Lakshana: ನಕ್ಷತ್ರ ಮೇಲೆ ಭೂಪತಿಗೆ ಪ್ರೀತಿ: ಶ್ವೇತಾಗೆ ಇಬ್ಬರನ್ನು ದೂರ ಮಾಡುವ ಚಿಂತೆ

By ಶೃತಿ ಹರೀಶ್ ಗೌಡ

'ಲಕ್ಷಣ' ಧಾರಾವಾಹಿಯಲ್ಲಿ ನಕ್ಷತ್ರಳನ್ನು ಭೂಪತಿ ರೇಗಿಸುತ್ತಿದ್ದಾನೆ. ನೀನು ಮೌನ ವ್ರತ ಮಾಡುತ್ತಿರುವುದು ಚೆನ್ನಾಗಿದೆ. ಸದ್ಯ ಇವತ್ತು ಮನೆಯಲ್ಲವೂ ನಿಶಬ್ದವಾಗಿ ಇದೆ. ನೀನು ದಿನ ಮೌನ ವ್ರತ ಮಾಡು ಎಂದು ನಕ್ಷತ್ರಗೆ ಕೋಪವನ್ನು ಬರಿಸುತ್ತಿದ್ದಾನೆ.

ನಕ್ಷತ್ರ, ಮೌರ್ಯನ ಮನೆಗೆ ಬಂದಿದ್ದಾಳೆ ಅವಳು ಕಾಲ್ ಪಿಕ್ ಮಾಡಿ ಮಾತನಾಡದ್ದನ್ನು ಕಂಡು ಭೂಪತಿ ತುಂಬಾ ಟೆನ್ಶನ್ ಆಗಿದ್ದಾನೆ. ಯಾಕೆ ಈ ರೀತಿ ಮಾಡುತ್ತಿದ್ದಾಳೆ ಎಂದು ಅಂದುಕೊಂಡಿದ್ದಾನೆ. ನಂತರ ಮಯೂರಿಯ ಬಳಿ ಬಂದು ನಕ್ಷತ್ರ ಎಲ್ಲಿಗೆ ಹೋದಳು ಎಂದು ಕೇಳಿದ್ದಾನೆ. ಇದಕ್ಕೆ ಮಯೂರಿ ಅವಳು ಮೌರ್ಯನ ಮನೆಗೆ ಹೋಗಿದ್ದಾಳೆ ಎಂದು ಹೇಳಿದ್ದಾಳೆ. ಹೌದಾ ಎಂದುಕೊಂಡು ಸುಮ್ಮನೆ ಮನೆಯೊಳಗೆ ಹೋಗಿದ್ದಾನೆ.

ನಂತರ ರೂಮಿನಿಂದಲೇ ನಕ್ಷತ್ರ ಕಾಫಿ ಕೊಡು ಎಂದು ಎರಡು ಬಾರಿ ಕರೆದಿದ್ದಾನೆ. ಆದರೆ ನಕ್ಷತ್ರ ಮನೆಯಲ್ಲಿ ಇಲ್ಲದೆ ಇರುವುದು ನಂತರ ಭೂಪತಿಗೆ ಗೊತ್ತಾಗಿದೆ. ಅಷ್ಟರಲ್ಲಿ ರೂಮಿಗೆ ಬಂದ ಮಯೂರಿ ನಾನೇ ಕಾಫಿಯನ್ನ ತಂದುಕೊಡುತ್ತೇನೆ. ನೀನು ನಕ್ಷತ್ರಗಳನ್ನು ಅಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೀಯ ಎಂದು ಕೇಳಿದ್ದಾಳೆ. ಇದಕ್ಕೆ ಭೂಪತಿ ಹಾಗೇನು ಇಲ್ಲ ಅತ್ತಿಗೆ ಎಂದು ಅಲ್ಲಿಂದ ಕಾರ್‌ನಲ್ಲಿ ಮೌರ್ಯನ ಮನೆಗೆ ಹೊರಟಿದ್ದಾನೆ.

