎಂದು ಜೋರಾಗಿಯೇ ಡೇವಿಲ್ ಬಳಿ ಕೇಳಿದಾಗ ನಾನು ಹೇಳಿದಷ್ಟೇ ಮಾಡು ಎಂದಿದ್ದಾಳೆ. ಇದಕ್ಕೆ ನಕ್ಷತ್ರ ನಾನು ಖಂಡಿತವಾಗಿ ನೀನು ಹೇಳುವ ಕೆಲಸವನ್ನು ಮಾಡುವುದಿಲ್ಲ. ನಾನು ಭೂಪತಿಯನ್ನು ಬಿಡುವುದಿಲ್ಲ ಎಂದು ಫೋನ್ ಕಟ್ ಮಾಡಿದ್ದಾಳೆ.

ಮೇಸೇಜ್ ಮಾಡಿ ಬೆದರಿಕೆ ಹಾಕಿದ ಡೆವಿಲ್
ನಾನು ಹೆದರಿಕೊಂಡರೆ ಹೆದರಿಸುತ್ತಾರೆ ನನ್ನ ಕುಟುಂಬವನ್ನು ನಾನೇ ಕಾಪಾಡಿಕೊಳ್ಳಬೇಕು ಎಂದು ಲಕ್ಷಣ ಮನೆಯಲ್ಲಿರುವ ಸಿಸಿಟಿವಿ ಸರಿ ಇದೆಯಾ ಎಂದು ವಾಚ್ ಮೆನ್ ಬಳಿ ಕೇಳಿದ್ದಾಳೆ. ಅದಕ್ಕೆ ವಾಚ್ ಮೆನ್ ಸರಿ ಹೋಗಿದೆ ಮೇಡಂಕಳಿಸಿದ್ದಾಳೆ. ಭೂಪತಿಯ ಹಾಗೂ ಅವರ ಅಣ್ಣ ಎಲ್ಲರನ್ನು ಮನೆಯಿಂದಲೇ ಕೆಲಸ ಮಾಡುವಂತೆ ನಕ್ಷತ್ರ ಕೇಳಿಕೊಂಡಿದ್ದಾಳೆ. ಇದಕ್ಕೆ ಮೊದಲು ವಿರೋಧ ವ್ಯಕ್ತವಾದರೂ ಸಹ ನಂತರ ಭೂಪತಿಯೇ ಎಲ್ಲರನ್ನು ಒಪ್ಪಿಸಿದ್ದಾನೆ. ಇದರಿಂದ ನಕ್ಷತ್ರ ಕೊಂಚ ನಿಟ್ಟುಸಿರು ಬಿಟ್ಟಿದ್ದಾಳೆ.

ನಕ್ಷತ್ರಕ್ಕೆ ಮತ್ತೊಂದು ಟೆನ್ಷನ್
ಅಷ್ಟರಲ್ಲಿ ಮೇಸೇಜ್ ಮಾಡಿದ ಭಾರ್ಗವಿ ಮನೆಯಲ್ಲಿ ಎಲ್ಲರನ್ನು ನೀನು ಕೂಡಿ ಹಾಕುವ ಕೆಲಸವನ್ನು ಮಾಡುತ್ತಿದ್ದೀಯಾ ಎಂದು ಕೇಳಿದ್ದಾಳೆ. ಮನೆಯಲ್ಲಿ ಇರುವವರನ್ನು ಬಿಟ್ಟು ಇನ್ನು ಒಬ್ಬರು ಇದ್ದಾರೆ ಎಂದು ಹೇಳಿದಾಗ ನಕ್ಷತ್ರ ಯಾರು ಯಾರು ಎಂದು ಯೋಚನೆ ಮಾಡುತ್ತಿರುವಾಗ ನಿಮ್ಮ ಅತ್ತೆ ಶಾಕುಂತಲದೇವಿ ಹೊರಗೆ ಇದ್ದಾಳೆ. ಅವಳಿಗೆ ಏನಾದ್ರು ಮಾಡ್ಲಾ ಎಂದು ಡೇವಿಲ್ ನಕ್ಷತ್ರಗೆ ಮೆಸೇಜ್ ಕಳಿಸಿದ್ದಾಳೆ.


Click it and Unblock the Notifications











