Lakshana: ಪ್ರೀತಿಯನ್ನೇ ಸ್ನೇಹ ಎನ್ನುತ್ತಿರುವ ಭೂಪತಿ- ನಕ್ಷತ್ರ:

By ಶೃತಿ ಹರೀಶ್ ಗೌಡ

'ಲಕ್ಷಣ' ಧಾರಾವಾಹಿಯಲ್ಲಿ ನಕ್ಷತ್ರಳನ್ನು ಭೂಪತಿ ಹುಡುಕಿಕೊಂಡು ವಾಪಸ್ ಮನೆಗೆ ಬಂದಿದ್ದಾನೆ. ಮಯೂರಿ ಬಳಿ ನಕ್ಷತ್ರ ಎಲ್ಲಿ ಎಂದು ಕೇಳಿದ್ದಕ್ಕೆ ತಲೆ ನೋವಿನಿಂದ ಮಲಗಿದ್ದಾಳೆ ಎಂದು ಹೇಳಿದ್ದಾನೆ. ಇದೇ ವೇಳೆ ರೂಮಿಗೆ ಭೂಪತಿ ಓಡಿ ಹೋಗಿ ನಕ್ಷತ್ರಳನ್ನು ಮಾತನಾಡಿಸಲು ಪ್ರಯತ್ನಿಸಿದ್ದಾನೆ.

ನಕ್ಷತ್ರ ಮಲಗಿರುವುದನ್ನು ನೋಡಿದ ಭೂಪತಿ ವಾಪಸ್ ಬಂದಿದ್ದಾನೆ. ಊಟ ಮಾಡಲು ಕುಳಿತುಕೊಂಡರು ಸಹ ಭೂಪತಿಗೆ ಊಟ ಸೇರುವುದಿಲ್ಲ. ಇದನ್ನೆಲ್ಲವನ್ನು ಗಮನಿಸಿದ ಮಯೂರಿ. ಭೂಪತಿಯ ಬಳಿ ಯಾಕೆ ಊಟ ಮಾಡುತ್ತಿಲ್ಲ, ಹೊರಗೆ ಏನಾದ್ರು ತಿಂದು ಬಂದಿದ್ಯಾ ಎಂದು‌ ಕೇಳಿದ್ದಾಳೆ.‌ ಇದಕ್ಕೆ ಇಲ್ಲ ಅತ್ತಿಗೆ ಯಾಕೋ ಊಟ ಸೇರುತ್ತಿಲ್ಲ ಎಂದು ಹೇಳಿದ್ದಾನೆ. ಅಷ್ಟರಲ್ಲಿ ಶೌರ್ಯ ಇವನಿಗೆ ಏನಾಗಿದೆ ಎಂದು ಕೇಳಿದ್ದಾನೆ ಮಯೂರಿ ಏನೋ ಒಂದು ಹೇಳಿ ಸುಮ್ಮನೆ ಆಗಿದ್ದಾಳೆ.

ಭೂಪತಿ ಮಯೂರಿ ಬಳಿ ನಕ್ಷಳದ್ದು ಊಟ ಆಯಿತಾ ಎಂದು ಕೇಳಿದ್ದಾನೆ. ಅದಕ್ಕೆ ಇಲ್ಲ ಖಾಲಿ ಹೊಟ್ಟೆಯಲ್ಲಿ ಮಾತ್ರೆ ನುಂಗಿ ಹಾಗೇ ಮಲಗಿದ್ದಾಳೆ ಎಂದು ಹೇಳಿದ್ದಾಳೆ. ‌ಇದಕ್ಕೆ ಭೂಪತಿಯೇ ಊಟವನ್ನು ಹಾಕಿಕೊಂಡು ನಕ್ಷತ್ರ ಮಲಗಿರುವ ರೂಮ್‌ಗೆ ಹೋಗುತ್ತಿದ್ದಾನೆ. ಈ ಕಡೆ ಮಯೂರಿ ಪ್ಲ್ಯಾನ್ ಸಕ್ಸಸ್ ಆಗುತ್ತಿದೆ ಎಂದು ಅಂದುಕೊಳ್ಳುತ್ತಿದ್ದಾಳೆ.

