Ninagagi: ಕೃಷ್ಣಾ & ರಕ್ಷಿತ್ ನೋಡಿ ಮಕ್ಕಳಿಗೆ ಹೀಗೆ ಪಾಠ ಮಾಡಿ ಅಂತಿದ್ದಾರೆ ವೀಕ್ಷಕರು!

By ಎಸ್ ಸುಮಂತ್

'ನಿನಗಾಗಿ' ಧಾರಾವಾಹಿಯಲ್ಲಿ ಇಬ್ಬರು ಮಕ್ಕಳ ಮಾತು, ಅವುಗಳ ತುಂಟಾಟ ನೋಡುವುದಕ್ಕೇನೆ ಚೆಂದ. ಇಬ್ಬರು ಮಕ್ಕಳು ಸಿಕ್ಕಾಪಟ್ಟೆ ಟ್ಯಾಲೆಂಟ್ ಇದಾರೆ. ಕೃಷ್ಣಾ ಪಾತ್ರ ಮಾಡಿರುವ ಸಿಂಚನಾ, ರಕ್ಷಿತ್ ಹೆಸರನ್ನು ಕರೆಯುವುದೇ ಚೆಂದ. ಇನ್ನು ತೊದಲು ನುಡಿ ಕೃಷ್ಣಾಳದ್ದು. ಹೀಗಾಗಿಯೇ ಎಲ್ಲರಿಗೂ ಇಷ್ಟವಾಗುತ್ತಾಳೆ.

ಅಪ್ಪ-ಮಗಳ ನಡುವಿನ ಸಂಭಾಷಣೆಯೂ ಮುಂದೆ ಟ್ರೆಂಡ್ ಆಗುವುದರಲ್ಲಿ ಅನುಮಾನವಿಲ್ಲ. ಅಪ್ಪನನ್ನು ಮಗಳು ಬೇಬಿ ಅಂತಾನೇ ಕರೆಯೋದು. ಅಪ್ಪ ಕೂಡ ಬೇಬಿ ಅಂತಾನೇ ಕರೆಯೋದು. ಇದೊಂದು ಹೊಸತರದ ಮಾತುಕತೆಯೇ ಸರಿ. ಹೀಗಾಗಿ ಟ್ರೆಂಡ್ ಆಗಲಿದೆ. ಅಪ್ಪನಿಗೆ ಮಗಳೇ ಪ್ರಪಂಚ. ಈ ಪ್ರಪಂಚದ ನಡುವೆ ಅಜ್ಜ ವಿಲನ್ ಆಗಿದ್ದಾನೆ. ಇದರ ಪರಿಣಾಮ ಇಂದು ಜೀವ ಮನೆಯಲ್ಲಿ ಒಬ್ಬಳೇ ಇದ್ದಾಳೆ.

Colors kannada serial Ninagagi Written Update July 12th episode

ಊಟದಲ್ಲಿ ವಿಷ ಪತ್ತೆ.. ಜೀವ ಅರೆಸ್ಟ್

ಕೃಷ್ಣಾಳನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಜೀವ ಹೆಣಗಾಡುತ್ತಿದ್ದಾನೆ. ಕೋರ್ಟ್‌ನಲ್ಲಿ ಕೃಷ್ಣಾಳ ತಾತನಿಂದ ಇನ್ನೇನು ಸೋಲಬೇಕು ಎನ್ನುವಷ್ಟರಲ್ಲಿ ಬಾಲ ಬಂದು ಕಾಪಾಡಿದ. ಅವತ್ತಿನ ತೀರ್ಮಾನ ಜೀವ ಕಡೆಗೆ ಆಗಿತ್ತು. ಹೇಗಾದರೂ ಮಾಡಿ ಕೃಷ್ಣಾಳನ್ನ ನಿನ್ನಿಂದ ಕಿತ್ತುಕೊಳ್ತೀನಿ ಅಂತ ಹಠ ತೊಟ್ಟಿರುವ ಅಜ್ಜ, ಈಗ ಜೀವ ನಡೆಸುವ ಹೊಟೇಲ್ ಊಟದಲ್ಲಿ ವಿಷ ಹಾಕುವ ಹಂತಕ್ಕೆ ಬಂದಿದ್ದಾನೆ. ಆ ವಿಷದ ಅನ್ನ ತಿಂದವರು ಅಸ್ವಸ್ಥರಾಗಿದ್ದಾರೆ. ಜೀವ ಠಾಣೆ ಸೇರಿದ್ದಾನೆ.

