Ninagagi: ರಚ್ಚು ಹತ್ರ ಫೋನ್ ಹೇಗ್ ಬಂತು? ಗೆಳೆಯ ರಕ್ಷಿತ್ ಎಲ್ಲಿ? ಪ್ರೋಮೋ ನೋಡಿ ವೀಕ್ಷಕರು ಕಂಗಾಲು!
ಕೃಷ್ಣಾಳ ತಾತನಿಗೆ ಜೀವನ ಮೇಲೆ ಸೇಡು ತೀರಿಸಿಕೊಳ್ಳುವುದು ಬಿಟ್ಟರೆ ಕೃಷ್ಣಾಳ ಮುಂದಿನ ಬದುಕೇನು ಎಂಬುದು ಆತನಿಗೆ ಬೇಕಾಗಿಲ್ಲ. ಕೃಷ್ಣಾಳ ಬೇಬಿಯನ್ನು ಎಷ್ಟು ಪ್ರೀತಿ ಮಾಡ್ತಾಳೆ, ಅವನನ್ನು ಬಿಟ್ಟು ಇರುವುದಕ್ಕೆ ಅವಳಿಂದ ಸಾಧ್ಯವಿಲ್ಲ ಎಂಬುದು ತಾತನಿಗೆ ಗೊತ್ತು. ಆದರೆ ವಾಸ್ತವವನ್ನು ಅರ್ಥ ಮಾಡಿಕೊಳ್ಳದೆ ಅಪ್ಪ ಮಗಳನ್ನು ದೂರ ಮಾಡುವುದಕ್ಕೇನೆ ನೋಡುತ್ತಿದ್ದಾನೆ. ಅದರ ಫಲವಾಗಿಯೇ ಈಗ ಜೀವ ಮತ್ತು ಬಾಲು ಸ್ಟೇಷನ್ ಪಾಲಾಗಿದ್ದಾರೆ.
ಸ್ಟೇಷನ್‌ಗೆ ನೋಡಲು ಬಂದ ಮಾವನಿಗೆ ಮಾತಲ್ಲೇ ಟಾಂಗ್ ಕೊಟ್ಟಿದ್ದಾನೆ. ಕೃಷ್ಣಾಳನ್ನ ಕಳೆದುಕೊಳ್ತೀನಿ ಎಂಬ ಭಯವನ್ನು ಅವನ ಮುಂದೆ ತೋರಿಸಿದೆ, ಅಬ್ಬಾ, ನಂಗೆ ಭಯ ಆಗಿತ್ತು. ಕೃಷ್ಷಾ ಒಬ್ಬಳೆ ಆಗಿದ್ದಾಳೆ ಅಂತ. ಈಗ ನಿಮ್ಮಬಳಿ ಇದ್ದಾಳೆ ಎಂದಿದ್ದೆ ಸಮಾಧಾನ ಎಂದಿದ್ದಾನೆ. ಆದರೆ ಕೃಷ್ಣಾ ತನ್ನ ಅಮ್ಮ ಎಂದುಕೊಂಡಿರುವ ಸೂಪರ್ ರಚ್ಚು ಜೊತೆಗೆ ಇದ್ದಾಳೆ.

