Ninagagi: ರಚ್ಚುಗೆ ಜೀವಾ ಮೇಲೆ ಮನಸ್ಸಾಗುತ್ತಿದೆ‌; ಶ್ರೀಮಾತಾ ಹೇಳಿದಂತಾದರೆ ವಜ್ರೇಶ್ವರಿ ಬಿಡ್ತಾಳಾ?

By ಎಸ್ ಸುಮಂತ್

ರಚನಾ ಸೂಪರ್ ಸ್ಟಾರ್. ಅವಳ ಡೇಟ್ಸ್‌ಗಾಗಿ ದೊಡ್ಡ ದೊಡ್ಡ ನಿರ್ಮಾಪಕರೆಲ್ಲಾ ಕಾದು ಕುಳಿತಿರುತ್ತಾರೆ. ಈಗಾಗಲೇ ಆರು ವರ್ಷಕ್ಕೂ ಬ್ಯುಸಿಯಾಗುವಷ್ಟು ರಚನಾ ಕಾಲ್ ಶೀಟ್ ಬುಕ್ ಆಗಿದೆ. ಓಡುವ ಕುದುರೆ, ದುಡಿಯುವ ಯಂತ್ರವನ್ನ ಕಳೆದುಕೊಳ್ಳುವುದಕ್ಕೆ ವಜ್ರೇಶ್ವರಿ ತಯಾರಿಲ್ಲ. ಅದಕ್ಕಾಗಿಯೇ ತನ್ನ ಕಂಟ್ರೋಲ್‌ನಲ್ಲಿಯೇ ಇಟ್ಟುಕೊಂಡಿದ್ದಾಳೆ.

ರಚನಾಗೂ ಬೇರೆ ಬದುಕಿದೆ. ಅವಳಿಗೂ ಒಬ್ಬ ರಾಜಕುಮಾರನ ಹೆಸರನ್ನು ಬರೆದಿರಲೇಬೇಕು. ಹಣದ ಆಸೆಗೆ ವಜ್ರೇಶ್ವರಿ ಮದುವೆ ಮಾಡದೆ ಇದ್ದರೆ ಏನಂತೆ ವಿಧಿಲಿಖಿತದಂತೆ ಎಲ್ಲವೂ ನಡೆಯಲೇಬೇಕಲ್ಲವೆ. ವಜ್ರೇಶ್ವರಿಯ ಅಹಂಕಾರ ಮುರಿಯುವ ಸಮಯ ಹತ್ತಿರದ ಬಂದಿದೆ. ಶ್ರೀಮಾತಾ ಆ ಸೂಚನೆಯನ್ನು ನೀಡಿದ್ದಾರೆ. ಈಗಲೇ ಅರಿತುಕೊಂಡರೆ ವಜ್ರೇಶ್ವರಿಗೆ ಒಳ್ಳೆಯದು. ಆದರೆ ಈಗಲೂ ಕುತಂತ್ರ ರೂಪಿಸಲು ಮುಂದಾಗಿದ್ದಾಳೆ.

colors kannada serial Ninagagi Written Update on June 13th episode

ಬೇಬಿಗಾಗಿ ಕೃಷ್ಣಾ ಕನವರಿಕೆ

ಕೃಷ್ಣಾಳ ತಾಯಿಯ ವಿಚಾರದಲ್ಲಂತು ಬಿಗ್ ಟ್ವಿಸ್ಟ್ ಇದೆ. ಮಗಳಿಗೆ ತಾಯಿ ನೋಡಬೇಕೆಂಬ ಬಯಕೆ ಇದ್ದರು ಅವಳ ಮುಖವನ್ನು ಸಹ ತೋರಿಸುತ್ತಿಲ್ಲ. ಕೃಷ್ಣಾ ಕೇಳಿದಾಗೆಲ್ಲ ಆಕಾಶದಲ್ಲಿರುವ ನಕ್ಷತ್ರ ತೋರಿಸಿ ಅವಳೇ ನಿಮ್ಮ ಅಮ್ಮ ಅಂತ ಹೇಳುತ್ತಿದ್ದಾನೆ. ಸೂಪರ್ ಸ್ಟಾರ್ ರಚನಾಳನ್ನ ಭೇಟಿ ಮಾಡಿದ ಮೇಲೆ ಅವಳೇ ನಮ್ಮ ಅಮ್ಮ ಎಂದುಕೊಂಡಿದ್ದಾಳೆ ಬೇಬಿ. ಅತ್ತ ಕೃಷ್ಣಾಳನ್ನ ತಾತನೇ ಕಿಡ್ನ್ಯಾಪ್ ಮಾಡಿಸಿದ್ದಾನೆ. ತೊಂದರೆ ಏನು ಕೊಟ್ಟಿಲ್ಲ. ಕೃಷ್ಣಾಳನ್ನ ತಾವೇ ನೋಡಿಕೊಳ್ಳಬೇಕು ಅಂತಾನೇ ಅಜ್ಜಿ-ತಾತನ ಮನಸ್ಸಲ್ಲಿರೋದು. ಆದರೆ ಕೃಷ್ಷಾ ಇರಬೇಕಲ್ಲ..?