ಭೂಪತಿ ಪ್ರೀತಿ ಕಂಡು ನಕ್ಷತ್ರ ಫಿದಾ

ಭೂಪತಿ ಪ್ರೀತಿ ಕಂಡು ನಕ್ಷತ್ರ ಫಿದಾ

ನಕ್ಷತ್ರಗೆ ಭೂಪತಿ ಊಟ ತೆಗೆದುಕೊಂಡು ಹೋಗುತ್ತಿದ್ದಾನೆ. ಆದರೆ ನಕ್ಷತ್ರ ಮಾತ್ರ ಅಯ್ಯೋ ಈ ಮೌನ ವ್ರತ ಅದು ಇದು ಎಂದುಕೊಂಡು ಇವತ್ತು ನಾನು ಮಾತನ್ನೇ ಆಡಲಿಲ್ಲ ಎಂದು ಗೊಣಗಿಕೊಳ್ಳುತ್ತಾ ಇದ್ದಾಳೆ. ಒಳ್ಳೆಯ ಜೈಲಿನಲ್ಲಿ ಇದ್ದ ತರಹ ಫೀಲ್ ಆಗುತ್ತಿದೆ ಎಂದು ಅಂದುಕೊಳ್ಳುತ್ತಾ ಇದ್ದಾಳೆ. ಅಷ್ಟರಲ್ಲಿ ಭೂಪತಿ, ನಕ್ಷತ್ರ ಎಂದು ಕರೆಯುವುದು ಕೇಳಿಸಿದೆ. ಇದಕ್ಕೆ ನಕ್ಷತ್ರ ಆಗಿಯೇ ಬೆಡ್ ಶೀಟ್ ಹೊದ್ದುಕೊಂಡು ಮಲಗಿಕೊಳ್ಳುವ ರೀತಿ ನಾಟಕ ಮಾಡಿದ್ದಾಳೆ.‌

ಮೌನ ವ್ರತ ಬೇಡ ಎಂದ ಭೂಪತಿ

ಮೌನ ವ್ರತ ಬೇಡ ಎಂದ ಭೂಪತಿ

ಅಲ್ಲಿಗೆ ಬಂದ ಭೂಪತಿ ನಕ್ಷತ್ರಳನ್ನು ಎಬ್ಬಿಸಿದ್ದಾನೆ. ಆನಂತರ ಊಟವನ್ನು ತಾನೇ ಮಾಡಿಸಿದ್ದಾನೆ. ನೋಡು ನೀನು ಈ ರೀತಿಯಲ್ಲ ಮೌನ ವ್ರತ ಮಾಡಬೇಡ ಇದು ನಿನಗೆ ಸೂಟ್ ಆಗುವುದಿಲ್ಲ ಎಂದು ಹೇಳಿದ್ದಾನೆ. ಇದಕ್ಕೆ ನಕ್ಷತ್ರ ಏನನ್ನು ಮಾತನಾಡುತ್ತಿಲ್ಲ. ಭೂಪತಿಯ ಪ್ರೀತಿಯನ್ನ ಕಂಡು ಒಳಗೊಳಗೆ ಖುಷಿ ಪಡುತ್ತಿದ್ದಾಳೆ.‌ ಭೂಪತಿ ತೋರಿಸುತ್ತಿರುವ ಪ್ರೀತಿಗೆ ನಕ್ಷತ್ರ ಕಳೆದೇ ಹೋಗಿದ್ದಾಳೆ.‌

