Nannamma Superstar: ಸುದೀಪ್ ಬಗ್ಗೆ ಪುಟಾಣಿ ಮೃದಿನಿ ಹೇಳಿದ ಮಾತಿಗೆ ವೇದಿಕೆ ಶಾಕ್..!

By ಎಸ್ ಸುಮಂತ್

ಮಕ್ಕಳ ಮಾತು ಚೆಂದ, ಮಕ್ಕಳ ತೊದಲು ನುಡಿ ಚೆಂದ, ಮಕ್ಕಳ ಕಲ್ಪನೆಯೇ ಚೆಂದ. ಹೇಳಬೇಕು ಅಂದ್ರೆ ಮಕ್ಕಳು ಏನು ಮಾಡಿದರೂ ಚೆಂದ. ಅದಕ್ಕೆ ನನ್ನಮ್ಮ ಸೂಪರ್ ಸ್ಟಾರ್ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಮನರಂಜನೆಯ ಜೊತೆಗೆ ಮಕ್ಕಳಲ್ಲಿ ಇರುವ ಟ್ಯಾಲೆಂಟ್ ಅನ್ನು ಹೊರ ತರುವ ವೇದಿಕೆ ಇದಾಗಿದೆ.

ಈ ಬಾರಿ 'ನನ್ನಮ್ಮ ಸೂಪರ್ ಸ್ಟಾರ್' ಶೋಗೆ ಸೋಷಿಯಲ್ ಮೀಡಿಯಾದಲ್ಲಿ ಕ್ರಿಯೇಟಿವ್ ಆಗಿ ಆಕ್ಟೀವ್ ಆಗಿರುವ ಅಮ್ಮ-ಮಗಳನ್ನು ಕರೆಸಲಾಗಿದೆ. ಅದರಲ್ಲಿ ಸಾರಿಕಾ ಹಾಗೂ ಮೃದಿನಿ ಜೋಡಿ ಕೂಡ ಒಂದು. ಮೃದಿನಿಯ ಒಂದೊಂದು ಮಾತು ಕೇಳುವಾಗಲೂ ನಕ್ಕು ನಕ್ಕು ಸಾಕಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲೂ ಕೂಡ ಮೃದಿನಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾಳೆ. ಈಗ ಕಿರುತೆರೆಯಲ್ಲೂ ನಕ್ಕು ನಗಿಸುತ್ತಿದ್ದಾಳೆ.

Colors kannada serial Nannamma super star Written Update on latest episode

ಈ ವಾರದ ಅತಿಥಿ ತನಿಷಾ

ಬಿಗ್ ಬಾಸ್ ಸೀಸನ್-10 ಮುಗಿದ ಮೇಲೆ ಕಂಟೆಸ್ಟೆಂಟ್‌ಗಳು ಕಲರ್ಸ್ ಕನ್ನಡದ ಕಾರ್ಯಕ್ರಮಗಳ ಜೊತೆ ಜೊತೆಗೆ ಸಾಗುತ್ತಿದ್ದಾರೆ. 'ಗಿಚ್ಚಿ ಗಿಲಿಗಿಲಿ-3'ಯಲ್ಲಿ ಮೂರು ಜನ ಮಿಂಚುತ್ತಿದ್ದರೆ, 'ನನ್ನಮ್ಮ ಸೂಪರ್ ಸ್ಟಾರ್'-3 ವೇದಿಕೆಗೆ ಆಗಾಗ ಬಿಗ್ ಬಾಸ್ ಸ್ಪರ್ಧಿಗಳನ್ನ ಗೆಸ್ಟ್ ಆಗಿ ಕರೆಸಲಾಗುತ್ತದೆ. ಈ ವಾರದ ಅತಿಥಿಯಾಗಿ ತನಿಷಾ ಕುಪ್ಪಂಡ ಬಂದಿದ್ದಾರೆ.

