Ninagagi: ಹೋಯ್ ಬೇಬಿ..ಚಾಕ್ಲೇಟ್ ಖಾಲಿ; ಅಪ್ಪ-ಮಗಳ ಸಂಭಾಷಣೆಗೆ ಜನ ಫಿದಾ!

By ಎಸ್ ಸುಮಂತ್

ಕಲರ್ಸ್ ಕನ್ನಡದಲ್ಲಿ ಹೊಸದಾಗಿ ಧಾರಾವಾಹಿಯೊಂದು ಶುರುವಾಗಿದೆ. ಸೋಮವಾರದಿಂದ ಮೂಡಿ ಬರುತ್ತಿರುವ 'ನಿನಗಾಗಿ' ಧಾರಾವಾಹಿ ಎಲ್ಲರ ಗಮನ ಸೆಳೆಯುತ್ತಿದೆ. ದಿವ್ಯಾ ಉರುಡುಗ ಕಮ್ ಬ್ಯಾಕ್ ಮಾಡಿರುವ ಧಾರಾವಾಹಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಾ ಇದೆ.

'ನಿನಗಾಗಿ' ಧಾರಾವಾಹಿ ತಂದೆ-ಮಗಳ ಅನ್ಯೋನ್ಯತೆ ತೋರಿಸುವುದಲ್ಲದೇ, ಸ್ಟಾರ್ ಗಿರಿಯಿಂದ ಸ್ವತಂತ್ರ ಕಳೆದುಕೊಂಡ ನಟಿಯ ಕಥೆಯನ್ನು ಹೇಳುತ್ತಿದೆ. ಅಮ್ಮ ಬೇಕು ಎಂದು ಬಯಸುವ ಮಗುವಿಗೆ ಲೇಡಿ ಸೂಪರ್ ಸ್ಟಾರ್ ರಚ್ಚು ಅಮ್ಮನಾಗ್ತಾಳ ಎಂಬುದನ್ನು ನೋಡುವ ಕುತೂಹಲವಿದೆ. ಆದರೆ ಅದೆಲ್ಲದ್ದಕ್ಕಿಂತ ಹೆಚ್ಚಾಗಿ ಆ ಮಗು ಎಲ್ಲರ ಗಮನ ಸೆಳೆಯುತ್ತಿದೆ.

colors kannada serial Ninagagi Written Update on May 28th episode

ಮಗಳೆಂದರೆ ಜೀವನಿಗೆ ಪ್ರಾಣ

ಈ ಧಾರಾವಾಹಿಯಲ್ಲಿ ತಂದೆ‌-ಮಗಳ ಬಾಂಧವ್ಯ ಮನಮುಟ್ಟುವಂತೆ ಇದೆ. ಮಗಳಿಗಾಗಿ ತಂದೆ ಏನೇ ಕಷ್ಟ ಬಂದರೂ ಸರಿ ಸಹಿಸಿಕೊಳ್ಳುತ್ತಾನೆ. ಅವಳನ್ನು ಆನಂದವಾಗಿಡಬೇಕೆಂಬುದೇ ಅವನ ಆಲೋಚನೆ. ಮಗಳನ್ನು ಜೀವ ತನ್ನ ಫ್ರೆಂಡ್ ರೀತಿಯೇ ನೋಡಿಕೊಳ್ಳುತ್ತಾನೆ. ರಾತ್ರಿ ಕ್ಯಾಂಟಿನ್ ನಡೆಸುವ ಜೀವ, ಬೆಳಗ್ಗೆಯಾದರೆ ತಿಂಡಿ ಮಾಡಿ, ಮಗಳನ್ನು ಶಾಲೆಗೆ ರೆಡಿ ಮಾಡಿ, ಬಾಕ್ಸ್ ರೆಡಿ ಮಾಡಿ ಕಳುಹಿಸುವುದೇ ಟಾಸ್ಕ್. ಹಾಗಂತ ಮಗಳೇನು ಹಿಂಸೆ ಕೊಡಲ್ಲ. ಅಪ್ಪನಿಗೆ ಅವಳು ಫುಲ್ ಸಪೋರ್ಟ್. ಸ್ನಾನ ಮುಗಿಸಿ, ಡ್ರೆಸ್ ಮಾಡಿಕೊಂಡು ರೆಡಿಯಾಗುತ್ತಾಳೆ.

