Lakshana: ಮೇಸೇಜ್ ಮೇಲೆ ಮೇಸೇಜ್ ಮಾಡಿ ನಕ್ಷತ್ರಗೆ ಡೇವಿಲ್ ಟಾರ್ಚರ್
'ಲಕ್ಷಣ' ಧಾರಾವಾಹಿಯಲ್ಲಿ ನಕ್ಷತ್ರ, ಭೂಪತಿಯ ಬಳಿ ತುಂಬಾ ಗಂಭೀರವಾಗಿ ಇದ್ದಾಳೆ. ನಕ್ಷತ್ರ ಈ ರೀತಿ ಆಡುತ್ತಿರುವುದಕ್ಕೆ ಭೂಪತಿಗೆ ತುಂಬಾ ಬೇಸರವಾಗಿದೆ. ಒಂದು ಮಾತಿನ ಉತ್ತರವನ್ನು ನೀಡುತ್ತಿದ್ದೀಯಾ ಎಂದು ಭೂಪತಿ, ನಕ್ಷತ್ರ ಬಳಿ ಬೇಸರ ಮಾಡಿಕೊಂಡಿದ್ದಾನೆ.
ನಕ್ಷತ್ರ ಬಳಿ ಭೂಪತಿ ಮಾತನಾಡಲು ಬಂದಿದ್ದಾನೆ. ಇದೆ ವೇಳೆ ಮಯೂರಿ ಮಗಳು ಅಲ್ಲಿಗೆ ಬಂದು ಚಿಕ್ಕಿ ನಿಮ್ಮ ಬಳಿ ಡ್ರಾಮಾ ಮಾಡುತ್ತಾಳಂತೆ ಎಂದು ಹೇಳಿದ್ದಾಳೆ. ಅದಕ್ಕೆ ನಕ್ಷತ್ರ ಪಾಪುವನ್ನ ತನ್ನ ಕಡೆಗೆ ಎಳೆದುಕೊಂಡು ಸ್ಕೂಲಲ್ಲಿ ಡ್ರಾಮಾ ನಡೆಯುತ್ತಿದೆಯಂತೆ. ಅದಕ್ಕಾಗಿ ಡ್ರಾಮಾ ಪ್ರಾಕ್ಟೀಸ್ ಮಾಡುತ್ತಿರುವುದಾಗಿ ಹೇಳಿದ್ದಾಳೆ ಎಂದು ಅಲ್ಲಿಂದ ಪಾಪುವನ್ನು ಆಟವಾಡಿಕೋ ಎಂದು ಕಳುಹಿಸಿದ್ದಾಳೆ.
ಭೂಪತಿಯ ಬಳಿ ನಕ್ಷತ್ರ ಗಂಭೀರವಾಗಿ ಇದ್ದು ಅಲ್ಲಿಂದ ತೆರಳಿದ್ದಾಳೆ. ಇದರಿಂದಾಗಿ ಭೂಪತಿ ಕೋಪ ಮಾಡಿಕೊಂಡಿದ್ದಾನೆ. ಭೂಪತಿ ಕೋಪ ಹಾಗೂ ಬೇಸರ ಮಾಡಿಕೊಂಡಿದ್ದಕ್ಕೆ ನಕ್ಷತ್ರಗೂ ಸಹ ಬೇಸರವಾಗಿದೆ. ಅಲ್ಲಿಗೆ ಬಂದ ಮಯೂರಿ ಸಮಾಧಾನ ಮಾಡಿದ್ದಾಳೆ.

ಮಗುವನ್ನು ಮುಂದಿಟ್ಟು ಬ್ಲಾಕ್‌ಮೇಲ್
ಡೆವಿಲ್ ಭಾರ್ಗವಿ ತನ್ನ ಆಟವನ್ನು ಮುಂದುವರಿಸಿದ್ದಾಳೆ. ಮಯೂರಿ ಮಗಳನ್ನು ಮುಂದಿಟ್ಟುಕೊಂಡು ಬ್ಲಾಕ್‌ಮೇಲ್ ಮಾಡಲು ತಂತ್ರವನ್ನ ರೂಪಿಸಿದ್ದಾಳೆ. ತನ್ನ ಮಗಳಾದ ಮಿಲ್ಲಿಯ ಬಳಿ ನಾನು ಬೇರೆಯದ್ದೆ ಪ್ಲಾನ್ ಮಾಡಿದ್ದೇನೆ ನನಗೆ ಇದು ಸೀದಾ ಸದಾ ಎಂದು ಹೇಳಿದ್ದಾಳೆ. ಇದಕ್ಕೆ ಇಲ್ಲಿದ್ದುಕೊಂಡೇ ಏನನ್ನು ಮಾಡುತ್ತೀಯಾ ಅಮ್ಮ ಎಂದಿದ್ದಾಳೆ. ಅದಕ್ಕೆ ನಾನು ಮಾಡುತ್ತೇನೆ ನೀನು ಮಾಡಿದ ಸಣ್ಣ ಎಡವಟ್ಟಿನಿಂದ ನಾನು ಶ್ವೇತಾ ಬಳಿ ತಲೆ ತಗ್ಗಿಸುವ ರೀತಿ ಆಯಿತು ಎಂದು ಮಿಲ್ಲಿಗೆ ಬೈಯುತ್ತಿದ್ದಾಳೆ.