ಭೂಪತಿ ಪ್ರೀತಿ ನೋಡಿ ನಕ್ಷತ್ರ ಕಣ್ಣೀರು

ಭೂಪತಿ ಪ್ರೀತಿ ನೋಡಿ ನಕ್ಷತ್ರ ಕಣ್ಣೀರು

ಒಂದು ಕ್ಷಣವು ಮನೆಯಲ್ಲಿ ಇರದೇ ಮೌರ್ಯನ ಮನೆಗೆ ಭೂಪತಿ ಬರುತ್ತಿದ್ದಾನೆ. ಈ ಕಡೆ ಮೌರ್ಯ ಅತ್ತಿಗೆಯ ಬಳಿ ನೀವು ಭೂಪತಿ ಅಣ್ಣ ಬಂದ ತಕ್ಷಣವೇ ಇಲ್ಲೇ ಎಲ್ಲಾದರೂ ಕೇಳಿಸಿಕೊಳ್ಳುವ ರೀತಿ ಅಡಗಿಕೊಳ್ಳಿ ಎಂದು ಹೇಳುತ್ತಿದ್ದಾನೆ. ಮೌರ್ಯನ ಮಾತನ್ನ ಕೇಳಿ ಒಮ್ಮೆ ನಕ್ಷತ್ರಗೆ ಶಾಕ್ ಆಗಿದೆ.‌ ಇನ್ನೇನು ಭೂಪತಿ ಬರುವುದನ್ನು ನೋಡಿದ ಮೌರ್ಯ ಅತ್ತಿಗೆ ಹೋಗಿ ನೀವು ಇಲ್ಲೇ ಎಲ್ಲಾದರೂ ಅಡಗಿಕೊಳ್ಳಿ ಎಂದು ಹೇಳಿದ್ದಾನೆ.

ದೇವಸ್ಥಾನಕ್ಕೆ ಓಡಿದ ಭೂಪತಿ

ದೇವಸ್ಥಾನಕ್ಕೆ ಓಡಿದ ಭೂಪತಿ

ಮನೆಗೆ ಬಂದ ಭೂಪತಿ ನಕ್ಷತ್ರ, ನಕ್ಷತ್ರ ಎಂದು ಕೂಗಿದ್ದಾನೆ. ನಕ್ಷತ್ರ ಇಲ್ಲದನ್ನು ನೋಡಿ ಬೇಸರ ಮಾಡಿಕೊಂಡಿದ್ದಾನೆ. ಮೌರ್ಯನ ಬಳಿ ನಕ್ಷತ್ರ ಎಲ್ಲಿಗೆ ಹೋದಳು ಎಂದು ಕೇಳಿದ್ದಾನೆ. ಇದಕ್ಕೆ ದೇವಸ್ಥಾನಕ್ಕೆ ಹೋದರು ಎಂದು ಮೌರ್ಯ ಹೇಳಿದ್ದಾನೆ. ಈ ಕಡೆ ಮೌರ್ಯನನ್ನು ಆರೋಗ್ಯ ಚೆನ್ನಾಗಿ ನೋಡಿಕೋ ಎಂದು ಹೇಳಿ ಭೂಪತಿ ಮನೆಯಿಂದ ದೇವಸ್ಥಾನದ ಕಡೆ ಹೊರಟಿದ್ದಾನೆ.