ಆ ಕಳ್ಳ ಬೇರೆ ಈ ಕಳ್ಳ ಯಾರು?
ಕೃಷ್ಣಾಳನ್ನು ಕರೆತರಲು ತಾತ ಕಳುಹಿಸಿದ್ದ ವ್ಯಕ್ತಿಗೆ ಕೃಷ್ಣಾ ಹಾಗೂ ರಕ್ಷಿತ್ ಸೇರಿ ಖಾರದ ಪುಡಿ ಎರಚಿದ್ದರು. ಅವನು ಇನ್ನೇನು ಸರಿ ಹೋಗ್ತಾನೆ ಎನ್ನುವಷ್ಟರಲ್ಲಿ ಎರಡು ಮಕ್ಕಳು ಅಲ್ಲಿಂದ ಓಡಿ ಬಂದರು. ಆದರೆ ಮಧ್ಯೆ ಇನ್ನೊಬ್ಬ ಮಕ್ಕಳ ಕಳ್ಳ ಸಿಕ್ಕಿದ್ದಾನೆ. ಕೃಷ್ಣಾಳ ಅದೃಷ್ಟ ಆ ಕಳ್ಳ ಪೊಲೀಸರ ಕೈಗೆ ತಗಲಾಕಿಕೊಂಡಿದ್ದಾನೆ.
ಬೇಬಿ ಕಾಣದೆ ಕಂಗಾಲಾದ ಕೃಷ್ಣಾ
ಕಳ್ಳ ಕೈ ಕಟ್ಟಿ ಹಾಕಿ ಆ ಮಗುವನ್ನು ಮಾತನಾಡಿಸಿದ್ದಾರೆ. ಹಿರಿಯ ನಟ ವೇಲು ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸರು ಕೇಳಿದ ಪ್ರಶ್ನೆಗೆ ಕೃಷ್ಣಾ, ನಾನೆಲ್ಲಿದ್ದೀನಿ, ಮನೆಗೆ ಹೇಗೆ ಹೋಗೋದು ಎಂಬೆಲ್ಲಾ ಗೊಂದಲದಲ್ಲಿದ್ದಾಳೆ. ತಕ್ಷಣ ನೆನಪಾಗಿದ್ದು ಬೇಬಿ ನಂಬರ್. ಬೇಬಿ ಕಾಲ್ ಮಾಡಿಸಿದರೆ ಪಿಕ್ ಮಾಡ್ತಾ ಇಲ್ಲ. ಆಗ ಕೃಷ್ಣಾಗೂ ಆತಂಕವಾಗಿದೆ. ಏನು ಮಾಡಬೇಕು ಎಂಬುದು ತಿಳಿಯದೆ ಅಳುತ್ತಾ ಕುಳಿತಿದ್ದಾಳೆ.
ರಚ್ಚುಗೆ ಕಾಲ್ ಮಾಡಿದ ಕೃಷ್ಣಾ
ಪೊಲೀಸಪ್ಪ ಸಮಾಧಾನ ಮಾಡಿದ್ದಾರೆ. ಅಪ್ಪ ಫೋನ್ ರಿಸೀವ್ ಮಾಡದೆ ಹೋದರೆ ಏನಂತೆ ಅಮ್ಮ ರಿಸೀವ್ ಮಾಡ್ತಾರಲ್ಲ ಅಂತ ಕಾಲ್ ಮಾಡಿದ್ದಾಳೆ. ರಚ್ಚುಗೆ ಇದು ಕೃಷ್ಣಾ ಎಂದು ಗೊತ್ತಾದ ಕೂಡಲೇ, ಕೃಷ್ಣಾ ಎಲ್ಲೂ ಹೋಗ್ಬೇಡ ನಾನು ಬರ್ತೀನಿ ಅಲ್ಲಿಯೇ ಇರು ಎಂದಿದ್ದಾಳೆ. ಕೃಷ್ಣಾಗೆ ರಚ್ಚು ಜೊತೆಗೆ ಇರೋದೆ ಅಂದ್ರೆ ಪ್ರೀತಿ ಜಾಸ್ತಿ. ಈಗ ಅಮ್ಮನೇ ಕರೆದುಕೊಂಡು ಹೋಗುವುದಕ್ಕೆ ಬರ್ತಾ ಇರೋದು ಖುಷಿ ಕೊಟ್ಟಿದೆ.

ಜೀವದ ಗೆಳೆಯ ರಕ್ಷಿತ್ ಎಲ್ಲೋದಾ..?
ರಚನಾ ಒಮ್ಮೆ ಕೃಷ್ಣಾಳ ಶಾಲೆಗೆ ಬಂದಿದ್ದಳು. ನಾನು ನಿಮ್ಮ ಜೊತೆಗೆ ಮಾತನಾಡಬೇಕು ಅನ್ನಿಸುತ್ತೆ, ನಿಮ್ಮ ನಂಬರ್ ಕೊಡಿ ಎಂದಾಗ ನನ್ನ ಬಳಿ ಮೊಬೈಲ್ ಇಲ್ಲ ಪುಟ್ಟ ಎಂದು ಟ್ವಿಂಕಲ್ ನಂಬರ್ ಕೊಟ್ಟಿರಬಹುದು. ಈಗ ಕೃಷ್ಣಾ ಕಾಲ್ ಮಾಡಿದ್ದು ಅದೇ ನಂಬರ್. ಆದರೆ ಪ್ರೇಕ್ಷಕರಿಗೆ ಅದೇಗೆ ರಚನಾ ಬಳಿ ಮೊಬೈಲ್ ಬಂತು ಎಂಬ ಪ್ರಶ್ನೆ ಕಾಡುತ್ತಿದೆ. ಆ ಕಮೆಂಟ್ ಗೆ ಇನ್ನೊಬ್ಬರು ಅದು ಟ್ವಿಂಕಲ್ ಮೊಬೈಲ್ ಎಂಬ ರಿಪ್ಲೇ ಮಾಡಿದ್ದಾರೆ. ಜೊತೆಗೆ ಜೀವದ ಗೆಳೆಯ ರಕ್ಷಿತ್ ಎಲ್ಲಿ ಹೋದ ಎಂಬ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಫುಲ್ ಎಪಿಸೋಡ್‌ನಲ್ಲಿ ಸಿಗುತ್ತೆ.


Click it and Unblock the Notifications











