Nannamma Superstar: ಈ ಪುಟಾಣಿಗೆ ಕೊಹ್ಲಿ, ಯಶ್, ಕಿಚ್ಚ ಫುಲ್ ಕ್ಲೋಸ್; ಸಪ್ತಮಿಗೆ ಚಾನ್ಸ್‌ ಸಿಕ್ತಿರೋದೆ ಈಕೆಯಿಂದ!

By ಎಸ್ ಸುಮಂತ್

ಕಲರ್ಸ್ ಕನ್ನಡದಲ್ಲಿ -ನನ್ನಮ್ಮ ಸೂಪರ್ ಸ್ಟಾರ್ ಸೀಸನ್- 3- ಬರ್ತಾ ಇದೆ. ಈ ಕಾರ್ಯಕ್ರಮದಲ್ಲಿ ಮಕ್ಕಳ ಮಾತುಗಳೇ ಹೈಲೇಟ್, ಮಕ್ಕಳ ನಟನೆಯೇ ಹೈಲೇಟ್. ಅದರಲ್ಲೂ ಮೃದಿನಿ ಮಾತುಗಳು ಎಂಥವರನ್ನು ನಕ್ಕು ನಲಿಸುತ್ತದೆ. ಮೃದಿನಿ ಮಾತಿಗೆ ನಿಂತರೆ ಟಾಂಟ್ ಕೊಡುವುದರಲ್ಲಿ ಎಕ್ಸ್‌ಪರ್ಟ್. ಮೃದಿನಿಯ ಡೈಲಾಗ್‌ಗಳಿಗೆ ಇನ್ಸ್ಟಾಗ್ರಾಮ್‌ನಲ್ಲಿ ಅದೆಷ್ಟೋ ಜನ ಲಿಪ್ ಸಿಂಕ್ ಮಾಡಿದ್ದಾರೆ. ಅಷ್ಟು ಫೇಮಸ್ ಈ ಮೃದಿನಿ.

ಮಕ್ಕಳು ಏನೇ ಮಾಡಿದರು ಚೆಂದ ಅಂತಾರೆ.‌ ಏನೇ ಮಾತನಾಡಿದರೂ ಕೇಳುವುದಕ್ಕೆ ಚೆಂದ. ಆದರೆ ಮೃದಿನಿ ಆ ರೀತಿ ಏನಂದ್ರೆ ಅದು ಮಾತನಾಡಲ್ಲ. ಏನು ಇಷ್ಟೊಂದು ಮಾತನಾಡುತ್ತಾಳೆ ಎಂಬ ಕಿರಿಕಿರಿ ಇರಲ್ಲ. ಆ ಕ್ಷಣಕ್ಕೆ ಕೇಳಿದರಷ್ಟೇ ನಗು ಭರಿಸುವಷ್ಟು ಟಾಂಟ್ ಕೊಡುತ್ತಾಳೆ. ಹೀಗಾಗಿ ನನ್ನಮ್ಮ ಸೂಪರ್ ಸ್ಟಾರ್ ವೇದಿಕೆಯಲ್ಲಿ ಮೃದಿನಿ ಎಂದರೆ ಅಚ್ಚುಮೆಚ್ಚು.

colors kannada serial Nannamma super star Written Update on May 25th episode

ರಿಯಾಲಿಟಿ ಶೋನಲ್ಲಿ ಸಪ್ತಮಿ ಗೆಸ್ಟ್

ಸಪ್ತಮಿ ಗೌಡ 'ಕಾಂತಾರ' ಸಿನಿಮಾ ಬಳಿಕ ಮೇಲೆ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಜೊತೆಗೆ ಕಲರ್ಸ್ ಕನ್ನಡದಲ್ಲಿ ಧಾರಾವಾಹಿಗಳಿಗೆ ಟ್ವಿಸ್ಟ್ ಕೊಡುವ ವಿಚಾರವನ್ನು ಗೆಸ್ಟ್ ಆಗಿ ಬಂದು ಆಗಾಗ ಹೇಳುತ್ತಾ ಇರುತ್ತಾರೆ. ಇದೀಗ 'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋಗೂ ಗೆಸ್ಟ್ ಆಗಿ ಬಂದಿದ್ದಾರೆ.

