Ninagagi: ರಚನಾ ಬುದ್ದಿವಂತಿಕೆಗೆ ಭೇಷ್ ಅಂದ್ರು ಫ್ಯಾನ್ಸ್; ಇವತ್ತಿನ ಎಪಿಸೋಡ್ ಬೆಂಕಿ ಗುರೂ!

By ಎಸ್ ಸುಮಂತ್

ವಜ್ರೇಶ್ವರಿಯಂಥ ತಾಯಿ ಸಿಕ್ಕಿದರೆ ಕಥೆ ಮುಗೀತು. ಎಂಥ ಮಕ್ಕಳಿಗೂ ನರಕದರ್ಶನ ಮಾಡಿಸಿ ಬಿಡುತ್ತಾಳೆ. ರಚನಾ ಬದುಕು ಆಗಿರುವುದು ಹಾಗೆ. ಒಳ್ಳೆತನದ ಮುಖವಾಡವನ್ನ ರಚನಾ ಮುಂದೆ ಹಾಕಿದ್ದಾಳೆ. ಆದರೆ ವಜ್ರೇಶ್ವರಿಯ ಸ್ವಾರ್ಥ ಮನೆ ಮಂದಿಗೆಲ್ಲ ತಿಳಿದಿದೆ. ಅದನ್ನ ರಚನಾಗೆ ಹೇಳಿದರು ನಂಬುವ ಸ್ಥಿತಿಯಲ್ಲಿ ಇಲ್ಲ.

ರಚನಾ ತಾಯಿ ಎಂದರೆ ದೇವರೆಂದೆ ಭಾವಿಸಿದ್ದಾಳೆ. ಅಶ್ವಿನ್ ಕೆಟ್ಟವನು ಎಂಬುದಷ್ಟೇ ರಚನಾಗೆ ಅರ್ಥವಾಗಿದೆ. ಆದರೆ ಆ ಕೆಟ್ಟವನನ್ನು ಹುಟ್ಟು ಹಾಕಿದ್ದು ಅದೇ ದೇವತೆಯೆಂಬ ತಾಯಿ ವಜ್ರೇಶ್ವರಿ ಎಂಬುದು ಮಾತ್ರ ಗೊತ್ತಿಲ್ಲ.

colors kannada serial Ninagagi Written Update on November 18th episode

ರಚನಾಗೆ ಈ ರಗಳೆಯೆಲ್ಲಾ ಸಾಕಾಗಿದೆ. ಸ್ಟಾರ್ ಗಿರಿ ಬೇಡವಾಗಿದೆ. ಸಾಮಾನ್ಯ ತಾಯಿಯಾಗಿ ಬದುಕುವ ಆಸೆಯಾಗಿದೆ. ಅದಕ್ಕೆ ಕೃಷ್ಣನನ್ನ ಅಷ್ಟೊಂದು ಅಚ್ಚಿಕೊಂಡಿದ್ದಾಳೆ. ಕೃಷ್ಣ ಒಬ್ಬಳಿದ್ದರೆ ಬೇರೆ ಜಗತ್ತೆ ಬೇಡ ಅವಳಿಗೆ. ಈಗ ಮಹತ್ವದ ಘಟ್ಟಕ್ಕೆ ಬಂದು ತಲುಪಿದ್ದು, ಕೃಷ್ಣನಿಗೆ ನಿಜವಾದ ತಾಯಿಯಾಗಿದ್ದಾಳೆ ರಚನಾ.

ಕೋರ್ಟ್‌ನಲ್ಲಿ ಕೃಷ್ಣನ ಭವಿಷ್ಯ

ಕೃಷ್ಣಾಳನ್ನು ಜೀವನಿಂದ ದೂರ ಮಾಡಲು ಜನಾರ್ದನ್ ಸಿಕ್ಕಾಪಟ್ಟೆ ಪ್ರಯತ್ನ ಮಾಡ್ತಾ ಇದ್ದಾನೆ. ಕೃಷ್ಣಾಳಿಗೆ ಬೇಬಿ ಜೀವ ತೆಗೆದು ಬಿಡುತ್ತೀನಿ ಎಂದು ಹೆದರಿಸಿ ಕೋರ್ಟ್‌ನಲ್ಲಿ ಸುಳ್ಳು ಹೇಳಿಸಿದ್ದಾನೆ. ಹೆಂಡತಿಯನ್ನು ಹೆದರಿಸಿ, ಸುಳ್ಳು ಹೇಳಿಸಿದ್ದಾನೆ. ಕೋರ್ಟ್‌ಗೆ ತಾಯಿ ಇಲ್ಲ ಎಂಬ ವಿಚಾರವನ್ನ ಹೇಳಿ ಕೃಷ್ಣಾಳನ್ನ ಪಡೆಯುವ ಪ್ರಯತ್ನ ನಡೆಯುತ್ತಿದೆ.

