Ninagagi: ಕೃಷ್ಣಾಳನ್ನು ಕಿಡ್ನ್ಯಾಪ್ ಮಾಡಲು ಕಾಯುತ್ತಿರುವವರು ಯಾರು? ದುಷ್ಯಂತನಿಂದ ಬೇಬಿ ಬಚಾವ್

By ಎಸ್ ಸುಮಂತ್

ರಚನಾ ಸೂಪರ್ ಸ್ಟಾರ್ ಆದರೂ ಕೂಡ ಎಲ್ಲರಂತೆ ಬದುಕಬೇಕೆಂಬ ಆಸೆ ಹೊಂದಿದ್ದಾಳೆ. ಸಾಮಾನ್ಯ ಜನರ ಜೀವನವೇ ರಚನಾಗೆ ಸ್ಪೂರ್ತಿ. ಮದುವೆಯಾಗಬೇಕು, ಗೃಹಿಣಿಯಂತೆ ಜೀವನ ಕಳೆಯಬೇಕು, ಮಕ್ಕಳನ್ನು ಸಾಕಬೇಕು, ಮನೆಯವರಿಗೆ ಅಡುಗೆ ಮಾಡಿ ಬಡಿಸಬೇಕು ಎಂಬ ಆಸೆಗಳು ರಚನಾಗೆ. ಆದರೆ ಅದು ಸೂಪರ್ ಸ್ಟಾರ್ ಎನಿಸಿಕೊಂಡಿರುವ ರಚನಾಗೆ ಇದು ಅಸಾಧ್ಯವಾಗಿದೆ.

ಹೆತ್ತ ತಾಯಿಯೇ ಮಗಳನ್ನು ಬಂಡವಾಳ ಮಾಡಿಕೊಂಡಿದ್ದಾರೆ. ದುಡಿಯುವ ಯಂತ್ರ ಮಾಡಿಕೊಂಡಿದ್ದಾಳೆ. ರಚನಾಗೆ ಮಾರ್ಕೆಟ್ ಇರುವ ತನಕವೂ ವಜ್ರೇಶ್ಚರಿ, ರಚನಾಳನ್ನು ತನ್ನ ತಾಳಕ್ಕೆ ತಕ್ಕ ಹಾಗೇ ಕುಣಿಸುತ್ತಿದ್ದಾಳೆ‌. ಆದರೆ ಅದು ಬಹಳ ಕಾಲ ಇರುವುದಿಲ್ಲ ಎಂದು ಶ್ರೀಮಾತಾ ಹೇಳಿದ್ದಾರೆ.

colors kannada serial Ninagagi Written Update on June 10th episode

ಜೀವ ಬೇಡಿಕೆಗೆ ರಚನಾ ಕಡೆಯಿಂದ ಹಾರೈಕೆ

ರಚನಾಗೆ ಸಾಮಾನ್ಯರಂತೆ ಎಲ್ಲಾ ಕಡೆ ಓಡಾಡುವ ಆಸೆ. ಹೀಗಾಗಿಯೇ ದೇವಸ್ಥಾನಕ್ಕೆ ಒಬ್ಬಳೆ ಹೋಗಿದ್ದಾಳೆ. ಮುಖ ಮುಚ್ಚಿಕೊಂಡು ತಾನು ಯಾರು ಎಂಬುದೇ ತಿಳಿಯದಂತೆ ಹೋಗಿದ್ದಾಳೆ. ದೇವರಿಗೆ ಕೈ ಮುಗಿದು ಪ್ರಾರ್ಥನೆ ಸಲ್ಲಿಸಿದ್ದಾಳೆ. ಅಲ್ಲಿಯೇ ಜೀವ ಕೂಡ ತನ್ನ ಬೇಡಿಕೆಯನ್ನು ದೇವರಲ್ಲಿ ಬೇಡಿಕೊಳ್ಳುತ್ತಿದ್ದ. ಜೀವನಿಗೆ ಇರುವುದು ಒಂದೇ ಬೇಡಿಕೆ, ಕೃಷ್ಣಾಳನ್ನು ತನ್ನ ಬಳಿಯೇ ಇರುವಂತೆ ಬೇಡಿಕೊಂಡನು. ಅದೇ ಸಮಯಕ್ಕೆ ಹಿಂದುಗಡೆ ಇದ್ದಂತ ರಚನಾ‌ ಗಂಟೆ ಬಾರಿಸಿದ್ದಾಳೆ.

