Ritvik mathad: 'ನಿನಗಾಗಿ' ರಿತ್ವಿಕ್ ನಟನಾಗುವ ಮುನ್ನ ಟೀ ಮಾರುತ್ತಿದ್ದರು; ಆ ದಿನಗಳು ತೆರೆಮೇಲೆ ಮರುಕಳಿಸಿದಾಗ!
ಕಲರ್ಸ್ ಕನ್ನಡದಲ್ಲಿ ಈ ವಾರದಿಂದ ಹೊಸ ಧಾರಾವಾಹಿಯೊಂದು ಶುರುವಾಗುತ್ತಿದೆ. ಬಹಳ ದಿನಗಳ ಬಳಿಕ ದಿವ್ಯಾ ಉರುಡುಗ ಕಿರುತೆರೆಗೆ ಕಮ್ ಬ್ಯಾಕ್ ಆಗುತ್ತಿದ್ದಾರೆ. ಕೌಟುಂಬಿಕ ಧಾರಾವಾಹಿಗಳಿಗೆ ಖ್ಯಾತಿ ಪಡೆದಿರುವ ಸಂಪೃಥ್ವಿ ನಿನಗಾಗಿ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಅದ್ದೂರಿಯಾಗಿ ಧಾರಾವಾಹಿಯನ್ನು ಘೋಷಣೆ ಮಾಡಲಾಗಿದೆ. ನಾಳೆಯಿಂದ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.
ತಂದೆಗೆ ಮಗಳು, ಮಗಳಿಗೆ ತಂದೆ. ಈ ಪುಟ್ಟ ಪ್ರಪಂಚದಲ್ಲಿ ತಾವೀಬ್ಬರೇ ಖುಷಿಯಾಗಿರಬೇಕೆಂಬ ಆಸೆ ಜೀವನದ್ದು. ಅತ್ತ ರಚ್ಚು ಬಿಗ್ ಸ್ಟಾರ್ ಆಗಿ ಬೆಳೆದಿರುತ್ತಾರೆ. ತಾಯಿಯ ಮಾತು ಮೀರುವುದಕ್ಕೆ ಆಗದಂತ ಪಾತ್ರವದು. ಬರೀ ಖ್ಯಾತಿ ಹಿಂದೆ ಬಿದ್ದಿರುವ ಅಮ್ಮನ ಜೊತೆಗೆ ರಚ್ಚು ಹೆಣಗುವ ಕಥೆ. ರಚ್ಚು ಜೀವ ಕಡೆಗೆ ಒಂದಾಗುವ ಕಥೆ ಇದಾಗಿದೆ.

ಜೀವ ಪಾತ್ರಧಾರಿ ರಿತ್ವಿಕ್
'ನಿನಗಾಗಿ' ಧಾರಾವಾಹಿಯಲ್ಲಿ ಜೀವ ಪಾತ್ರವನ್ನು ರಿತ್ವಿಕ್ ಮಾಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಜೀವನಿಗೆ ಒಂದು ಮಗು ಇರುತ್ತದೆ. ಜೀವನ ನಡೆಸಲು ಒಂದು ಫುಡ್ ಕೋರ್ಟ್‌ನಲ್ಲಿ ಒಂದು ಹೊಟೇಲ್ ನಡೆಸುತ್ತಿರುತ್ತಾನೆ. ಹೊಟೇಲ್‌ನಲ್ಲಿ ಕೆಲಸದ ಜೊತೆಗೆ ಮಗುವನ್ನು ತಾಯಿಯಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಆತನ ಮೇಲಿರುತ್ತದೆ. ಅದರಂತೆಯೇ ಮಗುವನ್ನು ನೋಡಿಕೊಂಡು, ತನ್ನ ಜವಾಬ್ದಾರಿಯನ್ನು ನಿಭಾಯಿಸುವ ತಂದೆಯಾಗಿರುತ್ತಾನೆ. ಎಲ್ಲಿಯೇ ಹೋದರೂ, ಬಂದರೂ ತಂದೆ ಮಗಳದ್ದೇ ಬೆಸ್ಟ್ ಜೋಡಿ. ಆಟವಾಡುವಾಗಲೂ ಇಬ್ಬರೇ, ಹೊಟೇಲ್ ಹೋದಾಗಲೂ ಇಬ್ಬರೆ. ತಂದೆ ಮಗಳ ಈ ಅದ್ಭುತ ಬಾಂಧವ್ಯ ಕಣ್ತುಂಬಿಕೊಳ್ಳುವುದೇ ಖುಷಿ ಎನಿಸುತ್ತದೆ.
ನಿಜ ಜೀವನದಲ್ಲೂ ಟೀ ಮಾರುತ್ತಿದ್ದ ರಿತ್ವಿಕ್
ರಿತ್ವಿಕ್ ನಟನಾಗಬೇಕು ಎಂದು ಬಂದಾಗ ಅಷ್ಟು ಸುಲಭದಲ್ಲಿ ಅವಕಾಶ ಸಿಕ್ಕಿಲ್ಲ. ಹಾಗಂತ ಸುಮ್ಮನೆ ಕೂರಲಿಲ್ಲ. ರಿತ್ವಿಕ್ ಜೀವನವನ್ನು ನಡೆಸಲು ಸಣ್ಣಪುಟ್ಟ ಕೆಲಸವನ್ನು ಮಾಡುತ್ತಿದ್ದರು. ಅದರಲ್ಲಿ ಟೀ ಮಾರಾಟ ಕೂಡ ಒಂದು. ತಮ್ಮ ನಿಜ ಜೀವನದ ಬಗ್ಗೆ ಕಲರ್ಸ್ ಕನ್ನಡ ಅನುಬಂಧ ಸಮಯದಲ್ಲಿ ಹಂಚಿಕೊಂಡಿ ವಿಚಾರವೊಂದು ಈಗ ವೈರಲ್ ಆಗ್ತಿದೆ.

