Lakshana: ಒಬ್ಬಂಟಿಯಾದ ನಕ್ಷತ್ರ: ಮನಸ್ಸಿನಲ್ಲಿ ಡಿವೋರ್ಸ್ ಬಗ್ಗೆ ಚಿಂತೆ

By ಶೃತಿ ಹರೀಶ್ ಗೌಡ

ನಕ್ಷತ್ರ ಈಗ ಯಾವುದನ್ನು ಹೇಳಿಕೊಳ್ಳಲು ಆಗದೇ ಒಬ್ಬಂಟಿ ಯಾಗಿದ್ದಾಳೆ. ಈ ಕಡೆ ತಾನು ಬರೆದಿರುವ ಪತ್ರ ನಕ್ಷತ್ರ ಕೈಗೆ ಸಿಗಬೇಕು ಎಂದು ಅತ್ತಿಗೆ ಮಯೂರಿ ಜೊತೆ ಸೇರಿಕೊಂಡು ಭೂಪತಿ ಪ್ಲ್ಯಾನ್ ಮಾಡಿದ್ದಾನೆ. ಆದರೆ ನಕ್ಷತ್ರ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತಟಸ್ಥವಾಗಿ ಇದ್ದಾಳೆ.

ಮಯೂರಿ, ಭೂಪತಿಯ ಬಳಿ ನೀನು ಬರೆದಿರುವ ಕಾಗದ ನಕ್ಷತ್ರ ಕೈಗೆ ಸಿಗುವಂತೆ ಮಾಡುತ್ತೇನೆ ಎಂದು ಹೇಳಿದ್ದಾಳೆ. ಇದರಿಂದ ಭೂಪತಿಗೆ ತುಂಬಾ ಖುಷಿಯಾಗಿದೆ. ಮಯೂರಿ ನನಗೆ ಟ್ರೀಟ್ ಕೊಡಿಸಬೇಕು ಎಂದು ಕೇಳಿದ್ದಾಳೆ. ಖಂಡಿತವಾಗಿಯೂ ನಾನು ಮತ್ತು ನಕ್ಷತ್ರ ಸೇರಿಕೊಂಡು ನಿಮ್ಮಿಬ್ಬರಿಗೂ ಟ್ರೀಟ್ ಕೊಡಿಸುತ್ತೇನೆ ಎಂದು ಭೂಪತಿ ಅಂದಿದ್ದಾನೆ.

ನಕ್ಷತ್ರ ರೂಮಿಗೆ ಹೋಗಿದ್ದಾಳೆ, ಅಲ್ಲಿರುವ ಕಾಗದವನ್ನು ಸಹ ಓದಿದ್ದಾಳೆ. ಆದರೆ ಏನು ನಡೆಯದಂತೆ ಸುಮ್ಮನೆ ಇದ್ದ ಸ್ಥಳದಲ್ಲಿಯೇ ಕಾಗದವನ್ನು ಇಟ್ಟು ವಾಪಸ್ ಬಂದಿದ್ದಾಳೆ. ಇದರಿಂದಾಗಿ ಭೂಪತಿಗೆ ಕೊಂಚ ಬೇಸರವಾಗಿದೆ ಮಯೂರಿ ಯಾಕೆ ನಕ್ಷತ್ರ ಅಲ್ಲಿ ಕಾಗದವನ್ನು ಓದದೇ ಬಂದಳು ಎಂದು ಅಂದುಕೊಂಡಿದ್ದಾಳೆ.

ಡಿವೋರ್ಸ್ ಕೊಡುವಂತೆ ಒತ್ತಡ

ಡಿವೋರ್ಸ್ ಕೊಡುವಂತೆ ಒತ್ತಡ

ನಕ್ಷತ್ರಗೆ ಡೇವಿಲ್ ಭಾರ್ಗವಿ ಕಣ್ಣೀರನ್ನು ಹಾಕಿಸುತ್ತಿದ್ದಾಳೆ. ನೀನು ಭೂಪತಿಗೆ ಡಿವೋರ್ಸ್ ಕೊಡಲೇಬೇಕು ಎಂದು ಹೇಳುತ್ತಿದ್ದಾಳೆ. ಇಲ್ಲದಿದ್ದರೆ ನಿನ್ನ ಅತ್ತೆಯ ಪ್ರಾಣವನ್ನ ತೆಗೆಯುತ್ತೇನೆ. ನಿನಗೆ ಯಾವುದು ಬೇಕೋ ಆಯ್ಕೆ ಮಾಡಿಕೋ ಎಂದು ನಕ್ಷತ್ರಗೆ ಡೇವಿಲ್ ಬೆದರಿಕೆಯನ್ನು ಹಾಕಿದ್ದಾಳೆ. ನಕ್ಷತ್ರ ಡೇವಿಲ್ ಬಳಿ ಮಾತನಾಡಿ ನಾನು ನಿನಗೆ ಏನು ಮಾಡಿಲ್ಲ ಆದರೂ ಸಹ ನನಗೆ ಯಾಕೆ ಈ ರೀತಿ ತೊಂದರೆ ಕೊಡುತ್ತಿದ್ದೀಯಾ ನೀನು ಒಂದು ಹೆಣ್ಣಾಗಿ ಈ ರೀತಿ ಗಂಡ ಹೆಂಡತಿಯನ್ನು ದೂರ ಮಾಡುವುದು ಸರಿಯೇ ಎಂದು ಪ್ರಶ್ನೆಯನ್ನು ಹಾಕಿದ್ದಾಳೆ.