colors kannada serial Ninagagi Written Update on November 18th episode

ಕೃಷ್ಣನನ್ನು ಕಾಪಾಡಲು ಬಂದ ರಚನಾ

ಜನಾರ್ದನ್ ಕಿತಾಪತಿಗೆ ಕೃಷ್ಣ ಹಾಗೂ ಜೀವ ಇನ್ನೇನು ದೂರವಾಗಿಯೇ ಬಿಡುತ್ತಾರೆ ಎಂಬ ಭಯ ಶುರುವಾಗಿತ್ತು. ಅದೇ ಸಮಯಕ್ಕೆ ಕೋರ್ಟ್‌ಗೆ ಬಂದ ರಚನಾ ಪಿಕ್ಚರ್ ಅನ್ನೇ ಬದಲಾಯಿಸಿ ಬಿಟ್ಟಳು. ಕೃಷ್ಣಾಗೆ ಸ್ಟಾರ್ ಅಂದ್ರೆ ಎಷ್ಟು ಪ್ರೀತಿ ಅನ್ನೋದು ಅದಾಗಲೇ ಜಡ್ಜ್ ಮೇಡಂ ಮನಸ್ಸಿನಾಳಕ್ಕೆ ಟಚ್ ಆಗಿತ್ತು. ಈಗ ಕೋರ್ಟ್‌ನಲ್ಲಿ ಮುಖಾಮುಖಿಯಾದ ಕೃಷ್ಣಾ ಹಾಗೂ ಸ್ಟಾರ್ ಬಾಂಡಿಂಗ್ ನೋಡಿ ಎಲ್ಲರು ಖುಷಿ ಪಟ್ಟರು.

ವಜ್ರೇಶ್ವರಿ ಮನೆಯಲ್ಲಿ ತಳಮಳ

ಕೃಷ್ಣಾಳಿಗೆ ತಾಯಿಯ ಕೊರತೆ ಇದೆ ಅನ್ನೋ ಕಾರಣ ಹೇಳಿ ನೀವೂ ಕೋರ್ಟ್‌ಗೆ ಬಂದಿದ್ದೀರಿ. ಆದರೆ ಈಗ ನಾವೆಲ್ಲಾ ಒಂದೇ ಕುಟುಂಬ. ನಾನು ಜೀವ ಇವತ್ತು ಬೆಳಗ್ಗೆ ಮದುವೆಯಾಗಿದ್ದೀವಿ ಎಂದು ಹೇಳಿದ್ದಾಳೆ. ಇದನ್ನು ಕೇಳಿ ಜನಾರ್ದನ ಶಾಕ್ ಆಗಿದ್ದಾನೆ. ಅಷ್ಟೊತ್ತಿಗೆ ಮನೆಗೆ ಹೋದ ಮನೋಹರ ಮಗಳನ್ನ ವಜ್ರೇಶ್ವರಿಯಿಂದ ಕಾಪಾಡಿದ ಖುಷಿಯಲ್ಲಿದ್ದಾನೆ. ಏನಾಗ್ತಿದೆ ಎಂದು ಟಿವಿ ಹಾಕಿದಾಗ ರಚನಾ ಫ್ಯಾಮಿಲಿ ಕೋರ್ಟ್ ಗೆ ಹೋಗಿರುವುದು, ಮದುವೆಯಾಗಿರುವ ವಿಚಾರ ತಿಳಿದು ವಜ್ರೇಶ್ವರಿ ಕೋಪಗೊಂಡಿದ್ದಾಳೆ. ಇದರ ಹಿಂದೆ ಏನೋ ಆಗಿದೆ ಎಂದು ಅರಿತು ಕೋರ್ಟ್ ನತ್ತ ಹೆಜ್ಜೆ ಹಾಕಿದ್ದಾರೆ.

ಎಪಿಸೋಡ್ ಬೆಂಕಿ

ಇಂದಿನ ಎಪಿಸೋಡ್‌ನಲ್ಲಿ ರಚನಾಳ ನಡೆಗೆ ಶಬ್ಬಾಶ್ ಎಂದಿದ್ದಾರೆ. ಬೆಂಕಿ ಎಪಿಸೋಡ್ ಗುರು ಎಂದು ಕಮೆಂಟ್ ಹಾಕುತ್ತಿದ್ದಾರೆ. ರಚನಾ ಹೇಳಿದ್ದು ಸುಳ್ಳು ಎಂಬುದು ಜನಾರ್ದನ್‌ಗೆ ಅರ್ಥವಾಗಿದೆ. ಹೀಗಾಗಿಯೇ ಜೀವನನ್ನ ಲಾಕ್ ಮಾಡುವುದಕ್ಕೆ ನೋಡಿದ್ದಾನೆ. ಮಾಧುರಿಯ ಹೆಸರನ್ನೇಳಿ ಎಮೋಷನಲ್ ಬ್ಲಾಕ್ ಮೇಲ್ ಮಾಡಿದ್ದಾನೆ. ಮಾಧುರಿ ಮೇಲೆ ಆಣೆ ಇಟ್ಟು ಹೇಳು, ನಿಜಕ್ಕೂ ರಚನಾ ಜೊತೆಗೆ ಮದುವೆಯಾಗಿದ್ಯಾ ಎಂದು ಕೇಳೊದರೆ, ಜೀವ ಸೈಲೆಂಟ್ ಆಗಿ ನಿಂತಿದ್ದ. ಒಂದು ಹೆಜ್ಜೆ ಹಿಂದೆ ಹೋದ ರಚನಾ, ಕಾಲು ತುಳಿದು ಹು ಎನಿಸಿದ್ದಾಳೆ.

More from Filmibeat

English summary
colors kannada serial Ninagagi Written Update on November 18th episode. Here is the details about Rachana and Jeeva marriage.
Read more about: tv sumanth serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X