Lakshmi Baramma: ಆತುರದಲ್ಲಿ ಸುಪ್ರೀತಾಳನ್ನು ಹೊರಗೆ ಹಾಕಲು ಹೋಗಿ ತಾನೇ ಲಾಕ್ ಆದಳಾ ಕಾವೇರಿ?
ಕಶ್ಯಪ್ ಮನೆಯಲ್ಲಿ ಈಗ ಯುದ್ಧವೇ ನಡೆಯುತ್ತಿದೆ. ಸುಪ್ರೀತಾ ಹಾಗೂ ಕೀರ್ತಿಯಿಂದ ನೆಮ್ಮದಿಯೇ ಇಲ್ಲದಂತೆ ಆಗಿದೆ. ಕೀರ್ತಿ ತನ್ನ ಪ್ರೀತಿ ಉಳಿಸಿಕೊಳ್ಳುವುದಕ್ಕೆ ಕಾವೇರಿಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸುತ್ತಿದ್ದಾಳೆ. ಆ ಕಡೆ ಅಡಗಿರುವ ಸತ್ಯ ತಿಳಿಯಲು ಹೋಗಿ ಸುಪ್ರೀತಾ ಲಾಕ್ ಆಗುತ್ತಿದ್ದಾಳೆ.
ಮಗ-ಸೊಸೆಯ ವಿಚಾರಕ್ಕೆ ಬರಬಾರದು ಎಂದು ಸುಪ್ರೀತಾಗೆ ಈ ಮೊದಲೇ ಕಾವೇರಿ ಎಚ್ಚರಿಕೆ ನೀಡಿದ್ದಳು. ಆದರೂ ಮತ್ತೆ ಮಗ ಸೊಸೆಯ ಬುಡಕ್ಕೆ ಬಂದಿದ್ದಾಳೆ. ಮೀಡಿಯಾದವರಿಗೆ ಒಳ್ಳೆಯ ಹಣ ನೀಡಿ, ಲಕ್ಷ್ಮೀಗೆ ಆತಂಕ ತಂದಿಟ್ಟಿದ್ದಾಳೆ. ಇದು ಯಾರಿಗೂ ಗೊತ್ತಿಲ್ಲದೆ ಏನೋ ಸಮಸ್ಯೆ ಆಗಿ ಹೋಯ್ತಲ್ಲ ಅಂತ ಮನೆಯವರೆಲ್ಲ ಬೇಸರ ಮಾಡಿಕೊಂಡಿದ್ದರು. ಆದರೆ ಕೀರ್ತಿ ಇದನ್ನೇ ಬಂಡವಾಳ ಮಾಡಿಕೊಂಡು ಸುಪ್ರೀತಾಳ ಮೇಲೆ ಕೆಂಡಕಾರುವಂತೆ ಮಾಡಿದ್ದಾಳೆ. ಆದರೆ, ಏನೋ ಮಾಡಲು ಹೋಗಿ ಕಾವೇರಿ ತನ್ನ ತಲೆಗೆ ತಂದುಕೊಂಡಿದ್ದಾಳೆ.

ಸುಪ್ರೀತಾಳ ಬಂಡವಾಳ ಬಯಲು ಮಾಡಿದ ಕಾವೇರಿ
ಕೀರ್ತಿಗೆ ಸುಪ್ರೀತಾಳಿಂದ ತೊಂದರೆ ಆಗ್ತಾ ಇದೆ ಅನ್ನೋದಂತು ಗೊತ್ತಾಯ್ತು. ಸುಪ್ರೀತಾ ತಾನೂ ಮಾಡಿದ ತಪ್ಪನ್ನು ಕಾವೇರಿ ಮೇಲೆ ಬರುವಂತೆ ಮಾಡಿದ್ದಳು. ಆದ್ರೆ ಅದನ್ನು ಕಂಡು ಹಿಡಿದ ಕೀರ್ತಿ, ವೈಷ್ಣವ್ ಹಾಗೂ ಕಾವೇರಿ ಮುಂದೆ ಸುಪ್ರೀತಾಳ ಬಂಡವಾಳ ಬಯಲು ಮಾಡಿದ್ದಳು. ಕಾವೇರಿಗೆ ಪಿತ್ತ ನೆತ್ತಿಗೇರಿತ್ತು. ಮನೆಯವರ ಮುಂದೆಲ್ಲ ಎಲ್ಲಾ ಸತ್ಯವನ್ನು ಹೊರಗೆ ಹಾಕಿ, ಸುಪ್ರೀತಾಳ ಬಾಯಿಂದ ಒಂದು ಮಾತು ಬರದಂತೆ ಮಾಡಿಬಿಟ್ಟಳು.
ಲಗೇಜು ಸಮೇತ ಹೊರ ಹಾಕಿದ ಕಾವೇರಿ
ಲಕ್ಷ್ಮೀಯನ್ನು ಹಿಯಾಳಿಸಿದ್ದು, ಮನೆಯವರೆಲ್ಲರು ಮುಜುಗರಕ್ಕೀಡಾಗುವಂತೆ ಮಾಡಿದ್ದು ಕಾವೇರಿಯ ಕೋಪಕ್ಕೆ ಕಾರಣವಾಗಿತ್ತು. ಹೀಗಾಗಿಯೇ ಗಂಗಾಳಿಗೆ ಸುಪ್ರೀತಾಳ ಲಗೇಜು ಪ್ಯಾಕ್ ಮಾಡಲು ಹೇಳಿದ್ದಳು. ಯಾರೇ ಬೆಂಬಲಕ್ಕೆ ಬಂದರೂ ಅವರಿಗೂ ಸ್ಟ್ರಾಂಗ್ ಆಗಿ ವಾರ್ನಿಂಗ್ ಮಾಡಿ, ಸುಪ್ರೀತಾಳನ್ನು ಧರ ಧರ ಎಂದು ಎಳೆದುಕೊಂಡು ಹೋಗಿ, ಆಚೆ ಬಿಸಾಡಿದಳು. ಗಂಗಾಳಿಗೂ ಜೋರು ಮಾಡಿ, ಲಗೇಜು ತರುವಂತೆ ಹೇಳಿದ್ದಳು.

