Lakshana : ಭೂಪತಿ ಹಾಗೂ ನಕ್ಷತ್ರ ದೂರ ಮಾಡಲು ಶ್ವೇತಾ ಪ್ಲ್ಯಾನ್: ಶ್ವೇತಾಗೆ ಟಾಂಗ್ ಕೊಟ್ಟ ನಕ್ಷತ್ರ

By ಶೃತಿ ಹರೀಶ್ ಗೌಡ

'ಲಕ್ಷಣ' ಧಾರಾವಾಹಿಯಲ್ಲಿ ಚಂದ್ರಶೇಖರ್ ಮನೆಯಲ್ಲಿ ಪೂಜೆ ಎಲ್ಲವನ್ನು ಮುಗಿದು ಎಲ್ಲರೂ ಹೊರಟಿದ್ದಾರೆ. ಈ ಕಡೆ ಶ್ವೇತಾ, ನಕ್ಷತ್ರ ಹಾಗೂ ಭೂಪತಿ ಸಹ ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾರೆ.

ಕಾರಿನಲ್ಲಿ ಹೋಗುವಾಗ ಶ್ವೇತಾ, ಭೂಪತಿನ ಮಾತಿಗೆ ಎಳೆದಿದ್ದಾಳೆ. ಈ ಬೆಳಕಿನ ಜಾವ ಈ ತಂಪಾದ ಗಾಳಿ ಹಸಿರು ಎಲೆಗಳು ಎಲ್ಲವೂ ಸಹ ಮನಸ್ಸಿಗೆ ಮುದ ನೀಡುತ್ತಿದೆ ಅಲ್ಲವೇ ಭೂಪತಿ ಎಂದು ಹೇಳಿದ್ದಾಳೆ. ಇದಕ್ಕೆ ಭೂಪತಿ ನೀವು ಫೋನಲ್ಲಿ ಮಾತನಾಡುತ್ತಿದ್ದೀರ ಎಂದುಕೊಂಡೆ ಅಂದಿದ್ದಾನೆ.‌ ಈ ವಾತಾವರಣದಲ್ಲಿ ಲಾಂಗ್ ಡ್ರೈವ್ ಹೋದರೆ ಚೆನ್ನಾಗಿ ಇರುತ್ತದೆ ಎಂದು ಶ್ವೇತಾ ಹೇಳಿದ್ದಾಳೆ. ಅದಕ್ಕೆ ಭೂಪತಿ ಕಿಲೋಮೀಟರ್ ಗಟ್ಟಲೆ ಹೋಗಬೇಕಿಲ್ಲ ಸ್ವಲ್ಪ ಸಮಯದಲ್ಲಿಯೇ ಆ ಮನಸ್ಥಿತಿ ಎಂತದ್ದು ಎಂದು ಗೊತ್ತಾಗುತ್ತದೆ ಎಂದು ಶ್ವೇತಾಗೆ ಟಾಂಗ್ ನೀಡಿದ್ದಾನೆ.

ಈ ಕಡೆ ಭೂಪತಿ ಮತ್ತು ನಕ್ಷತ್ರ ಜೊತೆಗೆ ಶ್ವೇತಾ ಮನೆಗೆ ಬಂದಿದ್ದಕ್ಕೆ ಮಯೂರಿ ನೀನು ಎಲ್ಲಿಗೋ ಹೋಗುತ್ತೇನೆ ಎಂದು ಅಂದೆ ಈಗ ಇವರ ಜೊತೆ ಮನೆಗೆ ಬರುತ್ತಿದ್ದಿಯಾ ಎಂದು ಕೇಳುತ್ತಾಳೆ. ಅದಕ್ಕೆ ಶ್ವೇತ ನನ್ನ ಫ್ರೆಂಡ್‌ಗೆ ಆಕ್ಸಿಡೆಂಟ್ ಆಗಿತ್ತು ಬರುವ ದಾರಿಯಲ್ಲಿ ಭಾರ್ಗವಿ ಸಿಕ್ಕಿ ಮಾತನಾಡುತ್ತಿದ್ದೆ ನಕ್ಷತ್ರ ಮನೆಗೆ ಕರೆದುಕೊಂಡು ಹೋದಳು. ಅದಕ್ಕೆ ಅವರ ಜೊತೆ ಬರುತ್ತಿದ್ದೇನೆ ಎಂದು ಸುಳ್ಳು ಹೇಳಿದ್ದಾಳೆ. ಸರಿ ಹೋಗಿ ಫ್ರೆಶ್ ಅಪ್ ಆಗಿ ಬನ್ನಿ ತಿಂಡಿ ಕೊಡುತ್ತೇನೆ ಎಂದು ಮಯೂರಿ ಕರೆದಿದ್ದಾಳೆ.

