Nannamma Superstar: ಬಿಗ್ ಬಾಸ್ ಸಂಗೀತಾ ಹೊಟ್ಟೆಗೆ ಏನ್ ತಿಂತಾರೆ? ಮೃದಿನಿಗೆ ಕಾಡಿದ ದೊಡ್ಡ ಪ್ರಶ್ನೆ
ಕಲರ್ಸ್ ಕನ್ನಡದಲ್ಲಿ 'ನನ್ನಮ್ಮ ಸೂಪರ್ ಸ್ಟಾರ್' 2 ಸೀಸನ್ ಸಕ್ಸಸ್ ಆಗಿದೆ. ಹೀಗಾಗಿಯೇ ಮೂರನೇ ಬಾರಿಗೂ ತಂದಿದ್ದಾರೆ. ಅದರಲ್ಲೂ ಈ ಶೋ ಮೂಲಕ ಮಕ್ಕಳಿಂದ ಸಿಗುವ ಎಂಟರ್ಟೈನ್ಮೆಂಟ್ ಅಷ್ಟಿಷ್ಟಲ್ಲ. ನಕ್ಕು ನಕ್ಕು ಸಾಕಾಗುವಷ್ಟು ನಗು ಸಿಗುತ್ತದೆ. ಮಕ್ಕಳ ಆ ಮುಗ್ಧ ಮಾತು, ಆ ತುಂಟಾಟ ನೋಡುವುದಕ್ಕೇನೆ ಚೆಂದ. ಇನ್ನು ಸಿಕ್ಕಾಪಟ್ಟೆ ಟ್ಯಾಲೆಂಟ್ ಆಗಿ ಬಿಟ್ಟರೆ ನೋಡುಗರಿಗೆ ಖುಷಿ. ಚಾನೆಲ್ ಗೆ ಪಕ್ಕಾ ಟಿಆರ್ಪಿ.
ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 3. ಸಾಕಷ್ಟು ಮಕ್ಕಳ ಸಮಾಗಮಕ್ಕೆ ವೇದಿಕೆಯಾಗಿದೆ. ಈ ಬಾರಿ ಬಂದಿರುವ ಮಕ್ಕಳೆಲ್ಲಾ ಹೆಚ್ಚಿನ ಪ್ರತಿಭೆ ಇರುವವರು. ಹೀಗಾಗಿ ಈ ಸೀಸನ್ ಹೆಚ್ಚಿನ ಗಮನ ಸೆಳೆಯುತ್ತಿದೆ. ಅದರಲ್ಲೂ ಮೃದಿನಿಯ ಉಲ್ಟಾ ಪಲ್ಟಾ ಮಾತುಗಳು ಹೊಟ್ಟೆ ಉಣ್ಣಾಗಿಸುವಷ್ಟು ನಗುವನ್ನು ತರಿಸಿದೆ.

ಎಲ್ಲರ ಫೇವರಿಟ್ ಮೃದಿನಿ ಪುಟಾಣಿ
'ನನ್ನಮ್ಮ ಸೂಪರ್ ಸ್ಟಾರ್' ಸೀಸನ್- 3ರಲ್ಲಿ ಮೃದಿನಿ ಇದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ವಿಭಿನ್ನವಾದ ವಿಡಿಯೋಗಳನ್ನು ಮಾಡುತ್ತಾ ಫೇಮಸ್ ಆಗಿದ್ದಳು. ಈ ಬಾರಿಯ ರಿಯಾಲಿಟಿ ಶೋಗೆ ಅಮ್ಮನ ಜೊತೆಗೆ ಬಂದಿದ್ದಾಳೆ. ಸೀರಿಯಸ್ ಆಗಿನೇ ತರ್ಲೆ ತರ್ಲೆ ಪ್ರಶ್ನೆಗಳು, ಉಲ್ಟಾಪಲ್ಟಾ ಪ್ರಶ್ನೆಗಳನ್ನೇ ಕೇಳುತ್ತಾಳೆ. ಇದು ಎಲ್ಲರಿಗೂ ಇಷ್ಟವಾಗುವಂತದ್ದು.
ಸಂಗೀತಾ ಶೃಂಗೇರಿಗೆ ಕಾಲೆಳೆದ ಮೃದಿನಿ
ಬಿಗ್ ಬಾಸ್ ಮುಗಿದ ಮೇಲೆ ಸಂಗೀತಾ, ಕಲರ್ಸ್ ಕನ್ನಡ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ. ಆಗಾಗ ಗೆಸ್ಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋಗೆ ಮತ್ತೆ ಬಂದಿದ್ದಾರೆ. ಈಗ ಆಂಕರ್ ಬಿಟ್ಟು ಮೃದಿನಿಯೇ ಸಂಗೀತಾಳಿಗೆ ಪ್ರಶ್ನೆ ಕೇಳುತ್ತಾ, ಕಾಲೆಳೆದಿದ್ದಾಳೆ. ಇದು ನೋಡುಗರಿಗೂ ಒಳ್ಳೆಯ ಮನರಂಜನೆ ನೀಡಿದೆ. ಸಂಗೀತಾ ಶೃಂಗೇರಿ ಕೂಡ ಮೃದಿನಿ ಜೊತೆಗೆ ಸೇರಿ ಮಗುವಾಗಿ ಬಿಟ್ಟಿದ್ದಾರೆ.

