Nannamma Superstar: ಬುದ್ದಿಮಾಂದ್ಯ ಪಾತ್ರದಲ್ಲಿ ಮೃದಿನಿ; ತೀರ್ಪುಗಾರರನ್ನು ಅಳಿಸಿ, ನಗಿಸಿದ ಪುಟಾಣಿ!
ಕಲರ್ಸ್ ಕನ್ನಡದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 3 ಶೋ ಬರ್ತಾ ಇದೆ. ವೀಕೆಂಡ್‌ನಲ್ಲಿ ಈ ಶೋ ನೋಡುವುದಕ್ಕೇನೆ ಖುಷಿ. ಮಕ್ಕಳ ನಗು, ತುಂಟಾಟದ ನಡುವೆ ಮಕ್ಕಳ ಪ್ರತಿಭೆ ಕೂಡ ಅನಾವರಣವಾಗುತ್ತದೆ. ಅದರಲ್ಲೂ ಈ ಬಾರಿಯ ಸೀಸನ್‌ನಲ್ಲಿ ಇರುವ ಮೃದಿನಿ ಎಲ್ಲರ ಮುದ್ದಿನ ಮಗು. ಅವಳ ಪ್ರತಿಭೆಗೆ ಎಲ್ಲರೂ ಸಲಾಮ್ ಎನ್ನುತ್ತಾರೆ. ಬರೀ ನಟನೆ ಮಾತ್ರವಲ್ಲ, ನಗಿಸುವುದರಲ್ಲೂ ಮುಂದಿದ್ದಾಳೆ.
ಮೃದಿನಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್. ಅವರ ತಾಯಿ ಸಾರಿಕಾ ಜೊತೆಗೆ ರೀಲ್ಸ್ ಮಾಡುತ್ತಾ ಎಲ್ಲರ ಅಚ್ಚುಮೆಚ್ಚಿನ ಮಗು ಆಗಿದ್ದಾಳೆ. ಕಾಮಿಡಿ ಮಾಡುವುದರ ಜೊತೆಗೆ ಫೇಸ್ ಎಕ್ಸ್‌ಪ್ರೆಷನ್ ಸೂಪರ್ ಆಗಿ ಕೊಡುತ್ತಾಳೆ. ಇನ್ನು ಟಾಂಟ್ ಕೊಡುವುದರಲ್ಲೂ ಮುಂದು. ಇದೀಗ ನಟನೆ ಮಾಡುವುದರಲ್ಲೂ ಜಡ್ಜಸ್ ಗಳಿಂದ ಸೈ ಎನಿಸಿಕೊಂಡಿದ್ದಾಳೆ.

ಮಗುವನ್ನು ತೆಗೆಸದೆ ಹೆತ್ತ ತಾಯಿ
ಸಾರಿಕಾ ಮತ್ತು ಮೃದಿನಿ ವೇದಿಕೆ ಮೇಲೆ ಒಂದು ಭಾವನಾತ್ಮಕ ಸ್ಕಿಟ್ ಮಾಡಲು ಶುರು ಮಾಡಿದರು. ಅದು ತಾಯಿ-ಮಗುವಿನ ಆತ್ಮೀಯ ಸಂಬಂಧದ ಕಾನ್ಸೆಪ್ಟ್. ಗರ್ಭಿಣಿ ತಾಯಿಗೆ ಮಗುವಿನ ಬೆಳವಣಿಗೆ ಆಗಿಲ್ಲ, ಮಗುವನ್ನು ತೆಗಿಸಿಬಿಡಿ, ಮುಂದೆ ಸಾಕುವುದಕ್ಕೆ ಕಷ್ಟ ಆಗುತ್ತೆ ಅಂತ ಡಾಕ್ಟರ್ ಹೇಳಿದ್ದಾರೆ. ಆದರೆ ಆ ತಾಯಿಗೆ ಮಗುವನ್ನು ತೆಗೆಸುವುದಕ್ಕೆ ಒಪ್ಪಿಲ್ಲ. ಏನಾದರೂ ಸರಿ ಮಗುವನ್ನು ನಾನು ತೆಗೆಸಲ್ಲ ಎಂದೇ ಹೇಳಿದ್ದಳು.
ಬುದ್ದಿಮಾಂದ್ಯಳಾಗಿ ನಟಿಸಿದ ಮೃದಿನಿ
ಕಡೆಗೆ ಮಗು ಬುದ್ಧಿಮಾಂದ್ಯತೆಯಿಂದ ಹುಟ್ಟುತ್ತಾಳೆ. ಆಕ್ಟೀವ್ ಇಲ್ಲ. ಊಟ ಮಾಡುವಾಗಲು ಹೇಗೇಗೋ ಮಾಡುತ್ತಾಳೆ. ಆದರೂ ತಾಯಿಗೆ ಕೊಂಚವೂ ಕೋಪ ಬರಲ್ಲ. ಆದರೆ ಮನಸ್ಸಲ್ಲಿ ನೋವು ಮಾತ್ರ ಇರುತ್ತೆ. ಇಲ್ಲಿ ತಾಯಿ ನಟನೆಗಿಂತ ಮಗುವಿನ ನಟನೆಯೇ ಎಲ್ಲರ ಗಮನ ಸೆಳೆದಿದ್ದು. ಮೃದುನಿ ಇನ್ನು ಬಹಳ ಚಿಕ್ಕ ಮಗು. ಆ ಬುದ್ದಿಮಾಂದ್ಯ ಮಗುವಿನ ನಟನೆ ಮಾಡುವಷ್ಟು ದೊಡ್ಡವಳಲ್ಲ. ಆದರೆ ಕೊಂಚವೂ ನಟನೆ ಎನಿಸಲಿಲ್ಲ. ನಿಜವಾಗಿಯೂ ಬುದ್ದಿಮಾಂದ್ಯ ಮಗುವಿನಂತೆ ನಟಿಸಿದಳು.

