Lakshmibaramma: ಲಕ್ಷ್ಮೀ ಧೈರ್ಯಕ್ಕೆ ಮೆಚ್ಚಿದ ಫ್ಯಾನ್ಸ್; ಅತ್ತೆ ಬಳಿ ಹೋಗುವಂತೆ ಕೀರ್ತಿಗೆ ಸಲಹೆ

By ಎಸ್ ಸುಮಂತ್

'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಈಗ ಎಲ್ಲಾ ಸತ್ಯವೂ ಹೊರಗೆ ಬಂದು ಬಿದ್ದಿದೆ. ಮುಚ್ಚಿಟ್ಟ ಸತ್ಯ ಎಲ್ಲವೂ ಅನಾವರಣವಾಗಿದೆ. ಕೀರ್ತಿಯೇ ವೈಷ್ಣವ್ ಗರ್ಲ್ ಫ್ರೆಂಡ್ ಎಂದು ತಿಳಿದ ಲಕ್ಷ್ಮೀ ಕುಸಿದು ಹೋಗಿದ್ದಳು. ದೊಡ್ಡಪ್ಪನ ಮಾತುಗಳಿಂದ ಮನಸ್ಸು ಬದಲಾಯಿಸಿಕೊಂಡು ವಾಪಸ್ ಬಂದಿದ್ದಾಳೆ. ಗಂಡನ ಜೊತೆಗೂಡಿ ಪೂಜೆಯನ್ನು ಮಾಡಿದ್ದಾಳೆ, ದಾನವನ್ನು ನೀಡಿದ್ದಾಳೆ. ಆದರೆ ಕೀರ್ತಿ ಕೇಳಿದ ದಾನವನ್ನು ನೀಡುವುದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾಳೆ.

ಮಗ-ಸೊಸೆಯ ಸಂಸಾರ ದುಸ್ಥಿತಿಗೆ ಬಂದು ತಲುಪಿದೆ. ಈಗಲೂ ಕಾವೇರಿ ತನ್ನ ಸ್ವಾರ್ಥ ಬಿಟ್ಟಿಲ್ಲ. ಬೇಸರ ಮಾಡಿಕೊಂಡು ಹೋಗಿದ್ದ ಲಕ್ಷ್ಮೀ ಬಂದಾಗಲೂ ಕಾವೇರಿ ಗಂಡ-ಹೆಂಡತಿಯನ್ನು ದೂರ ಮಾಡುವ ಕೆಲಸವನ್ನೇ ಮಾಡಿದ್ದಾಳೆ. ವೈಷ್ಣವ್‌ನನ್ನು ಬೇರೆ ರಾಜ್ಯಕ್ಕೆ ಕಳುಹಿಸಿದ್ದಾಳೆ. ವೈಷ್ಣವ್ ತಾನೂ ಬದಲಾಗಿರುವುದನ್ನು ಲಕ್ಷ್ಮೀ ಮುಂದೆ ತೋರಿಸಿದ್ದಾನೆ. ಆದರೆ ಈಗ ಆಗಿರುವ ನೋವಿಗೆ ಆ ಸಂಗತಿಯನ್ನು ಬೇಗ ಸ್ವೀಕರಿಸುವ ಮನಸ್ಸು ಮಾಡಿಲ್ಲ.

Colors kannada serial Lakshmibaramma Written Update on June 7th episode

ದಾನ ಕೇಳಿದ ಕೀರ್ತಿ

ಪೂಜೆ ಮುಗಿಸಿದ ಬಳಿಕ ಲಕ್ಷ್ಮೀ ಮುತ್ತೈದೆಯರಿಗೆ ದಾನ ನೀಡುತ್ತಿದ್ದಳು. ಪುರೋಹಿತರು ಕೂಡ ಸಲಹೆ ನೀಡಿದ್ದರು. ಯಾರೇ ದಾನ ಕೇಳಿದರೂ ಯಾವುದೇ ಕಾರಣಕ್ಕೂ ಇಲ್ಲ ಎನ್ನಬಾರದು ಎಂದೇ ಹೇಳಿದ್ದರು. ಅದನ್ನು ಕೇಳಿಸಿಕೊಂಡಿದ್ದ ಕೀರ್ತಿ, ಲಕ್ಷ್ಮೀ ಬಳಿ ವೈಷ್ಣವ್ ನನ್ನೇ ದಾನ ಕೇಳಿದ್ದಾಳೆ.

ತ್ಯಾಗ ಮಾಡಿದ ರೀತಿ ಹೇಳಿದ ಕೀರ್ತಿ

ಇದಕ್ಕೆ ಒಪ್ಪದ ಲಕ್ಷ್ಮೀ ಮುಂದೆ ಸಾಗಿದ್ದಳು. ಆಗ ಜೋರಾಗಿ ಕಿರುಚಿ‌ ಹೇಳಿದ ಕೀರ್ತಿ, ವೈಷ್ಣವ್ ಪ್ರಾಣ ಉಳಿಯುವುದಕ್ಕೆ ತ್ಯಾಗ ಮಾಡಿದ್ದೀನಿ ಎಂದಳು. ಲಕ್ಷ್ಮೀಗೆ ಆಶ್ಚರ್ಯವೂ ಆಯಿತು. ಅವಳ ಬಳಿ ವಿಚಾರವನ್ನು ಕೇಳಿದಾಗ. ವೈಷ್ಣವ್ ಪ್ರಾಣಕ್ಕೆ ಕಂಟಕ ಇತ್ತು. ನಿನ್ನ ಜೊತೆ ಮದುವೆ ಮಾಡಿದರೆ ಮಾತ್ರ ಪ್ರಾಣ ಉಳಿಯುತ್ತದೆ ಎಂದು ಹೇಳಿದ್ದಕ್ಕೆ ಮದುವೆ ಮಾಡಿಸಿದ್ದು. ಈಗ ನನಗೆ ಬಿಟ್ಟು ಕೊಡು ಎಂದಳು.

