Lakshmi Baramma: ಕಾವೇರಿ ಮೇಲೆ ನಂಬಿಕೆ ಉಳಿದಿಲ್ಲ.. ಸೊಸೆಯನ್ನೇ ದಾಳವಾಗಿಸಿಕೊಂಡಿದ್ದು ಬಟಾಬಯಲು!
ಕಾವೇರಿ ಇಷ್ಟು ದಿನ ಮಾಡಿದ ಪ್ರಯತ್ನ ನೀರಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗಿದೆ. ಮಗ.. ಮಗ..ಮಗ ಅಂತ ಮಗನಿಗಾಗಿಯೇ ಏನೇನೋ ಮಾಡಿದಳು. ಇವತ್ತು ಆ ಎಲ್ಲಾ ತಪ್ಪುಗಳು ಕಾವೇರಿಯ ಕಣ್ಣು ಕುಕ್ಕಿದೆ. ಮಗ ದೂರವಾಗಬಾರದು ಎಂದೇ ಬಯಸಿದ ಕಾವೇರಿಗೆ ಮಗನ ಪ್ರೀತಿ ಕಣ್ಮರೆಯಾಗಿದೆ.
ಲಕ್ಷ್ಮೀ ಹಾಡು ಬದಲಾಯಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ವೈಷ್ಣವ್‌ಗೆ ಗೊತ್ತಿದ್ದರು, ಲಕ್ಷ್ಮೀ ಒತ್ತಿ ಒತ್ತಿ ಹೇಳಿದ ರೀತಿಗೆ ಒಪ್ಪಲೇಬೇಕಾಗಿ ಬಂತು. ಆದರೆ, ಸುಪ್ರೀಯಾ ಹೇಳಿದ ಮಾತು, ದೊಡ್ಡಮ್ಮ ಕೊಟ್ಟ ಪ್ಲ್ಯಾನ್‌ನಿಂದಾಗಿ ವೈಷ್ಣವ್‌ಗೆ ಕಳ್ಳ ಯಾರು ಅನ್ನೋದು ಬಹಳ ಸುಲಭವಾಗಿ ತಿಳಿದು ಬಿಟ್ಟಿದೆ. ಈಗ ಕಾವೇರಿ ಏನು ಮಾಡುವುದಕ್ಕೂ ಆಗುವುದಿಲ್ಲ.

ಕುಸುಮಾ ಕೊಟ್ಟ ಪ್ಲ್ಯಾನ್ ಸಕ್ಸಸ್
ವೈಷ್ಣವ್‌ಗೆ ಕಳ್ಳ ಯಾರು ಎಂದು ಕಂಡು ಹಿಡಿಯಬೇಕಾಗಿತ್ತು. ಅದಕ್ಕೆಂದೇ ದೊಡ್ಡಮ್ಮನ ಸಹಾಯ ಪಡೆದುಕೊಂಡಿದ್ದ. ದೊಡ್ಡಮ್ಮ ಹೇಳಿದಂತೆ ರಾತ್ರಿ ಲಕ್ಷ್ಮೀಯ ಹಿಂದೆ ಬಿದ್ದ. ಮೊದಲೇ ಕಾವೇರಿ ತುಂಬಾನೇ ಯಡವಟ್ಟು. ರಾತ್ರಿಯಿಡಿ ನಿದ್ದೆ ಮಾಡದೆ, ಲಕ್ಷ್ಮೀಗೆ ಐಡಿಯಾ ಕೊಡೋಣಾ ಅಂತ ಅವಳನ್ನು ಹುಡುಕಿಕೊಂಡು ಬಂದಿದ್ದಳು. ಲಕ್ಷ್ಮೀ ಸುಳ್ಳು ಪ್ರಮಾಣ ಮಾಡುವುದಕ್ಕೂ ಹೇಳಿದಳು. ಎಲ್ಲಾ ಮುಗಿದು ತಿರುಗುವಾಗ ಇಡೀ ಮನೆಯವರ ಎದುರು ಸಿಕ್ಕಿ ಬಿದ್ದಳು.
ಆತಂಕದಲ್ಲಿ ತಲೆ ಸುತ್ತಿ ಬಿದ್ದ ಕಾವೇರಿ
ಅಮ್ಮನನ್ನು ವೈಷ್ಣವ್ ತುಂಬಾ ನಂಬಿದ್ದ. ಅಮ್ಮ ನಿಸ್ವಾರ್ಥಿಯೆಂದುಕೊಂಡಿದ್ದ. ಅಮ್ಮ ಮಾಡುವುದೆಲ್ಲ ಒಳ್ಳೆಯದ್ದಕ್ಕೆ ಎಂದುಕೊಂಡಿದ್ದ. ಆದರೆ, ಕಣ್ಣ ಮುಂದಿನ ಸತ್ಯ ಬೇರೆಯದ್ದೇ ಆಗಿತ್ತು. ಮಗ ಕೋಪ ಮಾಡಿಕೊಂಡು ಹೋದ. ಇದನ್ನೆಲ್ಲಾ ನೋಡಿದ ಕಾವೇರಿಗೆ ಮನಸ್ಸು ಸುಮ್ಮನೆ ಇರುವುದಾದರೂ ಹೇಗೆ..? ಮಗನಿಗಾಗಿಯೇ ಇಷ್ಟೆಲ್ಲ ಮಾಡಿರುವಾಗ, ಮಗ ದೂರ ಆಗುತ್ತಾನೆ ಎಂದು ನಂಬುವುದು ಹೇಗೆ..? ಅದನ್ನು ನೆನೆಸಿಕೊಂಡು ತಲೆ ಸುತ್ತಿ ಬಿದ್ದಿದ್ದಾಳೆ.