ಭೂಪತಿ ಮಾತು ಕೇಳಿ ಖುಷಿಯಾದ ನಕ್ಷತ್ರ

ಭೂಪತಿ ಮಾತು ಕೇಳಿ ಖುಷಿಯಾದ ನಕ್ಷತ್ರ

ಶ್ವೇತಾ, ಭೂಪತಿಗೆ ಹತ್ತಿರವಾಗಲು ಏನೇನೋ ಮಾತನಾಡುತ್ತಿದ್ದಾಳೆ. ಆದರೆ ಭೂಪತಿ ಮಾತ್ರ ಚುಚ್ಚಿ ಚುಚ್ಚಿ ಶ್ವೇತಾಗೆ ಮಾತನಾಡಿದ್ದಾನೆ. ಎಲ್ಲವನ್ನು ಕೇಳಿಸಿಕೊಳ್ಳುತ್ತಿರುವ ನಕ್ಷತ್ರ ಮಾತ್ರ ತುಂಬಾ ಖುಷಿಯಾಗಿ ಇದ್ದಾಳೆ. ಶ್ವೇತಾಗೆ ಬೈದು ಅಲ್ಲಿಂದ ಭೂಪತಿ ಹೊರಟು ಹೋದ ಮೇಲೆ ಯಾಕೆ ಸಾಕಾಗ್ಲಿಲ್ವಾ ಮುಖಕ್ಕೆ ಮಂಗಳಾರತಿ ಎಂದು ನಕ್ಷತ್ರ ಶ್ವೇತಾಗೆ ಹೇಳಿದ್ದಾಳೆ. ಇದಕ್ಕೆ ಶ್ವೇತಾ, ನಕ್ಷತ್ರ ಮೇಲೆ ತುಂಬಾ ಕೋಪ ಮಾಡಿಕೊಂಡು ಅಲ್ಲಿಂದ ಹೊರಟು ಹೋಗಿದ್ದಾಳೆ. ನನ್ನ ಬಗ್ಗೆ ಸತ್ಯ ಗೊತ್ತಾಗಿದ್ದು ತುಂಬಾ ಒಳ್ಳೆಯದೇ ಆಯಿತು ಎಂದು ನಕ್ಷತ್ರ ಮನಸ್ಸಿನಲ್ಲಿಯೇ ಅಂದುಕೊಂಡು ಅಲ್ಲಿಂದ ಹೋಗಿದ್ದಾಳೆ.

ಶ್ವೇತಾಗೆ ಬುದ್ಧಿ ಕಲಿಸಿದ ನಕ್ಷತ್ರ

ಶ್ವೇತಾಗೆ ಬುದ್ಧಿ ಕಲಿಸಿದ ನಕ್ಷತ್ರ

ನಕ್ಷತ್ರ ಮನಸ್ಸು ನೋಯಿಸಲು ಶ್ವೇತಾ, ನಕ್ಷತ್ರ ಬಟ್ಟೆ ಮಡಚುತ್ತಿರುವ ಜಾಗಕ್ಕೆ ಬಂದಿದ್ದಾಳೆ. ಇದೇ ವೇಳೆ ಶ್ವೇತಾಳನ್ನು ನಕ್ಷತ್ರ ಯಾಕೆ ನಿದ್ದೆ ಬರಲಿಲ್ವಾ ಎಂದು ಕೇಳಿದ್ದಾಳೆ. ಅದಕ್ಕೆ ಇಲ್ಲ ಹಳೆಯದೆಲ್ಲಾ ನೆನಪಾಗುತ್ತಿದೆ ಎಂದು ಶ್ವೇತಾ, ನಕ್ಷತ್ರ ಬಳಿ ಹೇಳಿದ್ದಾಳೆ. ಇನ್ನು ಮುಂದುವರಿದು ಮಾತನಾಡಿದ ಶ್ವೇತಾ ಕಳೆದ ವರ್ಷ ನನ್ನನ್ನು ಸೊಸೆ ಸೊಸೆ ಎನ್ನುತ್ತಿದ್ದರು. ಈ ವರ್ಷ ನೀನು ಈ ಮನೆಯ ಸೊಸೆಯಾಗಿ ಹಬ್ಬ ಆಚರಣೆ ಮಾಡುತ್ತಿದ್ದೀಯ ಮುಂದಿನ ವರ್ಷ ಹಬ್ಬ ಆಚರಣೆ ನಿನ್ನ ಲೈಫ್‌ನಲ್ಲಿ ಇರುವುದಿಲ್ಲ ಇದೆಲ್ಲವೂ ಚೇಂಜ್ ಆಗುತ್ತದೆ ಎಂದು ಹೇಳಿದ್ದಾಳೆ.

