Ninagagi: ಭೂಮಿಗೆ ಬಂತು ಸ್ಟಾರ್‌!; ಸುಳ್ಳು ಹೇಳಿದ್ದ ಬೇಬಿ ತಲೆಗೆ ಹುಳ ಬಿಟ್ಟ ಕೃಷ್ಣಾ!

By ಎಸ್ ಸುಮಂತ್

ಕಲರ್ಸ್ ಕನ್ನಡದಲ್ಲಿ ನಿ'ನಗಾಗಿ' ಧಾರಾವಾಹಿಯಲ್ಲಿ ಮಕ್ಕಳ ನಟನೆ ನೋಡುವುದಕ್ಕೇನೆ ಖುಷಿಯಾಗುತ್ತದೆ. ಅದರಲ್ಲೂ ದುಷ್ಯಂತ್ ಬೇರೆ ಈ ಧಾರಾವಾಹಿ ಮೂಲಕ ಮತ್ತೆ ಕಲರ್ಸ್ ಕನ್ನಡಕ್ಕೆ ಬಂದಿದ್ದಾನೆ.‌ 'ನನ್ನಮ್ಮ ಸೂಪರ್ ಸ್ಟಾರ್' ವೇದಿಕೆಯಲ್ಲೇ ಎಲ್ಲರನ್ನು ನಕ್ಕು ನಲಿಸಿದ್ದ ದುಷ್ಯಂತ್ ಈಗ ಧಾರಾವಾಹಿಯಲ್ಲೂ ಅದೇ ಕೆಲಸ ಮಾಡುತ್ತಿದ್ದಾನೆ. ದುಷ್ಯಂತ್ ನಟನೆಗೆ ಜನ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಮಗಳನ್ನೇ ಜೀವ ಎಂದು ಬದುಕುತ್ತಿರುವವನು ಜೀವ. ಅವಳಿಗಾಗಿ ಹೋರಾಟ‌ಮಾಡಿ ಪಡೆದುಕೊಂಡಿದ್ದಾನೆ. ತನಗೇನೆ ಕಷ್ಟ ಇದ್ದರು ಕೃಷ್ಣಾಳಿಗಾಗಿ ಆ ಕಷ್ಟವನ್ನೆಲ್ಲಾ ಸಹಿಸಿಕೊಳ್ಳುತ್ತಾನೆ. ಕೃಷ್ಣಾಳಿಗೆ ಯಾವುದೇ ಕೊರತೆ ಬರದಂತೆ ನೋಡಿಕೊಂಡಿದ್ದಾನೆ. ಆದರೆ ಅಮ್ಮನ ಸ್ಥಾನವನ್ನು ಮಾತ್ರ ತುಂಬುವುದಕ್ಕೆ ಆಗುತ್ತಿಲ್ಲ. ಆ ಬಗ್ಗೆ ಕೃಷ್ಣಾ ಕೂಡ ಯಾವತ್ತಿಗೂ ಬೇಬಿಗೆ ಹರ್ಟ್ ಆಗುವಂತೆ ಮಾತನಾಡುವುದಿಲ್ಲ.

Colors kannada serial Ninagagi Written Update on June 5th episode

ಸ್ಟಾರ್ ತೋರಿಸಿ ಅಮ್ಮ ಎಂದಿದ್ದ ಬೇಬಿ

ಕೃಷ್ಣಾಳನ್ನು ಪ್ರತಿದಿನ ಶಾಲೆಗೆ ರೆಡಿ ಮಾಡಿ‌ ಕಳುಹಿಸುವುದು ಜೀವನೆ. ಆದರೆ ತಲೆ ಬಾಚುವಾಗ ಕೂದಲು ನೋವಾಗುತ್ತೆ ಎಂಬ ಆರೋಪವಿದೆ. ಅಮ್ಮ ಬಾಚಿದರೆ ನೋವಾಗುವುದಿಲ್ಲ ಎಂಬ ನಂಬಿಕೆ. ಅದಕ್ಕಾಗಿ ಅಮ್ಮನಿಗಾಗಿ ಕಾಯುತ್ತಿದ್ದಾಳೆ. ಆದರೆ ಜೀವ ಸುಳ್ಳು ಹೇಳಿದ್ದಾನೆ. ಅಮ್ಮ ಸ್ಟಾರ್ ಆಗಿದ್ದಾಳೆ. ಯಾವತ್ತಿಗೂ ಭೂಮಿಗೆ ಬರುವುದಿಲ್ಲ ಅಂತಾನೇ ಹೇಳಿ ನಂಬಿಸಿದ್ದಾಳೆ.

