Lakshana serial: ಭೂಪತಿ ಬಳಿ ಚಾಲೆಂಜ್ ಹಾಕಿದ ಮಯೂರಿ

By ಶೃತಿ ಹರೀಶ್ ಗೌಡ

ಈವರೆಗೆ ಲಕ್ಷಣ ಧಾರಾವಾಹಿಯಲ್ಲಿ ಭೂಪತಿ ಹಾಗೂ ನಕ್ಷತ್ರ ಇಬ್ಬರು ಸೇರಿ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾರೆ. ಇದನ್ನು ನೋಡುತ್ತಿರುವ ಶ್ವೇತಾಗೆ ತುಂಬಾ ಹೊಟ್ಟೆ ಉರಿ ಬಂದಿದೆ. ಇವರಿಬ್ಬರನ್ನು ಹೀಗೆ ಬಿಡಬಾರದು ಎಂದು ಶ್ವೇತ ಅಂದುಕೊಳ್ಳುತ್ತಿದ್ದಾಳೆ.

ಈ ಕಡೆ ಭೂಪತಿ ಮತ್ತು ನಕ್ಷತ್ರ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಿದ್ದರೆ, ಅದನ್ನು ನೋಡುತ್ತಿರುವ ಶ್ವೇತಾಗೆ ತುಂಬಾ ಕೋಪ ಬಂದಿದೆ. ಅವರಿಬ್ಬರನ್ನು ಡಿಸ್ಟರ್ಬ್ ಮಾಡಬೇಕು ಎಂದು ಅಲ್ಲೇ ಟೇಬಲ್ ಮೇಲೆ ಇದ್ದ ಸ್ಪೂನನ್ನು ಕೆಳಗಡೆ ಎಸೆದಿದ್ದಾಳೆ. ಇದರಿಂದ ಎಚ್ಚೆತ್ತುಕೊಂಡ ನಕ್ಷತ್ರ ಹಾಗೂ ಭೂಪತಿ ಬೇರೆಯಾಗಿದ್ದಾರೆ. ನಂತರ ನಕ್ಷತ್ರಗೆ ಭೂಪತಿ ರೆಸ್ಟ್ ಮಾಡಲು ಹೇಳಿದ್ದಾನೆ.

Colors Kannada serial Lakshana Written Update on March 3rd episode

ಅಲ್ಲೇ ಇದ್ದ ಶ್ವೇತಾಳನ್ನ ನೋಡಿದ ಭೂಪತಿಗೆ ತುಂಬಾ ಕೋಪ ಬಂದಿದೆ.‌ ಭೂಪತಿ ನಾನು ಏನಾದರೂ ನಿನಗೆ ಹೆಲ್ಪ್ ಮಾಡ್ಲಾ ಎಂದು ಶ್ವೇತಾ ಕೇಳಿದ್ದಾಳೆ. ಅದಕ್ಕೆ ಭೂಪತಿ ನನಗೆ ಒಂದು ಸಹಾಯ ಮಾಡೋಕಾಗುತ್ತಾ ಎಂದು ಶ್ವೇತಾಗೆ ಹೇಳಿದ್ದಾನೆ. ಏನು ಹೇಳು ಭೂಪತಿ ಎಂದು ಶ್ವೇತ ಕೇಳಿದ್ದಾಳೆ ಅದಕ್ಕೆ ದಯವಿಟ್ಟು ಗಂಡ ಹೆಂಡತಿ ಮಧ್ಯೆ ಬರಬೇಡ ಎಂದು ಶ್ವೇತಾಗೆ ಭೂಪತಿ ಬೈದಿದ್ದಾನೆ.‌ ನಂತರ ಶ್ವೇತಾ ಅಡುಗೆಮನೆಯಿಂದ ಹೊರಗೆ ಕೋಪ ಮಾಡಿಕೊಂಡು ಹೋಗಿದ್ದಾಳೆ.

