Ninagagi: ಮದುವೆಗೆ ಖುಷಿ ಪಡ್ಬೇಕಾ? ಅವ್ನು ಸೈಕೋ ಅಂತ ಅಳಬೇಕಾ? ವಜ್ರೇಶ್ವರಿ ಆಟಕ್ಕೆ ರಚನಾ ಕಂಗಾಲು!

By ಎಸ್ ಸುಮಂತ್

ರಚನಾಗೆ ಸೂಪರ್ ಸ್ಟಾರ್ ಪಟ್ಟದ ಅವಶ್ಯಕತೆ ಇಲ್ಲ. ಸಹಜ ಜೀವನ ಮಾಡುವುದೇ ಇಷ್ಟ. ಮನೆಯಲ್ಲಿ ಅಡುಗೆ ಮಾಡಿಕೊಂಡು, ಗಂಡ-ಮಕ್ಕಳನ್ನು ನೋಡಿಕೊಂಡು ಇರಬೇಕೆಂಬ ಆಸೆ ಅವಳದ್ದು. ಆದರೆ ರಚನಾಗೆ ಮದುವೆ ಮಾಡಿದರೆ ದುಡಿಮೆ ಕಡಿಮೆ ಆಗುತ್ತೆ ಎಂಬ ಭಯ ವಜ್ರೇಶ್ವರಿಯದ್ದು. ರಚನಾ ಮಾತಿಗೆ ಕಟ್ಟುಬಿದ್ದು, ಆಡಿಕೊಳ್ಳುವವರ ಬಾಯಿ ಮುಚ್ಚಿಸಲು ವಜ್ರೇಶ್ವರಿ ಮದುವೆಗೆ ಒಪ್ಪಿದ್ದಾಳೆ. ಆದರೆ ಈ ಮದುವೆ ರಚನಾಗೆ ಖುಷಿ ಕೊಡುವುದಕ್ಕಿಂತ ನೋವನ್ನೇ ಹೆಚ್ಚು ನೀಡಿದೆ.

ರಚನಾ ಈ ಮೊದಲೇ ನಿರ್ಧಾರ ಮಾಡಿದ್ದಾಳೆ. ಮದುವೆಯ ನಂತರ ತಾನೂ ನಟಿಸುವುದಿಲ್ಲ ಎಂದು. ಮದುವೆಯ ನಂತರ ತಾನೂ ಸೂಪರ್ ಸ್ಟಾರ್ ಎಂಬ ಗೂಡಿನಿಂದ ಹಾರಿ ಹೋಗಬಹುದು. ಆಮೇಲೆ ನಾನು ಸ್ವತಂತ್ರಳಲು ಅಂತ. ಆದ್ರೆ ಅದು ರಚನಾ ಪಾಲಿಗೆ ಅಸಾಧ್ಯವಾದ ಯೋಚನೆಯಾಗಿದೆ.

Colors kannada serial Ninagagi Written Update July 10th episode

ವಜ್ರೇಶ್ವರಿ ರಚನಾಗೆ ತಾಯಿಯೇ ಅಲ್ಲ

ರಚನಾ ವಿಚಾರದಲ್ಲಿ ಶಾಕಿಂಗ್ ಬೆಳವಣಿಗೆಯೊಂದು ನಡೆದಿದೆ. ವಜ್ರೇಶ್ವರಿ ಜೊತೆಗೆ ಇರುವ ಮನೋಹರ್ ಯಾವಾಗಲೂ ಸೈಲೆಂಟ್ ಆಗಿಯೇ ಇರುತ್ತಾರೆ. ರಚನಾಗೆ ಕೆಟ್ಟದಾಗುತ್ತೆ ಎಂದರೆ ಟ್ರಿಗರ್ ಆಗುತ್ತಿದ್ದರು. ವಜ್ರೇಶ್ವರಿ ಕಂಡು ಇಂಥ ತಾಯಿಯೂ ಭೂಮಿ ಮೇಲೆ ಇರುತ್ತಾರಾ ಅನ್ನಿಸ್ತಾ ಇತ್ತು. ಆದರೆ ಆಕೆ ರಚನಾಗೆ ನಿಜವಾದ ತಾಯಿ ಅಲ್ಲ ಅನ್ನೋದು ಈಗ ಅರ್ಥವಾಗಿದೆ.‌ ಮನೋಹರ್ ಮಗಳು ರಚನಾ. ಆದರೆ ಸುಮ್ಮನೆ ಇರುವುದಕ್ಕೆ ಕಾರಣ ಏನು ಅನ್ನೋದೆ ತಿಳಿಯಬೇಕಾದ ಸಂಗತಿ.

