Ninagagi: ರಚನಾಗೆ ಸಿನಿಮಾ ಮಾರ್ಕೆಟ್ ಇರುವ ತನಕ ಮಾತ್ರ ಪ್ರೀತಿ; ಈ ಥರ ತಾಯಂದಿರು ಇರ್ತಾರಾ?

By ಎಸ್ ಸುಮಂತ್

ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿಯೊಂದು ಶುರುವಾಗಿದೆ. ದಿವ್ಯಾ ಉರುಡುಗ ಕಮ್ ಬ್ಯಾಕ್ ಆದಂತ ಧಾರಾವಾಹಿ. ಶುರುವಾಗಿ ಮೂರು ದಿನಗಳಿಗೇನೆ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಧಾರಾವಾಹಿಯಲ್ಲಿನ ಪಾತ್ರಧಾರಿಗಳು, ಕಥೆ, ಅದರಲ್ಲೂ ಆ ಮಗುವಿನ ಮಾತುಗಾರಿಕೆ ಎಲ್ಲವೂ ಗಮನ ಸೆಳೆಯುತ್ತಿದೆ.

ಕೃಷ್ಣಾಗೆ ಜೀವನೇ ಪ್ರಪಂಚ. ಆದರೆ ತಾಯಿ ಬೇಕೆಂಬ ಆಸೆ ಅದ್ಯಾವಾಗ ಈಡೇರುತ್ತದೋ ಗೊತ್ತಿಲ್ಲ. ಇತ್ತ ಲೇಡಿ ಸೂಪರ್ ಸ್ಟಾರ್ ರಚ್ಚುಗೆ ಸ್ವಾತಂತ್ರ್ಯದ್ದೇ ಸಮಸ್ಯೆ. ತಾಯಿಯೇ ಬೇಲಿಯಾಗಿದ್ದಾಳೆ‌. ತಾಯಿಯಿಂದಾನೇ ರಚ್ಚು ಮನಸ್ಸಿಗೆ ಇಷ್ಟವೇ ಇಲ್ಲದ ಕೆಲಸ ಮಾಡುತ್ತಿದ್ದಾಳೆ. ಈ ಧಾರಾವಾಹಿಯ ಕಥೆ ಕಂಡು ಈ ರೀತಿಯ ತಾಯಿಯೂ ಇದ್ದಾರಾ ಎನಿಸಿದೆ ಪ್ರೇಕ್ಷಕರಿಗೆ.

colors kannada serial Ninagagi Written Update on May 29th episode

ಆರು ವರ್ಷ ಕಾಲ್ ಶೀಟ್ ಬುಕ್ಕಿಂಗ್

ರಚ್ಚು ಸಿಕ್ಕಾಪಟ್ಟೆ ಬ್ಯುಸಿಯೆಸ್ಟ್ ನಟಿ. ಎಲ್ಲಾ ನಿರ್ಮಾಪಕರಿಗೂ ರಚ್ವುನೇ ಬೇಕು. ರಚ್ಚು ಇಲ್ಲದೆ ನಟರು ಸಿನಿಮಾ ಮಾಡುವುದಿಲ್ಲ. ಇದು ನಿನಗಾಗಿ ಧಾರಾವಾಹಿಯ ಕಥೆ. ರಚ್ಚು ಅದೆಷ್ಟು ಬ್ಯುಸಿ ಎಂದರೆ ಆರು ವರ್ಷಗಳ ಕಾಲ ಕಾಲ್ ಶೀಟ್ ಬುಕ್ ಆಗಿದೆ. ರಚ್ಚು ತಾಯಿ ಆಡುತ್ತಿರುವ ಆಟ ಮನೆಯಲ್ಲಿರುವ ಯಾರಿಗೂ ಗೊತ್ತಾಗದಂತೆ ನೋಡಿಕೊಂಡಿದ್ದಾಳೆ. ಅಕ್ಕ ತಮ್ಮ ಮಾತನಾಡಿಕೊಳ್ಳುತ್ತಿರುವಾಗ ರಚ್ಚು ಅತ್ತೆ ಕಾಫಿ ಕೊಡಲು ಬಂದಿದ್ದಾಳೆ. ಆಗ ಆಕೆಯ ಗಂಡ ತೇಜನಿಗೆ ಯಾವುದೋ ನಿರ್ಮಾಪಕರಿಂದ ಕರೆ ಬಂದಿದೆ. ಆಗ ಆರು ವರ್ಷಗಳ ಕಾಲ ರಚ್ಚು ಕಾಲ್ ಶೀಟ್ ಸಿಗಲ್ಲ ಎಂದಿದ್ದಾನೆ.