ಮನೆಗೆ ಹೊರಟ ನಕ್ಷತ್ರ

ಮನೆಗೆ ಹೊರಟ ನಕ್ಷತ್ರ

ಭೂಪತಿಯ ಪೇಚಾಟವನ್ನು ನೋಡಿದ ನಕ್ಷತ್ರ ಗೆ ಒಂದು ತರ ಸಂಕಟವಾಗಿದೆ. ಇದಕ್ಕೆ ಮೌರ್ಯನಾ ಬಳಿ ನಾನು ಈಗ ದೇವಸ್ಥಾನದ ಬಳಿ ಹೋಗಬೇಕಾ ಎಂದು ಕೇಳಿದ್ದಾಳೆ. ಅದಕ್ಕೆ ಮೌರ್ಯ ಇಲ್ಲ ಅತ್ತಿಗೆ ನೀವು ಮನೆಗೆ ಹೋಗಿ ಅವನು ದೇವಸ್ಥಾನವನ್ನೆಲ್ಲ ಸುತ್ತು ಹಾಕಿಕೊಂಡು ಬರುತ್ತಾರೆ ಎಂದು ಹೇಳಿದ್ದಾನೆ. ಇದಕ್ಕೆ ಮೌರ್ಯ ನಿಮ್ಮ ಪ್ಲ್ಯಾನ್ ಏನು ಎಂದು ಕೇಳಿದ್ದಾಳೆ. ಈಗ ನನ್ನ ಪ್ಲಾನ್ ಒಳ್ಳೆದಕ್ಕೆ ಉಪಯೋಗ ಆಗುತ್ತಿದೆ. ನೀವು ಭೂಪತಿ ಫೋನ್ ಮಾಡಿದರು ಸಹ ಪಿಕ್ ಮಾಡಿ ಮಾತನಾಡಬೇಡಿ ನೀವು ಮೌನ ವ್ರತವನ್ನು ಮಾಡುತ್ತಿದ್ದೀರಾ ಎಂದು ಹೇಳಿ ಮೌರ್ಯ ಮನೆಯಿಂದ ಕಳಿಸಿದ್ದಾನೆ. ಇದಕ್ಕೆ ನಕ್ಷತ್ರ ಆಯ್ತು ಸ್ವಾಮಿಗಳೇ ಎಂದು ಮನೆಯ ಕಡೆ ಆಟೋವನ್ನು ಹಿಡಿದು ಮನೆಗೆ ಹೊರಟಿದ್ದಾಳೆ.‌

ಶ್ವೇತಾ ಮಾತು ಕೇಳಿ ನಕ್ಷತ್ರಗೆ ಅನುಮಾನ

ಶ್ವೇತಾ ಮಾತು ಕೇಳಿ ನಕ್ಷತ್ರಗೆ ಅನುಮಾನ

ನಕ್ಷತ್ರ ಮನೆಗೆ ಬಂದ ಕೂಡಲೇ ಮಯೂರಿ ಪ್ರೀತಿಯಿಂದ ಮಾತನಾಡಿಸಿದ್ದಾಳೆ. ನಂತರ ನೀನು ಒಂದು ಸುಳ್ಳನ್ನ ಹೇಳಬೇಕು ಎಂದು ಮುಂದಿನ ಪ್ಲಾನ್ ಬಗ್ಗೆ ನಕ್ಷತ್ರ ಬಳಿ ಮಾತನಾಡಿದ್ದಾಳೆ. ಇದಕ್ಕೆ ನಕ್ಷತ್ರ ಅಕ್ಕ ನಾನು ಸುಳ್ಳು ಹೇಳೋದಿಲ್ಲ ಎಂದು ಹೇಳಿದ್ದಾಳೆ ನೀನು ಒಂದೇ ಒಂದು ಸುಳ್ಳು ಹೇಳು ಸಾಕು ಎಂದು ನಕ್ಷತ್ರಗೆ ಮಯೂರಿ ಹೇಳಿದ್ದಾಳೆ. ತಲೆನೋವು ಎಂದು ನೀನು ಹೋಗಿ ರೂಮಿನಲ್ಲಿ ಮಲಗು ನಾನು ಇದನ್ನೇ ಭೂಪತಿಗೆ ಹೇಳುತ್ತೇನೆ ಎಂದು ಮಯೂರಿ ಹೇಳಿದಂತೆ ನಕ್ಷತ್ರ ರೂಮಿಗೆ ಹೋಗಿದ್ದಾಳೆ.