ಕೋಪ, ನಗು, ನಾಚಿದ ಮೃದಿನಿ
ಮೃದಿನಿ ಸಕಲ ಕಲಾವಲ್ಲಭೆ. ಯಾವುದೇ ವಿಚಾರ ಹೇಳಿದರೂ ಅದಕ್ಕೆ ನಟಿಸಿ ಸೈ ಎನಿಸಿಕೊಳ್ಳುತ್ತಾಳೆ. ಈಗ ಗೊಂಬೆ ಹಾಗೂ ಮೃದಿನಿಯನ್ನ ವೇದಿಕೆ ಮೇಲೆ ಕರೆಯಲಾಗಿದೆ. ಅದಕ್ಕೆ ಇನ್ನೊಬ್ಬ ಮಗುವನ್ನು ನಡುವೆ ನಿಲ್ಲಿಸಿ, ನವರಸಗಳ ನಟನೆಯನ್ನು ಮಾಡುವುದಕ್ಕೆ ಹೇಳಿದ್ದಾರೆ. ಅದನ್ನ ಆ ಮಗು ಜಡ್ಜ್ ಮಾಡಬೇಕಿದೆ. ಮೃದಿನಿ ಮತ್ತು ಗೊಂಬೆಗೆ ಮೊದಲು ನಗು, ಕೋಪ, ನಾಚಿಕೆಯನ್ನು ತೋರಿಸುವ ಟಾಸ್ಕ್ ನೀಡಿದ್ದಾರೆ.
ನಟನೆಗೂ ಸೈ.. ಹಾಸ್ಯಕ್ಕೂ ಜೈ
ಮೃದಿನಿ ಮೊದಲೇ ಹೇಳಿದಂತೆ ಸಕಲಕಲಾವಲ್ಲಭೆ. ಆದರೆ ಕೋಪ ತೋರಿಸು ಅಂದ್ರೆ ಪಟಕ್ ಅಂತ ನಕ್ಕಿದ್ದಾಳೆ. ನಾಚಿಕೆ ಪಟ್ಟುಕ್ಕೊಳ್ಳಮ್ಮ ಅಂದ್ರೆ ಹುಡುಗನೇ ನಾಚಿಕೆ ಪಟ್ಟುಕೊಳ್ಳುವಂತೆ ಮಾಡಿದ್ದಾಳೆ. ಅವಳು ಬಿದ್ದು ಬಿದ್ದು ನಾಚಿಕೆ ಪಟ್ಟುಕೊಂಡಿದ್ದಾಳೆ. ಇವಳ ಆಕ್ಟಿಂಗ್‌ಗೆ ತೀರ್ಪುಗಾರರು ಸೋತು ಹೋಗಿದ್ದಾರೆ. ಬುದ್ದಿಮಾಂದ್ಯ ಮಗುವಾಗಿ ಅಳಿಸಿದ್ದ ಮೃದಿನಿ, ಈಗ ಹಾಸ್ಯ ಮಾಡಿ ಎಲ್ಲರನ್ನು ನಗಿಸಿದ್ದಾಳೆ. ನನ್ನಮ್ಮ ಸೂಪರ್ ಸ್ಟಾರ್ ವೇದಿಕೆಯಲ್ಲಿ ಮೃದಿನಿ ಇದ್ದರೇನೆ ಒಂದು ಕಲೆ. ಅವಳ ಮಾತಿಗೇನೆ ಎಷ್ಟೋ ಜನ ಫ್ಯಾನ್ಸ್ ಆಗಿದ್ದಾರೆ.


Click it and Unblock the Notifications