ಅಮ್ಮನ ಮೇಲಿನ ನಂಬಿಕೆ ಚೂರು ಚೂರು
ಇತ್ತ ಮಗ ದುಃಖದಲ್ಲಿ ಕೂತಿದ್ದಾನೆ. ದೊಡ್ಡಮ್ಮ ಕೂಡ ಅಮ್ಮನ ಮೋಸವನ್ನು ನಂಬಲಿಲ್ಲ. ಸುಪ್ರೀತಾ ಅತ್ತೆಯನ್ನೇ ಬೈದರು ಎಂದು ದೊಡ್ಡಮ್ಮನ ಮಾತುಗಳನ್ನು, ಅಮ್ಮನ ಮೋಸವನ್ನು ನೆನೆಸಿಕೊಂಡು ಅಳುತ್ತಾ ಕುಳಿತಿದ್ದಾನೆ. ಸುಪ್ರೀತಾ ಅಲ್ಲಿಗೆ ಬಂದು ಸಮಾಧಾನ ಮಾಡಿದ್ದಾಳೆ. ಲಕ್ಷ್ಮೀಗೆ ಮೊದಲು ಕ್ಷಮೆ ಕೇಳಲು ಹೇಳಿದ್ದಾಳೆ. ಇಷ್ಟೆಲ್ಲಾ ನಿಂದಿಸಿದರು ಒಂದೇ ಒಂದು ಮಾತು ಆಡಲಿಲ್ಲ. ಮೊದಲು ಅವಳ ಬಳಿ ಹೋಗು ಎಂದಿದ್ದಾಳೆ. ವೈಷ್ಣವ್‌ಗೆ ಈಗ ಲಕ್ಷ್ಮೀಗಿಂತ ತಾಯಿಯ ಮೋಸವೇ ಹೆಚ್ಚು ಮನಸ್ಸನ್ನು ಕದಡಿದೆ.
ಮತ್ತೆ ತಪ್ಪು ಮಾಡಿದ ಕಾವೇರಿ
ವೈಷ್ಣವ್ ಅಮ್ಮನ ಮುಖವನ್ನು ನೋಡುವುದಕ್ಕೆ ಇಷ್ಟ ಪಡುತ್ತಿಲ್ಲ. ಆದರೆ, ಕಾವೇರಿ ಈ ತಪ್ಪಿನ ಜೊತೆಗೆ ಮತ್ತೊಂದು ದೊಡ್ಡ ತಪ್ಪು ಮಾಡಿದ್ದಾಳೆ. ಸುಕನ್ಯಾಳಿಗೆ ಕಾಲ್ ಮಾಡಿ, ಆ ಹಾಡಿನ ರೆಕಾರ್ಡ್ ಆಗುವುದು ಬೇಡ ಎಂದೇ ಹೇಳಿದ್ದಾಳೆ. ಇದನ್ನು ಹೇಳಿದರೆ ಮಗ ಖುಷಿ ಪಡುತ್ತಾನೆ ಎಂದುಕೊಂಡು, ಹೂಗುಚ್ಛದ ಜೊತೆಗೆ ಬಂದಿದ್ದಾಳೆ. ಸುಕನ್ಯಾಗೆ ಎಲ್ಲಾ ಸತ್ಯ ಹೇಳಿ, ಹಾಡಿನ ರೆಕಾರ್ಡ್ ಸ್ಟಾಪ್ ಮಾಡಿಸಿದ್ದೀನಿ ಎಂದಾಗ, ವೈಷ್ಣವ್ ಕೋಪ ಮತ್ತಷ್ಟು ಹೆಚ್ಚಾಗಿದೆ. "ನನಗೆ ಕೋಪ ಇರುವುದು ಲಕ್ಷ್ಮೀ ಹಾಡಿನ ಮೇಲಲ್ಲ. ನಿನ್ನ ಸ್ವಾರ್ಥದ ಬುದ್ದಿ ಮೇಲೆ. ನನ್ನ ಬಗ್ಗೆ ನಿನಗೆ ಏನು ಗೊತ್ತಿಲ್ಲ. ಏನನ್ನು ಅರ್ಥ ಮಾಡಿಕೊಂಡಿಲ್ಲ" ಅಂತ ತಂದಿದ್ದ ಹೂವನ್ನು ಚೂರು ಚೂರು ಮಾಡಿದ್ದಾನೆ.


Click it and Unblock the Notifications











