Lakshana: ಪ್ರಪೋಸ್ ಮಾಡಲು ತುದಿಗಾಲಲ್ಲಿ ನಿಂತಿರುವ ಭೂಪತಿಗೆ ಡಿವೋರ್ಸ್ ಕೊಡ್ತಾಳಾ ನಕ್ಷತ್ರ?
ನಕ್ಷತ್ರ ಪರಿಸ್ಥಿತಿ ಯಾರಿಗೂ ಬೇಡವಾಗಿದೆ. ಆದರೆ ಅವಳು ಯಾರ ಬಳಿಯೂ ಡೇವಿಲ್ ಮಾಡುತ್ತಿರುವ ಕೆಲಸವನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದರ ಹಿಂದೆ ಒಂದರಂತೆ ಡೇವಿಲ್ ಮೆಸೇಜ್, ಕಾಲ್ ಮಾಡಿ ನಕ್ಷತ್ರಗೆ ಬೆದರಿಕೆ ಹಾಕುತ್ತಿದ್ದಾಳೆ. ಭೂಪತಿಯನ್ನ ಬಿಟ್ಟು ಬಿಡು ಎಂದು ಹೇಳುತ್ತಿದ್ದಾಳೆ.
ಈ ಕಡೆ ನಕ್ಷತ್ರ ಮನೆಯಲ್ಲಿ ಇರುವ ಎಲ್ಲರನ್ನೂ ಸೇಫ್ ಮಾಡಲು ಸರ್ಕಸ್ ಮಾಡುತ್ತಿದ್ದಾಳೆ. ಆದರೆ ಕೊನೆಗೂ ಅವರ ಅತ್ತೆ ದೇವಸ್ಥಾನಕ್ಕೆ ಹೋಗಿದ್ದು ಅವರನ್ನು ಹೇಗೆ ನಾನು ಮನೆಗೆ ಬನ್ನಿ ಎಂದು ಕರೆಯಲಿ ಎಂದು ಚಿಂತೆಯಲ್ಲಿ ಮುಳುಗಿ ಹೋಗಿದ್ದಾಳೆ. ಡೇವಿಲ್ ಹೇಳಿದ ಮಾತನ್ನೇ ನೆನೆಸಿಕೊಂಡು ಬೇಸರದಲ್ಲಿ ಇದ್ದಾಳೆ.
ನಕ್ಷತ್ರ ಫೋನ್‌ಗೆ ಒಂದು ಫೋಟೋ ಬಂದಿದೆ. ಅದು ಶಾಕುಂತಲಾ ದೇವಿ ಪ್ರಸಾದವನ್ನು ತಿನ್ನುತ್ತಿರುವ ಫೋಟೋ ಆಗಿದ್ದು ನೀನು ನಿನ್ನ ಅತ್ತೆಯನ್ನ ಹೇಗೆ ರಕ್ಷಣೆ ಮಾಡಿಕೊಳ್ಳುತ್ತೀಯ ನಾನು ಹೇಳಿದಂತೆ ಮಾತ್ರ ನೀನು ಕೇಳಬೇಕು ಎಂದು ಡೇವಿಲ್ ನಕ್ಷತ್ರಗೆ ಹೇಳಿದ್ದಾಳೆ. ಇದರಿಂದಾಗಿ ನಕ್ಷತ್ರ ತುಂಬಾ ಭಯದಲ್ಲಿ ಇದ್ದಾಳೆ.

ಅತ್ತೆಗೆ ಫೋನ್ ಮಾಡಿದ ನಕ್ಷತ್ರ
ಶಾಕುಂತಲಾ ದೇವಿ ದೇವಸ್ಥಾನದಲ್ಲಿ ಪ್ರದಕ್ಷಿಣೆಯನ್ನು ಹಾಕುವಾಗ ಹಲವು ಬಾರಿ ಶಾಕುಂತಲದೇವಿಯವರ ಫೋನ್‌ಗೆ ನಕ್ಷತ್ರ ಫೋನ್ ಮಾಡಿದ್ದಾಳೆ. ಕೊನೆಗೆ ಶಾಕುಂತಲಾ ದೇವಿ ಕರೆ ಸ್ವೀಕರಿಸಿದಾಗ ಅತ್ತೆ ನಾನು ನಕ್ಷತ್ರ ಎಂದು ಹೇಳಿದ್ದಾಳೆ. ಇದಕ್ಕೆ ಆ ಗೊತ್ತು ಹೇಳು ಎಂದಿದ್ದಾರೆ. ನೀವು ಹುಷಾರಾಗಿ ಇದ್ದೀರಿ ಅಲ್ವಾ ಊಟ ತಿಂಡಿಗೆ ಏನು ಸಮಸ್ಯೆ ಇಲ್ಲ ಅಲ್ವಾ ಎಂದು ಕೇಳಿದ್ದಾಳೆ. ಇದಕ್ಕೆ ಶಾಕುಂತಲಾ ದೇವಿ ಏನು ಇಲ್ಲ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದೇನೆ ಎಂದು ಫೋನನ್ನು ಕಟ್ ಮಾಡಿದ್ದಾರೆ.