ಅತ್ತೆಗೆ ರಚ್ಚುಳದ್ದೆ ಚಿಂತೆ

ಗಂಡನ ಮಾತು ಕೇಳಿ ಹೆಂಡತಿಗೆ ಶಾಕ್ ಆಗಿದೆ. ಅಲ್ಲ ರೀ ಮುಂದಿನ ವರ್ಷ ಮದುವೆ ಮಾಡಿ ಬಿಡುತ್ತೀವಿ. ಮದುವೆಯ ಬಳಿಕ ನಟಿಸುವ ಅವಶ್ಯಕತೆ ಇಲ್ಲ ಅಂತ ರಚ್ಚುಗೆ ಹೇಳಿದ್ದೀರಿ. ಈಗ ನೋಡಿದ್ರೆ ಆರು ವರ್ಷ ಅಂತ ಹೇಳುತ್ತಾ ಇದ್ದೀರಾ ಅಂತ ಬೇಸರದಲ್ಲಿಯೇ ನುಡೊದಳು. ಮನೆಯಲ್ಲಿ ವಜ್ರೇಶ್ವರಿಯ ಮಾತೇ ನಡೆಯುವುದು. ಕಣ್ಣಿನಲ್ಲಿಯೇ ತೇಜನಿಗೆ ಹೇಳಿಕೊಟ್ಟಳು. ಅದರಂತೆ ತೇಜ ಕೈನಲ್ಲಿದ್ದ ಟೀ ಕಪ್ ಎಸೆದು ಬಿಟ್ಟ. ಹೆಂಡತಿ‌ ಭಯದಿಂದ ಅಲ್ಲಿಂದ ಹೊರಟು ಹೋದಳು.

colors kannada serial Ninagagi Written Update on May 29th episode

ಮಗಳೇ ದುಡಿಮೆಯ ದಾಳ

ರಚ್ಚುಗೆ ಮನೆಯಲ್ಲೂ ನೆಮ್ಮದಿ ಇಲ್ಲ. ಎಲ್ಲರಂತೆ ಓದಿ ಡಾಕ್ಟರ್ ಆಗಬೇಕು ಎಂದುಕೊಂಡಿದ್ದವಳು. ಆದರೆ ನಟಿಯಾದ ಮೇಲೆ ಓದುವ ಆಸೆಯನ್ನೇ ಬಿಡಿಸಿದಳು ಹೆತ್ತವಳು. ಪ್ರತಿ ಸಲ ನೀನು ಸ್ಟಾರ್ ಆಗಿರುವುದು ನಿನ್ನ ತಾಯಿಯಿಂದಾನೇ ಅಂತ ಮಾವ ಒತ್ತಿ ಒತ್ತಿ ಹೇಳುತ್ತಾನೆ. ನಗು ಬರದೆ ಇದ್ದರು ತಾಯಿಯ ಬೆದರಿಕೆಗಾದರು ನಗಬೇಕಿದೆ. ಇನ್ನು ತನಗಿಷ್ಟವಾದ ಬಟ್ಟೆಯನ್ನು ಹಾಕುವಂತೆಯೂ ಇಲ್ಲ. ಮಗಳೆಂದರೆ ವಜ್ರೇಶ್ವರಿಗೆ ದುಡಿಯುವ ಎತ್ತು ಅಷ್ಟೇ. ಈ ಸ್ಟೋರಿಯನ್ನು ಕಂಡು ಎಷ್ಟೋ ಜನ ನಿಜಕ್ಕೂ ಇಂಥ ತಾಯಿ ಇದ್ದಾರಾ ಎನ್ನುತ್ತಿದ್ದಾರೆ. ಆದರೆ ಇಂಡಸ್ಟ್ರಿಯಲ್ಲಿಯೇ ಈ ರೀತಿಯಾದಂತ ರಿಯಲ್ ಕಥೆಗಳು ಇದಾವೆ ಎಂದು ಹಲವರು ಹೇಳುವುದುಂಟು.

ಕೃಷ್ಣಾಳ ಕನಸಿನಲ್ಲಿ ಬಂದಿದ್ದೇಕೆ ರಚ್ಚು

ಈ ಧಾರಾವಾಹಿಯಲ್ಲಿ ಕೃಷ್ಣಾ ಎಂಬ ಮಗು ಆಕರ್ಷಣೆಯ ಬಿಂದು. ಅವಳಿಗೆ ತಾಯಿಯಿಲ್ಲ. ತಾಯಿಯ ಮುಖವು ಕಾಣದಂತ ಫೋಟೋ ಗೋಡೆ ಮೇಲೆ ಇದೆ. ಪ್ರತಿದಿನ ತಾಯಿ ಬಂದಂತೆ ಕನಸು ಕಾಣುತ್ತಾಳೆ ಕೃಷ್ಣಾ. ಆ ಕನಸಲ್ಲಿ ರಚ್ಚು ಬರುತ್ತಾಳೆ. ಮುಂದೆ ಅವಳೇ ತನ್ನ ತಾಯಿಯೆಂದು ಕೃಷ್ಣಾ ಅಚ್ಚಿಕೊಳ್ಳುವ ಕಥೆ ಇದಾಗಿದೆ. ಆದರೆ ಕೃಷ್ಣಾಳ ತಂದೆ ಜೀವಾಗೆ ಈ ಲೇಡಿ ಸೂಪರ್ ಸ್ಟಾರ್ ರಚ್ಚು ಬಗ್ಗೆ ಗೊತ್ತೇ ಇಲ್ಲ.

More from Filmibeat

English summary
colors kannada serial Ninagagi Written Update on May 29th episode. Here is the details about Sad about the mother who wishes for her daughter's money;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X