Ninagagi: ಉಸಿರೆತ್ತಲ್ಲ ಎಂದುಕೊಂಡಿದ್ದ ಗಿಣಿ ಕುಕ್ಕಲು ಶುರು ಮಾಡಿದೆ; ರಚನಾ ನಡೆ ವಜ್ರೇಶ್ವರಿ ತಲೆ ಕೆಡಿಸಿದೆ!

By ಎಸ್ ಸುಮಂತ್

ವಜ್ರೇಶ್ವರಿಗೆ ರಚನಾ ಮಗಳೇನು ಅಲ್ಲ. ರಚನಾಗೆ ದೊಡ್ಡಮ್ಮ ಆಗಬೇಕು. ಯಾವುದೋ ಆರೋಪದಲ್ಲಿ ಸಿಕ್ಕಿರುವ ಮನೋಹರ ತನ್ನ ಮಗಳನ್ನು ವಜ್ರೇಶ್ವರಿಗಾಗಿ ಕೊಟ್ಟಿದ್ದಾನೆ. ಅದರೆ ಅವಳನ್ನ ನಟಿಯಾಗಿ ಮಾಡಿ, ದುಡಿಯುವ ಮಾರ್ಕೆಟ್ ಆಗಿಸಿಕೊಂಡಿದ್ದಾಳೆ. ಅವಳ ಎಲ್ಲಾ ವ್ಯವಹಾರವೂ ವಜ್ರೇಶ್ವರಿಯದ್ದೇ. ಪ್ರಾಜೆಕ್ಟ್ ಒಪ್ಪಿಕೊಳ್ಳೋದು, ಸಂಭಾವನೆ ಮಾತಾಡೋದು ಎಲ್ಲವೂ. ರಚನಾ ಸ್ವಂತಕ್ಕಾಗಿ ಯಾವುದನ್ನು ಯೋಚನೆ ಮಾಡದಂತೆ ಕಂಟ್ರೋಲ್ ನಲ್ಲಿ ಇಟ್ಟುಕೊಂಡಿದ್ದಾಳೆ ವಜ್ರೇಶ್ವರಿ.

ಮಗಳಿಗೆ ಸಣ್ಣ ಸ್ವಾತಂತ್ರ್ಯವೂ ಇಲ್ಲದೆ, ಇಷ್ಟಪಟ್ಟಿದ್ದನ್ನು ತಿನ್ನುವುದಕ್ಕೂ ಆಗದ ಸ್ಥಿತಿ. ಅದನ್ನ ಕಂಡ ಮನೋಹರ ಕೊರಗುತ್ತಿದ್ದಾನೆ. ರಚನಾಳನ್ನು ದೇವರೇ ಕಾಪಾಡಬೇಕೆಂದು ಬೇಡಿಕೊಳ್ಳುತ್ತಿದ್ದಾನೆ. ಇದೀಗ ರಚನಾ ಕೋಪ ನೆತ್ತಿಗೇರಿದೆ. ವಜ್ರೇಶ್ವರಿಗೆ ನಡುಕ ಹುಟ್ಟಿಸಿದ್ದರೆ, ಮನೋಹರನಿಗೆ ಖುಷಿ ತಂದಿದೆ.

Colors kannada serial Ninagagi Written Update on August 8th episode

ಫ್ಯಾಮಿಲಿ ಡ್ರಾಯಿಂಗ್‌ನಲ್ಲಿ ರಚನಾ

ಕೃಷ್ಣಾ ಎಂದರೆ ರಚನಾಗೆ ಇನ್ನಿಲ್ಲದ ಇಷ್ಟ. ಅವಳಿಂದ ಮಾತ್ರ ರಚನಾಳ ಮೂಡ್ ಸರಿ ಮಾಡುವುದಕ್ಕೆ ಸಾಧ್ಯ. ತುಂಬಾ ಬೇಜಾರ್ ಆಗ್ತಾ ಇದೆ ಎಂದಾಗ ಕೃಷ್ಣ ಒಂದು ಕಾಲ್ ಮಾಡಿದ್ರು ಸಾಕು ಖುಷಿಯಾಗಿಬಿಡುತ್ತಾಳೆ ಸ್ಟಾರ್. ಮನೆಗೆ ಬಂದಿದ್ದಾಗ ಡ್ರಾಯಿಂಗ್ ಒಂದನ್ನ ಬಿಡಿಸಿದ್ದಳು. ಬೇಬಿ, ಸ್ಟಾರ್, ಬಾಲು ಮಾಮ ಅಂಡ್ ಕೃಷ್ಣಾ. ಈ ಡ್ರಾಯಿಂಗ್ ಈಗ ರಚನಾ ಕೈನಲ್ಲಿದೆ. ಇದನ್ನ ಹಾಳು ಮಾಡಲು ಹೋಗಿದ್ದ ಅಕ್ಕನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾಳೆ‌.