ತ್ಯಾಗ ಎಂದರೆ ಮತ್ತೆ ಕೇಳಬಾರದು ಎಂದ ಲಕ್ಷ್ಮೀ

ಕೀರ್ತಿ ಹೇಳಿದ ಮಾತುಗಳನ್ನೆಲ್ಲಾ ಸಮಾಧಾನವಾಗಿಯೇ ಕೇಳಿಸಿಕೊಂಡ ಲಕ್ಷ್ಮೀ, ವೈಷ್ಣವ್ ನನ್ನು ಬಿಟ್ಟು ಕೊಡುವುದಕ್ಕೆ ಸಾಧ್ಯವೇ ಇಲ್ಲ. ನನ್ನ ಗಂಡನನ್ನು ಬಿಟ್ಟು ಕೊಡುವುದಿಲ್ಲ ಎಂದಳು. ಅವರೇನು ಗೊಂಬೆಯಲ್ಲ. ನನಗೆ ಬೇಕಾದಾಗ ನಾನು, ನಿನಗೆ ಬೇಕಾದಾಗ ನೀನು ಬಳಸುವುದಕ್ಕೆ ಎಂದೇ ಉತ್ತರ ಕೊಟ್ಟಿದ್ದಾಳೆ. ತ್ಯಾಗ ಮಾಡಿದ್ದೀನಿ ಎಂದು ಹೇಳುತ್ತೀರಿ, ಮತ್ತೆ ಕೇಳಿದರೆ ಅದು ತ್ಯಾಗ ಹೇಗೆ ಆಗುತ್ತದೆ ಎಂದೇ‌ ಪ್ರಶ್ನೆ ಮಾಡಿದ್ದಾಳೆ.

Colors kannada serial Lakshmibaramma Written Update on June 7th episode

ಲಕ್ಷ್ಮೀ ಮಾತಿಗೆ ಫ್ಯಾನ್ಸ್ ಜೈಕಾರ

ಇನ್ನು ಲಕ್ಷ್ಮೀಯ ಈ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ಯಪಡಿಸಿದ್ದಾರೆ. ಬಗೆಬಗೆಯಾದ ಕಮೆಂಟ್ ಹಾಕುತ್ತಿದ್ದಾರೆ. 'ಲಕ್ಷ್ಮೀ ಇದೇ ಥರ ಧೈರ್ಯವಾಗಿರು. ಲಕ್ಷ್ಮೀ ಒಬ್ಬ ಗೃಹಿಣಿಯಾಗಿ‌ ನಿನ್ನ ಮಾತುಗಳನ್ನು ಮೆಚ್ಚಿದೆ. ಬಿಡಬೇಡ ಲಕ್ಷ್ಮೀ, ಆ ಕಾವೇರಿಗೆ ಗ್ರಹಚಾರ ಬಿಡಿಸು. ಸೂಪರ್ ಲಕ್ಷ್ಮೀ ಇದೇ ನಮ್ಮ ಸಂಸ್ಕೃತಿ. ತಾಳಿ ಕಟ್ಟಿದ ಗಂಡನನ್ನು ಬಿಟ್ಟು ಕೊಡುವ ಮಾತೇ ಇಲ್ಲ' ಅಂತ ಲಕ್ಷ್ಮೀಗೆ ಸಪೋರ್ಟ್ ಮಾಡಿದ್ರು.

ಕೀರ್ತಿಗೂ ಕಿವಿಮಾತು

ಕೆಲವರು ಕೀರ್ತಿಗೂ ಬುದ್ದಿ ಹೇಳಿದ್ರು. 'ಕೀರ್ತಿ ನಿನಗೆ ಮಾತು ಕೊಟ್ಟಿದ್ದು ಕಾವೇರಿ. ಹೋಗಿ ಅವಳನ್ನು ಕೇಳಿಕೋ' ಅಂತ ಒಬ್ಬರು ಹೇಳಿದ್ರೆ, 'ಪ್ರೀತಿ ಮಾಡಿದವರು ಸಿಕ್ಕಿಲ್ಲ ಅಂದ್ರೆ ಎಲ್ಲಿದ್ರು ಚೆನ್ನಾಗಿರಲಿ ಅಂತ ಬಯಸೋದು ನಿಜವಾದ ಪ್ರೀತಿ. ಬೇಕೆ ಬೇಕು ಅಂತ ಇನ್ನೊಬ್ಬರ ಜೀವನ ಹಾಳು ಮಾಡೋದನ್ನ ಪ್ರಿತೀ ಅನ್ನಲ್ಲ' ಅಂತ ಕೀರ್ತಿಗೂ ಬುದ್ದಿ ಹೇಳಿದ್ದಾರೆ.

More from Filmibeat

English summary
Lakshmibaramma kannada serial today episode. Here is the details about Viewers praised Lakshmi for her bold decision;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X