ಈ ಕಡೆ ದಿನದಿಂದ ದಿನಕ್ಕೆ ನಕ್ಷತ್ರ ಹಾಗೂ ಭೂಪತಿ ಹತ್ತಿರವಾಗುತ್ತಿರುವುದಕ್ಕೆ ಶ್ವೇತಾ ಭಾರ್ಗವಿಗೆ ಕರೆ ಮಾಡಿದ್ದಾಳೆ. ಎಲ್ಲವನ್ನು ನನ್ನ ಕಣ್ಣಿನಿಂದ ನೋಡಲು ಆಗುತ್ತಿಲ್ಲ ಈ ಕಡೆ ಭಾರ್ಗವಿ ಬೇರೆ ಫೋನ್ ಎತ್ತುತ್ತಿಲ್ಲ ಇವಳು ಯಾವ ಯೋಜನೆ ಮಾಡಿದ್ದಾಳೆ ಎಂದು ಸಹ ಗೊತ್ತಿಲ್ಲ ಎಂದು ಗೊಣಗುತ್ತಿದ್ದಾಳೆ.

ನಂತರ ಭಾರ್ಗವಿ ಮಗಳಾದ ಮಿಲ್ಲಿಗೆ ಕರೆ ಮಾಡಿ ನಿಮ್ಮ ಅಮ್ಮ ಎಲ್ಲಿ ಎಂದು ಕೇಳಿದ್ದಾಳೆ. ಇದಕ್ಕೆ ಮಿಲ್ಲಿ ನನಗೆ ಗೊತ್ತಿಲ್ಲ ನನಗೂ ಸಹ ಅಮ್ಮ ಫೋನ್ ಮಾಡಿಲ್ಲ ಯಾವುದೋ ಒಂದು ವಿಚಾರವನ್ನು ಇಟ್ಟುಕೊಂಡು ಬ್ಲಾಕ್ ಮಾಡುತ್ತಿದ್ದೀಯಾ ಅದು ಸರಿಯಲ್ಲ ಎಂದು ಹೇಳಿದ್ದಾಳೆ. ಇದಕ್ಕೆ ಶ್ವೇತಾ ಕೋಪದಿಂದ ಫೋನನ್ನು ಕಟ್ ಮಾಡಿದ್ದಾಳೆ.

Colors Kannada serial Lakshana Written Update on March 3rd episode

ಈ ಕಡೆ ಮಯೂರಿ ಅಡುಗೆ ಮನೆಗೆ ಬಂದು ಭೂಪತಿಯನ್ನ ರೇಗಿಸುತ್ತಿದ್ದಾಳೆ. ಹೆಂಡತಿಗೆ ಕಷ್ಟವಾಗಬಾರದು ಎಂದು ಕೊನೆಗೆ ನೀನೆ ಅಡುಗೆ ಮಾಡುತ್ತಿದ್ದೀಯಾ ಎಂದು ಹೇಳಿದ್ದಾಳೆ. ಇದಕ್ಕೆ ಭೂಪತಿ ಆ ರೀತಿ ಏನು ಇಲ್ಲ ಎಂದು ಹೇಳಿದ್ದಾನೆ. ಅದಕ್ಕೆ ಮಯೂರಿ ಹೌದು ನನಗೆ ಗೊತ್ತಿದೆ ನೀನು ಹೀಗೆ ಹೇಳುತ್ತೀಯಾ ಎಂದು ಅದು ಪ್ರೀತಿ ಅಲ್ಲ ಕಾಳಜಿ ಎಂದು ಹೇಳುವ ಮೂಲಕ ಮಯೂರಿಗೆ ಹೇಳಿದ್ದಾನೆ.