ಪತ್ರ ಓದಿದ ಮೇಲೆ ಭಾವುಕ

ಪತ್ರ ಓದಿದ ಮೇಲೆ ಭಾವುಕ

ಭೂಪತಿ ಬರೆದಿರುವ ಪತ್ರವನ್ನು ಓದಿದ ನಕ್ಷತ್ರಗೆ ತುಂಬಾನೇ ಅಳು ಬಂದಿದೆ. ಮಿಸ್ತ್ರಿ ನೀನು ನನ್ನನ್ನು ಇಷ್ಟು ಪ್ರೀತಿ ಮಾಡುತ್ತಿದ್ದೀಯಾ ಆದರೆ ನಾನು ನಿನ್ನನ್ನು ಇನ್ನೆರಡು ದಿನಗಳಲ್ಲಿ ಬಿಟ್ಟು ಹೋಗಬೇಕಂತೆ, ಈ ವಿಷಯವನ್ನು ನಾನು ಯಾರ ಬಳಿಯೂ ಹೇಳುವಂತಿಲ್ಲ ಎಂದು ನಕ್ಷತ್ರ ಒಂದೇ ಸಮನೆ ಕಣ್ಣೀರನ್ನು ಹಾಕುತ್ತಿದ್ದಾಳೆ. ನಕ್ಷತ್ರ ಇರುವ ಜಾಗಕ್ಕೆ ಬಂದ ಮಯೂರಿ ಸಹ ಶಾಕ್ ಆಗಿದೆ. ನಕ್ಷತ್ರ ಅಳುವುದನ್ನು ನೋಡಿದ ಮಯೂರಿ ಏನು ಎಂದು ವಿಚಾರಿಸಿದ್ದಾಳೆ ಆದರೆ ನಕ್ಷತ್ರ ಮಯೂರಿಯನ್ನು ತಬ್ಬಿಕೊಂಡು ಜೋರಾಗಿ ಅತ್ತು ಅಲ್ಲಿಂದ ಹೋಗಿದ್ದಾಳೆ.

ಮಾವನಿಗೆ ಮಾತು ಕೊಟ್ಟ ಭೂಪತಿ

ಮಾವನಿಗೆ ಮಾತು ಕೊಟ್ಟ ಭೂಪತಿ

ಪೂಜೆಗೆ ಬರುವಂತೆ ನಕ್ಷತ್ರಾಗೆ ಅವಳ ತಂದೆ ತಾಯಿ ಫೋನ್ ಮಾಡಿದ್ದಾರೆ. ಇದಕ್ಕೆ ನಕ್ಷತ್ರ ಆಯ್ತು ಅಮ್ಮ ಬರುತ್ತೇವೆ ಎಂದು ಹೇಳಿದ್ದಾಳೆ. ಚಂದ್ರಶೇಖರ್ ಮಾತನಾಡುತ್ತಾ ಮಗಳಿಗೆ ಯಾಕೆ ತುಂಬಾ ಬೇಸರದಲ್ಲಿ ಇದ್ದೀಯ ಏನಾಯಿತು ಎಂದು ಕೇಳಿದ್ದಾನೆ.‌ ಇದಕ್ಕೆ ನಕ್ಷತ್ರ ಎನು ಇಲ್ಲ ಅಪ್ಪ ಎಂದು ಹೇಳಿದ್ದಾಳೆ.

ನಕ್ಷತ್ರ ಮನಸ್ಸಿನಲ್ಲಿ ಡಿವೋರ್ಸ್ ಯೋಚನೆ

ನಕ್ಷತ್ರ ಮನಸ್ಸಿನಲ್ಲಿ ಡಿವೋರ್ಸ್ ಯೋಚನೆ

ಭೂಪತಿ ನಕ್ಷತ್ರ ಬಳಿ ಫೋನ್ ತೆಗೆದುಕೊಂಡು ಮಾವನ ಬಳಿ ಮಾತನಾಡಿದ್ದಾನೆ. ಇದೇ ವೇಳೆ ಚಂದ್ರಶೇಖರ್ ನಿಮ್ಮ ಹೆಸರಿನಲ್ಲಿ ಪೂಜೆಯನ್ನು ಮಾಡಿಸುತ್ತಿದ್ದೇನೆ. ದಯವಿಟ್ಟು ನೀವಿಬ್ಬರೂ ಬರಬೇಕು ಎಂದು ಹೇಳಿದ್ದಾರೆ. ಇದಕ್ಕೆ ಖಂಡಿತವಾಗಿಯೂ ಬರುತ್ತೇವೆ ಎಂದು ಭೂಪತಿ ಹೇಳಿದ್ದಾನೆ. ಫೋನ್ ಕಟ್ ಮಾಡಿದ ನಂತರ ಹೊಸ ನಕ್ಷತ್ರ ಬಳಿ ನಾವಿಬ್ಬರು ಪೂಜೆಗೆ ಹೋಗಿ ಬರೋಣ ಎಂದಿದ್ದಾನೆ. ಆದರೆ ನಕ್ಷತ್ರ ಮನಸ್ಸಿನಲ್ಲಿ ಡಿವೋರ್ಸ್ ಕೊಡುವ ಬಗ್ಗೆ ಯೋಚನೆ ಬಂದಿದೆ.

More from Filmibeat

English summary
Colors Kannada serial Lakshana Written Update on March 22th episode. Here is the details about devil targets to sakunthala devi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X