ಕೃಷ್ಣಾಗೆ ಬೇಬಿ ಕಂಡು ಖುಷಿ

ಸ್ವಲ್ಪ ಸಮಯ ತಾತನ ಮನೆಯಲ್ಲಿದ್ದ ಕೃಷ್ಣಾ ಬ್ಯಾಗ್ ತಗಲಾಕಿಕೊಂಡು ಹೊರಟಳು. ಅವಳನ್ನು ಮನೆಯಲ್ಲಿಯೇ ಇರಿಸಿಕೊಳ್ಳಲು ತಾತಾ ಸುಳ್ಳಿನ ಕಥೆಯನ್ನೇ ಕಟ್ಟಿದ್ದ. ಆದರೆ ಕೃಷ್ಣಾ, ನಂಗೆ ಬೇಬಿ ಬೇಕು ಅಂತಾನೇ ಹಠ ಮಾಡಿದ್ದಳು. ಇವತ್ತು ಇಲ್ಲೇ ಇರಬೇಕು ಎಂದು ಹೇಳಿದ್ದ ತಾತನ ಮಾತು ಕೇಳಿ, ಬೇಬಿ ನೆನೆದು ಕಣ್ಣಲ್ಲಿ ನೀರು ತುಂಬಿತ್ತು. ಅಷ್ಟರಲ್ಲಿ ಬೇಬಿ ಧ್ವನಿ ಕೃಷ್ಣಾಗೆ ಕೇಳಿಸಿತ್ತು.

colors kannada serial Ninagagi Written Update on June 13th episode

ಜೀವನ ಗುಣಗಾನ ಮಾಡಿದ ಸೂಪರ್ ಸ್ಟಾರ್

ರಚನಾಳ ಉಪವಾಸ ಮುರಿದಿದ್ದು ಜೀವ. ಅಮ್ಮ ಹೇಳಿದ ಯಾವ ಮಾತನ್ನು ಮೀರಿದ ಉದಾಹರಣೆಯೇ ಇಲ್ಲ. ಆದರೆ ಈ ಉಪವಾಸ ಮುರಿದ ಕಾರಣ ಅಮ್ಮ‌ಬೇಜಾರು ಮಾಡಿಕೊಳ್ಳುತ್ತಾಳೆ ಎಂದುಕೊಂಡರೆ ಅದಾಗಲೇ ಶ್ರೀಮಾತಾರಿಂದ ಸತ್ಯ ಗೊತ್ತಿದ್ದ ಕಾರಣಕ್ಕೆ ವಜ್ರೇಶ್ವರಿ ಮಗಳಿಗೆ ಸಮಾಧಾನ ಮಾಡಿ ಕಳುಹಿಸಿದ್ದಳು. ಈಗ ಅಮ್ಮನಿಗಾಗಿ ರಚನಾ ಪ್ರೀತಿಯಿಂದ ಕೇಸರಿ ಬಾತ್ ಮಾಡಿದ್ದಾಳೆ. ಚಿಕ್ಕಮ್ಮನ ಬಳಿ ಜೀವ ಬಗ್ಗೆ ಗುಣಗಾನ ಮಾಡಿದ್ದಾಳೆ. ನಾನು ಯಾವಾಗಲೇ ಕಷ್ಟಕ್ಕೆ ಸಿಕ್ಕಾಗಲೂ ಕಾಪಾಡಿದ್ದು ಅದೇ ವ್ಯಕ್ತಿ ಎಂದು ಜೀವಾನನ್ನು ನೆನೆದು ಖುಷಿಯಾಗಿದ್ದಾಳೆ.

ರಚನಾ ಕೈ ಗಾಯವಾಗಿದ್ದಕ್ಕೆ ಕೋಪ

ರಚನಾಳ ತಂಗಿಗೆ ತಾನೂ ಸಿನಿಮಾ ಇಂಡಸ್ಟ್ರಿಯಲ್ಲಿರಬೇಕೆಂ ಬಯಕೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ರಚನಾಳಿಗೆ ಹಿಂಸೆ ನೀಡುತ್ತಲೇ ಇರುತ್ತಾಳೆ. ಈಗ ಕೇಸರಿ ಬಾತ್ ಮಾಡಿದ ಪಾತ್ರೆ ಮೇಲೆ ತಳ್ಳಿದ್ದಾಳೆ. ಬಿಸಿ ಕೈಗೆ ತಾಕಿ, ಚರ್ಮ ಎದ್ದಿದೆ. ಊಟ ಮಾಡಲು ಬಂದಾಗ ಆ ಗಾಯ ವಜ್ರೇಶ್ವರಿ ಕಣ್ಣಿಗೆ ಬಿದ್ದಿದೆ. ಮಗಳ ಮೇಲೆ ಅತಿಯಾದ ಪ್ರೀತಿ ಇದೆ ಎಂಬ ನಾಟಕವಾಡಿದ ವಜ್ರೇಶ್ವರಿ, ಪ್ರೀತಿಯಿಂದ ಮಾಡಿದ ಕೇಸರಿ ಬಾತ್ ಅನ್ನೇ ಬಿಸಾಡಿದ್ದಾಳೆ. ಮಗಳಿಗೆ ಸ್ವಲ್ಪ ಏನಾದರೂ ಪೆಟ್ಟಾದರೂ ಅದು ದುಡಿಮೆಗೆ ಒಡೆತ ಬೀಳುವ ಭಯ ವಜ್ರೇಶ್ವರಿಯದ್ದು.

More from Filmibeat

English summary
Ninagagi kannada serial today episode. Here is the details about Rachana has a crush on jeeva;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X