ಪಟಾ ಪಟ್ ಅಂತ ಕರೆ ಮಾಡುವ ಬಾಲಕಿ

ಈ ಶೋನಲ್ಲಿ ಹೆಚ್ಚು ಗಮನ ಸೆಳೆಯುವ ಮೃದಿನಿಗೆ ದೊಡ್ಡ ದೊಡ್ಡ ಸ್ಟಾರ್ಸ್‌ ಗೊತ್ತು. ವಿರಾಟ್ ಕೊಹ್ಲಿ ಬೇಕಾ, ಕಿಚ್ಚ ಸುದೀಪ್ ಬೇಕಾ, ರಾಕಿಂಗ್ ಸ್ಟಾರ್ ಯಶ್ ಬೇಕಾ ಹೇಳಿ. ಈ ಮೂವರ ಜೊತೆಗೆ ಮಾತನಾಡಬೇಕು ಅಂದ್ರೆ ಸಾಕು ಪಟ್ ಅಂತ ಕಾಲ್ ಮಾಡಿ ಬಿಡುತ್ತಾಳೆ. ಅಷ್ಟು ಕಾಂಟ್ಯಾಕ್ಟ್ ಇದೆ ಮೃದಿನಿಗೆ. ನಾವೂ ನೀವೂ ಯೂಸ್ ಮಾಡುವಂತ ಫೋನ್ ಕೂಡ ಬೇಡ. ಮೈಕ್ ಇದ್ದರೆ ಮೈಕ್, ಅಂಗೈನಲ್ಲೇ ಆದರೆ ಅಂಗೈನಲ್ಲೇ ಫೋನ್ ಒತ್ತುತ್ತಾ ಇರೋದೆ.

colors kannada serial Nannamma super star Written Update on May 25th episode

ಯಶ್ ಬಳಿ ಅವಕಾಶ ಕೇಳಿದ ಮೃದಿನಿ

ಆರಂಭದಲ್ಲಿ ಕಿಚ್ಚ ಸುದೀಪ್‌ಗೆ ಕಾಲ್ ಮಾಡಿದ ಮೃದಿನಿ, ಕಿಚ್ಚ ಸುದೀಪ್ ಹೇಗಿದ್ದೀರಾ ಅಂತಾನೇ ಮಾತನಾಡಿದಳು. ಆಮೇಲೆ ಸಪ್ತಮಿ ಗೌಡಗೆ ಯಶ್ ಜೊತೆಗೆ ಸಿನಿಮಾ ಮಾಡುವ ಆಸೆಯಾಗಿದೆ. ಹೀಗಾಗಿ‌ಒಂದು ಅವಕಾಶ ಕೊಡಿಸ್ತೀಯಾ ಎಂದು ಕೇಳಿದಾಗ ಪಟ್ ಅಂತ ರಾಕಿಂಗ್ ಸ್ಟಾರ್ ಯಶ್‌ಗೆ ಕಾಲ್ ಮಾಡಿ, ರಾಕಿಂಗ್ ಸ್ಟಾರ್ ಯಶ್. ಸಪ್ತಮಿ ಗೌಡಗೆ ನಿಮ್ಮ ಜೊತೆಗೆ ಸಿನಿಮಾ ಮಾಡಬೇಕಂತೆ. ಇಲ್ಲಿಗೆ ಬಾ ಮಾತನಾಡಬೇಕು ಎಂದಿದ್ದಾಳೆ.

ಮೃದಿನಿ ಪ್ರಕಾರ ಜಡ್ಜಸ್ ಏನು ಮಾಡ್ತಾರೆ?

ಮೃದಿನಿಯ ಮಾತುಗಳೆಂದರೆ ಹೀಗೆ‌ ಇರೋದು. ಆ ಮಾತುಗಳು ನೆರೆದಿದ್ದವರನ್ನೆಲ್ಲಾ ನಕ್ಕು ನಲಿಸುತ್ತದೆ. ಇದೀಗ ಕಾಮಿಡಿ ಮಾಡಿದ ಮೃದಿನಿ, ಸೀರಿಯಸ್ ಆಗಿಯೇ ಜಡ್ಜಸ್‌ಗಳನ್ನು ಜಡ್ಜ್‌ ಮಾಡಿದ್ದಾಳೆ. ಜಡ್ಜಸ್ ಅಂದ್ರೆ ಸುಮ್ಮನೆ ಕೂರುತ್ತಾರೆ. ಇಲ್ಲ ಸ್ಟೇಜ್ ಮೇಲೆ ಬಂದು ಮುತ್ತು ಕೊಡುತ್ತಾರೆ ಎಂದಿದ್ದಾಳೆ. ಅಷ್ಟೇ ಅಲ್ಲ ನಾನು ನೆಕ್ಸ್ಟ್ ಜಡ್ಜ್ ಆಗ್ತೀನಿ ಅಂತಾನೆ ಹೇಳಿದ್ದಾಳೆ. ಇದನ್ನು ಕೇಳಿದ ತಾರಾ, ಸೃಜನ್ ಲೋಕೇಶ್, ಅನು ಪ್ರಭಾಕರ್ ಶಾಕ್ ಆಗಿದ್ದಾರೆ. ಜೊತೆಗೆ ಆ ಕಾಮಿಡಿಗೆ ಖುಷಿಯಾಗಿದ್ದಾರೆ.

More from Filmibeat

English summary
Nannamma super star Written Update on latest episode. Here is the details about If you call Mridini, Kohli, Sudeep, Yash will receive it,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X