ಮೆಸೇಜ್ ನೋಡಿ ನಕ್ಷತ್ರ ಗಾಬರಿ
ನಕ್ಷತ್ರಳನ್ನು ಭಯಪಡಿಸಬೇಕು ಎಂದು ಡೆವಿಲ್ ಮಗುವಿನ ಬೊಂಬೆಯನ್ನು ಅರಿಸಿದ್ದಾಳೆ. ಇದಕ್ಕೆ ಆಟವಾಡುತ್ತಿದ್ದ ಮಯೂರಿ ಮಗಳು ಒಳಗಡೆ ಬಂದು ಅಳುತ್ತಿದ್ದಾಳೆ. ನಕ್ಷತ್ರ ಏನಾಯಿತು ಎಂದು ಕೇಳಿದ್ದಕ್ಕೆ ಯಾರು ನನ್ನ ಬೊಂಬೆಯನ್ನ ಅರಿದು ಹಾಕಿ ಬಿಟ್ಟರು ಎಂದು ಅಳುತ್ತಿದ್ದಾಳೆ. ಇದು ನಕ್ಷತ್ರಗನ್ನು ಕಂಗಾಲಾಗುವಂತೆ ಮಾಡಿದೆ. ಇನ್ನು ಇದೇ ವೇಳೆ ನಕ್ಷತ್ರಾಳ ಮೊಬೈಲ್‌ಗೆ ಬಂದು ಮೆಸೇಜ್ ಬಂದಿದೆ. ಈಗ ಗೊಂಬೆಗೆ ಆಗಿರುವ ಪರಿಸ್ಥಿತಿಯೇ ಆ ಹುಡುಗಿಗೂ ಆಗುತ್ತದೆ ನಿನಗೆ ಹೇಳಿದ್ದೆ ತಾನೇ ಎದು ಬಂದಿದೆ. ಈ ಮೆಸೇಜ್ ನೋಡಿದ ಕೂಡಲೇ ನಕ್ಷತ್ರ ಗೆ ಗಾಬರಿ ಆಗಿದೆ. ಅಲ್ಲಿಂದ ಮೇಲೆ ಹೋಗಿ ಯಾರು ಈ ರೀತಿ ಮಾಡಿದ್ದಾರೆ ಎಂದು ನೋಡಿದ್ದಾಳೆ.

ಸಿಸಿಟಿವಿ ಕೆಟ್ಟು ನಿಂತಿದೆ
ಈ ಕಡೆ ಸಿಸಿಟಿವಿಯನ್ನ ತೆಗಿಸಲು ಸೆಕ್ಯೂರಿಟಿ ಬಳಿ ಹೋದಾಗ ಸಿಸಿಟಿವಿ ಕೆಟ್ಟು ನಿಂತಿದೆ ಎಂದು ಸೆಕ್ಯುರಿಟಿ ಹೇಳಿದ್ದಾರೆ. ನಕ್ಷತ್ರ ಪರದಾಡುತ್ತಿರುವ ಪರಿಸ್ಥಿತಿಯನ್ನು ನೋಡಿದ ಶ್ವೇತಾಗೆ ತುಂಬಾ ನಗು ಬಂದಿದೆ. ನಿನಗೆ ಈ ರೀತಿಯೇ ಆಗಬೇಕು ಎಂದು ನಗುತ್ತಿದ್ದಾಳೆ. ನಕ್ಷತ್ರಾಳನ್ನು ಏನು ಎಂದು ಕೇಳಿದ್ದಕ್ಕೆ ನಕ್ಷತ್ರ ಏನು ಇಲ್ಲ ಎಂದು ಶ್ವೇತಾ ಬಳಿ ಹೇಳಿದ್ದಾಳೆ.

ಭಾರ್ಗವಿಯಿಂದ ಮತ್ತೊಂದು ಮೆಸೇಜ್
ಮಯೂರಿಗೆ ನಕ್ಷತ್ರ ಈ ರೀತಿ ಬ್ಲಾಕ್ ಮೇಲ್ ಮೆಸೇಜ್ ಬಂದಿದೆ ಎಂದು ತೋರಿಸುತ್ತಾ ಇದ್ದಾಳೆ. ಅಷ್ಟರಲ್ಲಿ ಮಯೂರಿ ಯಾರೋ ನಿನ್ನನ್ನ ಬೇಕು ಎಂದು ಆಟವಾಡಿಸುತ್ತಿದ್ದಾರೆ ಎಂದು ಹೇಳಿದ್ದಾಳೆ. ಅಷ್ಟರಲ್ಲಿಯೇ ನಕ್ಷತ್ರ ತಿರುಗಿಕೊಳ್ಳುವ ವೇಳೆ ನೀನು ನಿನ್ನ ಪ್ರೀತಿಯ ಅಕ್ಕನ ಬಳಿಯೂ ಮಾತನಾಡಬಾರದು ಎಂದು ಭಾರ್ಗವಿ ಮತ್ತೊಂದು ಮೆಸೇಜ್ ಕಳಿಸಿದ್ದಾಳೆ. ಇದು ನಕ್ಷತ್ರಳನ್ನು ಮತ್ತಷ್ಟು ಟೆನ್ಶನ್‌ಗೆ ದೂಡಿದಂತೆ ಆಗಿದೆ.


Click it and Unblock the Notifications