ಒಬ್ಬಂಟಿಯಾದ ಕೃಷ್ಣಾ

ಜೀವ ಪೊಲೀಸರಿಗೆ ಎಷ್ಟೇ ಬೇಡಿಕೊಂಡರು ಸ್ವಲ್ಪ ಕೂಡ ಸಮಯವಾಕಾಶ ನೀಡಲಿಲ್ಲ. ಹೀಗಾಗಿ ಕೃಷ್ಣಾಳಿಗೂ ತನ್ನ ಬೇಬಿ ಮತ್ತೆ ಮಾಮ ಎಲ್ಲಿ ಹೋದ್ರು ಅನ್ನೋದು ಗೊತ್ತಿಲ್ಲ. ಹೊರಗಡೆ ಹೊಟೇಲ್‌ನಲ್ಲಿ ಇದ್ದಾರೆ ಅಂತಾನೇ ಭಾವಿಸಿದ್ದರು. ಆದರೆ ಈಗ ಕೃಷ್ಣಾ ಹಾಗೂ ರಕ್ಷಿತ್ ಇಬ್ಬರೇ ಮನೆಯಲ್ಲಿ ಇದ್ದರು. ಕೃಷ್ಣಾಳನ್ನು ಕಾಪಾಡುವುದಕ್ಕೆ ರಕ್ಷಿತ್ ಒಬ್ಬ ಇದ್ದರು ಸಾಕು.

ಕಳ್ಳನಿಗೆ ಬುದ್ದಿ ಕಲಿಸಿದ ಕೃಷ್ಣಾ-ರಕ್ಷಿತ್

ಜೀವನಿಗೆ ಯಾರೋ ಸುಳಿದಾಡುತ್ತಿರುವ ಅನುಮಾನ ಇತ್ತು. ಜೀವ ಮತ್ತು ಬಾಲ ಮಕ್ಕಳಿಬ್ಬರಿಗೆ ಕಳ್ಳ ಬಂದರೆ ಏನು ಮಾಡಬೇಕು ಎಂಬುದನ್ನು ಮನೆಯ ಒಳಗೆ ಹೇಳಲು ಹೋಗಿದ್ದಾಗ ಆ ಅಜ್ಜ ಕಳುಹಿಸಿದ್ದ ಕಳ್ಳ ವಿಷದ ಪುಡಿ ಹಾಕಿದ್ದ. ಕಳ್ಳ ಬಂದರೆ ಖಾರದ ಪುಡಿ ಎರಚಿ ಎಂದು ಡಬ್ಬಾ ಕೊಟ್ಟು ಹೋಗಿದ್ದ. ಈಗ ಕಳ್ಳ ಬಂದಾಗ, ರಕ್ಷಿತ್, ಕೃಷ್ಣಾಳನ್ನು ಕರೆದುಕೊಂಡು ಐಡಿಯಾ ಮಾಡಿದ. ಮುಖಕ್ಕೆ ಮಾಸ್ಕ್ ಹಾಕಿಕೊಂಡು, ಖಾರದ ಪುಡಿ ಎರಚಿ, ಬ್ಯಾಟ್‌ನಲ್ಲಿ ಹೊಡೆದುರುಳಿಸಿದರು.

Colors kannada serial Ninagagi Written Update July 12th episode

ಪೋಷಕರಿಗೂ ಸ್ಫೂರ್ತಿದಾಯಕ

ಈಗಿನ ಕಾಲದಲ್ಲಿ ಮಕ್ಕಳಿಗೆ ಸಾಕಷ್ಟು ವಿಚಾರದಲ್ಲಿ ಒಂದಷ್ಟು ವಿಚಾರಗಳನ್ನು ತಿಳಿಸಬೇಕಾಗುತ್ತದೆ. ಮಕ್ಕಳ ಕಳ್ಳರು ಕೂಡ ಜಾಸ್ತಿನೇ ಇದ್ದಾರೆ. ಹೀಗಾಗಿ ಮಕ್ಕಳಿಗೆ ಕಿರಾತಕರ ನಡವಳಿಕೆ ಹೇಳಿಕೊಡಬೇಕಾಗುತ್ತದೆ. ಈಗ ರಕ್ಷಿತ್ ಹಾಗೂ ಕೃಷ್ಣಾ ಕಳ್ಳನಿಂದ ತಪ್ಪಿಸಿಕೊಂಡ ರೀತಿಗೆ ಮೆಚ್ಚುಗೆ ವ್ಯಕ್ತವಾಗಿದೆ. ನಮ್ಮ ಮಕ್ಕಳಿಗೂ ಒಂದಷ್ಟು ಸಲಹೆಗಳನ್ನು ನೀಡುವುದು ಉತ್ತಮ ಎನ್ನುತ್ತಿದ್ದಾರೆ. ಹಾಗೇ ರಕ್ಷಿತ್ ಆಕ್ಟಿಂಗ್, ಕೃಷ್ಣಾಳ ನಟನೆಗೆ ಎಲ್ಲರೂ ಫಿದಾ ಆಗಿದ್ದಾರೆ. ಸೂಪರ್ ಪವರ್ ಇರೋನು ನಾನು ಎನ್ನುತ್ತಿದ್ದ ರಕ್ಷಿತ್ ಕೃಷ್ಣಾಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾನೆ.

More from Filmibeat

English summary
colors kannada serial Ninagagi Written Update July 12th episode Here is the details about Krishna and Rakshit beat up the thief,
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X