Ninagagi: ಶುರುವಾಯ್ತು 'ನಿನಗಾಗಿ' ಕ್ರೇಜ್: ರಚನಾ ಮುಗ್ಧತೆಗೆ ಮನಸೋತ ಜನ
'ನಿನಗಾಗಿ' ಧಾರಾವಾಹಿ ಶುರುವಾದ ನಾಲ್ಕೇ ದಿನಕ್ಕೆ ಎಲ್ಲರ ಮೆಚ್ಚುಗೆ ಗಳಿಸುತ್ತಿದೆ. ಕಲರ್ಸ್ ಕನ್ನಡ ಬಿಡುವ ಪ್ರೋಮೋಗಳಿಗೆ ಜನ ಕಮೆಂಟ್ ಹಾಕುವ ಮೂಲಕ ತಮ್ಮ ಬೆಂಬಲ ನೀಡುತ್ತಿದ್ದಾರೆ. ಕಥೆ ಜನರಿಗೆ ಇಷ್ಟವಾಗಿದೆ. ಇದರಲ್ಲಿ ಎರಡು ವಿಶೇಷ ಪಾತ್ರಗಳಿದ್ದು, ಅದರಲ್ಲಿ ಜೀವ ಮತ್ತು ಕೃಷ್ಣಾಳ ಪಾತ್ರ ಒಂದು ರೀತಿ ಸಾಗುತ್ತಿದ್ದರೆ ರಚ್ಚು ಕಥೆ ಮತ್ತೊಂದು ರೀತಿ ಸಾಗುತ್ತಿದೆ. ಈ ಮೂವರು ಒಂದಾದರೆ ಕಥೆಯೇ ಬೇರೆ ಆಗಲಿದೆ.
ಕೃಷ್ಣಾಗೆ ತಾಯಿಯನ್ನು ನೋಡುವ ಹಂಬಲ. ಆದರೆ ತಾಯಿಯ ರೂಪ ಕೂಡ ಅವಳ ಕಣ್ಣಿಗೆ ಕಂಡಿಲ್ಲ. ಅಪ್ಪನ ಜೊತೆಗೆ ತಾಯಿ ಇರುವಂತೆ ಫೋಟೋ ಇದೆ. ಆದರೆ ಅದರಲ್ಲೂ ದುಪ್ಪಟದಿಂದ ಮುಚ್ಚಲಾಗಿದೆ. ಹೀಗಾಗಿ ಕೃಷ್ಣಾಗೆ ತನ್ನ ತಾಯಿ ಹೇಗಿದ್ದಾಳೆಂಬ ಊಹೆಯೂ ಇಲ್ಲ. ಆದರೆ ರಚ್ಚುನೇ ಮುಂದೆ ಕೃಷ್ಣಾಳ ತಾಯಿಯಾಗಿ ಬರಲಿದ್ದಾಳೆ. ಅದಕ್ಕೆಲ್ಲಾ ಕಾರಣ ರಚ್ಚುಗಿರುವ ಆಸೆಗಳು.

ಗಂಡ, ಮನೆ, ಮಗು ಎಂಬ ಕನಸು
ರಚ್ಚುಗೆ ತನ್ನದೇ ಆದ ದಿಡ್ಡ ಕನಸಿದೆ. ಈ ಸ್ಟಾರ್ ಗಿರಿ ಎಲ್ಲಾ ಪಕ್ಖ್ಕೆ ಇಟ್ಟು ಬದುಕಬೇಕು ಎನ್ನುವುದು. ಮೊದಲು ಸ್ವತಂತ್ರಳಾಗಿ ಬದುಕಬೇಕು ಎಂಬುದು. ಎಲ್ಲಿಯೇ ಹೋದರೂ, ಜನ ಸುತ್ತುವರೆಯುತ್ತಾರೆ. ಬದುಕು ಎಂಬುದು ಆ ರೀತಿ ಅಲ್ಲ. ನಾನು ಎಲ್ಲರ ಜೊತೆಗೆ ನಿಂತು ಆರಾಮವಾಗಿಯೇ ಪಾನಿಪೂರಿ ತಿನ್ನಬೇಕು. ಅಷ್ಟು ಸ್ವತಂತ್ರಳಾಗಬೇಕು ಎಂಬ ಆಸೆ. ಅದರಲ್ಲೂ ಮದುವೆಯಾಗಿ ಸಂಸಾರ ನಡೆಸಬೇಕು ಎಂಬುದು.
ರಚ್ಚು ಆಸೆ ಈಡೇರುವುದು ಸುಲಭವಲ್ಲ
ರಚನಾಗೆ ಅವರ ತಾಯಿ ವಜ್ರೇಶ್ವರಿ ಪ್ರಾಮೀಸ್ ಮಾಡಿದ್ದಾಳೆ. ಮುಂದಿನ ವರ್ಷದ ಒಳಗೆ ನಿನಗೆ ಮದುವೆ ಮಾಡುತ್ತೇನೆ. ಮದುವೆಯಾದ ಮೇಲೆ ನಟನೆ ಎಲ್ಲಾ ಏನು ಬೇಡ ಅಂತ. ಅದೇ ಭತವಸೆಯಲ್ಲಿ ರಚ್ಚು ತೇಲಾಡುತ್ತಿದ್ದಾಳೆ. ತಮ್ಮ ಚಿಕ್ಕಮ್ಮ ಬಳಿ ಆ ಸಂತಸವನ್ನು ಹೇಳಿಕೊಂಡು ಸಂಭ್ರಮಿಸಿದ್ದಾಳೆ. ನನಗೂ ಒಂದು ದೊಡ್ಡ ಆಸೆ ಇದೆ. ಅಮ್ಮ ಹೇಳಿದ್ದಾರೆ. ಈ ವರ್ಷ ಮದುವೆ ಮಾಡ್ತೀನಿ ಅಂತ. ಮದುವೆಯಾದ ಮೇಲೆ ನಾನು ನಿಮ್ಮ ಥರಾನೇ ತಲೆ ತುಂಬಾ ಹೂ ಮುಡಿದು ಸಂಪ್ರದಾಯದಿಂದ ಇರಬೇಕು. ನಂಗೆ ಮಗಳು ಹುಟ್ಟಿದರೆ ತರಲೇ ಮಾಡಿಕಿಂಡು ಓಡಾಡಬೇಕು ಎಂಬೆಲ್ಲ ಕನಸ್ಸನ್ನು ಕಂಡಿದ್ದಾಳೆ.