ಸ್ಟೇಜ್ ಮೇಲೆ ಫೋನ್ ಸಂಭಾಷಣೆ
ವೇದಿಕೆ ಮೇಲೆ ಸಂಗೀತಾ ಹಾಗೂ ಮೃದಿನಿ ಇಬ್ಬರು ಇದ್ದರು. ನಿರೂಪಕಿ ಸುಷ್ಮಾ ಇಬ್ಬರಿಗೂ ಒಂದು ಟಾಸ್ಕ್ ಕೊಟ್ಟರು. ವೇದಿಕೆ ಮೇಲೆ ಇದ್ದರು ಕೂಡ ಫೋನ್ ನಲ್ಲಿ ಮಾತನಾಡುವಂತ ಟಾಸ್ಕ್ ಅದು. ಆದರೆ ಮೃದಿನಿ ಮಾತನಾಡುವಾಗ ನಾನು ಸಂಗೀತ ಅಂತಾನೆ ಅಂದಳು. ಆಮೇಲೆ ಮಾತನಾಡುತ್ತಾ ಮಾತನಾಡುತ್ತಾ ಮತ್ತೆ ಮೃದಿನಿಯಾಗಿಯೇ ಬದಲಾಗಿ ಬಿಟ್ಟಳು. ಈ ಮಾತುಕತೆ ನಡುವೆ ಬಿಗ್ ಬಾಸ್ ರಿಯಾಲಿಟಿ ಶೋ ಬಗ್ಗೆಯೇ ಹೆಚ್ಚು ಚರ್ಚೆ ಆಯಿತು. ಮೃದಿನಿ, ಬಿಗ್ ಬಾಸ್ ರಿಯಾಲಿಟಿ ಶೋ ವನ್ನು ಸೂಕ್ಷ್ಮವಾಗಿಯೇ ನೋಡಿದ್ದಾಳೆ ಎನಿಸಿತ್ತು. ಎಲ್ಲರ ಹೆಸರು, ಅವರು ಮಾಡಿದ್ದಂತ ಜಗಳಗಳು ನೆನಪಿದೆ. ಅದೇ ಥರ ಸಂಗೀತಾಳ ವಿಚಾರವೂ ನೆನಪಿದೆ ಅವಳಿಗೆ.
ಧೈರ್ಯ ಬರೋದಕ್ಕೆ ಏನು ತಿನ್ನಬೇಕು..?
ಸಂಗೀತಾ ಸಿಕ್ಕಾಪಟ್ಟೆ ಧೈರ್ಯವಂತೆ ಎಂಬುದು ಮೃದಿನಿಗೆ ಅರ್ಥವಾಗಿದೆ. 'ನೀವೂ ಬಿಗ್ ಬಾಸ್ ನಲ್ಲಿ ಮಾತನಾಡಿದರೆ ಯಾಕೆ ಎಲ್ಲಾ ಹೆದರಿಕೊಳ್ಳುತ್ತಾ ಇದ್ರು. ನಿಮಗೆ ಅಷ್ಟೊಂದು ಸ್ಟ್ರಾಂಗ್ ಏನು ತಿಂತೀರಾ ನೀವೂ' ಎಂದು ಕೇಳಿದ್ದಾಳೆ. ಮೃದಿನಿಯ ಪ್ರಶ್ನೆಗೆ ಎಲ್ಲರೂ ನಕ್ಕಿದ್ದಾರೆ. ಮೃದಿನಿ ಅಮ್ಮ ಸಾರಿಕಾಗಂತು ಆಶ್ಚರ್ಯವೇ ಆಗಿದೆ. ಸುಮ್ಮನೆ ಮುಖ ಮರೆ ಮಾಡಲು ಕೈ ಹೊತ್ತು ಕುಳಿತು ಬಿಟ್ಟಿದ್ದಾರೆ. ಮೃದಿನಿ ಅಂದ್ರೇನೆ ಹಾಗೇ ಉತ್ತರವೇ ಕೊಡಲಾಗದಂತ ಪ್ರಶ್ನೆಗಳ ಗುಚ್ಛ.


Click it and Unblock the Notifications