ಮತ್ತೆ ಸ್ಕೂಲಿಗೆ ಓಡಿ ಬಂದ ಕೃಷ್ಣಾ

ರಚನಾ ಸಿನಿಮಾದಲ್ಲಿ ಕೃಷ್ಣಾ ಪಾತ್ರಕ್ಕೊಂದು ಮಗು ಬೇಕಿರುತ್ತೆ. ಅದೇ ಸಮಯಕ್ಕೆ ಅಸಿಸ್ಟೆಂಟ್ ಕಣ್ಣಿಗೆ ಕೃಷ್ಣಾ ಬೀಳುತ್ತಾಳೆ. ಈ ಮಗುವೇ ಸೂಪರ್ ಎಂದುಕೊಂಡು ನಟನೆ ಮಾಡಿಸುತ್ತಾರೆ. ರಚನಾಳಲ್ಲಿ ಅಮ್ಮನನ್ನು ಕಂಡು ಕೃಷ್ಣಾ ಖುಷಿ ಪಡುತ್ತಾಳೆ. ಶೂಟಿಂಗ್ ಮುಗಿದ ಮೇಲೆ ರಚನಾಳೆ ಕೃಷ್ಣಾಳ ತಲೆ ಬಾಚುತ್ತಾಳೆ. ಆಗ ನೋವಾಗದೆ ಇದ್ದದ್ದನ್ನು ಕಂಡು ಇವಳೇ ಅಮ್ಮ ಎಂದು ಫಿಕ್ಸ್ ಆಗುತ್ತಾಳೆ. ಇಬ್ಬರು ಮಕ್ಕಳು ಕುಣಿದು ಕುಪ್ಪಳಿಸುತ್ತಾರೆ. ಜೊತೆಗೆ ರಚನಾ ಸೂಪರ್ ಸ್ಟಾರ್ ಎಂದು ಗೊತ್ತಾಗಿ ಇನ್ನು ಖುಷಿ ಪಡುತ್ತಾಳೆ. ಶಾಲೆಗೆ ಹೋಗದ ಇರುವುದು ಗೊತ್ತಾದರೆ ಬೇಬಿ ಬೈತಾರೆ ಅಂತ ಮತ್ತೆ ಸ್ಕೂಲಿಗೆ ಓಡಿ ಬರುತ್ತಾರೆ.

ಸುಳ್ಳು ಹೇಳಿದ್ದು ಯಾಕೆ ಎಂದ ಕೃಷ್ಣಾ

ಅಷ್ಟರಲ್ಲಿ ಜೀವ ದೇವರ ಬಳಿ ಬೇಡಿಕೊಳ್ಳುತ್ತಿರುತ್ತಾನೆ‌, ಗಾಬರಿಯಾಗಿರುತ್ತಾನೆ. ಬೇಬಿಯನ್ನು ಕಂಡು ಜೀವನಿಗೆ ಮರು ಜೀವ ಬಂದಂತೆ ಆಗುತ್ತದೆ. ಗದರಿದರೆ ಸ್ಟಾರ್ ಭೂಮಿಗೆ ಬರಲ್ಲ ಅಂತ ಸುಳ್ಳು ಹೇಳಿದೆ. ನಾನು ಸ್ಟಾರ್ ನೋಡಿಕೊಂಡು ಬಂದೆ ಎಂದು ಹೇಳುವುದಕ್ಕೆ ಹೋದಾಗ ದುಷ್ಯಂತ್ ಹೊಟ್ಟೆ ನೋವು ಎಂದು ನಾಟಕವಾಡುತ್ತಾನೆ. ಜೀವ ಟೀಚರ್ ಗೆ ಮಾಹಿತಿ ನೀಡಲು ಹೋದಾಗ ದುಷ್ಯಂತ್, ಕೃಷ್ಣಾಳಿಗೆ ಸತ್ಯ ಹೇಳಬೇಡ ಎಂದು ತಡೆಯುತ್ತಾನೆ.

Colors kannada serial Ninagagi Written Update on June 5th episode

ಮಕ್ಕಳ ನಟನೆಗೆ ನೋಡುಗರು ಖುಷಿ

ಈ ಧಾರಾವಾಹಿಯಲ್ಲಿ ಎರಡು ಮಕ್ಕಳ ನಟನೆ ಎಲ್ಲರಿಗೂ ಒಳ್ಳೆ ಮನರಂಜನೆ ನೀಡುತ್ತಿದೆ. ಕೃಷ್ಣಾಳ ಅಭಿನಯ ಭಾವುಕತೆಯನ್ನು ಹೆಚ್ಚಿಸಿದರೆ, ದುಷ್ಯಂತ್ ಅಭಿನಯ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತದೆ. ಈ ಸೀರಿಯಲ್ ನ ಪ್ರೋಮೋಗಳಿಗೆ ಅದರಲ್ಲೂ ಮಕ್ಕಳ ಪ್ರೋಮೋಗೆ ಹಾರ್ಟ್ ಹಾಕುವವರೇ ಹೆಚ್ಚಾಗಿದ್ದಾರೆ. ಮಕ್ಕಳ ಅಭಿನಯ ಸೂಪರ್ ಅಂತಾನೇ ಹೇಳುತ್ತಾರೆ. ಜೊತೆಗೆ ದಿವ್ಯಾ ಉರುಡುಗ ಪಾತ್ರಕ್ಕೂ ಸೈ ಎನ್ನುತ್ತಿದ್ದಾರೆ. ಅದರಲ್ಲೂ ರಚನಾಳ‌ ಅಮ್ಮನೇ ವಿಲನ್ ಆಗಿದ್ದು, ಅವರ ಪಾತ್ರ ಬಂದಾಗಲೂ ಕುತೂಹಲ ಹೆಚ್ಚಾಗಿರುತ್ತದೆ.

More from Filmibeat

English summary
Ninagagi kannada serial today episode. Here is the details about Krishna is happy to see Amma;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X