ಶ್ವೇತಾಗೆ ನಕ್ಷತ್ರ ಟಾಂಗ್

ಶ್ವೇತಾಗೆ ನಕ್ಷತ್ರ ಟಾಂಗ್

ಇದಕ್ಕೆ ಸಾಕಿದ ಮಗಳು ಆಸ್ತಿಯನ್ನು ಹೊಡೆಯಲು ಅಪ್ಪನನ್ನೇ ಸಾಯಿಸಲು ಹೋದ ಮಗಳು ಜೈಲು ಪಾಲು ಎಂದು ಪೇಪರ್‌ನಲ್ಲಿ ಬಂದಿದೆ ಎಂದು ನಕ್ಷತ್ರಾ ಹೇಳುತ್ತಿದ್ದಾಳೆ. ಇದನ್ನೆಲ್ಲಾ ಕೇಳಿಸಿಕೊಂಡ ಶ್ವೇತಾಗೆ ತುಂಬಾ ಕೋಪ ಬಂದಿದೆ. ನಿನಗೂ ಇದೇ ಗತಿಯಾಗುತ್ತದೆ. ಶ್ವೇತಾ ನಮ್ಮ ಅಪ್ಪ ನಿನ್ನ ಮೇಲೆ ಕಂಪ್ಲೇಂಟ್ ಕೊಟ್ಟರೆ ಎಂದು ಶ್ವೇತಾಗೆ ನಕ್ಷತ್ರ ಟಾಂಗ್‌ ನೀಡಿದ್ದಾಳೆ.‌

ಭೂಪತಿ- ನಕ್ಷತ್ರ ನೋಡಿ ಶ್ವೇತಾಗೆ ಹೊಟ್ಟೆಕಿಚ್ಚು

ಭೂಪತಿ- ನಕ್ಷತ್ರ ನೋಡಿ ಶ್ವೇತಾಗೆ ಹೊಟ್ಟೆಕಿಚ್ಚು

ನಕ್ಷತ್ರ ಅಡುಗೆಮನೆಯಲ್ಲಿ ಅಡುಗೆ ಮಾಡುತ್ತಿದ್ದಾಳೆ. ಅಲ್ಲಿಗೆ ಬಂದ ಭೂಪತಿ ನಕ್ಷತ್ರಾಗೆ ಹೆಲ್ಪ್ ಮಾಡುತ್ತೇನೆ ಅನ್ನುತ್ತಿದ್ದಾನೆ. ಆದರೆ ನಕ್ಷತ್ರ ಬೇಡ ಎಂದು ಹೇಳುತ್ತಿದ್ದಾಳೆ. ಮಯೂರಿ ಬಂದು ಇಬ್ಬರನ್ನು ಸಮಾಧಾನ ಮಾಡಿದ್ದಾರೆ. ಅಲ್ಲಿಂದ ಹೋದ ನಂತರ ನಕ್ಷತ್ರ ಮತ್ತು ಭೂಪತಿಯ ಅನ್ಯೂನತೆಯನ್ನು ಕಂಡು ಶ್ವೇತಾ ಹೊಟ್ಟೆಕಿಚ್ಚು ಪಟ್ಟಿದ್ದಾಳೆ.

More from Filmibeat

English summary
Colors Kannada serial Lakshana Written Update on March 2nd episode. Here is the details about bhupati tongue to sweetha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X