ಸ್ನೇಹಿತೆಯನ್ನು ಕಾಪಾಡಿದ ದುಷ್ಯಂತ್

ಜೀವ ತನ್ನ ಜೀವವನ್ನು ಕಣ್ಣಲ್ಲಿ ಕಣ್ಣಿಟ್ಟು ಕೃಷ್ಣಾಳನ್ನು ನೋಡಿಕೊಳ್ಳುತ್ತಿದ್ದಾನೆ. ಯಾಕಂದ್ರೆ ಆತನಿಗೆ ಭಯವೂ ಇದೆ. ಕೃಷ್ಷಾಳನ್ನು ಅವರು ಕಿಡ್ನ್ಯಾಪ್ ಮಾಡಿದರೆ ಎಂಬ ಆತಂಕ. ಆ ಪ್ರಯತ್ನವೂ ಇವತ್ತು ನಡೆದಿದೆ. ಕೃಷ್ಣಾಳನ್ನು ಬಾಲು ಶಾಲೆಗೆ ಬಿಟ್ಟು ಹೊರಟಿದ್ದ. ಆದರೆ ಅವನು ಆ ಕಡೆ ಹೋಗುತ್ತಿದ್ದಂತೆ ಐಸ್ ಕ್ರೀಂ ಮಾರುವ ರೀತಿ ಬಂದಿದ್ದ. ಕೃಷ್ಣಾ ಇನ್ನೇನು ಐಸ್ ಕ್ರೀಂ ತೆಗೆದುಕೊಂಡು ತಿನ್ನಬೇಕು ಎನ್ನುವಷ್ಟರಲ್ಲಿ ಕೃಷ್ಣಾಳ ಫ್ರೆಂಡ್ ದುಷ್ಯಂತ್ ಅಲ್ಲಿಗೆ ಬಂದ. ಇವರ್ಯಾಕೋ ಕಳ್ಳರ ರೀತಿ ಕಾಣುತ್ತಿದ್ದಾರೆ ಎಂದು ಓಡಲು ಪ್ರಯತ್ನ ಮಾಡಿದಾಗ ಕಳ್ಳರು ಎತ್ತುಕೊಂಡು ಹೋಗುವುದಕ್ಕೆ ಪ್ರಯತ್ನ ಮಾಡಿದರು. ಆಗ ಮಕ್ಕಳು ಕೈಕಡಿದು ಓಡಿದ್ದಾರೆ.

ಶ್ರೀಮಾತಾ ಬಳಿ ಹೋದ ವಜ್ರೇಶ್ವರಿ

ವಜ್ರೇಶ್ವರಿಗೆ ಮಗಳ ಬಗ್ಗೆ ಆತಂಕವಿದೆ. ಶ್ರೀಮಾತಾ ಹೇಳಿದಂತೆ ಇನ್ನೆಲ್ಲಿ ಕೈತಪ್ಪಿ ಹೋಗಿ ಬಿಡುತ್ತಾಳೋ ಎಂಬ ಭಯ. ಹೀಗಾಗಿ ವಜ್ರೇಶ್ವರಿ ಮತ್ತೆ ಶ್ರೀಮಾತಾ ಬಳಿ ಹೋಗಿದ್ದಾರೆ. ಶ್ರೀಮಾತಾ ಬಳಿಯೇ ತಾನು ರಚನಾಗೆ ಹಾಕಿದ ಸವಾಲಿನ ಬಗ್ಗೆ ಮಾತನಾಡಿದ್ದಾರೆ. ಅವಳಿಗೆ ನನ್ನ ಮೇಲೆ ಪ್ರೀತಿ ಇರುವುದನ್ನು ಪರೀಕ್ಷೆ ಮಾಡಿದೆ. ಮೂರು ದಿನದ ಉಪವಾಸ ಹೇಳಿದ್ದೆ. ಅದರಲ್ಲಿ ಎರಡು ದಿನದ ಉಪವಾಸ ಮುಗಿದಿದೆ. ಇನ್ನು ಒಂದು ದಿನ ಬಾಕಿ ಇದೆ ಎಂದಾಗ, ಶ್ರೀಮಾತಾ ಅವರು, ಇನ್ನು ಒಂದು ದಿನ ಇದೆ. ಅದರಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂದಿದ್ದಾರೆ. ಅವನು ಅವಳ ಜೀವನಕ್ಕೆ ಬರುತ್ತಾನೆ ಎಂದೇ ಹೇಳಿದ್ದಾರೆ.

ರಚನಾಳನ್ನು ಕಾಪಾಡಲು ಬಂದ ಜೀವ

ರಚನಾ ಮೊದಲೇ ಎರಡು ದಿನ ಉಪವಾಸ ಮಾಡಿದ್ದಾಳೆ. ಶೂಡಿಂಗ್ ನಲ್ಲಿ ಬೆಟ್ಟ ಹತ್ತುವ ಶಾಟ್ ಇಟ್ಟಿದ್ದಾರೆ. ಉಪವಾಸವನ್ನು ಲೆಕ್ಕಿಸದೆ ಡೈರೆಕ್ಟರ್ ಹೇಳಿದಂತೆ ರಚನಾ ಬೆಟ್ಟ ಹತ್ತಲು ಹೋಗಿದ್ದಾಳೆ. ಆದರೆ ಅರ್ಧ ಹತ್ತಿದಾಗಲೇ ತಲೆ ಸುತ್ತಿದ್ದಾಳೆ. ಇನ್ನೇನು ಬೀಳಬೇಕು ಎನ್ನುವಷ್ಟರಲ್ಲಿ ಅಲ್ಲಿ ಇದ್ದ ಜೀವ ಓಡಿ ಬಂದಿದ್ದಾನೆ.

More from Filmibeat

English summary
colors kannada serial Ninagagi Written Update June 10th episode. Here is the details about An attempt to kidnap Krishna;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X