Lakshana: ನಕ್ಷತ್ರಗೆ ಬ್ಲಾಕ್ ಮೇಲ್ ಮೆಸೇಜ್: ಹೊಸ ಆಟ ಶುರು ಮಾಡಿದ ಡೆವಿಲ್
'ಲಕ್ಷಣ' ಧಾರಾವಾಹಿಯಲ್ಲಿ ಭೂಪತಿ ಮತ್ತು ನಕ್ಷತ್ರ ಇಬ್ಬರನ್ನು ಒಂದು ಮಾಡಲು ಮಯೂರಿ ಒಂದು ಹೊಸ ಪ್ಲ್ಯಾನ್ ಮಾಡಿದ್ದಾಳೆ. ನಕ್ಷತ್ರಳನ್ನು ಮೌನವ್ರತ ಮಾಡುವಂತೆ ಹೇಳಿ ಭೂಪತಿಯ ಬಳಿ ಮಾತನಾಡದಂತೆ ಮಾಡಿದ್ದಾಳೆ.
ನಕ್ಷತ್ರ, ಭೂಪತಿ ಹತ್ತಿರ ಬಂದು ಕ್ಯಾರಿಯರ್ ಬ್ಯಾಗನ್ನು ತೆಗೆದುಕೊಂಡು ಬಂದು ಊಟ ತೆಗೆದುಕೊಂಡು ಹೋಗು ಎಂದಿದ್ದಾಳೆ. ಕ್ಷಣಕ್ಕೆ ಭೂಪತಿ ನೀನು ಮಾತನಾಡಿದ್ಯ ಎಂದು ಕೇಳಿದ್ದಾನೆ. ಅದಕ್ಕೆ ನಕ್ಷತ್ರ ಮೌನವಾಗಿಯೇ ಇಲ್ಲ ಎಂದು ಸನ್ನೆಯನ್ನು ಮಾಡಿದ್ದಾಳೆ. ಭೂಪತಿ ಸಿಕ್ಕಿದ್ದೇ ಚಾನ್ಸ್ ಎಂದುಕೊಂಡು ನಕ್ಷತ್ರಳನ್ನು ರೇಗಿಸುತ್ತಿದ್ದಾನೆ. ನಕ್ಷತ್ರ ನೀನು ಇವತ್ತು ಪೂರ್ತಿ ದಿನ ಮಾತನಾಡುವುದಿಲ್ಲ ಎಷ್ಟು ಖುಷಿಯಾಗುತ್ತಿದೆ ಗೊತ್ತಾ ನೀನು ಮಾತನಾಡದೆ ಇರುವುದಕ್ಕೆ ಮನೆಯ ತುಂಬೆಲ್ಲ ಮೌನ ಆವರಿಸಿದೆ, ಶಾಂತವಾಗಿದೆ ಎಂದು ಹೇಳಿ ನಕ್ಷತ್ರಾಳನ್ನ ರೇಗಿಸಿದ್ದಾನೆ.
ನೀನು ಹೇಳುತ್ತಿಯಲ್ಲ ಆ ಕಥೆಯನ್ನ ಮುಂದುವರಿಸು ನಾನು ಇವತ್ತು ಕಥೆ ಕೇಳುತ್ತೇನೆ ಎಂದು ನಕ್ಷತ್ರಕ್ಕೆ ಹೇಳಿದ್ದಾನೆ. ಇದರಿಂದ ನಕ್ಷತ್ರಗೆ ತುಂಬಾ ಕೋಪ ಬರುತ್ತಿದೆ. ಅದಕ್ಕೆ ಭೂಪತಿ ಸಿಕ್ಕಿದ್ದೇ ಚಾನ್ಸ್ ಎಂದುಕೊಂಡು ನಿನ್ನನ್ನ ರೇಗಿಸುತ್ತಿದ್ದೇನೆ ಸಮಯ ನಮಗೂ ಸಿಗುತ್ತದೆ. ಆಹಾ ಎಷ್ಟು ಖುಷಿಯಾಗುತ್ತಿದೆ ನೀನು ಮಾತನಾಡದೆ ಇರುವುದನ್ನು ನೋಡಿದರೆ ಎಂದು ಹೊಟ್ಟೆ ಉರಿಸುತ್ತಿದ್ದಾನೆ. ಈ ಕಡೆ ಭೂಪತಿ ಆಫೀಸಿಗೆ ಹೋಗುವಾಗ ನಕ್ಷತ್ರ ಬೆನ್ನಿನ ಹಿಂದೆ ಹೊಡೆಯಲು ಹೋಗಿ ಸುಮ್ಮನೆ ಆಗಿದ್ದಾಳೆ.