ಇದಕ್ಕೆ ಮಯೂರಿ ನಿನಗೆ ನಕ್ಷತ್ರ ಮೇಲೆ ಇರುವುದು ಪ್ರೇಮವೇ ಆದರೆ ನಿನಗೆ ಅರ್ಥವಾಗುತ್ತಿಲ್ಲ ನಾನು ನಿನಗೆ ಚಾಲೆಂಜ್ ಮಾಡಿ ಹೇಳುತ್ತಿದ್ದೇನೆ ನೀನು ನಕ್ಷತ್ರಳನ್ನು ಪ್ರೀತಿ ಮಾಡುತ್ತಿರುವುದನ್ನು ನಾನು ನಿನಗೆ ಅರ್ಥ ಮಾಡಿಸುತ್ತೇನೆ ಎಂದು ಮಯೂರಿ ಹೇಳಿದ್ದಾಳೆ. ರೂಮಿಗೆ ಬಂದ ಭೂಪತಿ ನನಗೆ ನಿಜವಾಗಲೂ ನಕ್ಷತ್ರ ಮೇಲೆ ಪ್ರೀತಿ ಆಗಿದೆಯಾ ಎಂದು ತನ್ನನ್ನೇ ತಾನು ಕೇಳಿಕೊಳ್ಳುತ್ತಿದ್ದಾನೆ. ಇದೇ ವೇಳೆ ನಕ್ಷತ್ರಗಳನ್ನು ಕೈ ಹಿಡಿದುಕೊಂಡಿದ್ದನ್ನು ನೆನಪಿಸಿಕೊಳ್ಳುತ್ತಿದ್ದಾನೆ.

ನಕ್ಷತ್ರ ಮೇಲೆ ಭೂಪತಿಗೆ ಪ್ರೀತಿ ಇದೆ ಎಂದು ಗೊತ್ತು ಮಾಡಿಸಬೇಕು ಎಂದು ಚಾಲೆಂಜ್ ಮಾಡಿದ್ದನ್ನು ಮೌರ್ಯ ಬಳಿ ಮಯೂರಿ ಹಂಚಿಕೊಳ್ಳುತ್ತಿದ್ದಾಳೆ. ಇದಕ್ಕೆ ಮೌರ್ಯ ಅತ್ತಿಗೆ ನಾನು ಸಹಾಯ ಮಾಡುತ್ತೇನೆ ಅಣ್ಣನಿಗೆ ತಾನು ನಕ್ಷತ್ರ ಅತ್ತಿಗೆ ಪ್ರೀತಿ ಮಾಡುತ್ತಿರುವುದನ್ನು ಹೊರಗೆ ಬರಲು ನಾನು ಸಹ ಹೆಲ್ಪ್ ಮಾಡುತ್ತೇನೆ ಎಂದು ಮಯೂರಿಗೆ ಧೈರ್ಯವನ್ನು ತುಂಬಿದ್ದಾನೆ.

ಈ ಕಡೆ ಮಯೂರಿ ನಕ್ಷತ್ರಾಳಿಗೆ ಮೌನ ವ್ರತ ಮಾಡು ಯಾವಾಗ ಭೂಪತಿ ಕಂಡರೂ ಸಹ ನೀನು ಅವನ ಬಳಿ ಮಾತನಾಡಬೇಡ ಎಂದು ಹೇಳುತ್ತಿದ್ದಾಳೆ. ಇದಕ್ಕೆ ನಕ್ಷತ್ರ ಓಕೆ ಎಂದು ಹೇಳಿದ್ದಾಳೆ. ಭೂಪತಿ ನಕ್ಷತ್ರಾಳನ್ನು ತಿಂಡಿ ಕೊಡು ಕಾಫಿ ಕೊಡು ಎಂದು ಕೇಳಿದಾಗ ನಕ್ಷತ್ರ ಮಾತ್ರ ಮೌನವಾಗಿಯೇ ಇದ್ದಾಳೆ.‌ ಭೂಪತಿ ನಕ್ಷತ್ರ ಮಾತನಾಡದ್ದನ್ನು ಕಂಡು ಯಾಕೆ ಎಂದು ಕೇಳಿದಾಗ ಮಯೂರಿ ನಕ್ಷತ್ರ ಮೌನ ವ್ರತ ಮಾಡುತ್ತಿದ್ದಾಳೆ ಎಂದು ಹೇಳಿದ್ದಾಳೆ.

More from Filmibeat

English summary
Colors Kannada serial Lakshana Written Update on March 3rd episode. Here is the details about mayuri challenge to bhupati
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X