ನಿನಗಾಗಿಯೇ ಎಂದು ಬಿಂಬಿಸಿರುವ ವಜ್ರೇಶ್ವರಿ
ರಚನಾಳನ್ನು ಅವರ ಅಮ್ಮ ತನ್ನ ಹಟೋಟಿಯಲ್ಲಿ ಇಟ್ಟುಕೊಳ್ಳುವುದಕ್ಕೆ ಏನೆಲ್ಲಾ ಬೇಕೋ ಆ ಎಲ್ಲಾ ಸರ್ಕಸ್ ಮಾಡಿದ್ದಾಳೆ. ನಿರ್ದೇಶಕನೊಬ್ಬ ಕೆಟ್ಟದಾಗಿ ನಡೆದುಕೊಂಡ ಅನ್ನೋ ಕಾರಣಕ್ಕೆ ರಚನಾ ಟೀ ತೆಗೆದು ಅವನ ಮೇಲೆ ಎರಚಿದ್ದಾಳೆ. ಆ ವಿಡಿಯೋ ಎಲ್ಲೂ ಲೀಕ್ ಆಗಿರಲಿಲ್ಲ. ಆದರೆ ಇದು ಎಲ್ಲೆಡೆ ವೈರಲ್ ಆಗಿ ನಿನ್ನ ಮರ್ಯಾದೆ ಹೋಗುವುದನ್ನು ತಡೆದೆ. ಅದಕ್ಕೆ ನಾನು ಖರ್ಚು ಮಾಡಿದ್ದು 10 ಲಕ್ಷ ರೂ. ಅಂತ ಹೇಳಿ ಭಯ ಹುಟ್ಟಿಸಿದ್ದಾಳೆ.
ರಚನಾ ಮುಗ್ಧತೆಗೆ ಮನಸೋತ ಜನ
ರಚನಾ ಪಾತ್ರದಲ್ಲಿ ದಿವ್ಯಾ ಉರುಡುಗ ಮಾಡಿದ್ದು, ಬಹಳ ದಿನಗಳ ಬಳಿಕ ಇದು ಅವರಿಗೆ ಕಮ್ ಬ್ಯಾಕ್ ಆಗಿದೆ. ಇವತ್ತು ರಚನಾ ಅಭಿನಯಕ್ಕೆ ಮನಸೋತವರೇ ಹೆಚ್ಚು. ನನಗೂ ಆಸೆಗಳಿದಾವೆ. ನನ್ನ ಜೀವನವೂ ಹೀಗೆ ಇರಬೇಕು ಎಂದು ಫುಲ್ ಎಕ್ಸೈಟ್ ಮೆಂಟ್ ನಲ್ಲಿ ಹೇಳುವಾಗ ಆಕೆಯ ಅಭಿನಯಕ್ಕೇನೆ ಎಲ್ಲರೂ ಮನಸೋತಿದ್ದಾರೆ. ಶಬ್ಬಾಶ್ ಹೇಳಿದ್ದಾರೆ. ಈ ರೀತಿಯ ಪಾತ್ರಕ್ಕೆ ಖಂಡಿತ ದಿವ್ಯಾ ಉರುಡುಗ ಬೆಸ್ಟ್ ಎನ್ನುತ್ತಿದ್ದಾರೆ. ಜೊತೆಗೆ ಅವಳ ಮಾತು ಮನಸ್ಸಿಗೆ ತಟ್ಟಿದೆ.


Click it and Unblock the Notifications