ನಕ್ಷತ್ರಗೆ ಬಂತು ಬ್ಲಾಕ್ ಮೇಲ್ ಮೆಸೇಜ್
ನಕ್ಷತ್ರ ಗೆದ್ದೇವಿ ಇಲ್ಲಿ ಬ್ಲಾಕ್ ಮೇಲ್ ಮಾಡುವ ಮೆಸೇಜನ್ನು ಕಳಿಸಿದ್ದಾಳೆ ನೀನು ಖುಷಿಯಾಗಿದ್ದೀಯಾ ಎಂದು ನನಗೆ ಗೊತ್ತು ಆದರೆ ಈ ಖುಷಿ ನಿನ್ನಲ್ಲಿ ತುಂಬಾ ದಿನ ಉಳಿಯುವುದಿಲ್ಲ ಎಂದು ಮೆಸೇಜ್ ಮಾಡಿದ್ದಾಳೆ. ಈ ಮೆಸೇಜನ್ನು ಓದಿದ ನಕ್ಷತ್ರ ಶಾಕ್ ಆಗಿದ್ದಾಳೆ. ಮತ್ತೆ ನಕ್ಷತ್ರ ಆ ನಂಬರ್‌ಗೆ ಫೋನ್ ಮಾಡಲು ನೋಡಿದ್ದಾಳೆ. ಆದರೆ ಕರೆ ಕನೆಕ್ಟ್ ಆಗದೆ ಕಟ್ ಆಗಿದೆ. ಇದಕ್ಕೆ ಇದೇನು ಬರೀ ಮೆಸೇಜ್ ಬರುತ್ತಿದೆ ಫೋನ್ ಕನೆಕ್ಟ್ ಆಗುತ್ತಿಲ್ಲ ಎಂದುಕೊಂಡಿದ್ದಾಳೆ. ಆ ಕಡೆಯಿಂದ ಮತ್ತೊಂದು ರಿಪ್ಲೇ ಬಂದಿದೆ ನೀನು ಫೋನ್ ಮಾಡುತ್ತೀಯಾ ಎಂದು ಗೊತ್ತು. ಆದರೆ ಫೋನ್ ಬರೋದಿಲ್ಲ ಎಂದಿದ್ದಾರೆ. ಇದನ್ನು ಮತ್ತೆ ಓದಿದ ನಕ್ಷತ್ರಗೆ ಮತ್ತಷ್ಟು ಶಾಕ್ ಆಗಿದೆ.

ಭಾರ್ಗವಿಗೆ ಕಾಲ್ ಮಾಡಿದ ಶ್ವೇತಾ
ಮತ್ತೊಂದು ಮೆಸೇಜ್ ಮಾಡಿದ್ದಾಳೆ ಒಲೆಯ ಮೇಲೆ ಹಾಲಿಟ್ಟಿದ್ದೀಯ ಅಲ್ಲಿ ಯಾರು ಇಲ್ಲ ಹೋಗು ಹಾಲು ಉಕ್ಕುತ್ತಿದೆ ಹೋಗಿ ಸ್ಟವ್ ಆಫ್ ಮಾಡು ಎಂದು ಹೇಳಿದ್ದಾಳೆ. ಈ ಮೇಸೇಜ್ ನೋಡಿದ ನಕ್ಷತ್ರ ಹೋಗಿ ಹಾಲನ್ನು ಆಫ್ ಮಾಡಿದ್ದಾಳೆ. ಶ್ವೇತಾ ನಿಂತಿರುವುದನ್ನು ನೋಡಿದ ನಕ್ಷತ್ರ, ಶ್ವೇತಾ ಮೇಲೆ ಅನುಮಾನ ಪಟ್ಟಿದ್ದಾಳೆ. ನೀನು ಬದಲಾಗಿದ್ದೀಯಾ ಎಂದುಕೊಂಡೆ ಕೊನೆಗೂ ನೀನು ಬದಲಾಗಲಿಲ್ಲ ಯಾಕೆ ಈ ರೀತಿ ಮಾಡಿದ್ದೀಯಾ ಎಂದು ಕೇಳಿದ್ದಾಳೆ. ನಾನು ಏನು ಮಾಡಿದೆ ಎಂದು ಶ್ವೇತ ಕೇಳುತ್ತಿದ್ದಾಳೆ. ಎಲ್ಲಿಂದಲ್ಲಿಗೆ ಮೆಸೇಜ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದೀಯಾ ಎಂದು ಶ್ವೇತಾಗೆ ನಕ್ಷತ್ರ ಕೇಳಿದ್ದಾಳೆ. ಇದಕ್ಕೆ ನಾನಲ್ಲ ಎಂದು ಶ್ವೇತಾ ಹೇಳಿದ್ದಾಳೆ.