ಅನುಭವಿಸಿದ್ದೇ ಪಾತ್ರವಾಗಿ ಬಂದಾಗ
'ಅನುಬಂಧ' ವೇದಿಕೆ ಮೇಲೆ ಸೈಕಲ್‌ನಲ್ಲಿ ಟೀ ಮಾರುತ್ತಿದ್ದ ವ್ಯಕ್ತಿಯ ಫೋಟೋ ಹಾಕಿ, ಈ ಫೋಟೋ ನೋಡಿದರೆ ನಿಮಗೆ ಏನು ಅನ್ನಿಸುತ್ತೆ ಎಂದು ಕೇಳಿದ್ದಾರೆ. ಆಗ ರಿತ್ವಿಕ್ 'ಕೆಲವು ವರ್ಷಗಳ ಹಿಂದೆ ಈ ಕೆಲಸವನ್ನು ನಾನು ಮಾಡ್ತಾಯಿದ್ದೆ. ಈ ವಿಷಯ ಇಲ್ಲಿವರೆಗೂ ನನ್ನ ತಂದೆ-ತಾಯಿ, ಅಕ್ಕ-ಬಾವ, ಹೆಂಡತಿಗೂ ಗೊತ್ತಿಲ್ಲ. ನನಗೆ ಅದನ್ನು ಮಾಡುವಾಗಲೂ ಅವಮಾನ ಎನಿಸಲಿಲ್ಲ. ಆಗಲೂ ನಾನು ಹೀರೋ, ಕಲಾವಿದನಾಗಿ ನಾನು ನಿಂತುಕೊಳ್ಳುತ್ತೇನೆ. ಎಷ್ಟೇ ಕಷ್ಟ ಬಂದರೂ ನನ್ನೊಳಗಿದ್ದ ಕಲಾವಿದನನ್ನು ಸಾಯುವುದಕ್ಕೆ ಬಿಡಲಿಲ್ಲ, ಬಿಡುವುದು ಇಲ್ಲ. ಈಗ ನಂಗೆ ಪ್ರಮೋಷನ್ ಕೊಟ್ಟಿದ್ದಾರೆ. ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ತಂದೆಯಾಗಿದ್ದೀನಿ. ಇಡೀ ಜಗತ್ತೆ ಅವನಿಗೆ ಅವನ ಮಗಳು' ಎಂದು ಧಾರಾವಾಯಿಯ ಕಥೆಯನ್ನು ಹೇಳಿದ್ದಾರೆ.
ನೆಟ್ಟಿಗರಿಂದ ಶಬ್ಬಾಶ್ ಗಿರಿ
ರಿತ್ವಿಕ್ ಈ ಮಾತುಗಳನ್ನು ಕೇಳುತ್ತಿದ್ದಂತೆ ವೇದಿಕೆ ಮೇಲಿದ್ದವರು ಕೂಡ ಹೆಮ್ಮೆ ಪಟ್ಟಿದ್ದಾರೆ. ನಟನಾಗಬೇಕೆಂದು ಹಠ ತೊಟ್ಟ ರಿತ್ವಿಕ್ ಅದಕ್ಕಾಗಿ ಯಾವುದನ್ನು ಅವಮಾನ ಎಂದುಕೊಳ್ಳದೇ ಕಷ್ಟಪಟ್ಟಿದ್ದಾರೆ. ಕಡೆಗೂ ಅವರಿಷ್ಟ ಪಡುವಂತೆ ಕಲಾವಿದನಾಗಿ ಈಗ ಮಿಂಚುತ್ತಿದ್ದಾರೆ. ಈ ವಿಡಿಯೋಗೆ ಅವರ ಅಭಿಮಾನಿಗಳು ಹಾರ್ಟ್ ನೀಡಿ ಸಪೋರ್ಟ್ ಮಾಡಿದ್ದಾರೆ.


Click it and Unblock the Notifications