ಮೃದಿನಿ ಮಾತಿಗೆ ಕರಗೋದಾ ತನಿಷಾ

ತನಿಷಾಗೆ ಒಂದು ಟಾಸ್ಕ್ ಇದೆ. ಮೆಂಟರ್ ಆಗಿ ಅಮ್ಮ-ಮಗಳಿಗೆ ಅಡುಗೆ ಮಾಡುವುದನ್ನು ಹೇಳಿಕೊಡಬೇಕು. ಅದಕ್ಕೂ ಮುನ್ನ ವೇದಿಕೆ ಮೇಲೆ ಒಂದಿಷ್ಟು ಮಾತುಕತೆ ನಡೆದಿದೆ. ಆಗ ಮೃದಿನಿ, ನಾನು ತನಿಷಾಗೆ ಒಂದು ಪ್ರಶ್ನೆ ಕೇಳಬೇಕು ಎಂದು ಹೇಳುವ ಮೂಲಕ ಎಲ್ಲರನ್ನು ಆಶ್ಚರ್ಯಕ್ಕೆ ದೂಡಿದ್ದಾಳೆ. ಬಳಿಕ ಅಸ್ತು ಎಂದ ಮೇಲೆ, 'ತನಿಷಾ ನಿಮ್ಗೆ ಕಾಲಿಗೆ ಪೆಟ್ಟಾಗಿತ್ತಲ್ಲ ಈಗ ಹೇಗಿದ್ದೀರಾ' ಎಂದು ಆರೋಗ್ಯ ವಿಚಾರಿಸಿದ್ದಾಳೆ. ಮಗುವಿನ ಮಾತಿಗೆ ತನಿಷಾ ಫಿದಾ ಆಗಿದ್ದು, ಇನ್ನು ಸ್ವಲ್ಪ ರೆಸ್ಟ್ ಬೇಕಿದೆ ಎಂದಿದ್ದಾರೆ.

ಬಿಗ್ ಬಾಸ್ ಶೋ ಫ್ಯಾನ್ ಮೃದಿನಿ

ಮೃದಿನಿ ಮಾತಿನಲ್ಲಿಯೇ ಸೆಳೆದಿದ್ದೇ ತಡ, ಸುಷ್ಮಾ ಮಾತಿಗೆ ಇಳಿದಿದ್ದಾರೆ. ಮೃದಿನಿ, ಇವ್ರು ಬಿಗ್ ಬಾಸ್ ಶೋನಲ್ಲಿ ಏನು ಮಾಡುತ್ತಾ ಇದ್ರು ಅಂದ್ರೆ, ಎಲ್ಲರಿಗೂ ಹೊಡಿತಾ ಇದ್ರು ಎಂದಿದ್ದಾಳೆ. ಆಮೇಲೆ ನಿಧಾನಕ್ಕೆ ಕೇಳಿದಾಗ ಸಾರಿ ಸಾರಿ ಬೈತಾ ಇದ್ರು ಎಂದಿದ್ದಾಳೆ. ಬಳಿಕ ವಿನಯ್ ಬಗ್ಗೆಯೂ ಹೇಳಿದ್ದಾಳೆ. ಪುಟಾಣಿಯ ಮಾತು ಕೇಳಿದಾಗಲೇ ಅರ್ಥವಾಗಿದ್ದು, ಅವಳು ಬಿಗ್ ಬಾಸ್ ಎಪಿಸೋಡ್‌ಗಳನ್ನು ಒಂದು ಬಿಡದೇ ನೋಡಿದ್ದಾಳೆ ಎಂಬುದು. ಅದರಲ್ಲೂ ಹಳ್ಳಿ ಡ್ರೆಸ್ ಹಾಕಿದ್ದನ್ನು ಹೇಳಿದ್ದಾಳೆ.

Colors kannada serial Nannamma super star Written Update on latest episode

ಸುದೀಪ್ ಬಗ್ಗೆ ಕೇಳಿ ವೇದಿಕೆ ಶಾಕ್

ಮೃದಿನಿಯ ನೆನಪಿನ ಶಕ್ತಿಗೆ, ಆಸಕ್ತಿಗೆ ಎಲ್ಲರೂ ಒಂದು ಕ್ಷಣ ವಾವ್ ಎಂದರು. ಬಳಿಕ ತನಿಷಾ ಪೆಟ್ಟು ಮಾಡಿಕೊಂಡಿದ್ದು ಹೇಗೆ ಎಂದು ಕೇಳಿದಾಗ ಆ ಘಟನೆಯನ್ನು ವಿವರಿಸಿದಳು. ಅದರ ನಡುವೆ, ಅವರನ್ನು ಅಲ್ಲಿಂದ ಕರೆದುಕೊಂಡು ಹೋದರು. ಆಮೇಲೆ ಸುದೀಪ್ ಸರ್ ಬ್ಯಾಂಡೇಜ್ ಹಾಕಿದರು ಎಂದಳು. ಇದನ್ನು ಕೇಳಿದ ಎಲ್ಲರೂ ಸುದೀಪ್ ಸರ್ ಹ ಅವರ್ಯಾಕೆ ಬ್ಯಾಂಡೇಜ್ ಹಾಕ್ತಾರೆ ಅಂದ್ರೆ, ತಂದಿದ್ರು ಹಾಕುದ್ರು ಎಂದು ಎಲ್ಲರನ್ನು ನಗಿಸಿದ್ದಾಳೆ. ಬಳಿಕ ಅಡುಗೆ ಮಾಡುವ ಟಾಸ್ಕ್ ಶುರುವಾಯಿತು.

More from Filmibeat

English summary
colors kannada serial Nannamma super star Written Update on new episode. Here is the details about Mrudini comedy;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X