ಅಕ್ಕನಿಗೆ ಎಚ್ಚರಿಕೆ ಕೊಟ್ಟ ರಚನಾ

ರಚನಾ ತುಂಬಾ ಮುಗ್ಧ. ಅಮ್ಮ ವಿಷ ಕುಡಿ ಎಂದರೂ ಕುಡಿದು ಬಿಡುತ್ತಾಳೆ. ಅಷ್ಟು ನಂಬಿಕೆ, ಅಭಿಮಾನ, ಪ್ರೀತಿ. ಎಷ್ಟೇ ಅನ್ಯಾಯವಾದರೂ ಧ್ವನಿ ಎತ್ತಿದವಳಲ್ಲ. ಈಗ ಕೃಷ್ಣಾಳ ವಿಚಾರಕ್ಕೆ ಯಾರೂ ಊಹಿಸದ ರೀತಿ ತಿರುಗಿ ಬಿದ್ದಿದ್ದಾಳೆ. ನಾನು ಸೈಲೆಂಟ್ ಆಗಿದ್ದೀನಿ ಎಲ್ಲವನ್ನು ಸಹಿಸಿಕೊಳ್ತೀನಿ ಅಂತ ಅಲ್ಲ. ಅದೆಲ್ಲಾ ಒಂದು ಹಂತಕ್ಕೆ ಅಷ್ಟೇ. ಬೇರೆ ಹಂತ ದಾಟಿದ್ರೆ ಯಾರನ್ನೂ, ಯಾವುದನ್ನು ಸಹಿಸಿಕೊಳ್ಳುವುದಿಲ್ಲ ಎಂದಿದ್ದಾಳೆ.

ರಚನಾ ಕೈತಪ್ಪಿ ಹೋಗುವ ಭಯ

ರಚನಾಳ ಒಂದೊಂದು ಮಾತು ವಜ್ರೇಶ್ವರಿಯ ಎದೆಗೆ ಚುಚ್ಚಿದಂತೆಯೇ ಇತ್ತು. ಎಲ್ಲಾ‌ ಮಾತುಗಳನ್ನು ತನಗೆ ಹೇಳಿದಂತೆ ಇತ್ತು. ಉಸಿರೆತ್ತಬಾರದು ಎಂದು ಸಾಕಿದ ಗಿಣಿ ಈಗ ಕುಕ್ಕುವುದಕ್ಕೆ ಶುರು ಮಾಡಿದೆ ಎಂಬ ಕೋಪ ವಜ್ರೇಶ್ವರಿ ಮುಖದಲ್ಲಿ ಕಾಣಿಸುವುದಕ್ಕೆ ಶುರುವಾಯ್ತು. ಅವಳ ಜೊತೆಗೆ ಇರುವ ಮೈದುನಾ, ಏನು ಅತ್ತಿಗೆ ಇದು ನಮ್ಮ ರಚನಾನೇನಾ ಅಂದಿದ್ದೇ ತಡ, ವಜ್ರೇಶ್ವರಿ ಪಕ್ಕದಲ್ಲಿಯೇ ಇದ್ದ ಪಾಟ್ ಅನ್ನೇ ಎತ್ತಿ ಬಿಸಾಡಿದ್ದಾಳೆ. ನಾನು ನಂಬಿದ್ದ ರಚನಾ ಈ ರೀತಿ ಬದಲಾಗಿ ಬಿಟ್ಟಳಾ ಎಂಬ ಆತಂಕದಲ್ಲಿದ್ದಾಳೆ.

Colors kannada serial Ninagagi Written Update on August 8th episode

ಮಾತಾಜಿ ಮಾತು ಸತ್ಯವಾಗುವ ಸೂಚನೆ

ವಜ್ರೇಶ್ವರಿ ತುಂಬಾ ನಂಬುವ ಮಾತಾಜಿ ಈಗಾಗಲೇ ಎಲ್ಲಾ ಸುಳಿವನ್ನು ನೀಡಿದ್ದಾರೆ. ನಿನ್ನ ಆಟ, ನಿನ್ನ ನಂಬಿಕೆ ಬಹಳ ದಿನ ಉಳಿಯಲ್ಲ. ತಿರುಗಿ ಬೀಳುವ ಸಮಯ ಹತ್ತಿರ ಬಂದಿದೆ ಎಂಬುದನ್ನು ಸೂಚಿಸಿದ್ದಾರೆ. ಮದುವೆಯ ವಿಚಾರದಲ್ಲೂ ಅಷ್ಟೇ ನೀನು ಹುಡುಕಿದ ಹುಡುಗನ ಜೊತೆಗೆ ನಡೆಯುವುದಿಲ್ಲ ಎಂದೇ ಹೇಳಿದ್ದಾರೆ. ಹೀಗಿರುವಾಗ ಮಾತಾಜಿ ಮಾತನ್ನೇ ಧಿಕ್ಕರಿಸಿ, ದೇವರ ತೀರ್ಮಾನವನ್ನೇ ಬದಿಗಿಟ್ಟು ಮುನ್ನಡೆಯುವುದಕ್ಕೆ ಹೊರಟಿದ್ದಾಳೆ ವಜ್ರೇಶ್ವರಿ. ತಾನೂ ಮುಳುಗುತ್ತೀದ್ದೀನಿ ಎಂದಾಗ ರಚನಾ ಧ್ವನಿ ಎತ್ತದೆ ಇರುವವಳಲ್ಲ.

More from Filmibeat

English summary
Ninagagi kannada serial today episode. Here is the details about Vajreshwari is shocked to find Rachana warning her sister;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X