ಮಿಲ್ಲಿಗೆ ಬೈದ ಭಾರ್ಗವಿ
ಈ ಕಡೆ ಶ್ವೇತಾ, ಭಾರ್ಗವಿಗೆ ಫೋನ್ ಮಾಡಿ ಮೇಸೇಜ್ ಬಗ್ಗೆ ಕೇಳಿದ್ದಾಳೆ. ಅದಕ್ಕೆ ಭಾರ್ಗವಿ ನಾನೇ ಹಾಲು ಉಕ್ಕುವ ರೀತಿ ಮಾಡಿದ್ದು ಎಂದು ಹೇಳಿ ಕಬ್ಬಿಣ ಕಾದಾಗಲೇ ಬಡಿಯಬೇಕು, ಅದಕ್ಕೆ ನಾನು ಕಬ್ಬಿಣವನ್ನು ಕಾಯಿಸುತ್ತಿದ್ದೇನೆ ಎಂದು ಭಾರ್ಗವಿ ಹೇಳಿದ್ದಾಳೆ. ಇದಕ್ಕೆ ಏನಾದ್ರು ಮಾಡು ಮೊದಲು ಅವರಿಬ್ಬರನ್ನು ಅದಷ್ಟು ಬೇಗ ದೂರ ಮಾಡು ಎಂದು ಶ್ವೇತಾ ಹೇಳಿದ್ದಾಳೆ. ಈ ಕಡೆ ಮಿಲ್ಲಿ ಅಮ್ಮನ ಬಳಿ ಪ್ಲ್ಯಾನ್ ಬಗ್ಗೆ ಕೇಳಿದ್ದಾಳೆ. ಇದಕ್ಕೆ ನೀನು ನನ್ನ ಮಗಳಾ ಎಂದು ಮಿಲ್ಲಿಗೆ ಭಾರ್ಗವಿ ಬೈದಿದ್ದಾಳೆ.

ಟೆನ್ಶನ್ ಮಾಡಿಕೊಂಡ ಭೂಪತಿ
ಮಯೂರಿ ಹಾಗೂ ನಕ್ಷತ್ರ ಮಾತನಾಡುತ್ತಿರುವುದನ್ನು ಶ್ವೇತಾ ಕೇಳಿಸಿಕೊಂಡಿದ್ದಾಳೆ. ನೀನು ಇವರಿಬ್ಬರನ್ನು ಹತ್ತಿರ ಮಾಡು ನಾನು ದೂರ ಮಾಡುತ್ತೇನೆ ಎಂದು ಶ್ವೇತಾ ಅಂದುಕೊಂಡಿದ್ದಾಳೆ. ಈ ಕಡೆ ನಕ್ಷತ್ರ ಮೌರ್ಯಾನಿಗೆ ಸ್ವೀಟನ್ನು ತೆಗೆದುಕೊಂಡು ಹೋಗಿದ್ದಾಳೆ. ಭೂಪತಿ ಕರೆ ಮಾಡಿದರು ಸಹ ನಕ್ಷತ್ರ ಸ್ವೀಕರಿಸುತ್ತಿಲ್ಲ ಇದರಿಂದ ಭೂಪತಿ ಟೆನ್ಶನ್ ಆಗಿದ್ದಾನೆ.


Click it and Unblock the Notifications