ವಜ್ರೇಶ್ವರಿ ನಿರ್ಧಾರದಿಂದ ಎಲ್ಲರೂ ಖುಷ್

ರಚನಾ ಮದುವೆಯಾದ ಮೇಲೆ ತನ್ನ ಲೈಫ್ ಬೇರೆ ಥರವೇ ತಿರುಗುತ್ತೆ ಅಂತ ಭಾವಿಸಿದ್ದಾಳೆ. ಈಗ ರಚನಾಗೆ ಮದುವೆ ಮಾಡದೆ ಹೋದರೆ ಕೆಟ್ಟ ತಾಯಿ ಎನಿಸಿಕೊಳ್ಳಬೇಕಾಗುತ್ತದೆ ಎಂದು ಮದುವೆಯ ನಿರ್ಧಾರವನ್ನು ಮಾಡಿದ್ದಾಳೆ. ವಜ್ರೇಶ್ವರಿಯ ಈ ನಿರ್ಧಾರದಿಂದ ಮನೆಯವರೆಲ್ಲಾ ಫುಲ್ ಖುಷಿಯಾಗಿದ್ದಾರೆ. ರಚನಾಗೂ ಅವಳಿಷ್ಟದ ಬದುಕು ಸಿಗುತ್ತದೆ ಎಂಬ ಆಸೆಯಿಂದ.

ರಚನಾ ನಂಬಿಕೆ ಸುಳ್ಳು ಮಾಡಿದ ವಜ್ರೇಶ್ವರಿ

ರಚನಾ ನೂರು ಸಿನಿಮಾದ ಸಂಭ್ರಮದಲ್ಲಿದ್ದಾಳೆ. ಆ ಸಂತಸದ ಗಳಿಗೆಯಲ್ಲಿಯೇ ವಜ್ರೇಶ್ವರಿ ಮದುವೆ ವಿಚಾರವನ್ನು ಅನೌನ್ಸ್ ಮಾಡಿದ್ದಾಳೆ. ರಚನಾ ತುಂಬಾ ನಂಬಿಕೆ ಇಟ್ಟಿದ್ದಾಳೆ. ನನ್ನಮ್ಮ ನಂಗೆ ಪರ್ಫೆಕ್ಟ್ ಜೋಡಿಯನ್ನೇ ಆಯ್ಕೆ ಮಾಡಿರುತ್ತಾರೆಂದು ನಂಬಿದ್ದಾಳೆ. ಆದರೆ ವಜ್ರೇಶ್ವರಿ ತೋರಿಸಿದ ಗಂಡು ಅಶ್ವಿನ್. ಮೊದಲೇ ಅಶ್ವಿನ್ ಕಂಡರೆ ಮೈಮೇಲೆ ಬೆಂಕಿ ಬಿದ್ದವಳಂತೆ ಆಡುತ್ತಿದ್ದಳು ರಚನಾ. ಈಗ ಅವನನ್ನೇ ಮಾದುವೆಯಾಗಬೇಕು ಎಂದರೆ ಅವಳಿಂದ ಹೇಗೆ ತಾನೇ ಸಾಧ್ಯವಾದೀತು.

Colors kannada serial Ninagagi Written Update July 10th episode

ಸ್ಟಾರ್‌ಗಾಗಿ ಕಾಯುತ್ತಿರುವ ಕೃಷ್ಣಾ

ಅತ್ತ ಸೂಪರ್ ಸ್ಟಾರ್ ರಚನಾಳೆ ಆಕಾಶದಿಂದ ಭೂಮಿಗೆ ಬಂದಿರುವ ಸ್ಟಾರ್ ಎಂದು ಕೃಷ್ಣಾ ನಂಬಿದ್ದಾಳೆ. ಅಮ್ಮನಾಗಿ ಭೂಮಿಗೆ ಸ್ಟಾರ್ ಬಂದಿದೆ ಅಷ್ಟೇ ಅಂತ ಅಪ್ಪನಿಗೆ ಹೇಳಿದ್ದಾಳೆ. ಸ್ಟಾರ್ ಅನ್ನು ಬೇಬಿ ಜೊತೆಗೆ ಜೋಡಿಸುವುದು ಹೇಗೆ ಎಂಬ ಯೋಚನೆಯಲ್ಲಿ ಮುಳುಗಿದ್ದಾಳೆ. ರಕ್ಷಿತ್ ಹಾಗೂ ಕೃಷ್ಣಾ ಸೇರಿಕೊಂಡು ಕನಸ್ಸಲ್ಲಿಯೇ ಇಬ್ಬರು ಲವ್ ಮಾಡುವಂತೆ ಕಲ್ಪನೆ ಮಾಡಿಕೊಳ್ಳುತ್ತಿದ್ದಾರೆ. ಜೀವನ ಬಾಳಿಗೆ ರಚ್ಚು ಬರಲೇಬೇಕಿದೆ. ಕಥೆಯೇ ಹಾಗೇ. ಆದರೆ ಅದ್ಯಾವಾಗ ಎಂಬುದೇ ಕುತೂಹಲ. ಜೀವ ಬದುಕಲ್ಲಿ ರಚನಾ ಬಂದರೆ ಅವಳಂದುಕೊಂಡಂತೆ ಜೀವನ ಇರಲಿದೆ.

More from Filmibeat

English summary
colors kannada serial Ninagagi Written Update July 10th episode Here is the details about Rachna is shocked by mother's decision;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X