ಚೀಟಿ ಓದಿ ಪ್ರಾಕ್ಟೀಸ್ ಮಾಡುತ್ತಿರುವ ನಕ್ಷತ್ರ

ಚೀಟಿ ಓದಿ ಪ್ರಾಕ್ಟೀಸ್ ಮಾಡುತ್ತಿರುವ ನಕ್ಷತ್ರ

ಮಯೂರಿಗೆ ಕಾಲ್ ಮಾಡಿರುವ ಮೌರ್ಯ ಮತ್ತೊಂದು ಚೀಟಿ ಕಳುಹಿಸಿರುವುದಾಗಿ ಹೇಳಿದ್ದಾನೆ. ಅದನ್ನು ತೆಗೆದುಕೊಂಡು ಹೋಗಿ ನಕ್ಷತ್ರ ಕೈಗೆ ಮಯೂರಿ ಕೊಟ್ಟಿದ್ದಾಳೆ. ಆ ಚೀಟಿಯನ್ನು ಓದುತ್ತಿರುವ ನಕ್ಷತ್ರ ಅದನ್ನ ಪ್ರಾಕ್ಟೀಸ್ ಮಾಡುತ್ತಿದ್ದಾಳೆ. ಇದನ್ನೆಲ್ಲವನ್ನು ನಿಂತುಕೊಂಡು ಮಯೂರಿ ಮಗಳು ನೋಡುತ್ತಿದ್ದಾಳೆ. ಅದೇನು ಚಿಕ್ಕಮ್ಮ ಕನ್ನಡಿ ಮುಂದೆ ನಿಂತು ಈ ರೀತಿ ಪ್ರಾಕ್ಟೀಸ್ ಮಾಡುತ್ತಿದ್ದೀರಲ್ಲ ಎಂದು ನಗುತ್ತಿದ್ದಾಳೆ.‌ ಇದಕ್ಕೆ ನಕ್ಷತ್ರ ನಾಟಕ ಪ್ರಾಕ್ಟೀಸ್ ಮಾಡುತ್ತಿದ್ದೇನೆ ಎಂದು ಕೇಳಿದ್ದಾಳೆ.

ಭೂಪತಿ ಪರಿಸ್ಥಿತಿ ಕಂಡು ಮಯೂರಿಗೆ ನಗು

ಭೂಪತಿ ಪರಿಸ್ಥಿತಿ ಕಂಡು ಮಯೂರಿಗೆ ನಗು

ಈ ಕಡೆ ಭೂಪತಿ ಮೇಲೆ ನಕ್ಷತ್ರ ಮತ್ತೆ ಕೋಪ ತೋರುತ್ತಿರುವ ರೀತಿ ನಾಟಕ ಮಾಡಿದ್ದಾಳೆ. ಇದಕ್ಕೆ ಭೂಪತಿ ಮೌನ ವ್ರತ ಮಾಡಿ ನಿನಗೆ ತಲೆ ಕೆಟ್ಟಿದೆಯಾ ಎಂದು ಕೇಳುತ್ತಿದ್ದಾನೆ. ತಲೆನೋವು ಹೋಯ್ತಾ ಎಂದು ಕೇಳಿದ್ದಕ್ಕೆ ನಕ್ಷತ್ರ ಹೂಂ ಎಂದು ಅಷ್ಟೇ ಉತ್ತರವನ್ನು ಕೊಟ್ಟು ಅಲ್ಲಿಂದ ಹೊರಟಿದ್ದಾಳೆ. ಹೂ ಗಿಡಕ್ಕೆ ನೀರು ಹಾಕುವಾಗ ಯಾವುದೋ ನಂಬರ್‌ನಿಂದ ಮತ್ತೆ ಮೇಸೇಜ್ ಬಂದಿದೆ. ನೀನು ಆ ಹುಡುಗಿಯ ಜೊತೆ ಮಾತನಾಡಬೇಡ ಎಂದೆಲ್ಲ ಮೆಸೇಜ್ ಕಳಿಸಿದ್ದಾರೆ. ಮತ್ತೆ ಕಾಲ್ ಮಾಡುವಷ್ಟರಲ್ಲಿ ಅದು ಸ್ವಿಚ್ ಆಫ್ ಆಗಿದೆ. ಅಲ್ಲಿಗೆ ಆ ಹುಡುಗಿ ಬಂದಾಗ ಭೂಪತಿ ಸಹ ನಕ್ಷತ್ರಳನ್ನು ಮಾತನಾಡಿಸಿದ್ದಾನೆ. ಇದಕ್ಕೆ ಆ ಹುಡುಗಿ ನಾಟಕ ಮಾಡುತ್ತಿದ್ದಾರೆ ಎಂದು ಹೇಳಿದ್ದಾಳೆ.

More from Filmibeat

English summary
Colors Kannada serial Lakshana Written Update on March 8th episode. Here is the details about bhupati worried about nakshtra headache.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X