ಅಪ್ಪ ಮಗಳ ಸಂಭಾಷಣೆಯೇ ಹೈಲೆಟ್

ಅಪ್ಪ ಮಗಳ ಬಾಂಧವ್ಯ ಈ ಧಾರಾವಾಹಿಯಲ್ಲಿ ಹೈಲೆಟ್ ಆಗಿದೆ. ಅವರಿಬ್ಬರ ನಡುವಿನ ಮಾತುಕತೆಯೂ ಎಲ್ಲರನ್ನು ಸೆಳೆಯುತ್ತಿದೆ. ಪಾಪು, ಚಿನ್ನು, ಬಂಗಾರ ಅನ್ನೋದನ್ನ ಕೇಳಿದ್ದೀವಿ. ಮಗ, ಮಚ್ಚ, ಬೇಬಿ ಎನ್ನುವುದು ಫ್ರೆಂಡ್ಸ್. ಇಲ್ಲಿ ಅಪ್ಪ ಮಗಳ ಮಾತುಕತೆಯೂ ಹಾಗೇ ಇರುತ್ತದೆ. ಹೋಯ್ ಬೇಬಿ ಅಂತಾನೆ ಮಾತು ಶುರು ಮಾಡುವುದು. ಬೇಬಿ ನಿಂಗೋಸ್ಕರ ಚಾಕಲೇಟ್ ತಂದಿದ್ದೀನಿ ವೇಯ್ಟ್ ಮಾಡು ತರ್ತೀನಿ ಅಂತ ಹೇಳಿ ಅಪ್ಪ ಎದ್ದು ಹೋದರೆ, ಮಗಳು ಅದಾಗಲೇ ಚಾಕಲೇಟ್ ಖಾಲಿ ಮಾಡಿದ್ದಳು. ಅಪ್ಪನ ಹಿಂದೆ ಬಂದು ಬೇಬಿ, ಗ್ರೀನ್ ಬಾಕ್ಸ್‌ನಲ್ಲಿರೋ ಚಾಕ್ಲೇಟ್ ಹ್ಹ ಅಂತ ಹೇಳಿ ತಿಂದಿರುವ ಸೂಚನೆಯನ್ನ ಕೊಟ್ಟಳು.

colors kannada serial Ninagagi Written Update on May 28th episode

ಶಾಲೆಯಲ್ಲಿ ಬೇಬಿ ಬಗ್ಗೆನೇ ದೂರು

ಮಗಳು ಬೇಬಿಗೆ ಅಮ್ಮ ಇಲ್ಲ ಎಂಬ ಕೊರತೆ. ಪ್ರತಿ ದಿನ ಮನಸ್ಸಲ್ಲಿ ಅಮ್ಮನನ್ನು ಕಾಣುವ ಪ್ರಯತ್ನ ಮಾಡ್ತಾಳೆ. ಆದರೆ ಅದೇ ಸಮಯಕ್ಕೆ ಅಪ್ಪ ಗುಡ್ ಮಾರ್ನಿಂಗ್ ಹೇಳಿ ಎಚ್ಚರ ಮಾಡ್ತಾರೆ. ಕೃಷ್ಣಾ ಬೇಬಿಗೆ ಜೀವ ಬೇಬಿನೆ ಜಡೆ ಹಾಕೋದು. ಆದರೆ ಅದು ತುಂಬಾ ನೋವಾಗುತ್ತೆ ಅನ್ನೋದು ಕೃಷ್ಣಾ ಬೇಬಿಯ ದೂರು.

ಮಕ್ಕಳ ನಟನೆಗೆ ಶಬ್ಬಾಶ್ ಎಂದ ಜನ

ಮನೆಯಲ್ಲಿ ನಡೆಯುವ ಕಥೆಯನ್ನು ಕೃಷ್ಣಾ ಕ್ಲಾಸ್ ನಲ್ಲಿ ಹೇಳಿದ್ದಾಳೆ. ಇದಕ್ಕೆ ಕ್ಲಾಸ್ ರೂಮಲ್ಲಿದ್ದ ಕೃಷ್ಣಾಳ ಫ್ರೆಂಡ್ಸ್ ರೇಗಿಸಿದ್ದಾರೆ. ತಿರುಪತಿಗೆ ಹೋಗಿ ಬೋಡ ಮಾಡಿಸಿಕೊಂಡು ಬಂದು ಬಿಡು. ಆಮೇಲೆ ಈ ಸಮಸ್ಯೆ ಇರಲ್ಲ ಎಂದಿದ್ದಾರೆ. ಅಬ್ಬಬ್ಬಾ ಮಕ್ಕಳ ಆಕ್ಟಿಂಗ್ ನೋಡಿ ಜನ ಏನ್ ಬ್ರೋ ಇವ್ರೆಲ್ಲ ಪ್ರೋ ಕಿಡ್ ಗಳು ಎಂದಿದ್ದಾರೆ. ದುಶ್ಯಂತ್ ಎಂಟ್ರಿಗೆ ಎಲ್ಲರು ಖುಷಿಯಾಗಿದ್ದಾರೆ. ಓ ಇವ್ನು ದುಶ್ಯಂತ್ ಅಲ್ವಾ ಎಂದು ಕಮೆಂಟ್ಸ್ ಹಾಕುತ್ತಿದ್ದಾರೆ. ಆದರೆ ಕೃಷ್ಣಾ ಪಾತ್ರದಲ್ಲಿ ಮಾಡಿರುವ ಆ‌ ಮಗುವಿನ ಫೇಸ್ ಎಕ್ಸ್ ಪ್ರೆಷನ್ ಗೆ ಜನ ಬಹುಪರಾಕ್ ಹೇಳಿದ್ದಾರೆ.

More from Filmibeat

English summary
colors kannada serial Ninagagi Written Update on May 28th episode. Here is the details about Hoy Baby baby's conversation is highlighted.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X