ನಕ್ಷತ್ರಗೆ ಶ್ವೇತಾ ಕಾಟ
ಭೂಪತಿಯ ಬಳಿ ಮನೆಗೆ ಶಾಕುಂತಲಾ ದೇವಿಯನ್ನು ಕರೆಸಿಕೊಳ್ಳಬೇಕು ಎಂದು ಹೋಗುತ್ತಿರುವಾಗ ನಕ್ಷತ್ರಗೆ ಶ್ವೇತಾ ಅಡ್ಡ ಬಂದಿದ್ದಾಳೆ. ನಕ್ಷತ್ರ ನಿನಗೆ ಯಾವ ಸಿಹಿ ಇಷ್ಟ ಹೇಳು ನಾನು ಅದನ್ನೇ ಇವತ್ತು ಮಾಡಿಸುತ್ತೇನೆ ಎಂದು ಕಾಟ ಕೊಟ್ಟಿದ್ದಾಳೆ. ಅದಕ್ಕೆ ನಕ್ಷತ್ರ ನಿನಗೆ ಯಾವುದು ಬೇಕು ಅದನ್ನು ಮಾಡಿಸಿಕೊಂಡು ತಿನ್ನು ಎಂದು ಓಡೋಡಿ ಭೂಪತಿಯ ಬಳಿ ಹೋಗುತ್ತಿದ್ದಾಳೆ.

ನಕ್ಷತ್ರಗೆ ಕಾಡಿಸುತ್ತೇನೆ ಎಂದ ಭೂಪತಿ
ನಕ್ಷತ್ರಗೆ ಪ್ರಪೋಸ್ ಮಾಡಲು ಭೂಪತಿ ಹೆಣಗಾಡುತ್ತಿದ್ದಾನೆ. ಇದನೆಲ್ಲಾ ನೋಡುತ್ತಿರುವ ಮಯೂರಿಗೆ ತುಂಬಾ ನಗು ಬಂದಿದೆ. ಏನು ಭೂಪತಿ ಈ ರೀತಿ ಇದೆಯಾ ಎಂದು ಕೇಳಿದ್ದಕ್ಕೆ ನಾನು ಪ್ರೀತಿಯನ್ನ ಯಾವ ರೀತಿ ಪ್ರಪೋಸ್ ಮಾಡಬೇಕು ಎಂದು ತಿಳಿಯುತ್ತಿಲ್ಲ, ಏನಾದರೂ ಐಡಿಯಾ ಕೊಡಿ ಎಂದು ಕೇಳಿದ್ದಾನೆ. ಇದಕ್ಕೆ ಮಯೂರಿ ನನಗೆ ಯಾವುದೇ ಐಡಿಯಾ ಬರುತ್ತಿಲ್ಲ ಎಂದು ಹೇಳಿದ್ದಾಳೆ. ಪ್ರಪೋಸ್ ಮಾಡಲು ಅಣ್ಣನ ಬಳಿ ಐಡಿಯಾವನ್ನ ಕೇಳಿ ನಕ್ಷತ್ರಗೆ ಪತ್ರ ಬರೆಯುತ್ತಿದ್ದಾನೆ. ನಕ್ಷತ್ರ ನನ್ನನ್ನು ಹೇಗೆ ಕಾಡಿಸಿದ್ದಳೋ ಹಾಗೇ ನಾನು ಸಹ ಕಾಡಿಸುತ್ತೇನೆ ಎಂದು ಭೂಪತಿ ಅಂದುಕೊಂಡಿದ್ದಾನೆ.

ಶಾಕ್ ಆಗಿ ನಿಂತುಕೊಂಡ ನಕ್ಷತ್ರ
ಡೇವಿಲ್ ಭಾರ್ಗವಿ, ನಕ್ಷತ್ರಗೆ ಫೋನ್ ಮಾಡಿ ನಾನು ಹೇಳಿದ್ದರ ಬಗ್ಗೆ ನೀನು ಏನು ಯೋಚನೆ ಮಾಡಿದೆ ಎಂದು ಕೇಳಿದ್ದಾಳೆ. ಅದಕ್ಕೆ ನಕ್ಷತ್ರ ಏನನ್ನು ಮಾತನಾಡಲಿಲ್ಲ. ನಾನೇ ಎರಡು ದಿನ ಕಾಲಾವಕಾಶ ಕೊಡುತ್ತೇನೆ ಅಲ್ಲಿಗೆ ನೀನು ಭೂಪತಿಯನ್ನು ಬಿಡುತ್ತೇನೆ ಎಂದು ಒಪ್ಪಿಗೆ ಸೂಚಿಸಬೇಕು, ಇಲ್ಲದಿದ್ದರೆ ಶಾಕುಂತಲ ದೇವಿಯನ್ನು ನಾನು ಮುಗಿಸುತ್ತೇನೆ ಎಂದು ನಕ್ಷತ್ರಗೆ ಭಾರ್ಗವಿ ಹೇಳಿದ್ದಾಳೆ. ಇದನ್ನು ಕೇಳಿ ನಕ್ಷತ್ರ ಶಾಕ್‌ಗೆ ಒಳಗಾಗಿದ್ದಾಳೆ.


Click it and Unblock the Notifications