ಭೂಪತಿಗೆ ಬೇಸರ

ಭೂಪತಿಗೆ ಬೇಸರ

ಈ ಕಡೆ ಭೂಪತಿ ದೇವಸ್ಥಾನದಿಂದ ಮನೆಗೆ ಬಂದಿದ್ದಾನೆ. ನಕ್ಷತ್ರ ಬಗ್ಗೆ ಕೇಳಿದ್ದಕ್ಕೆ ಮಯೂರಿ ಅವಳಿಗೆ ತಲೆನೋವು ಬಂದು ಮಲಗಿದ್ದಾಳೆ ಎಂದು ಹೇಳಿದ್ದಾಳೆ. ನಂತರ ಭೂಪತಿ ರೂಮಿಗೆ ಹೋಗಿದ್ದಾನೆ.‌ ಆಗ ನಕ್ಷತ್ರ ತಲೆಯನ್ನೆಲ್ಲ ಮುಟ್ಟಿ ನೋಡುತ್ತಿದ್ದಾನೆ. ಅಲ್ಲಿಗೆ ಬಂದ ಮಯೂರಿ ಅವಳಿಗೆ ಜ್ವರ ಬಂದಿಲ್ಲ. ತಲೆನೋವು ಬಂದಿದೆ ಅದಕ್ಕೆ ಮಲಗಿದ್ದಾಳೆ ಎಂದು ಹೇಳಿದ್ದಾಳೆ. ಇನ್ನು ಸಹ ಅವಳ ಮೌನವ್ರತ ಮುಗಿದಿಲ್ಲ ಎಂದು ಹೇಳಿದಾಗ ಬೆಳಗ್ಗೆಯಿಂದಲೂ ನಾನು ಸರಿಯಾಗಿ ಮಾತನಾಡಿಲ್ಲ ಎಂದು ಭೂಪತಿ ಬೇಸರ ಮಾಡಿಕೊಂಡಿದ್ದಾನೆ.‌

ಗುಟ್ಟಾಗಿ ಏನ್‌ ಮಾಡ್ತಿದ್ದೀರಾ ಎಂದ ಶ್ವೇತಾ

ಗುಟ್ಟಾಗಿ ಏನ್‌ ಮಾಡ್ತಿದ್ದೀರಾ ಎಂದ ಶ್ವೇತಾ

ಈ ಕಡೆ ಶ್ವೇತಾ ಏನು ಗುಟ್ಟಾಗಿ ಮಾಡುತ್ತೀದ್ದೀರಾ ಬೆಳಿಗ್ಗೆಯಿಂದಲೂ ನೋಡುತ್ತಿದ್ದೇನೆ ಎಂದು ಮಯೂರಿ ಹಾಗೂ ನಕ್ಷತ್ರ ಬಳಿ ಕೇಳಿದ್ದಾಳೆ. ಇದಕ್ಕೆ ಭೂಪತಿ ಹಾಗೂ ನಕ್ಷತ್ರಳನ್ನು ಒಂದು ಮಾಡುತ್ತಿದ್ದೇನೆ ನಿನ್ನ ಸಹಾಯ ಬೇಕಾದರೆ ಕೇಳುತ್ತೇವೆ ಎಂದು ಹೇಳಿದಾಗ ಮಾಡುತ್ತೇನೆ ಎಂದು ಹೇಳಿದ್ದಾಳೆ. ಎಷ್ಟು ದಿನ ಒಂದಾಗಿ ಇರುತ್ತಾರೆ ನೋಡುತ್ತೇನೆ ಎಂಬ ಮಾತು ನಕ್ಷತ್ರಗೆ ಅನುಮಾನ ತರಿಸಿದೆ.

More from Filmibeat

English summary
Colors Kannada serial Lakshana Written Update on March 7th episode. Here is the details about bhupati searching nakshatra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X