ಕೀರ್ತಿ ಬಾಯಿ ಮುಚ್ಚಿಸಿದ ಲಕ್ಷ್ಮೀ
ಈ ಎಲ್ಲಾ ಡ್ರಾಮಾದ ನಡುವೆ ಸುಪ್ರೀತಾ ಮಾತನಾಡುವುದಕ್ಕೆ ಹೊರಟಳು. ಆ ರೀತಿ ಮಾಡಿದ್ದು ಯಾಕೆ ಅನ್ನೋದನ್ನು ಎಲ್ಲರೂ ಕೇಳಿ ಎಂದಳು. ಇನ್ನೆಲ್ಲಿ ಸತ್ಯ ಹೊರಗೆ ಬರುತ್ತೋ ಎಂದು ಭಯಗೊಂಡ ಕೀರ್ತಿ, ಕಾವೇರಿ ಆಡಿದ ಮಾತುಗಳನ್ನೇ ಆಡಿದಳು. ಕಾವೇರಿ, ಸುಪ್ರೀತಾಗೆ ಮಾತಿನ ಮೂಲಕವೇ ನೋವು ಕೊಟ್ಟಿದ್ದಳು. ಗತಿ ಇಲ್ಲದವಳು, ಬೀದಿಯಲ್ಲಿಯೇ ಸಂಸಾರ ಮಾಡಿದವಳು ಅಂತೆಲ್ಲ. ಈಗ ಕೀರ್ತಿ ಕೂಡ ಅದನ್ನೇ ಫಾಲೋ ಮಾಡಿದ್ದಳು. ಬಿಟ್ಟಿ ಊಟ ಈ ಮನೆಯಲ್ಲಿ ಮುಗೀತು ಎಂದಾಗ ಲಕ್ಷ್ಮೀ ಮಧ್ಯ ಪ್ರವೇಶಿಸಿದಳು ಕೀರ್ತಿಯ ಬಾಯಿ ಮುಚ್ಚಿಸಿದಳು.
ವೈಷ್ಣವ್ ಬಳಿ ಸತ್ಯ ಹೇಳಲು ಹೊರಟ ಸುಪ್ರೀತಾ
ಸುಪ್ರೀತಾ ಸತ್ಯವನ್ನು ಹೇಳಲೇಬೇಕು. ಈ ರೀತಿ ಸುಮ್ಮ ಸುಮ್ಮನೆ ಅಂತು ನಾನು ಮಾಡಿಲ್ಲ ಎಂದು ಹೇಳುವಾಗ ಕಾವೇರಿಗೆ ಆತಂಕ ಜಾಸ್ತಿ ಆಯ್ತು. ಹೇಗಾದರೂ ಮಾಡಿ ಅವಳನ್ನು ಬೇಗ ಹೊರಗೆ ಹಾಕಬೇಕು ಎಂದುಕೊಂಡು, ನಿನ್ನ ಮಾತು ಇಲ್ಲಿ ಯಾರು ಕೇಳೋರು ಇಲ್ಲ. ಹೊರಡುತ್ತಾ ಇರು ಎಂದೇ ಹೇಳಿದಳು. ಆಗ ಸುಪ್ರೀತಾ, ವೈಷ್ಣವ್ ಕಡೆಗೆ ಮಾತು ಶುರು ಮಾಡಿದಳು. ವೈಷ್ಣವ್ ಮೊದಲು ಸತ್ಯ ಕೇಳು ಎಂದಾಗ, ಕೊನೆಯದಾಗಿ ಒಂದು ಅವಕಾಶ ಕೊಡೋಣಾ ಎಂದೇ ಹೇಳಿದ. ಸುಪ್ರೀತಾ ಕೂಡ ವೈಷ್ಣವ್ ಕೈಹಿಡಿದು ಒಳಗೆ ಕರೆದುಕೊಂಡು ಹೋಗಿದ್ದಾಳೆ.


Click it and Unblock the Notifications











